ಕ್ಯಾ ಕುರ್ತಾ


Team Udayavani, Apr 7, 2017, 3:45 AM IST

Kurta.jpg

ಸೀರೆ, ಸಲ್ವಾರ್‌, ಚೂಡಿದಾರ್‌, ಹಾಫ್ಸಾರಿ, ಗಾಗ್ರಾ, ಲೆಹಂಗಾ, ಕುರ್ತಾ, ಜೀನ್ಸ್‌ – ಇವು ಹೆಣ್ಣು ಮಕ್ಕಳು ಧರಿಸುವ ವೈವಿಧ್ಯಮಯ ಉಡುಪುಗಳು. ಕಾಲಕ್ಕೆ ತಕ್ಕಂತೆ ನಮ್ಮ ದಿರಿಸು ಬದಲಾಗುತ್ತಿರುತ್ತದೆ. ಇಂದು ಇದ್ದ ಫ್ಯಾಶನ್‌ ನಾಳೆ ಇರುವುದಿಲ್ಲ. ಸಾವಿರಾರು ರೂಪಾಯಿ ಬೆಲೆ ನೀಡಿ ಕೊಂಡುಕೊಂಡಿದ್ದ ಬಟ್ಟೆ ಔಟ್‌ ಆಫ್ ಫ್ಯಾಷನ್‌ ಆಗಿ ಬಿಟ್ಟಿರುತ್ತದೆ. ಆದರೆ ನಮ್ಮ ಸಂಸ್ಕೃತಿಯಲ್ಲಿ ಕೆಲವೊಂದು ದಿರಿಸುಗಳು ಯಾವತ್ತಿಗೂ ಹಳೆ ಫ್ಯಾಷನ್‌ ಅಂತ ಆಗುವುದೇ ಇಲ್ಲ. ಉದಾಹರಣೆಗೆ ಸಾಂಪ್ರದಾಯಿಕ ಉಡುಗೆಯಾದ ಸೀರೆ ಮತ್ತು ಕುರ್ತಾ. ಸೀರೆ ಉಡಲು ತುಸು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಕುರ್ತಾವನ್ನು ಆಯ್ದುಕೊಳ್ಳುವವರೇ ಹೆಚ್ಚು. ಕುರ್ತಾ ಸಣ್ಣ ಪ್ರಾಯದವರಿಂದ ಹಿಡಿದು ಎಲ್ಲ ವರ್ಗದ ಹೆಣ್ಮಕ್ಕಳಿಗೂ ಚೆನ್ನಾಗಿ ಒಗ್ಗುತ್ತದೆ. ಹಾಗಾಗಿಯೇ ಹಿಂದಿನಿಂದಲೂ ಕುರ್ತಾ ಸಾಂಪ್ರದಾಯಿಕ ಉಡುಪುಗಳಲ್ಲಿ ಒಂದಾಗಿದ್ದು ತನ್ನ ಜನಪ್ರಿಯತೆಯನ್ನು ಇಂದಿನವರೆಗೂ ಕಳೆದುಕೊಂಡಿಲ್ಲ.

ಸರಳ ಉಡುಗೆ
ಇಂದಿನ ಫ್ಯಾಶನ್‌ ಜಗತ್ತಿನಲ್ಲಿ ಮಹಿಳೆಯರಿಗೆ ಬಹುವಿಧದ ದಿರಿಸುಗಳನ್ನು ಆಯ್ದುಕೊಳ್ಳುವ ಅವಕಾಶವಿದ್ದರೂ ಬಹುತೇಕ ಯುವತಿ ಯರು, ಮಹಿಳೆ ಯರು ಕುರ್ತಾ ವನ್ನೇ ಇಷxಪಡುತ್ತಿದ್ದಾರೆ. ಕುರ್ತಾ ಹೆಣ್ಮಕ್ಕಳ ಇಷ್ಟದ ಉಡುಗೆಗಳಲ್ಲಿ ಒಂದಾಗಿದೆ. ಕಾರಣ, ಕುರ್ತಾ ಧರಿಸಲು ಆರಾಮದಾಯಕ ಮತ್ತು ನೋಡಲು ಸರಳ ಸುಂದರವಾಗಿರುವುದು. ಕುರ್ತಾ ಎಲ್ಲಾ ಸಂದರ್ಭಗಳಿಗೂ ಪರ್‌ಫೆಕ್ಟ್ ಉಡುಪು. ಅಲ್ಲದೆ ಎಲ್ಲ ವಯೋಮಾನದವರೂ ಧರಿಸಬಹುದಾದಂಥದ್ದು. ಅಲ್ಲದೆ ವಿವಿಧ ನಮೂನೆಯ ಕುರ್ತಾಗಳು ಬಟ್ಟೆ ಮಳಿಗೆಗಳಲ್ಲಿ ಅತಿ ಕಡಿಮೆ ಬೆಲೆಗಳಲ್ಲಿಯೂ ಲಭ್ಯವಿವೆ. ಕುರ್ತಾಗಳನ್ನು ಲೆಗ್ಗಿಂಗ್ಸ್‌, ಪ್ಯಾಂಟ್ಸ್‌ , ಪಟಿಯಾಲ, ಲಾಂಗ್‌ ಸ್ಕರ್ಟ್‌, ಪಲಾಸೋ ಜೊತೆಯೂ ಧರಿಸಬಹುದು. ಹಾಂ! ಚೂಡಿದಾರಕ್ಕಾದರೆ ಹೊಲಿಗೆ ಚಾರ್ಜ್‌ ನೀಡಬೇಕು, ಆಗಾಗ ಟೈಲರ್‌ ಅಂಗಡಿ ಅಳೆಯುತ್ತಿರಬೇಕು. ಆದರೆ, ರೆಡಿಮೇಡ್‌ ಕುರ್ತಾ ಖರೀದಿಸಿದರೆ ಇದ್ಯಾವ ಖರ್ಚೂ ಇಲ್ಲ. ಸ್ವಲ್ಪ ಫಿಟ್ಟಿಂಗÕ… ಸರಿಪಡಿಸಿಕೊಂಡರೆ ಅಷ್ಟೇ ಸಾಕು!

ವಿವಿಧ ವಿನ್ಯಾಸಗ‌ಳಲ್ಲಿ…
ಹಿಂದೆ ಉದ್ದದ ಕುರ್ತಾಗಳು ಚಾಲ್ತಿಯಲ್ಲಿದ್ದವು. ಇದೀಗ ಆ ಹಳೆಯ ಸ್ಟೈಲೇ ಮತ್ತೆ ಚಾಲ್ತಿಗೆ ಬಂದಿದೆ. ಫ್ಯಾಷನೇಬಲ್‌ ಹಾಗೂ ಟ್ರೆಡಿಶನಲ್‌ ಗೆಟಪ್‌ನಲ್ಲೂ ಸಹ ಲಾಂಗ್‌ ಕುರ್ತಾ ದೊರೆಯುತ್ತದೆ. ಡಿಸೈನರ್‌, ಎಂಬ್ರಾಯಿಡರಿ, ಪ್ಲೆ„ನ್‌, ಫ್ಲೋರಲ್‌, ಸ್ಟ್ರೆಪ್‌, ಮಲ್ಟಿ ಕಲರ್‌- ಹೀಗೆ ಹಲವಾರು ವಿನ್ಯಾಸದ ಕುರ್ತಾಗಳು ಲಭಿಸುತ್ತವೆ. ಅನಾರ್ಕಲಿ, ಟ್ರೇಲ್‌, ಸಿ, ಎ-ಲೈನ್‌ ಮೊದಲಾದ ಕಟ್‌ಗಳು ಇಂದಿನ ಫ್ಯಾಷನ್‌ ಟ್ರೆಂಡ್‌ಗಳು. ಈ ಲಾಂಗ್‌ ಕುರ್ತಾಗಳನ್ನು ಲೆಗ್ಗಿಂಗ್ಸ್‌ , ಜಗ್ಗಿಂಗ್ಸ್‌ , ಪಟಿಯಾಲದ ಜೊತೆ ಸಹ ಧರಿಸಬಹುದು.

ಪ್ಲೇನ್‌ ಮತ್ತು ಪ್ರಿಂಟೆಡ್‌ ಲಾಂಗ್‌ ಕುರ್ತಾಗಳನ್ನು ಆಫೀಸ್‌, ಕಾಲೇಜ್‌ ಅಥವಾ ಫ್ರೆಂಡ್ಸ್‌ ಜೊತೆ, ಫ್ಯಾಮಿಲಿ ಜೊತೆ ಟೂರ್‌ಗೆ ಹೋಗುವ ಸಂದರ್ಭದಲ್ಲಿ ಸೂಕ್ತವಾದರೆ, ಇನ್ನು ಎಂಬ್ರಾಯಿಡರಿ ಹಾಗೂ ಡಿಸೈನರ್‌ ಕುರ್ತಾಗಳನ್ನು ಮದುವೆ, ಪಾರ್ಟಿ ಹಾಗೂ ಇತರ ಸಮಾರಂಭಗಳಲ್ಲಿ ಧರಿಸಬಹುದು. ಮದುವೆ ಸಮಾರಂಭಗಳಿಗೆ ಡಿಸೈನರಿ ಲಾಂಗ್‌ ಕುರ್ತಾ ಗ್ರಾಂಡ್‌ ಲುಕ್‌ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಫ್ಲೋರಲ್‌ ಲೆನ್‌¤ ಕುರ್ತಾಗಳು ಟ್ರೆಂಡಿಂಗ್‌ನಲ್ಲಿದೆ. ಕೇವಲ ಅನಾರ್ಕಲಿ ಮಾತ್ರವಲ್ಲ, ಸ್ಟ್ರೇಟ್‌ ಕುರ್ತಾವನ್ನು ಸಹ ಫ್ಲೋರಲ್‌ ಲೆನ್‌¤ವರೆಗೆ ಧರಿಸಬಹುದು. ಫ್ರಂಟ್‌ ಕಟ್‌ ಹೊಂದಿರುವ ಕುರ್ತಾಗಳನ್ನು ಲಾಂಗ್‌ ಸ್ಕರ್ಟ್‌ ಅಥವಾ ಸ್ಟ್ರೇಟ್‌ ಪ್ಯಾಂಟ್‌ಗೆ ಧರಿಸಿದರೆ ಸುಂದರವಾಗಿ ಕಾಣಿಸುತ್ತದೆ.

– ಎಸ್‌ಎನ್‌

ಟಾಪ್ ನ್ಯೂಸ್

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.