ದೀಪಿಕಾ ಪ್ಯಾಂಟ್‌ ಬೆಲೆ 64 ಸಾವಿರ!

Team Udayavani, Jun 28, 2019, 5:00 AM IST

ಬಾಲಿವುಡ್‌ ನಟಿಮಣಿಯರು ಏನೇ ಮಾಡಿದರೂ ಬೇಗನೇ ಸುದ್ದಿಯಾಗುತ್ತಾರೆ. ಅದರಲ್ಲೂ ಅವರು ಹಾಕುವ ಬಟ್ಟೆಯ ಬಗ್ಗೆ ಅಭಿಮಾನಿಗಳು ಒಂದು ಕಣ್ಣು ನೆಟ್ಟಿರುತ್ತಾರೆ. ಅದರಲ್ಲೂ ಒಂಚೂರು ಓವರ್‌ ಎನಿಸುವ ಬಟ್ಟೆ ಹಾಕಿದರೆ ಕೂಡಲೇ ಅದಕ್ಕೆ ಕಾಮೆಂಟ್‌ ಕೂಡಾ ಮಾಡುತ್ತಾರೆ. ಈಗಾಗಲೇ ತಮ್ಮ ಕಾಸ್ಟೂಮ್‌ ವಿಚಾರದಲ್ಲಿ ಅನೇಕ ನಟ-ನಟಿಯರು ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಅತಿ ಹೆಚ್ಚು ಸುದ್ದಿಯಾದ ನಟಿ ಎಂದರೆ ಅದು ಪ್ರಿಯಾಂಕಾ ಚೋಪ್ರಾ. ಆದರೆ, ಈ ಬಾರಿ ದೀಪಿಕಾ ಪಡುಕೋಣೆ ಹಾಕಿದ ಪ್ಯಾಂಟ್‌ವೊಂದು ಅಭಿಮಾನಿ ವರ್ಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಷ್ಟಕ್ಕೂ ಆ ಪ್ಯಾಂಟ್‌ನ ವಿಶೇಷವೇನು ಎಂದು ನೀವು ಕೇಳಬಹುದು. ದೀಪಿಕಾ ತೊಟ್ಟಿರೋದು ಸಿಲ್ವರ್‌ಪ್ಯಾಂಟ್‌. ಸಿಲ್ವರ್‌ಪ್ಯಾಂಟ್‌ನಲ್ಲಿ ಮಿಂಚುತ್ತಿದ್ದ ದೀಪಿಕಾ ಅವರನ್ನು ನೋಡಿದ ಅಭಿಮಾನಿಗಳು ಆ ಪ್ಯಾಂಟ್‌ನ ಬೆಲೆ ಎಷ್ಟಿರಬಹುದೆಂದು ತಲೆಕೆಡಿಸಿಕೊಂಡಿದ್ದಾರೆ. ಹೀಗೆ, ತಲೆಕೆಡಿಸಿಕೊಂಡು ಹುಡುಕಿದಾಗ ಅವರಿಗೆ ಸಿಕ್ಕ ಉತ್ತರ 64 ಸಾವಿರ ರೂಪಾಯಿ. ಹೌದು, ದೀಪಿಕಾ ಪಡುಕೋಣೆ ಹಾಕಿದ್ದ ಪ್ಯಾಂಟ್‌ ಬೆಲೆ 64 ಸಾವಿರ ರೂಪಾಯಿ ಎಂಬುದನ್ನು ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ದೀಪಿಕಾ ಸ್ಟೈಲ್‌ ಹಾಗೆಯೇ. ಆಕೆ ಸಂದರ್ಭಕ್ಕೆ ತಕ್ಕಂತೆ ಕಾಸ್ಟೂéಮ್‌ ಧರಿಸಿ ಗಮನ ಸೆಳೆಯುತ್ತಾರೆ. ಅದು ರೆಡ್‌ಕಾಪೆìಟ್‌ ಇರಲಿ, ಏರ್‌ಫೋರ್ಟ್‌ ಇರಲಿ ಅಥವಾ ಪಾರ್ಟಿ ಟೈಂ ಇರಲಿ. ಸದ್ಯ ದೀಪಿಕಾ ಛಪಾಕ್‌ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ್ಯಸಿಡ್‌ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್‌ ಅವರ ಬಯೋಪಿಕ್‌ ಇದಾಗಿದ್ದು, ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿ ಅಭಿಮಾನಿಗಳ ಗಮನ ಸೆಳೆದಿದೆ. ಪದ್ಮಾವತ್‌ ಚಿತ್ರದ ಗೆಲುವಿನ ನಂತರ ದೀಪಿಕಾ ಒಪ್ಪಿಕೊಂಡ ಸಿನಿಮಾವಿದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ