ಜುಲನ್‌ ಗೋಸ್ವಾಮಿ ಬಯೋಪಿಕ್‌ನಲ್ಲಿ ಅನುಷ್ಕಾ ಶರ್ಮ

Team Udayavani, Jan 17, 2020, 5:20 AM IST

ವಿರಾಟ್‌ ಕೋಹ್ಲಿ ಕ್ರಿಕೆಟ್‌ ಆಟಗಾರನಾಗಿ ಕ್ರೀಡಾಂಗಣದಲ್ಲಿ ಮಿಂಚುವುದನ್ನು ನೋಡಿರುತ್ತೀರಿ. ಈಗ ವಿರಾಟ್‌ ಕೋಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮ ಕೂಡ ಬ್ಯಾಟ್‌ ಹಿಡಿದು ಕ್ರೀಡಾಂಗಣಕ್ಕೆ ಇಳಿದಿದ್ದಾರೆ. ಆದರೆ, ಅದು ರಿಯಲ್‌ ಆಗಿ ಅಲ್ಲ, ರೀಲ್‌ನಲ್ಲಿ!

ಝೀರೋ ಚಿತ್ರದ ಬಳಿಕ ಅನುಷ್ಕಾ ಶರ್ಮ ಬಾಲಿವುಡ್‌ನ‌ಲ್ಲಿ ಯಾವ ಚಿತ್ರಗಳನ್ನೂ ಒಪ್ಪಿಕೊಂಡಿರಲಿಲ್ಲ. ಇದರ ನಡುವೆ ಒಂದಷ್ಟು ಜಾಹೀರಾತುಗಳು, ಬ್ಯುಸಿನೆಸ್‌ ಅಂಥ ಬ್ಯುಸಿಯಾಗಿರುವ ಅನುಷ್ಕಾ ಶರ್ಮ ಮತ್ತೆ ಬಣ್ಣ ಹಚ್ಚುತ್ತಾರಾ? ಬಿಗ್‌ ಸ್ಕ್ರೀನ್‌ಗೆ ರೀ ಎಂಟ್ರಿಯಾಗುತ್ತಾರಾ? ಎಂಬ ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡುತ್ತಲೇ ಇದ್ದವು. ಆದರೆ, ಇದ್ಯಾವುದಕ್ಕೂ ಉತ್ತರಿಸದಿದ್ದ ಅನುಷ್ಕಾ ಶರ್ಮ ಈಗ ಸದ್ದಿಲ್ಲದೆ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.

ಅಂದಹಾಗೆ, ಇಲ್ಲಿಯವರೆಗೆ ಬೇರೆ ಬೇರೆ ಪಾತ್ರಗಳಲ್ಲಿ ಮಿಂಚಿ ಗಮನ ಸೆಳೆದಿದ್ದ ಅನುಷ್ಕಾ ಈಗ ಕ್ರಿಕೆಟ್‌ ಆಟಗಾರ್ತಿಯಾಗಿ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗುತ್ತಿದ್ದಾರೆ. ಹೌದು, ಅನುಷ್ಕಾ ಶರ್ಮಾ ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ದಿಗ್ಗಜ ಆಟಗಾರ್ತಿ ತಂಡದ ಮಾಜಿ ನಾಯಕಿ ಜೂಲನ್‌ ನಿಶಿತ್‌ ಗೋಸ್ವಾಮಿ ಬಯೋಪಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಅನುಷ್ಕಾ ಚಿತ್ರೀಕರಣ ಕೂಡ ಪ್ರಾರಂಭಿಸಿದ್ದಾರೆ. ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಭಾರತೀಯ ಕ್ರಿಕೆಟ್‌ ತಂಡದ ಜರ್ಸಿ ಹಾಕಿ ಅನುಷ್ಕಾ ಫೀಲ್ಡ…ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರೀಕರಣ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸ್ಟೇಡಿಯಂನಲ್ಲಿ ಬ್ಯಾಟ್‌ ಹಿಡಿದು ಮಿಂಚುತ್ತಿರುವ ಅನುಷ್ಕಾ ಶರ್ಮ ಫೋಟೋಗಳು ವೈರಲ್‌ ಆಗುತ್ತಿವೆ. ಇನ್ನೊಂದು ವಿಶೇಷವೆದರೆ, ಚಿತ್ರೀಕರಣದಲ್ಲಿ ಆಟಗಾರ್ತಿ ಜುಲನ್‌ ಗೋಸ್ವಾಮಿ ಕೂಡ ಭಾಗಿಯಾಗಿದ್ದಾರೆ. ಅನುಷ್ಕಾ ಅವರಿಗೆ ಖುದ್ದು ಗೋಸ್ವಾಮಿ ಅವರೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಆದರೆ, ಈ ಚಿತ್ರದ ಬಗ್ಗೆ ಚಿತ್ರತಂಡವಾಗಲಿ, ಸ್ವತಃ ಅನುಷ್ಕಾ ಆಗಲಿ ಇಲ್ಲಿಯವರೆಗೆ ಯಾವುದೆ ಅಧಿಕೃತ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.

ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಸಿನಿಮಾಗಳು ಕೈಯಲ್ಲಿ ಇಲ್ಲದಿದ್ದರೂ, ಬೇರೆ ಬೇರೆ ವಿಷಯಗಳಿಗೆ ಸದಾ ಸುದ್ದಿಯಾಗುತ್ತಿದ್ದ ಅನುಷ್ಕಾ ಶರ್ಮ, ಅಭಿಮಾನಿಗಳ ಮನಸ್ಸಿನಲ್ಲಿ ಸಿಗ್ನೇಚರ್‌ ಹಾಕುತ್ತಲೇ ಇದ್ದರು.
ಇದೀಗ ಮತ್ತೆ ಸಿನಿಮಾ ವಿಷಯಕ್ಕೆ ಅವರು ಸುದ್ದಿಯಾಗುತ್ತಿರುವುದು ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ನೀಡಿರುವುದಂತೂ ಸುಳ್ಳಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಹಿಳೆಯರ ಪೈಕಿ ಅನೇಕರು ಹೊಟ್ಟೆತುಂಬಾ ನೀರು ಕುಡಿಯುವುದು ಕಡಿಮೆ. ಅದರಲ್ಲಿಯೂ ಮನೆಯ ಹೊರಗೆ ಕೆಲಸ ಮಾಡುವವರು, ಪ್ರಯಾಣ ಮಾಡುವವರು, ಕಾರ್ಮಿಕ ಮಹಿಳೆಯರು ನೀರು ಕುಡಿಯಲು...

  • ತುಳಸೀ ಗೌಡರ ಬದುಕಿನಲ್ಲಿ ತೀವ್ರ ನೋವಿನ ಹಾದಿ ಎದುರಾದಾಗ ಅವರಿಗೆ ನೆರಳಾದುದು ಹಸಿರು ಗಿಡಗಳು. ನಿಸ್ವಾರ್ಥವಾಗಿ ಹಸಿರು ಸಿರಿಯನ್ನು ಪ್ರೀತಿಸಿದ ಅವರು ನಿಜಕ್ಕೂ...

  • ಹದಿನೇಳು ವರ್ಷದ ಹಿಂದೆ ಮದುವೆಯಾಗಿ ಈ ಬೃಹತ್‌ ಮನೆಯೊಳಗೆ ಕಾಲಿಟ್ಟಾಗ ನನಗೆ ವಾಸ್ತುಶಾಸ್ತ್ರದ ಬಗ್ಗೆ ತಿಳಿವಳಿಕೆಯೇ ಇರಲಿಲ್ಲ. ಅತ್ತೆ ಸರಸ್ವತಿ ಅವರಾಗಲಿ, ಮಾವ...

  • ಉಡುಪಿ -ಕುಂದಾಪುರ ನಡುವೆ ಓಡಾಡುವ ಎಕ್ಸ್‌ಪ್ರೆಸ್‌ ಬಸ್‌ "ಭಾರತಿ'ಯಲ್ಲಿ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ರೇಖಾ, ಮೂಲತಃ ಬಾಗಲಕೋಟೆಯವರು. ಆದರೆ, ಸುಮಾರು...

  • ನಂಗಿದು ಬೇಡ, ಬೇರೆ ಮಾಡಿಕೊಡು'' ಎಂದು ರಚ್ಚೆ ಹಿಡಿದು ಅಳುತ್ತ ನೆಲದಲ್ಲಿ ಹೊರಳಾಡುತ್ತಿದ್ದ ಹತ್ತು ವರ್ಷದ ಮೊಮ್ಮಗನ ಹಠಕ್ಕೆ ಮಣಿದು, ನೋಯುತ್ತಿದ್ದ ತನ್ನ ಮೊಣಕಾಲುಗಳನ್ನು...

ಹೊಸ ಸೇರ್ಪಡೆ