ಜೋರಾಗಿದೆ ಅನುಷ್ಕಾ ಶರ್ಮಾ ಪ್ರಭಾವಳಿ!


Team Udayavani, Oct 4, 2019, 4:51 AM IST

c-22

ಸುಮಾರು ಒಂದೂವರೆ ವರ್ಷಗಳಿಂದ ಅನುಷ್ಕಾ ಶರ್ಮಾ ಅಭಿನಯದ ಯಾವ ಹೊಸ ಚಿತ್ರಗಳೂ ಅನೌನ್ಸ್‌ ಆಗಿಲ್ಲ. ಝೀರೋ ಚಿತ್ರದ ಬಳಿಕ ಅನುಷ್ಕಾ ಹೀರೋಯಿನ್‌ ಆಗಿ ಅಭಿನಯಿಸಿರುವ ಯಾವ ಚಿತ್ರಗಳೂ ತೆರೆಗೆ ಬಂದಿಲ್ಲ. ಇದರ ನಡುವೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರನ್ನು ಮದುವೆಯಾದ ಬಳಿಕ ಅನುಷ್ಕಾ ಅವರನ್ನು ಬಾಲಿವುಡ್‌ ಅಂಗಳದಲ್ಲೂ ನೋಡುವುದು ಕೂಡ ಅಪರೂಪ ಎನ್ನುತ್ತಿದ್ದಾರೆ ಸಿನಿ ಪ್ರಿಯರು. ಆದರೆ, ಇಷ್ಟೆಲ್ಲ ಇದ್ದರೂ, ಅನುಷ್ಕಾ ಶರ್ಮಾಗೆ ಇರುವ ಜನಪ್ರಿಯತೆ, ಬೇಡಿಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುತ್ತಿವೆ ಬಾಲಿವುಡ್‌ ಮೂಲಗಳು.

ಹೌದು, ಮದುವೆಯ ಬಳಿಕ ಅನುಷ್ಕಾ ಶರ್ಮಾ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದರೂ, ಅವರ ಜನಪ್ರಿಯತೆ ಮತ್ತು ಅವರಿಗಿರುವ ಬೇಡಿಕೆ ಹೆಚ್ಚುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ, ಇತ್ತೀಚೆಗೆ ಫಾರ್ಚೂನ್‌ ಇಂಡಿಯಾ ಸಂಸ್ಥೆ ಪಟ್ಟಿಮಾಡಿರುವ 2019ರ ಮೋಸ್ಟ್‌ ಪವರ್‌ಫ‌ುಲ್‌ ವುಮೆನ್‌ ಲೀಸ್ಟ್‌ನಲ್ಲಿಯೂ ಅನುಷ್ಕಾ ಶರ್ಮಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇನ್ನು 2019ರ ಫಾರ್ಚುನ್‌ ಇಂಡಿಯಾದ ಮೋಸ್ಟ್‌ ಪವರ್‌ಫ‌ುಲ್‌ ವುಮೆನ್‌ ಲೀಸ್ಟ್‌ನಲ್ಲಿ ಅನುಷ್ಕಾ 39ನೇ ಸ್ಥಾನ ಪಡೆದುಕೊಂಡಿದ್ದು, ಈ ಲೀಸ್ಟ್‌ನಲ್ಲಿರುವ ಬಾಲಿವುಡ್‌ನ‌ ಏಕೈಕ ಪವರ್‌ಫ‌ುಲ್‌ ವುಮೆನ್‌ ಎನ್ನುವ ಖ್ಯಾತಿಯೂ ಅನುಷ್ಕಾ ಶರ್ಮಾ ಮುಡಿಗೇರಿದೆ. ಅನುಷ್ಕಾ ಶರ್ಮಾ ಕೇವಲ ನಟಿಯಾಗಿ ಉಳಿಯದೆ, ರೂಪದರ್ಶಿಯಾಗಿ ಪ್ರತಿಷ್ಠಿತ ಕಂಪೆನಿಗಳ ಪ್ರಚಾರ ರಾಯಭಾರಿಯಾಗಿ ಗುರುತಿಸಿಕೊಂಡಿದ್ದು, ನಿರ್ಮಾಪಕಿಯಾಗಿ ಕಡಿಮೆ ಬಜೆಟ್‌ನಲ್ಲಿ ಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆಯೂ ಅವರಿಗೆ ಇದೆ. ಅಲ್ಲದೆ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿಯೂ ಅನುಷ್ಕಾ ಶರ್ಮಾ ನಿರ್ಮಾಣದ ಚಿತ್ರಗಳು ಉತ್ತಮ ಗಳಿಕೆ ಕಂಡಿರುವುದರಿಂದ, ಈ ಎಲ್ಲಾ ಮಾನದಂಡಗಳ ಅಡಿಯಲ್ಲಿ ಅನುಷ್ಕಾ ಶರ್ಮಾ 2019ರ ಫಾರ್ಚೂನ್‌ ಇಂಡಿಯಾದ ಮೋಸ್ಟ್‌ ಪವರ್‌ಫ‌ುಲ್‌ ವುಮೆನ್‌ ಲಿಸ್ಟ್‌ ನಲ್ಲಿ ಸ್ಥಾನ ಗಿಟ್ಟಿಸಿ ಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅದೇನೆ ಇರಲಿ, ಸಾಮಾನ್ಯವಾಗಿ ಬಾಲಿವುಡ್‌ನ‌ಲ್ಲಿ ನಾಯಕ ನಟಿಯರು ಮದುವೆಯಾಗುತ್ತಿದ್ದಂತೆ ಜನಪ್ರಿಯತೆ ಕಳೆದುಕೊಂಡು ಬಣ್ಣದ ಲೋಕದಿಂದ ಸಾಂಸಾರಿಕ ಬದುಕಿನತ್ತ ಮುಖ ಮಾಡುತ್ತಿರುವಾಗ, ಅನುಷ್ಕಾ ಶರ್ಮಾ ಮಾತ್ರ ಬಿಗ್‌ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳದಿದ್ದರೂ, ಅದೇ ಜನಪ್ರಿಯತೆಯನ್ನು ಉಳಿಸಿಕೊಂಡು ಮೋಸ್ಟ್‌ ಪವರ್‌ಫ‌ುಲ್‌ ವುಮೆನ್‌ ಆಗಿ ಗುರುತಿಸಿ ಕೊಳ್ಳುತ್ತಿರುವುದು ಸೊಜಿಗದ ಸಂಗತಿಯೇ ಸರಿ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.