ಮತ್ತೆ ಮತ್ತೆ ಅತ್ತೆ ಸೊಸೆ


Team Udayavani, Aug 25, 2017, 6:45 AM IST

Appuge-27.jpg

ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು. ಹೊತ್ತಾಗಿ ಬಡಿಸಿದರೂ ಉಣಬೇಕು ನನ ಕಂಡ ಹೆತ್ತವ್ರಿಗೆಸರ ತರಬೇಕು’
ಇದು ಜಾನಪದದಲ್ಲಿ ಬರುವ ತಾಯಿಯೊಬ್ಬಳು ಮನದಾಳದಿಂದ ಮಗಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸಿಕೊಡುವಾಗಿನ ಹಿತನುಡಿ. ಹೆಣ್ಣು ಹುಟ್ಟಿದೊಡನೆ ಪ್ರತಿಯೊಬ್ಬ ಪಾಲಕರ ಮನದಲ್ಲೂ ಮಗಳ ಭವಿಷ್ಯದ ಬದುಕಿನ ಬಗೆಗೆ ಯೋಚನೆ ಆರಂಭವಾಗುತ್ತದೆ. ಅಂದರೆ ಮಗಳು ದೊಡ್ಡವಳಾದೊಡನೆ ಅವಳಿಗೆ ತಕ್ಕವನಾದ ಒಳ್ಳೆಯ ಗಂಡನನ್ನು , ಗಂಡನ ಮನೆಯನ್ನು ಸೇರಿ ನೆಮ್ಮದಿಯಿಂದ ಬದುಕಿದರೆ ಅಷ್ಟೇ ಸಾಕು ಎಂಬ ಮಹದಾಸೆ. ಅಂತೆಯೇ ಅವಳನ್ನು ಬಾಲ್ಯದಿಂದಲೇ ಪ್ರೀತಿ-ಮಮತೆಯ ಜತೆ ಎಚ್ಚರಿಕೆಯಿಂದ ನೈತಿಕತೆಯ ಚೌಕಟ್ಟಿನಲ್ಲಿ ಬೆಳೆಸಬೇಕಾದದ್ದು ಹೆತ್ತವರ ಜವಾಬ್ದಾರಿಯೂ ಹೌದು. ಹೀಗೆ ಹಿರಿಯರ ಮಾರ್ಗದರ್ಶನದಲ್ಲಿ ಸರಿಯಾದ ಹೆಜ್ಜೆಯಿಟ್ಟು ಬಾಲ್ಯ ಕಳೆದು, ತಾರುಣ್ಯದ ಉಗಮವಾಗಿ ಮುದ್ದಾದ ಮೊಗ್ಗೆ ಅರೆಬಿರಿಯುವ ಮೋಹಕತೆಯೊಂದಿಗೆ ಮಗಳು ಬೆಳೆದು ನಿಂತಾಗ ಇನ್ನಿಷ್ಟು ಜವಾಬ್ದಾರಿಯಿಂದ ಮುದ್ದು ಮಗಳಿಗೆ ಒಪ್ಪುವ ವರಾನ್ವೇಷಣೆಯಲ್ಲಿ ಪೋಷಕರು ತೊಡಗುತ್ತಾರೆ! ಇದು ಸಾಮಾನ್ಯವಾಗಿ ಹೆಣ್ಣು ಹೆತ್ತ ಎಲ್ಲ ತಂದೆ-ತಾಯಂದಿರ ಪ್ರಮುಖ ಕರ್ತವ್ಯವಾಗಿ ಅಂದಿನಿಂದ ಇಂದಿನವರೆಗೂ ಬೆಳೆದುಬಂದ ಒಂದು ಕೌಟುಂಬಿಕ ಪರಿಸ್ಥಿತಿ!

ಅಂತೂ ಕುಲ-ಗೋತ್ರಗಳ ಹೊಂದಾಣಿಕೆಯೊಂದಿಗೆ ಎರಡೂ ಕಡೆಯಿಂದ ಜಾತಕ ಕೂಡಿಬರುತ್ತದೆಂದು ಜ್ಯೋತಿಷಿಗಳು, ಪುರೋಹಿತರು ಒಪ್ಪಿಗೆ ಕೊಟ್ಟಾಗ ಗಂಡು-ಹೆಣ್ಣಿನ ಕಡೆಯವರೆಲ್ಲರೂ ಮದುವೆಯ ಏರ್ಪಾಡಿನಲ್ಲಿ ಬಿಡುವಿಲ್ಲದವರಾಗುತ್ತಾರೆ. ನಂತರ ತಮ್ಮ ಶಕಾöನುಸಾರ ಶುಭಮುಹೂರ್ತದಲ್ಲಿ ಬಂಧುಬಾಂಧವರೆಲ್ಲರ ಸಮ್ಮುಖದಲ್ಲಿ ಮದುವೆಯೂ ನಡೆಯುತ್ತದೆ. ಆಮೇಲೆ ಹೆಣ್ಣನ್ನು ಗಂಡಿಗೆ ಒಪ್ಪಿಸಿ ಗಂಡನಮನೆಗೆ ಕಳಿಸಿಕೊಡುವಾಗಿನ ದುಃಖ ಹೇಳತೀರದು. “ಮನೆಯಂಗಳದಲ್ಲಿ ಬೆಳೆದ ಸುಂದರ ಹೂವನ್ನು ಮತ್ತೂಬ್ಬರಿಗೊಪ್ಪಿಸುವಾಗಿನ’ ನೋವನ್ನು ಅನೇಕ ಕವಿವಾಣಿಯಲ್ಲಿಯೂ ಗಮನಿಸಬಹುದು. ಹೆಣ್ಣಿಗೂ ಅಷ್ಟೇ ಅಪ್ಪ-ಅಮ್ಮನನ್ನು, ಒಡಹುಟ್ಟಿದವರನ್ನು ಅಗಲಿ ಇನ್ನೊಂದು ಮನೆಯನ್ನು ತನ್ನ ಬಾಳಸಂಗಾತಿಯೊಡನೆ ಪ್ರವೇಶಿಸಲು ಹೊರಟಾಗಿನ ಹೆಣ್ಣುಮಗಳ ದುಃಖ ಅನಿವಾರ್ಯತೆಯೊಂದಿಗೆ ಬೆಸೆದುಕೊಂಡು ಉಮ್ಮಳಿಸುತ್ತದೆ.

ಅಲ್ಲಿಂದಲೇ ಆರಂಭವಾಗುತ್ತದೆ ಹೆಣ್ಣಿನ ಬದುಕಿನ ಅಧ್ಯಾಯ. ಅತ್ತೆ-ಮಾವ, ಭಾವ-ಮೈದುನರು, ಅತ್ತಿಗೆ-ನಾದಿನಿ ಇವರೆಲ್ಲರೊಡನೆ ನಡೆದುಕೊಳ್ಳಬೇಕಾದ ವಿನಯ-ಸಹನೆ-ಸೌಹಾರ್ದತೆಗಳೆಲ್ಲ ಆಗ ಅವಳಿಗೆ ಎದುರಾಗುವ ಪರೀಕ್ಷೆಯಂತೆ ಕಾಣುವುದರಲ್ಲಿ ಅಚ್ಚರಿ ಪಡಬೇಕಾಗಿಲ್ಲ ! ಹಾಗೆಯೆ, ಅವಳನ್ನು ಅಷ್ಟೆ ಆದರದಿಂದ ಮನೆಯವರೂ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಹಿರಿಯರಿಗಿರಬೇಕಾಗುತ್ತದೆಯಲ್ಲವೆ? ಆದರೆ ಈ ಹೊಂದಾಣಿಕೆ ಎಷ್ಟರ ಮಟ್ಟಿಗೆ ಫ‌ಲಿಸುತ್ತದೆ ಎಂಬುದರ ಮೇಲೆ ಭವಿಷ್ಯ ನಿರ್ಧರಿಸಲ್ಪಡುತ್ತದೆ. ಅಲ್ಲದೆ ಅತ್ತೆ-ಸೊಸೆಯ ಸಂಬಂಧವಂತೂ ಎಂದಿನಿಂದಲೂ ಅಪಥ್ಯವೇ. ಹಿರಿತನದ ಹೊಣೆ ಹೊತ್ತ ಅತ್ತೆಗೆ ಸೊಸೆಯ ಅಪ್ರಬುದ್ಧತೆಯಾಗಲಿ, ಮನೆಕೆಲಸಗಳ ನಿಭಾವಣೆಯ ಕಷ್ಟವಾಗಲಿ ಅರಿವಾಗದೆ, ಅವುಗಳಲ್ಲಿಯ ಲೋಪದೋಷಗಳಷ್ಟೆ ಕಾಣಲು ಆರಂಭವಾಗುತ್ತಿದ್ದಂತೆ, ಸೊಸೆಗೆ ಅಲ್ಲಿಯ ವಾತಾವರಣವೇ ಹೊಸದಾಗಿರುವುದರಿಂದ ಅಲ್ಲಿಯೇ ಎಲ್ಲರೂ ಎಲ್ಲವೂ ಅಪರಿಚಿತವಾಗಿ ತನ್ನ ಮನೆಗೆಲಸಗಳಲ್ಲೆಲ್ಲ ಎಡವುತ್ತ, ತನ್ನ ತೌರು ಮನೆಯ ಪ್ರೀತಿಯ ಸೆಲೆಯನ್ನೂ ಇಲ್ಲಿ ಕಾಣದೆ ಮನಮುದುಡಿ ದುಗುಡ ಅವರಿಗೆ ಆವರಿಸಿ ಬಿಡಬಹುದು. 

ಸರಿ, ಇಲ್ಲಿಂದ ಆರಂಭವಾಗುತ್ತದೆ ಅತ್ತೆ-ಸೊಸೆಯರ ಶೀತಲ ಸಮರ! (ನಂತರ ಅದು ಬೆಳೆದು ರಣರಂಗವಾಗಲೂಬಹುದು). ಆದರೆ ಇಲ್ಲಿ ಗಂಡನಾದವನು ಇಕ್ಕಟ್ಟಿನಲ್ಲಿ ಸಿಲುಕಿ ಅಸಹಾಯಕನಾಗುವ ಸನ್ನಿವೇಶವು ಎದುರಾಗುವುದೂ ಇದೆ. ಯಾಕೆಂದರೆ ಒಂದೆಡೆ ಸಾಕಿ ಬೆಳೆಸಿದ ಹೆತ್ತಮ್ಮ; ಇನ್ನೊಂದೆಡೆ ಆಗಷ್ಟೆ ಬಾಳಸಾಂಗತ್ಯವನ್ನು ಬಯಸಿ ಬಂದ ಮಡದಿ! ಹೀಗಾಗಿ ಅತ್ತೆ-ಸೊಸೆಯರ ವೈಮನಸ್ಸು ಬೆಳೆದು ಕುಟುಂಬದಲ್ಲಿ ಅಶಾಂತಿ ನೆಲೆಸಿ, ನಂತರ ಕುಟುಂಬ ಒಡೆಯುವ ವರೆಗೂ ಸಾಗುವುದರಲ್ಲಿ ಆಶ್ಚರ್ಯವಿಲ್ಲ!

ಹೌದು, ಇವೆಲ್ಲ ಇತಿಹಾಸ. ಈಗ ಕಾಲ ಬದಲಾಗಿದೆ. ಕುಟುಂಬ ವ್ಯವಸ್ಥೆಯಲ್ಲಿ ಮಾರ್ಪಾಟಾಗಿ ಅದು ಆಧುನಿಕತೆಯತ್ತ ಸಾಗಲಾರಂಭಿಸಿದೆ. ಈಗ ಅತ್ತೆಗೆ ಹೆದರಿ ಹಿಂಜರಿವ ಸೊಸೆಯಾಗಲಿ, ಸೊಸೆಯನ್ನು ಶೋಷಣೆಗೊಳಪಡಿಸುವುದೇ ತನ್ನ ಹಿರಿತನದ ಹೆಗ್ಗಳಿಕೆಯೆಂದು ಭಾವಿಸುವ ಅತ್ತೆಯಾಗಲಿ ಈ ಕಾಲದಲ್ಲಿ ವಿರಳವಾಗುತ್ತಿದ್ದಾರೆ! ಸುಶಿಕ್ಷಿತಳಾಗಿ, ಸುಸಂಸ್ಕೃತಿಯೊಂದಿಗೆ ಬೆಳೆವ ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ಕಾಣುವ ಅತ್ತೆಯಂದಿರ ಪ್ರಮಾಣ ಸಾಕಷ್ಟು ಬೆಳೆಯುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಹಾಗೆಯೇ ಅತ್ತೆ-ಮಾವನನ್ನು ತನ್ನ ಹೆತ್ತವರಂತೆ ಕಾಣುವ, ಅವರ ಆಸೆ-ಅಭಿಲಾಷೆ, ಆರೋಗ್ಯಗಳತ್ತ ಗಮನಹರಿಸುವ ಎಷ್ಟೋ ಸೊಸೆಯಂದಿರಿದ್ದಾರೆನ್ನುವುದೇ ಸಂತಸದ ವಿಚಾರ !
ಇತ್ತೀಚೆಗೆ ತನ್ನ ಮದುವೆಗೆ ಕರೆಯಲು ತನ್ನ ತಾಯಿಯೊಂದಿಗೆ ಬಂದ ನನ್ನ ಪ್ರೀತಿಯ ರಾಧಿಕಾ ಹೇಳುತ್ತಿದ್ದುದನ್ನು ಕೇಳಿ ತುಂಬಾ ಖುಷಿಯಾಯಿತು. “”ಆಂಟೀ, ನನಗೆ ಅತ್ತೆ-ಮಾವ ಎಲ್ಲರೂ ಇದ್ದಾರೆ. 

ನಾನು ಬಯಸಿದ್ದೂ ಅದನ್ನೇ. ಅತ್ತೆ ಇದ್ದ ಮನೆಯೇ ನನಗೆ ಗಂಡನ ಮನೆಯಾಗಿ ಸಿಗಲಪ್ಪಾ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ” ಎಂದಾಗ ಅವಳ ಒಳ್ಳೆಯತನ ಅರಿವಾಗಿ ಅವಳನ್ನು ಅಪ್ಪಿ ಮುದ್ದಾಡುವಷ್ಟು ಪ್ರೀತಿ ಉಕ್ಕಿತು. ಅಂತೆಯೇ ನಮ್ಮೂರಿನ ಶಶಿಕಲಾ, ಅಂತೂ ಯಾವಾಗಲೂ “”ನನ್ನ ಅತ್ತೆ ಎಷ್ಟು ಒಳ್ಳೆಯವರು ಗೊತ್ತಾ? ನನ್ನ ತಾಯಿಯಂತೆ ನನ್ನನ್ನು ಪ್ರೀತಿಸುತ್ತಾರೆ” ಎಂದು ಹೇಳುವುದನ್ನು ಎಂದೂ ಮರೆಯುವುದಿಲ್ಲ! ಪಕ್ಕದ ಮನೆಯ ಶ್ಯಾಮ್‌ ಭಟ್ಟರ ತಾಯಿಯಂತೂ “”ನನ್ನ ಸೊಸೆಯೆಂದರೆ ನಮ್ಮ ಮನೆಯ ಮಹಾಲಕ್ಷ್ಮಿ. ಅವಳು ಹೊರಗೂ ದುಡಿಯುತ್ತ ಮನೆಕೆಲಸವನ್ನೂ ಪೂರೈಸಿ ನನ್ನ ಆರೋಗ್ಯದ ಬಗೆಗೂ ಜಾಗ್ರತೆ ವಹಿಸುತ್ತಾಳೆ” ಎಂದು ಸೊಸೆಯನ್ನು ಅವರು ಹೊಗಳಿಕೊಳ್ಳದ ದಿನವೇ ಇಲ್ಲ.ಇನ್ನು ನನ್ನ ಮಗಳ ಅತ್ತೆಯಂತೂ ನನಗಿಂತಲೂ ಹೆಚ್ಚಾಗಿ ಸೊಸೆಯನ್ನು ನೋಡಿಕೊಂಡವರು. ಒಂದು ದಿನವೂ ಅತ್ತೆ-ಸೊಸೆಯರ ನಡುವೆ ಮನಸ್ತಾಪವಾಗಲಿ, ಹಂಗಿಸುವ ನಡವಳಿಕೆಯಾಗಲಿ ನಡೆದದ್ದನ್ನು ನಾನಂತೂ ಕಂಡಿಲ್ಲ. ಅದೇ ರೀತಿ ಈಗ ನನ್ನ ಸೊಸೆಯೂ ನನ್ನನ್ನು ಅತ್ಯಂತ ಗೌರವಪೂರ್ವಕ ಪ್ರೀತಿಯನ್ನು ತೋರಿಸುತ್ತಾಳೆ. 

ವಿದೇಶದಲ್ಲಿ ವಿಜ್ಞಾನಿಯಾಗಿ ಸಂಶೋಧನೆಯಲ್ಲಿ ತೊಡಗಿರುವ ಗಂಡನೊಡನೆ ತಾನೂ ಕೈಜೋಡಿಸಿ ವೈಜ್ಞಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಹತ್ತರವಾದ ಕೈಂಕರ್ಯದಲ್ಲಿ ದಿನವಿಡೀ ದುಡಿಯುತ್ತಿದ್ದರೂ, ಮನೆಕೆಲಸಗಳನ್ನು ನಿಭಾಯಿಸಿಕೊಂಡು ಪ್ರತಿನಿತ್ಯ ನನ್ನ ಕ್ಷೇಮ ಸಮಾಚಾರವನ್ನು ದೂರವಾಣಿ ಮೂಲಕ ವಿಚಾರಿಸುತ್ತ ಸವಿ ಮಾತನ್ನಾಡುವ ಸೊಸೆಯ ಬಗೆಗೆ ತಾನೇ ತಾನಾಗಿ ಪ್ರೀತಿ ಹುಟ್ಟುತ್ತದೆ.

ಒಟ್ಟಾರೆ ಇಂದು ಆಡುನುಡಿಯಾಗಿ ಬೆಳೆದುಬಂದ “ಅತ್ತೆ-ಸೊಸೆ ಕದನ’ ಅಸ್ತಮಾನದತ್ತ ಸರಿದು ಪ್ರೀತಿಯ ಹೊಂದಾಣಿಕೆಯ ನೆಲೆಯಲ್ಲಿ ಸಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇದಕ್ಕೆಲ್ಲ ಪರಸ್ಪರ ಅರಿವೇ ಕಾರಣ! ಅತ್ತೆ-ಸೊಸೆ ಈರ್ವರೂ ತಮ್ಮನ್ನು ತಾವು ತಿದ್ದಿಕೊಂಡು ವಿರಸಕ್ಕೆ ಎಡೆಯಿಲ್ಲದಂತೆ ಪ್ರೀತಿಯ ಸಹಬಾಳ್ವೆಗೆ ಒತ್ತು ನೀಡುತ್ತಾ ವಿವೇಕದಿಂದ ಮುನ್ನಡೆವ ಹೊಸ ಹಾದಿಯತ್ತ ಇಂದಿನ ಅತ್ತೆ-ಸೊಸೆಯರ ಸಂಬಂಧವು ಬೆಳೆಯುತ್ತಿರುವುದು ನಿಜಕ್ಕೂ ಮಹಿಳೆಯರ ಬೌದ್ಧಿಕ ಪಕ್ವತೆಯನ್ನು ಪ್ರತಿಬಿಂಬಿಸುವುದಂತೂ ಸತ್ಯ. ಇದು ಅವಶ್ಯ ಕೂಡಾ. ಯಾಕೆಂದರೆ, ಇಂದಿನ ಸೊಸೆಯೇ ಮುಂದಿನ ಅತ್ತೆಯಾಗುವವಳಲ್ಲವೆ?

ಹೀಗಾಗಿಯೇ, ಇಂದು ಅತ್ತೆಗೆ ಸೊಸೆಯ ಪ್ರೀತಿಯ ಆರೈಕೆಯೂ, ಸೊಸೆಗೆ ಅತ್ತೆಯ ವಾತ್ಸಲ್ಯಮಯ ಮಾರ್ಗದರ್ಶನವೂ ಅವಶ್ಯವಾಗಿ ಬೇಕೆನಿಸುತ್ತಿದೆಯೇನೋ? ಆದುದರಿಂದ ಇಂತಹ ಸನ್ನಿವೇಶದಲ್ಲಿ ಅತ್ತೆ-ಮಾವ ಇದ್ದ ಮನೆಯ ಗಂಡ ಬೇಡ ಎಂಬ ಹೆಣ್ಣಿನ “ಅಹಂ’ಗೆ ಜಾಗವಿಲ್ಲವೆಂಬುದಂತೂ ಸುಳ್ಳಲ್ಲ. ಒಟ್ಟಾರೆ ತನ್ನ ತಂದೆ-ತಾಯಿಯಂತೆ ಮಾವ-ಅತ್ತೆಯರನ್ನೂ , ತನ್ನ ಮಗಳಂತೆ ಸೊಸೆಯನ್ನೂ ನಡೆಸಿಕೊಂಡು ಬಿಟ್ಟರೆ ಅಂತಹ ಸಂಸಾರವೇ ನಂದನವನವಾಗಬಹುದಲ್ಲವೆ? ಅಷ್ಟೇ ಅಲ್ಲ, ಆಗ ಸಂಸಾರದ ಹೊಣೆಹೊತ್ತ ಪುರುಷನೂ ನಿರಾಳವಾಗಿ ಮನಃಶಾಂತಿಯನ್ನು ಪಡೆದು ನೆಮ್ಮದಿಯ ಬದುಕನ್ನು ಮುನ್ನಡೆಸಬಹುದೆಂಬುದೇ ನನ್ನ ಅನಿಸಿಕೆ. “ಕೂಡಿ ಬಾಳುವುದೇ ಸ್ವರ್ಗಸುಖ’, “ಹೃದಯ ವೈಶಾಲ್ಯವೇ ಬಾಳಿನ ದೀಪ’ ಎಂಬುದನ್ನು ಎಂದಿಗೂ ಮರೆಯದೆ ಮುನ್ನಡಿ ಇಡುತ್ತಾ ಸಾಗಲಿ ಅತ್ತೆ-ಸೊಸೆಯರ ಆಪ್ತ ಬಾಂಧವ್ಯ!

– ಪರಮೇಶ್ವರಿ ಲೋಕೇಶ್ವರ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.