ಅವಲಕ್ಕಿ ವೈವಿಧ್ಯ

Team Udayavani, Mar 9, 2018, 7:30 AM IST

ಅವಲಕ್ಕಿ ಇಡ್ಲಿ / ಪಡ್ಡು
ಬೇಕಾಗುವ ಸಾಮಗ್ರಿ: ಅವಲಕ್ಕಿ- 1 ಕಪ್‌, ಅಕ್ಕಿ ರವೆ- 1 ಕಪ್‌, ಮೊಸರು- 1 ಕಪ್‌, ಈರುಳ್ಳಿ – 1, ಕ್ಯಾರೆಟ್‌- 1, ಉಪ್ಪು ರುಚಿಗೆ, ಎಣ್ಣೆ 2-3 ಚಮಚ.

ತಯಾರಿಸುವ ವಿಧಾನ:  ಒಂದು ಪಾತ್ರೆಯಲ್ಲಿ ಮೊಸರು, ಅವಲಕ್ಕಿ, ಅಕ್ಕಿ ರವೆ, ಉಪ್ಪು ಹಾಕಿ ಬೆರೆಸಿ ಹತ್ತು ನಿಮಿಷ ಇಡಿ. ಈರುಳ್ಳಿ ಚೂರು, ಕ್ಯಾರೆಟ್‌ ತುರಿ ಬೆರೆಸಿ ಇಡ್ಲಿ ಬಟ್ಟಲಿಗೆ ಎಣ್ಣೆ ಸವರಿಡಿ. ಹಬೆಯ ಪಾತ್ರೆಯಲ್ಲಿ ನೀರು ಕುದಿದ ನಂತರ ಹಿಟ್ಟು ತುಂಬಿಸಿದ ಬಟ್ಟಲು ಇಟ್ಟು ಇಪ್ಪತ್ತು ನಿಮಿಷ ಬೇಯಿಸಿ ತೆಗೆಯಿರಿ. ಕಾಯಿಚಟ್ನಿಯೊಂದಿಗೆ ಸವಿಯಲು ಬಲು ರುಚಿಯಾಗಿರುತ್ತದೆ.
ಇದೇ ಹಿಟ್ಟನ್ನು ಪಡ್ಡು ಕಾವಲಿಗೆ ಹಾಕಿ ಪಡ್ಡು ಮಾಡಬಹುದು.

ಅವಲಕ್ಕಿ ಚಟ್ನಿ 
ಬೇಕಾಗುವ ಸಾಮಗ್ರಿ:
ಅವಲಕ್ಕಿ- 2 ಕಪ್‌, ಕಾಯಿತುರಿ- 1 ಕಪ್‌, ಹುರಿದ ಒಣಮೆಣಸಿನಕಾಯಿ- 2, ಬೆಲ್ಲ ಸ್ವಲ್ಪ , ಉಪ್ಪು ರುಚಿಗೆ, ಕೊತ್ತಂಬರಿ- 2 ಚಮಚ, ಜೀರಿಗೆ- 1 ಚಮಚ, ಅರಸಿನ ಪುಡಿ- 1/2 ಚಮಚ, ಒಗ್ಗರಣೆಗೆ ಎಣ್ಣೆ , ಸಾಸಿವೆ, ಕರಿಬೇವಿನ ಗರಿಕೆ, ಹುಣಸೆಹಣ್ಣು – ಗೋಲಿ ಗಾತ್ರ.

ತಯಾರಿಸುವ ವಿಧಾನ: ಒಣಮೆಣಸಿನಕಾಯಿ, ಬೆಲ್ಲ, ತೆಂಗಿನತುರಿ, ಉಪ್ಪು, ಹುಣಸೆಹಣ್ಣು, ಜೀರಿಗೆ, ಕೊತ್ತಂಬರಿ ಒಟ್ಟಿಗೆ ಹಾಕಿ ರುಬ್ಬಿ ಅವಲಕ್ಕಿಗೆ ಹಾಕಿ ಚೆನ್ನಾಗಿ ಕಲಸಿಡಿ. ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನ ಗರಿಕೆ ಹಾಕಿ ಒಗ್ಗರಣೆ ಮಾಡಿ ಕೊನೆಗೆ ಅರಸಿನ ಹುಡಿ ಹಾಕಿ ತೆಗೆದು ಅವಲಕ್ಕಿಗೆ ಹಾಕಿ ಕಲಸಿ. ಕಡಲೆಹಿಟ್ಟಿನ ಶ್ಯಾವಿಗೆ, ಅವಲಕ್ಕಿ ಮಿಕ್ಸಚರ್‌, ಕಡಲೆ ಪಲ್ಯದೊಂದಿಗೆ ಸವಿಯಬಹುದು. ನೀರುಳ್ಳಿ ಚೂರು ಹಾಕಿಯೂ ರುಚಿ ನೋಡಬಹುದು.

ಅವಲಕ್ಕಿ, ಪುಟಾಣಿ ಇಂಡ್ರಿ
ಬೇಕಾಗುವ ಸಾಮಗ್ರಿ:
ಅವಲಕ್ಕಿ- 2 ಕಪ್‌, ಬೆಲ್ಲ- 50 ಗ್ರಾಂ, ತೆಂಗಿನತುರಿ- 1/2 ಕಪ್‌, ಏಲಕ್ಕಿ- ಸ್ವಲ್ಪ , ಪುಟಾಣಿ- 1/4 ಕಪ್‌, ತುಪ್ಪ- 2 ಚಮಚ.

ತಯಾರಿಸುವ ವಿಧಾನ: ಅವಲಕ್ಕಿ ಹುರಿದು ಸ್ವಲ್ಪ ತರಿತಯಾಗಿ ಹುಡಿ ಮಾಡಿಡಿ. ಪುಟಾಣಿ ಕಡಲೆ ಹುಡಿ ಮಾಡಿಡಿ. ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೆಲ್ಲ ಹಾಕಿ ಪಾಕವಾಗುವಾಗ ತೆಂಗಿನ ತುರಿ, ಅವಲಕ್ಕಿ ಪುಟಾಣಿ ಹುಡಿ, ಏಲಕ್ಕಿ ಹುಡಿ ಹಾಕಿ ಒಂದು ಚಮಚ ತುಪ್ಪ ಹಾಕಿ ಮಗುಚಿ. ಗಿಂದಲಿಗೆ (ಚಿಕ್ಕ ಬಟ್ಟಲಿಗೆ) ಇಲ್ಲವೆ ಡಬ್ಬಿಯ ಮುಚ್ಚಳಕ್ಕೆ ತುಪ್ಪ ಸವರಿ ಅದರಲ್ಲಿ ಇಂಡ್ರಿ ಹೂರಣ ಹಾಕಿ ಗಟ್ಟಿಯಾಗಿ ಒತ್ತಿ ಬಡಿಯಿರಿ. ಅವಲಕ್ಕಿ ಕಣಿ ಇಂಡ್ರಿ ತಯಾರ್‌. ಅವಲಕ್ಕಿ ಕಣಿಯ ಉಂಡೆಯನ್ನೂ ತಯಾರಿಸಬಹುದು.

ಗೊಜ್ಜವಲಕ್ಕಿ
ಬೇಕಾಗುವ ಸಾಮಗ್ರಿ:
ಗಟ್ಟಿ ಅವಲಕ್ಕಿ- 1 ಕಪ್‌, ಹುಣಸೆಹಣ್ಣು- ಗೋಲಿಗಾತ್ರ, ಸಕ್ಕರೆ- 1 ಚಮಚ, ಎಳ್ಳು- 2 ಚಮಚ, ಉಪ್ಪು ರುಚಿಗೆ, ಕಡಲೆಬೇಳೆ- 1 ಚಮಚ, ಉದ್ದಿನಬೇಳೆ, ಸಾಸಿವೆ, ಸಾರಿನ ಪುಡಿ- 1 ಚಮಚ, ಕೊಬ್ಬರಿ ತುರಿ- 4 ಚಮಚ, ಎಣ್ಣೆ, ಒಗ್ಗರಣೆ ಸೊಪ್ಪು.

ತಯಾರಿಸುವ ವಿಧಾನ: ಗಟ್ಟಿ ಅವಲಕ್ಕಿ ಹುರಿದು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ಹುಡಿ ಮಾಡಿಡಿ. ಸ್ವಲ್ಪ ನೀರಿನಲ್ಲಿ ಹುಣಸೆಹಣ್ಣು ಕಿವುಚಿಡಿ. ಎಳ್ಳು ತೊಳೆದು ಹುರಿದಿಡಿ. ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಉದ್ದಿನಬೇಳೆ, ಎಳ್ಳು , ಸಾರಿನಪುಡಿ, ಕಡಲೆ, ಬೇಳೆ ಹುರಿದು ಒಗ್ಗರಣೆ ಸೊಪ್ಪು ಹಾಕಿ ಅವಲಕ್ಕಿ ರವೆ, ಹುಣಸೆಹಣ್ಣು, ಉಪ್ಪು , ಸಕ್ಕರೆ, ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಸಿ. ರುಚಿಕರ ಗೊಜ್ಜವಲಕ್ಕಿ ಉಪಾಹಾರಕ್ಕೆ ತಯಾರು.

ಎಸ್‌. ಜಯಶ್ರೀ ಶೆೆಣೈ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉಡುಪಿ ಜಿಲ್ಲೆಯ ಕೋಟದ ಹೆದ್ದಾರಿ ಸನಿಹದಲ್ಲಿ, ಮಸೀದಿಯ ಹಿಂದೆ ಇರುವ ಆ ಮನೆಯ ಅಂಗಳದಲ್ಲಿ ಹತ್ತಾರು ಜನ ಕಾದಿದ್ದರು. ಎಲ್ಲರ ಮುಖದಲ್ಲಿಯೂ "ಮಿನಿಸ್ಟರ್‌ ಎಷ್ಟು...

  • ನಾನೊಬ್ಬಳು ಗೃಹಿಣಿ ಮತ್ತು ಕೃಷಿಕ ಮಹಿಳೆ. ನನ್ನ ಹೆಚ್ಚಿನ ಸಮಯ ಮನೆ, ತೋಟ, ಹಟ್ಟಿ - ಇವಿಷ್ಟೇ ವರ್ತುಲದೊಳಗೆ ಸುತ್ತು ಬಂದು ಕಳೆದು ಹೋಗುತ್ತದೆ. ಅಪರೂಪಕ್ಕೆ ಸುತ್ತಮುತ್ತಲಿನ...

  • ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಸೇವೆ ಒದಗಿಸುತ್ತಿರುವ "ಕಾವೇರಿ ಆ್ಯಂಬುಲೆನ್ಸ್‌'ನ ಒಡತಿ ರಾಧಿಕಾ ಸಿ.ಎಸ್‌. ಮಹಿಳೆಯೊಬ್ಬರು ಆ್ಯಂಬುಲೆನ್ಸ್‌...

  • ಮೊನ್ನೆ ನನ್ನ ಮಗನನ್ನು ಶಾಲೆಗೆ ಬಿಡಲು ಬಸ್‌ ಹತ್ತಿದ್ದೆ. ಮುಂದಿನ ಸ್ಟಾಪ್‌ನಲ್ಲಿ 17-18ರ ಯುವತಿಯೊಬ್ಬಳು ಬಸ್‌ ಹತ್ತಿದವಳು ನಿಂತಿದ್ದಳು. ನೋಡ ನೋಡುತ್ತಿದ್ದಂತೆಯೇ...

  • ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ದೇಶ ಭಾರತ. ಇಲ್ಲಿ ಮಹಿಳೆಯರು ವಿಜ್ಞಾನ,...

ಹೊಸ ಸೇರ್ಪಡೆ