ಛತ್ರಿ ಚಿತ್ತಾರ

Team Udayavani, Oct 9, 2019, 4:07 AM IST

ಮಳೆಗಾಲ ಮುಗಿದೇ ಹೋಯ್ತು. ಮತ್ತೇಕೆ ಛತ್ರಿಯ ಮಾತು ಅಂತ ಕೇಳ್ತಿದ್ದೀರಾ? ಬೇಸಿಗೆಯ ಈ ದಿನಗಳಲ್ಲಿ ಟ್ರೆಂಡ್‌ ಆಗುತ್ತಿರುವ ಕೊಡೆಗಳ ಬಗ್ಗೆ ಇಲ್ಲಿ ವಿವರಣೆಯಿದೆ. ಮೇಲ್ಭಾಗ ಕಪ್ಪು/ ಬೇರೆ ಬಣ್ಣದಲ್ಲಿದ್ದು ಒಳ ಭಾಗದಲ್ಲಿ ಚಿತ್ತಾರಗಳನ್ನು ಹೊಂದಿದ ವರ್ಣಮಯ ಛತ್ರಿಗಳು ಈಗಿನ ಸ್ಟೈಲ್‌…

ಮಳೆ ಬರಲಿ, ಬಿಸಿಲೇ ಇರಲಿ, ಜೊತೆಗೊಂದು ಕೊಡೆ ಇದ್ದರೆ ಬಹಳ ಸೇಫ್. ಪ್ರತಿದಿನ ಹೊರಗೆ ಓಡಾಡುವ ಬಹುತೇಕರು ಈ ಮಾತನ್ನು ಮರೆಯದೇ ಪಾಲಿಸುತ್ತಾರೆ. ವರ್ಷಪೂರ್ತಿ ನಮ್ಮ ಜೊತೆಗಿರುವ ಈ ವಸ್ತು ಸ್ಟೈಲಿಶ್‌ ಆಗಿ, ವರ್ಣಮಯವಾಗಿ ಇದ್ದರೆ ಚೆಂದ ತಾನೇ? ಹಾಗಾಗಿಯೇ, ವಿಭಿನ್ನ ಬಗೆಯ ಛತ್ರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು.

ಛತ್ರಿಯೊಳಗೆ ಚಿತ್ತಾರ: ಹತ್ತಾರು ವರ್ಷಗಳ ಹಿಂದೆ, ಛತ್ರಿ ಅಂದರೆ ಅದು ಕಪ್ಪು ಬಣ್ಣದ, ದೊಡ್ಡ ಆಕಾರದ, ಗಟ್ಟಿ ಹಿಡಿಕೆಯ ಬಟ್ಟೆಯ ಚಿತ್ರವಷ್ಟೇ ನೆನಪಿಗೆ ಬರುತ್ತಿತ್ತು. ಮಳೆಗಾಲದಲ್ಲಿ, ಎಲ್ಲೆಲ್ಲೂ ಕಪ್ಪು ಛತ್ರಿಗಳೇ ಕಾಣುತ್ತಿದ್ದವು. ಹಾಗಾಗಿ ಕಳೆದುಹೋಗುವ ಅಪಾಯವೂ ಜಾಸ್ತಿ ಇರುತ್ತಿತ್ತು. ತಮ್ಮ ಛತ್ರಿಯನ್ನು ಕಾಪಾಡಲು ಕೆಲವರು, ಒಳಭಾಗದಲ್ಲಿ ಪೇಂಟ್‌ನಲ್ಲಿ ಸಣ್ಣದಾಗಿ ಹೆಸರು ಬರೆಯುತ್ತಿದ್ದರು ಅಥವಾ ಗುರುತು ಮಾಡುತ್ತಿದ್ದರು. ಆದರೆ, ಅದೇ ಈಗ ಫ್ಯಾಷನ್‌ ಟ್ರೆಂಡ್‌ ಆಗಿದೆ. ಛತ್ರಿಯ ಮೇಲಿರಬೇಕಿದ್ದ ಚಿತ್ತಾರಗಳನ್ನು ಒಳಭಾಗದಲ್ಲಿ ಮೂಡಿಸಿ, ಕೊಡೆಗೊಂದು ಹೊಸ ಲುಕ್‌ ಕೊಡುವುದು ಈಗಿನ ಟ್ರೆಂಡ್‌.

ಬೋರಿಂಗ್‌ ಅಲ್ಲ: ಛತ್ರಿಯ ಮೇಲಿನ ಬಟ್ಟೆ ಕಪ್ಪು, ಕೆಂಪು, ಕಂದು, ಹಸಿರು, ನೀಲಿ, ಬಿಳಿ ಅಥವಾ ಇನ್ಯಾವುದೋ ಬಣ್ಣವಿರುತ್ತದೆ. ಒಳಭಾಗದಲ್ಲಿ ಹಲವು ಬಣ್ಣಗಳನ್ನೊಳಗೊಂಡ ಚಿತ್ರಕಲೆ, ಸಣ್ಣಪುಟ್ಟ ಚಿತ್ತಾರ, ಚಿಹ್ನೆ, ಹೂವು, ಎಲೆ, ಚಿಟ್ಟೆ, ಹೃದಯಾಕಾರ, ನೀರಿನ ಗುಳ್ಳೆ, ಮೋಡ, ಚಂದ್ರ, ಸೂರ್ಯ, ತಾರೆಗಳ ಚಿತ್ರಗಳನ್ನು ಮೂಡಿಸಲಾಗುತ್ತದೆ.

ನೀವೇ ಕಲಾವಿದರಾಗಿ: ಈ ಛತ್ರಿಗಳನ್ನು ಆನ್‌ಲೈನ್‌ ಅಥವಾ ಅಂಗಡಿಗಳಲ್ಲಿ ಖರೀದಿಸಬಹುದು ಅಥವಾ ಸಾಮಾನ್ಯ ಛತ್ರಿಯೊಳಗೆ ನೀವೇ, ನಿಮಗೆ ಬೇಕಾದಂತೆ ಚಿತ್ತಾರಗಳನ್ನು ಮೂಡಿಸಬಹುದು. ಪ್ಲಾಸ್ಟಿಕ್‌ನಿಂದ ಮಾಡಲಾದ ಪಾರದರ್ಶಕ ಛತ್ರಿಗಳ ಒಳಗೆ ಲೇಸ್‌ ವರ್ಕ್‌ನ ಚಿತ್ತಾರವಿರುವ ಕೊಡೆಗಳು ಕೂಡಾ ಮಾರುಕಟ್ಟೆಗಳಲ್ಲಿ ಲಭ್ಯವಿವೆ. ಈ ರೀತಿ ಲೇಸ್‌, ಬಣ್ಣಬಣ್ಣದ ಬಟ್ಟೆ, ಉಣ್ಣೆ, ವೆಲ್ವೆಟ್‌ (ಮಖ್ಮಲ್), ಮಸ್ಲಿನ್‌ ಬಟ್ಟೆ (ತೆಳುಹತ್ತಿ ಬಟ್ಟೆ), ಕ್ರೋಶ ಹಾಗೂ ಸ್ಯಾಟಿನ್‌ ಬಟ್ಟೆ ಉಳ್ಳ ಪಾರದರ್ಶಕ ಛತ್ರಿಗಳ ಒಳಭಾಗದಲ್ಲೂ ಭಿನ್ನ ಭಿನ್ನ ಚಿತ್ತಾರಗಳನ್ನು ಮೂಡಿಸಬಹುದು. ಜನಜಂಗುಳಿಯ ನಡುವೆಯೂ ಎದ್ದು ಕಾಣುವಂಥ ಛತ್ರಿಗಳಿವು.

ಡ್ರೆಸ್‌ಗೆ ಮ್ಯಾಚ್‌ ಮಾಡಬಹುದು: ಪ್ಲಾಸ್ಟಿಕ್‌ನ ಪದರ ಇರುವ ಕಾರಣ, ಕೆಳಗಿರುವ ಬಟ್ಟೆ ಒದ್ದೆ ಆಗುವುದಿಲ್ಲ. ಉಟ್ಟ ಉಡುಪಿಗೆ ಮ್ಯಾಚ್‌ ಆಗುವಂತೆ, ವಾಶೆಬಲ್‌ ಪೇಂಟ್‌ (ತೊಳೆದರೆ ಹೋಗುವಂಥ ಬಣ್ಣ) ಬಳಸಿ ಪಾರದರ್ಶಕ ಛತ್ರಿಗಳ ಒಳಭಾಗದಲ್ಲಿ ಚಿತ್ತಾರ ಮೂಡಿಸಬಹುದು. ಒಳಭಾಗದಲ್ಲಿ ನಿಮಗೆ ಇಷ್ಟವಾದ ಬಣ್ಣದಿಂದ ಕೇವಲ ಬಾರ್ಡರ್‌ ಅನ್ನು ಬಿಡಿಸಿದರೂ, ಟ್ರೆಂಡಿಯಾಗಿ ಕಾಣುತ್ತದೆ. 3 ಫೋಲ್ಡ್/ 4 ಫೋಲ್ಡ್‌ ಛತ್ರಿ, ರಾಜಸ್ಥಾನಿ ಕೊಡೆ ಮತ್ತು ಚೈನೀಸ್‌ ಛತ್ರಿಗಳಲ್ಲೂ ಮೇಲೆ ಹೇಳಿದ ಆಯ್ಕೆಗಳಿವೆ. ಚೈನೀಸ್‌ ಛತ್ರಿ ಮುಖ ವನ್ನು ಮುಚ್ಚದ ಕಾರಣ, ಬಿಡಿಸಿದಾಗ ಒಳಭಾಗದ ಚಿತ್ರ ಎಲ್ಲರ ಕಣ್ಣಿಗೆ ಬೀಳುವುದು ಖಚಿತ.

ಏನೆಲ್ಲಾ ಬಂದಿವೆ!: ಮಳೆ-ಬಿಸಿಲಿಗೆ ಯಾವುದೋ ಒಂದು ಛತ್ರಿಯಿದ್ದರೆ ಸಾಕು ಅನ್ನುವ ಕಾಲ ಇದಲ್ಲ. ಹಾಗಾಗಿ, ಛತ್ರಿಗಳ ಮೇಲೆ ನಡೆಯುತ್ತಿರುವ ಪ್ರಯೋಗಗಳೂ ಒಂದೆರಡಲ್ಲ. ಒಳಭಾಗದಲ್ಲಿ ಚಿತ್ತಾರ, ಅಪ್‌ಸೆçಡ್‌ ಡೌನ್‌ ಛತ್ರಿಗಳು, ಗೊಮ್ಮಟದಂತೆ ಇಡೀ ಮೈಯನ್ನು ರಕ್ಷಿಸುವ ಬಬಲ್‌ ಅಂಬ್ರೆಲಾ, ಕತ್ತಲೆಯಲ್ಲಿಯೂ ಸುಲಭವಾಗಿ ಕಾಣಿಸುವಂಥ ಎಲ್‌ಇಡಿ ಬಲ್ಬ್ಗಳನ್ನು ಹೊಂದಿರುವ ಛತ್ರಿಗಳು… ಅಬ್ಬಬ್ಟಾ, ಎಷ್ಟೊಂದು ಆಯ್ಕೆಗಳಿವೆ!

ಬೇಸಿಗೆ ಕೊಡೆ: ಮಳೆಗಾಲದಲ್ಲಿ ರಕ್ಷಣೆಗೆಂದು ಹಿಡಿಯುವ ಛತ್ರಿಯನ್ನು ಫ್ಯಾಷನ್‌ ಆ್ಯಕ್ಸೆಸರಿ ಅಂತ ಹೇಳಲಾಗದಿದ್ದರೂ, ಬೇಸಿಗೆಯಲ್ಲಿ ಬಳಸುವ ಛತ್ರಿಗಳನ್ನು ಫ್ಯಾಷನ್‌ನ ದೃಷ್ಟಿಯಲ್ಲಿ ನೋಡಲೇಬೇಕು. ಯಾಕೆಂದ್ರೆ, ಸ್ಟೈಲಿಶ್‌ ಆಗಿ ಡ್ರೆಸ್‌ ಮಾಡಿಕೊಂಡಿರುವಾಗ, ಕೈಯಲ್ಲಿ ಕಪ್ಪು ಬಣ್ಣದ 3 ಫೋಲ್ಡ್‌ ಛತ್ರಿ ಇದ್ದರೆ ಹೇಗೆ ಕಾಣುತ್ತದೆ ಯೋಚಿಸಿ? ಆದರೆ, ಹೆಚ್ಚು ಚಿತ್ತಾರಗಳಿರುವ, ಬಣ್ಣಬಣ್ಣದ ಛತ್ರಿಗಳು ಕೂಡಾ ಎಲ್ಲ ದಿರಿಸಿಗೂ ಒಪ್ಪುವುದಿಲ್ಲ.

ಹಾಗಾಗಿ, ಒಳಭಾಗದಲ್ಲಿ ಚಿತ್ತಾರವಿರುವ ಕೊಡೆಗಳೇ ಎಲ್ಲ ದೃಷ್ಟಿಯಿಂದಲೂ ಉತ್ತಮ ಅನ್ನಬಹುದು. ನ್ಯೂಟ್ರಲ್‌ ಕಲರ್‌ಗಳಾದ ಬೂದು, ಕಂದು, ಕಪ್ಪು, ಬಿಳಿ, ಗಾಢ ನೀಲಿ ಬಣ್ಣದ ಕೊಡೆಗಳ ಒಳಗೆ ಚಂದದ ಚಿತ್ತಾರವಿದ್ದರೆ, ಎಲ್ಲ ಬಣ್ಣದ ಡ್ರೆಸ್‌ ಜೊತೆಗೂ ಆರಾಮಾಗಿ ಕೊಂಡೊಯ್ಯ ಬಹುದು. ಅದರಲ್ಲೂ, ಒಳಗಡೆ ಹೂವು, ಗೊಂಬೆ, ಪೋಲ್ಕಾ ಡಾಟ್ಸ್‌ನಂಥ ಚಿತ್ತಾರಗಳು ಮಕ್ಕಳಿಗೆ ಹೆಚ್ಚು ಸೂಕ್ತವಾದರೆ, ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಹಾಗೂ ಕಣ್ಣಿಗೆ ಹಿತವೆನಿಸುವ ಚಿತ್ತಾರಗಳ ಛತ್ರಿಗಳು ಪ್ರೌಢರಿಗೆ ಹೊಂದುತ್ತವೆ.

* ಅದಿತಿಮಾನಸ ಟಿ.ಎಸ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಕ್ಕಳ ಪರೀಕ್ಷೆಗಳು ಮುಗಿಯುತ್ತಾ ಬಂದವು. ಮುಂದಿನ ಎರಡು ತಿಂಗಳು ಅವರನ್ನು ಹಿಡಿಯುವುದೇ ಕಷ್ಟ. ಎಷ್ಟು ಹೇಳಿದರೂ ಕೇಳುವುದಿಲ್ಲ, ಮೊಬೈಲ್‌-ಕಂಪ್ಯೂಟರ್‌ ಮುಂದೆ...

  • ಚಲನಚಿತ್ರಗೀತೆಗಳು ಪ್ರಸಾರವಾಗುವಾಗ ಎಸ್‌.ಪಿ.ಬಿ. ಜೊತೆಯಲ್ಲಿ ಹಾಡಿ ನಾನೂ ಎಸ್‌. ಜಾನಕಿ, ವಾಣಿ ಜಯರಾಂ ಆದ ಹಾಗೆ ಖುಷಿಪಡ್ತಾ ಇದ್ದಿದ್ದು. ಅಷ್ಟೇ ಅಲ್ಲ, ವಾಣಿ...

  • ಮದುವೆ ಎನ್ನುವುದು ಹೆಣ್ಣಿನ ಬದುಕಿನ ಅಸಲೀ ತಿರುವು. ತಾನು ಎನ್ನುವ ಸ್ವಂತಿಕೆಯನ್ನು ಬದಿಗಿಟ್ಟು, ತನ್ನದು ಎನ್ನುವುದಕ್ಕೆ ಜೋತು ಬೀಳಬೇಕಾದ ಸಂಧಿಕಾಲ. ಮದುವೆ,...

  • ಹೆಣ್ಣಿನ ಬಾಳಿನಲ್ಲಿ ತಾಯ್ತನದ ಘಟ್ಟ ಬಹಳ ಮುಖ್ಯವಾದುದು. ತಾಯ್ತನ ಅಂದರೆ, ಆ ನವಮಾಸವಷ್ಟೇ ಅಲ್ಲ. ಅದರ ನಂತರದ ಬಾಣಂತನದಲ್ಲೂ ತಾಯಿ-ಮಗುವನ್ನು ಮುಚ್ಚಟೆಯಿಂದ ಕಾಪಾಡಬೇಕು....

  • ಸಂಜೆ ನಾಲ್ಕು ಗಂಟೆಯಾದರೂ ಹುಡುಗನ ಕಡೆಯವರು ಬರದೇ ಇದ್ದಾಗ, ಮನೆಯಲ್ಲಿ ನೆರೆದವರು ತಲೆಗೊಂದು ಮಾತನಾಡತೊಡಗಿದರು. ಲವ್‌ ಮಾಡಿದರೆ ಹೀಗೇ ಆಗುವುದು. ಹುಡುಗ ನಂಬಿಸಿ...

ಹೊಸ ಸೇರ್ಪಡೆ