ಶ್ರೀದೇವಿ ಕಥಾಮೃತ

ಗರ್ಲ್-ವುಮೆನ್‌-ಸೂಪರ್‌ಸ್ಟಾರ್‌

Team Udayavani, Aug 23, 2019, 5:35 AM IST

ಬಾಲಿವುಡ್‌ನ‌ಲ್ಲಿ ನಿಧನದ ಬಳಿಕವೂ ಆಗಾಗ್ಗೆ ಸುದ್ದಿಯಾಗಿ ಸಿನಿಪ್ರಿಯರನ್ನು, ಬಾಲಿವುಡ್‌ ಮಂದಿಯನ್ನು ಕಾಡುತ್ತಿರುವ ನಟಿ ಶ್ರೀದೇವಿ. ಶ್ರೀದೇವಿಯ ವೈಯಕ್ತಿಕ ಬದುಕು, ಸಿನಿಮಾ ಜನಪ್ರಿಯತೆ, ಆಕೆಯ ನಿಗೂಢ ಸಾವಿನ ಬಗ್ಗೆ ಹಲವು ಅಂತೆ-ಕಂತೆಗಳು ಇಂದಿಗೂ ಹರಿದಾಡು ತ್ತಿರುವಂತೆಯೇ ಶ್ರೀದೇವಿಯ ಕುರಿತಾಗಿ ಪುಸ್ತಕವೊಂದು ಹೊರಬರಲು ಸಿದ್ಧವಾಗುತ್ತಿದೆ. ಹೌದು, ಖ್ಯಾತ ಲೇಖಕ ಮತ್ತು ಚಿತ್ರಕಥೆ ಬರಹಗಾರ ಸತ್ಯಾರ್ಥ್ ನಾಯಕ್‌ ಈಗ ಶ್ರೀದೇವಿಯ ಕುರಿತಾದ ಕೃತಿಯೊಂದನ್ನು ಹೊರತರುತ್ತಿದ್ದಾರೆ. ಸದ್ಯ ಈ ಕೃತಿಯ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇತ್ತೀಚೆಗೆ ಈ ಕೃತಿಯ ಕವರ್‌ಪೇಜ್‌ (ಮುಖಪುಟ) ಬಿಡುಗಡೆಯಾಗಿದೆ.

ಶ್ರೀದೇವಿ ಅವರ 56ನೇ ಜನ್ಮದಿನದ ಸಂದರ್ಭದಲ್ಲಿ ಈ “ಶ್ರೀದೇವಿ’ ಕೃತಿಯ ಮುಖಪುಟವನ್ನು ಬಾಲಿವುಡ್‌ನ‌ ಖ್ಯಾತ ನಟಿ ವಿದ್ಯಾ ಬಾಲನ್‌ ಬಿಡುಗಡೆಗೊಳಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ವಿದ್ಯಾಬಾಲನ್‌, “ಶ್ರೀದೇವಿ ಐಕಾನಿಕ್‌ ನಟಿ. ಅವರ ಜನ್ಮದಿನದಂದು ಅವರ ಬದುಕಿನ ಕುರಿತಾದ ಕೃತಿಯ ಮುಖಪುಟವನ್ನು ಲಾಂಚ್‌ ಮಾಡುವ ಅವಕಾಶ ನನಗೆ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಐದು ದಶಕಗಳಲ್ಲಿ ಶ್ರೀದೇವಿಯವರ ಅದ್ಭುತ ಸಿನಿ ಜೀವನ, ಕೌಟುಂಬಿಕ ಜೀವನ ಇತ್ಯಾದಿಗಳ ಕುರಿತು ಈ ಕೃತಿಯಲ್ಲಿ ಮಾಹಿತಿ ಇರಲಿದೆ’ ಎಂದಿದ್ದಾರೆ. ಇನ್ನು “ಶ್ರೀದೇವಿ’ ಕೃತಿಗೆ “ಗರ್ಲ್-ವುಮೆನ್‌-ಸೂಪರ್‌ಸ್ಟಾರ್‌’ ಎಂಬ ಅಡಿ ಬರಹವಿದ್ದು, ಶ್ರೀದೇವಿಯ ಬಾಲ್ಯ, ಯೌವನ ಮತ್ತು ಚಿತ್ರ ಜೀವನದ ಮಹತ್ವದ ಘಟನೆಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಈ ಕೃತಿಯು ಶ್ರೀದೇವಿಯ ಬದುಕು ಮತ್ತು ಅವರ ಸಿನಿ ಪಯಣದ ಕುರಿತು ಬೆಳಕು ಚೆಲ್ಲಲಿದೆ ಎಂದಿದ್ದಾರೆ ಲೇಖಕ ಸತ್ಯಾರ್ಥ್ ನಾಯಕ್‌.

ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಇಂಡಿಯಾ ಪಬ್ಲಿಕೇಶನ್‌ ಈ ಕೃತಿಯನ್ನು ಮುದ್ರಿಸಿ ಹೊರತರುತ್ತಿದೆ. ಇನ್ನು ಶ್ರೀದೇವಿ ಅವರ ಕೃತಿ ಹೊರಬರುತ್ತಿರುವ ಬಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಪ್ರತಿಕ್ರಿಯಿಸುತ್ತಿರುವ ಅಭಿಮಾನಿಗಳು, ಕೃತಿಯನ್ನು ಓದಲು ಉತ್ಸುಕರಾಗಿದ್ದು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಕೋರುತ್ತಿದ್ದಾರೆ.

ಆದರೆ, ಶ್ರೀದೇವಿ ಅವರ ಬಗ್ಗೆ ಬರುತ್ತಿರುವ ಈ ಕೃತಿಯ ಬಗ್ಗೆ ಶ್ರೀದೇವಿ ಪತಿ ಬೋನಿ ಕಪೂರ್‌ ಮಾತ್ರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿರುವುದು, ಅನೇಕರಿಗೆ ಅಚ್ಚರಿ ಮೂಡಿಸಿದೆ. ಅಂದ ಹಾಗೆ ಈ ಕೃತಿ ಇದೇ ಅಕ್ಟೋಬರ್‌ ಅಂತ್ಯಕ್ಕೆ ಬಿಡುಗಡೆಯಾಗುತ್ತಿದ್ದು, ಕೃತಿಯಲ್ಲಿ ಶ್ರೀದೇವಿ ಕುರಿತಾದ ಯಾವೆಲ್ಲ ಸಂಗತಿಗಳು ಅಡಗಿವೆ ಎಂಬ ಪ್ರಶ್ನೆಗೆ ಕೃತಿ ಹೊರಬಂದ ಮೇಲಷ್ಟೇ ಉತ್ತರ ಸಿಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಹಿಳೆಯರ ಪೈಕಿ ಅನೇಕರು ಹೊಟ್ಟೆತುಂಬಾ ನೀರು ಕುಡಿಯುವುದು ಕಡಿಮೆ. ಅದರಲ್ಲಿಯೂ ಮನೆಯ ಹೊರಗೆ ಕೆಲಸ ಮಾಡುವವರು, ಪ್ರಯಾಣ ಮಾಡುವವರು, ಕಾರ್ಮಿಕ ಮಹಿಳೆಯರು ನೀರು ಕುಡಿಯಲು...

  • ತುಳಸೀ ಗೌಡರ ಬದುಕಿನಲ್ಲಿ ತೀವ್ರ ನೋವಿನ ಹಾದಿ ಎದುರಾದಾಗ ಅವರಿಗೆ ನೆರಳಾದುದು ಹಸಿರು ಗಿಡಗಳು. ನಿಸ್ವಾರ್ಥವಾಗಿ ಹಸಿರು ಸಿರಿಯನ್ನು ಪ್ರೀತಿಸಿದ ಅವರು ನಿಜಕ್ಕೂ...

  • ಹದಿನೇಳು ವರ್ಷದ ಹಿಂದೆ ಮದುವೆಯಾಗಿ ಈ ಬೃಹತ್‌ ಮನೆಯೊಳಗೆ ಕಾಲಿಟ್ಟಾಗ ನನಗೆ ವಾಸ್ತುಶಾಸ್ತ್ರದ ಬಗ್ಗೆ ತಿಳಿವಳಿಕೆಯೇ ಇರಲಿಲ್ಲ. ಅತ್ತೆ ಸರಸ್ವತಿ ಅವರಾಗಲಿ, ಮಾವ...

  • ಉಡುಪಿ -ಕುಂದಾಪುರ ನಡುವೆ ಓಡಾಡುವ ಎಕ್ಸ್‌ಪ್ರೆಸ್‌ ಬಸ್‌ "ಭಾರತಿ'ಯಲ್ಲಿ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ರೇಖಾ, ಮೂಲತಃ ಬಾಗಲಕೋಟೆಯವರು. ಆದರೆ, ಸುಮಾರು...

  • ನಂಗಿದು ಬೇಡ, ಬೇರೆ ಮಾಡಿಕೊಡು'' ಎಂದು ರಚ್ಚೆ ಹಿಡಿದು ಅಳುತ್ತ ನೆಲದಲ್ಲಿ ಹೊರಳಾಡುತ್ತಿದ್ದ ಹತ್ತು ವರ್ಷದ ಮೊಮ್ಮಗನ ಹಠಕ್ಕೆ ಮಣಿದು, ನೋಯುತ್ತಿದ್ದ ತನ್ನ ಮೊಣಕಾಲುಗಳನ್ನು...

ಹೊಸ ಸೇರ್ಪಡೆ