ಮತ್ಸ್ಯ ಕನ್ಯೆ ಐಶ್

Team Udayavani, May 31, 2019, 6:00 AM IST

ಪ್ರತಿ ಬಾರಿ ನಡೆಯುವ ಕ್ಯಾನೆ ಫಿಲಂ ಫೆಸ್ಟಿವಲ್‌ನಲ್ಲಿ ಜಗತ್ತಿನ ವಿವಿಧ ಚಿತ್ರರಂಗಗಳ ತಾರೆಯರು ಭಾಗವಹಿಸುವುದು, ಜಗತ್ತಿನ ಚಿತ್ರರಂಗದ ದಿಗ್ಗಜರ ಮುಂದೆ ತಮ್ಮ ಚಿತ್ರಗಳನ್ನ, ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಈ ಬಾರಿ ಪ್ಯಾರೀಸ್‌ನಲ್ಲಿ ನಡೆದ 72ನೇ “ಕೇನ್ಸ್‌ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ನಲ್ಲಿ ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ ತಮ್ಮ ಮಗಳು ಆರಾಧ್ಯಾ ಜೊತೆ ಮತ್ಸ್ಯ ಕನ್ಯೆ ಗೆಟಪ್‌ನಲ್ಲಿ ಅದ್ದೂರಿಯಾಗಿ ಎಂಟ್ರಿ ಕೊಟ್ಟು ನೆರೆದಿದ್ದವರ ಗಮನ ಸೆಳೆದಿದ್ದಾರೆ.

ಪ್ರಸಿದ್ಧ ಕಾಸ್ಟೂಮ್‌ ಡಿಸೈನರ್‌ ಜೀನ್‌ ಲ್ಯೂಯಿಸ್‌ ಸಬಾಜಿ ವಿನ್ಯಾಸಗೊಳಿಸಿದ್ದ, ಒಂದು ಕಡೆಯ ಅರ್ಧ ತೋಳು ಇರುವ ಮತ್ಸಕನ್ಯೆ ಉಡುಪು ಧರಿಸಿ, ನ್ಯೂಡ್‌ ಲಿಪ್‌ಸ್ಟಿಕ್‌ ಹಾಕಿ ಯಾವುದೇ ಆಭರಣ ಇಲ್ಲದೆ ಐಶ್ವರ್ಯಾ ರೈ ಆಗಮಿಸಿದ್ದರು. ಇನ್ನೊಂದು ವಿಶೇಷವೆಂದರೆ, ಈ ಬಾರಿಯ “ಕೇನ್ಸ್‌ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ ಕಾರ್ಯಕ್ರಮಕ್ಕೆ ಐಶ್ವರ್ಯಾ ರೈ ಐಶ್ವರ್ಯಾ ತಮ್ಮ ಮಗಳು ಆರಾಧ್ಯಾಳನ್ನು ಕರೆದುಕೊಂಡು ಬಂದಿದ್ದರು. ಆರಾಧ್ಯಾ ತನ್ನ ತಾಯಿಯ ಉಡುಪಿನ ಜೊತೆ ಮ್ಯಾಚ್‌ ಆಗಲು ಹಳದಿ ಬಣ್ಣದ ಫ್ರಾಕ್‌ ಧರಿಸಿದ್ದರು. ಐಶ್ವರ್ಯ ಎಂಟ್ರಿ ಕೊಡುವ ವೇಳೆ ತಮ್ಮ ಮಗಳ ಕೈ ಹಿಡಿದುಕೊಂಡು ಆಕೆಯನ್ನು ಸುತ್ತಿಸಿದ್ದಾರೆ.

ಇನ್ನು ಐಶ್ವರ್ಯಾ ರೈ ತಮ್ಮ ಮಗಳೊಂದಿಗೆ ಇಂಥಾದ್ದೊಂದು ಅಪರೂಪದ ಎಂಟ್ರಿ ಕೊಟ್ಟಿರುವುದಕ್ಕೆ “ಕೇನ್ಸ್‌ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಐಶ್ವರ್ಯಾ ರೈ ಒಬ್ಬರು ಒಬ್ಬ ವೃತ್ತಿಪರ ನಟಿಯಾಗಿದ್ದರೂ, ತಾಯಿಯಾಗಿ ತಮ್ಮ ಮೇಲಿನ ವಿಶ್ವಾಸಾರ್ಹ ಜವಾಬ್ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ನಟಿಯಾಗಿ ಮತ್ತು ತಾಯಿಯಾಗಿ ಅವರ ದಿಟ್ಟ ನಡೆ-ನಿಲುವು ಸ್ಪಷ್ಟವಾಗಿದೆ ಎಂದು ಅನೇಕರು ಪ್ರಶಂಸಿಸಿದ್ದಾರೆ.
ಐಶ್ವರ್ಯಾ ರೈ ಕೂಡ “ಕೇನ್ಸ್‌ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ನ ಇಂಥ ಅಪರೂಪದ ಕ್ಷಣಗಳನ್ನು ತಮ್ಮ ಇನ್ಸಾ$rಗ್ರಾಂನಲ್ಲಿ ಹಂಚಿಕೊಂಡಿದ್ದು, ಮಗಳ ಜೊತೆಗಿರುವ ಫೋಟೋಗಳನ್ನು ಶೇರ್‌ ಮಾಡಿ, “ನಿಮ್ಮ ಪ್ರೀತಿಗೆ ಧನ್ಯವಾದಗಳು. ಕೇನ್ಸ್‌ 2019′ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಈ ಬಾರಿಯ “ಕೇನ್ಸ್‌ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ನಲ್ಲಿ ಐಶ್ವರ್ಯಾ ರೈ ಅವರೊಂದಿಗೆ, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಹಿನಾ ಖಾನ್‌, ಕಂಗನಾ ರಣಾವುತ್‌, ಮಲ್ಲಿಕಾ ಶೆರಾವತ್‌, ಹುಮಾ ಖುರೇಶಿ, ಡಯಾನಾ ಪೆಂಟಿ ಮೊದಲಾದ ಸ್ಟಾರ್‌ ಕಲಾವಿದರು ಭಾಗವಹಿಸಿದ್ದಾರೆ.

ಒಟ್ಟಾರೆ ತಾಯಿಯಾದ ಬಳಿಕವೂ ಐಶ್ವರ್ಯಾ ರೈ ತನ್ನನ್ನು ತಾನು ಜವಾಬ್ದಾರಿ ಮತ್ತು ವೃತ್ತಿಪರತೆಯನ್ನು ನಿರೂಪಿಸಲು “ಕೇನ್ಸ್‌ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಹಿಳೆಯರ ಪೈಕಿ ಅನೇಕರು ಹೊಟ್ಟೆತುಂಬಾ ನೀರು ಕುಡಿಯುವುದು ಕಡಿಮೆ. ಅದರಲ್ಲಿಯೂ ಮನೆಯ ಹೊರಗೆ ಕೆಲಸ ಮಾಡುವವರು, ಪ್ರಯಾಣ ಮಾಡುವವರು, ಕಾರ್ಮಿಕ ಮಹಿಳೆಯರು ನೀರು ಕುಡಿಯಲು...

  • ತುಳಸೀ ಗೌಡರ ಬದುಕಿನಲ್ಲಿ ತೀವ್ರ ನೋವಿನ ಹಾದಿ ಎದುರಾದಾಗ ಅವರಿಗೆ ನೆರಳಾದುದು ಹಸಿರು ಗಿಡಗಳು. ನಿಸ್ವಾರ್ಥವಾಗಿ ಹಸಿರು ಸಿರಿಯನ್ನು ಪ್ರೀತಿಸಿದ ಅವರು ನಿಜಕ್ಕೂ...

  • ಹದಿನೇಳು ವರ್ಷದ ಹಿಂದೆ ಮದುವೆಯಾಗಿ ಈ ಬೃಹತ್‌ ಮನೆಯೊಳಗೆ ಕಾಲಿಟ್ಟಾಗ ನನಗೆ ವಾಸ್ತುಶಾಸ್ತ್ರದ ಬಗ್ಗೆ ತಿಳಿವಳಿಕೆಯೇ ಇರಲಿಲ್ಲ. ಅತ್ತೆ ಸರಸ್ವತಿ ಅವರಾಗಲಿ, ಮಾವ...

  • ಉಡುಪಿ -ಕುಂದಾಪುರ ನಡುವೆ ಓಡಾಡುವ ಎಕ್ಸ್‌ಪ್ರೆಸ್‌ ಬಸ್‌ "ಭಾರತಿ'ಯಲ್ಲಿ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ರೇಖಾ, ಮೂಲತಃ ಬಾಗಲಕೋಟೆಯವರು. ಆದರೆ, ಸುಮಾರು...

  • ನಂಗಿದು ಬೇಡ, ಬೇರೆ ಮಾಡಿಕೊಡು'' ಎಂದು ರಚ್ಚೆ ಹಿಡಿದು ಅಳುತ್ತ ನೆಲದಲ್ಲಿ ಹೊರಳಾಡುತ್ತಿದ್ದ ಹತ್ತು ವರ್ಷದ ಮೊಮ್ಮಗನ ಹಠಕ್ಕೆ ಮಣಿದು, ನೋಯುತ್ತಿದ್ದ ತನ್ನ ಮೊಣಕಾಲುಗಳನ್ನು...

ಹೊಸ ಸೇರ್ಪಡೆ