ಭಾರತದ ದೇಸಿ ಶೈಲಿಯ ಕಾಟನ್‌ ಸೀರೆಗಳು


Team Udayavani, Dec 15, 2017, 1:45 PM IST

15-24.jpg

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕ ಉಡುಗೆಗಳ ಸಾಲುಗಳಲ್ಲಿ ಮೊದಲನೆಯದೇ ಸೀರೆ. ಎಲ್ಲಾ ಆಧುನಿಕತೆಯ ಭರಾಟೆಯ ನಡುವೆಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಹಳೆಯವರಿಂದ ಎಳೆಯವರೆಗೆ ತನ್ನತ್ತ ಆಕರ್ಷಿಸುತ್ತಲೇ ಇರುವ ಉಡುಪುಗಳಲ್ಲಿ ಸೀರೆಯೇ ಅಗ್ರಗಣ್ಯವಾದುದು. ದಕ್ಷಿಣ ಭಾರತದ ಯಾವುದೊಂದೂ ಸಂಪ್ರದಾಯಗಳೂ ಸೀರೆಯಿಲ್ಲದೇ ಸಾಮಾನ್ಯವಾಗಿ ನಡೆಯಲಾರದು. ಸೀರೆಯನ್ನು ಧರಿಸುವ ಶೈಲಿಯಲ್ಲಿ ಅಥವಾ ಅವುಗಳ ಬ್ಲೌಸುಗಳೊಂದಿಗೆ ಹಲವು ಪ್ರಯೋಗಗಳು ನಡೆಯುತ್ತಿದ್ದರೂ ಸೀರೆಯ ರೂಪು ಬದಲಾವಣೆಗೊಳಪಡದೆ ಹಾಗೆಯೇ ಇರುತ್ತವೆ. ಇಂತಹ ಸೀರೆಗಳ ಹಲವಾರು ವಿಧಗಳನ್ನು ನಾವು-ನೀವು ದಿನನಿತ್ಯದಲ್ಲಿ ಬಳಸುತ್ತಿರುತ್ತೇವೆ. ದಿನದಿಂದ ದಿನಕ್ಕೆ ಟ್ರೆಂಡ್‌ ಬದಲಾಗುತ್ತಿರುತ್ತದೆ. ಹಿಸ್ಟರಿ ರಿಪೀಟ್ಸ… ಎಂಬಂತೆ ಒಂದಷ್ಟು ಫ್ಯಾಷನ್‌ಗಳು ಹಲವು ಸಮಯದ ನಂತರ ಹೊಸ ಬದಲಾವಣೆಗಳೊಂದಿಗೆ ಮತ್ತೆ ಪ್ರಚಲಿತಕ್ಕೆ ಬಂದು ಫ್ಯಾಷನ್‌ ಲೋಕದಲ್ಲಿ ಸ್ಥಾನ ಗಿಟ್ಟಸಿಕೊಳ್ಳುತ್ತವೆ. ಅಂಥವುಗಳಲ್ಲಿ ಕಾಟನ್‌ ಸೀರೆಗಳೂ ಕೂಡ. ಬಹಳ ಹಿಂದೆ ಇದ್ದ ಕಾಟನ್‌ ಸೀರೆಗಳ ಟ್ರೆಂಡ್‌ ನಂತರದ ದಿನಗಳಲ್ಲಿ  ಮೂಲೆಗುಂಪಾಗಿ ಕೇವಲ ವಯಸ್ಸಾದ ಮಹಿಳೆಯರಿಗೆ ಮಾತ್ರ ಎಂಬಂತಾಗಿತ್ತು. ನೆಟ…, ಎಂಬ್ರಾಯಿಡರಿ, ಸಿಂಥೆಟಿಕ್‌, ಶಿಫಾನ್‌ ಇನ್ನಿತರ ಬಗೆಯ ಸೀರೆಗಳ ಭರಾಟೆ ಹೆಚ್ಚುತ್ತಾ ಕಾಟನ್‌ ಸೀರೆಗಳ ಬಳಕೆ ಕಡಿಮೆಯಾಗುತ್ತಾ ಬರಹತ್ತಿತ್ತು. ಆದರೆ  ಕಾಟನ್‌ ಸೀರೆಯೆಂದರೆ ಮೂಗು ಮುರಿಯುತ್ತಿದ್ದವರೇ ಇಂದು ಅವುಗಳನ್ನು ಹುಡುಕಿಕೊಂಡು ಬಳಸುವಂತಹ  ಟ್ರೆಂಡ್‌ ಮರಳಿ ಬಹಳ ಪ್ರಚಲಿತವಾದ ಬಗೆಯಾಗಿ ಪರಿಣಮಿಸಿದೆ. 

ಈ ಬಗೆಯ ಕಾಟನ್‌ ಸೀರೆಗಳಲ್ಲಿ ಹಲವು ವಿಧಗಳನ್ನು ಕಾಣಬಹುದಾಗಿದೆ. ಖಾದಿ, ಬಾಂದಿನಿ, ಬೊಮ್ಕಾಯಿ, ಕಾಂಜೀವರಮ…, ಸಂಬಲ್ಪುರಿ, ಟಾಂಟ…, ಇಳ್ಕಲ… ಸೀರೆಗಳು ಇತ್ಯಾದಿ ಬಗೆಗಳಲ್ಲಿ ದೊರೆಯುವ ಇವುಗಳು, ಪ್ರತಿಯೊಂದು ಬಗೆಯೂ ತನ್ನದೇ ಆದ ವಿಶೇಷತೆಯಿಂದ ಕೂಡಿರುತ್ತವೆ.

1ಬಾಂದಿನಿ ಸೀರೆಗಳು: ಇವುಗಳು ಪ್ರಿಂಟೆಡ್‌ ಕಾಟನ್‌ ಸೀರೆಗಳಾಗಿದ್ದು ತಮ್ಮ ಡಾಟ… ಪ್ರಿಂಟ್‌ಗಳಿಂದಲೇ ಹೆಸರಾದವುಗಳು. ನೋಡಲು ಬಹಳ ಸುಂದರವಾಗಿರುವ ಈ ಬಗೆಯ ಸೀರೆಗಳು ಬೇಕಾದ ಬಣ್ಣಗಳಲ್ಲಿ ದೊರೆಯುತ್ತವೆ. ಇವುಗಳು ಸಾಂಪ್ರದಾಯಿಕ ಪ್ರಿಂಟಿಂಗ್‌ ವಿಧಾನವಾದ ಟೈ ಮತ್ತು ಡೈ ವಿಧಾನದಿಂದ ತಯಾರಾಗುವಂತದ್ದು.

2ಖಾದಿ ಸೀರೆಗಳು: ಇವುಗಳು ಇತ್ತೀಚೆಗೆ ಬಹಳ ಟ್ರೆಂಡಿ ಸೀರೆಗಳೆನಿಸಿವೆ. ಸಿಂಪಲ… ಲುಕ್ಕನ್ನು ಕೊಡುವ ಇವುಗಳು ಡೀಸೆಂಟ… ಮತ್ತು ಎಲಿಗ್ಯಾಂಟ… ಲುಕ್ಕನ್ನು ನೀಡುತ್ತವೆ. ಖಾದಿ ದಿರಿಸುಗಳು ಮತ್ತು ಸೀರೆಗಳ ಬಗೆಗೆ ಹಿಂದಿನ ಸಂಚಿಕೆಗಳಲ್ಲಿ ಚರ್ಚಿಸಲಾಗಿತ್ತು. ಇವುಗಳು ದೇಸೀ ಉದ್ಯಮದ ಉತ್ಪನ್ನವಾಗಿದ್ದು ಕೈಮಗ್ಗಗಳಲ್ಲಿ ತಯಾರಾಗುವಂಥದ್ದು. ಸಾಮಾನ್ಯವಾಗಿ ಮಂದ ಬಣ್ಣಗಳಲ್ಲಿ ದೊರೆಯುತ್ತವೆ ಮತ್ತು ಡೀಸೆಂಟ… ಲುಕ್ಕನ್ನು ನೀಡುತ್ತವೆ.

3ಟಾಂಟ… ಸೀರೆಗಳು: ಈ ಬಗೆಯ ಸೀರೆಗಳು ಬೆಂಗಾಲಿ ಸೀರೆಗಳಾಗಿದ್ದು ಇವುಗಳು ತಮ್ಮ ಕ್ರಿಸ್ಪಿ$(ಗಂಜಿ ಕಾಟನ್‌) ಟೆಕ್ಸಚರ್‌ ಗೆ ಖ್ಯಾತಿಯನ್ನು ಪಡೆದಿವೆ. ಇವುಗಳಲ್ಲಿ ಹಲವು ಡಿಸೈನುಗಳು ಮತ್ತು ಮಾದರಿಗಳಲ್ಲಿ ಲಭಿಸುತ್ತವೆ.

4ಕಾಂಜೀವರಮ… ಕಾಟನ್‌ ಸೀರೆಗಳು: ಈ ಬಗೆಯ ಸೀರೆಗಳ ಮೂಲ ತಮಿಳುನಾಡಿನ ಕಾಂಜಿಪುರಮ… ಎಂಬುದಾಗಿ. ಕಾಂಜೀವರಮ… ಸೀರೆಗಳು ಕೇವಲ ರೇಷ್ಮೆಯಲ್ಲಷ್ಟೇ ಅಲ್ಲದೆ ಕಾಟನ್‌ ಸೀರೆಗಳ ರೂಪದಲ್ಲಿಯೂ ದೊರೆಯುತ್ತವೆ.

5ಕೋಟಿ ಸೀರೆಗಳು: ಇವುಗಳೂ ಕೂಡ ಬೆಂಗಾಲಿ ಸೀರೆಗಳಾಗಿದ್ದು ಇವುಗಳು ತಮ್ಮ ಟೆಂಪಲ… ಬಾರ್ಡರ್‌ಗೆ ಹೆಸರುವಾಸಿಯಾಗಿದೆ. ಕ್ಯಾಷುವಲ…ವೇರಾಗಿ ಬಳಸಲು ಬಹಳ ಸೂಕ್ತವಾದುದು.

6ಚಾಂದೇರಿ ಕಾಟನ್‌ ಸೀರೆಗಳು: ಇವುಗಳು ಸೆಮಿಟ್ರಾನ್ಸ್‌$³ ರೆಂಟ… ಸೀರೆಗಳಾಗಿದ್ದು ಬಹಳ ಹಗುರವೂ ಹಾಗೂ ಬ್ರೈಟ… ಬಣ್ಣಗಳಲ್ಲಿ ದೊರೆಯುತ್ತವೆ. ನೋಡಲು ಸುಂದರವೂ ಮತ್ತು ಧರಿಸಲು ಆರಾಮದಾಯಕವೂ ಆಗಿರುತ್ತವೆ.

7ಸೂಪರ್‌ ನೆಟ… ಕಾಟನ್‌ ಸೀರೆಗಳು: ಇವುಗಳೂ ಕೂಡ ಸೆಮಿಟ್ರಾನ್ಸ್‌$³ರೆಂಟ… ಸೀರೆಗಳಾಗಿದ್ದು ಹೆವಿ ಬಾರ್ಡರುಗಳನ್ನು ಹೊಂದಿರುತ್ತವೆ.

8ಎಂಬ್ರಾಯಿಡರಿ ಕಾಟನ್‌ ಸೀರೆಗಳು: ಕಾಟನ್‌ ಸೀರೆಗಳ ಮೇಲೆ ಥೆಡ್‌ ವರ್ಕನ್ನು ಮಾಡುವುದರಿಂದ ಈ ಬಗೆಯ ಎಂಬ್ರಾಯಿಡರಿ ಕಾಟನ್‌ ಸೀರೆಗಳು ಸಿದ್ಧಗೊಳ್ಳುತ್ತವೆ. ಇವನ್ನು ಸಹ ಮಹಿಳೆಯರು ಹೆಚ್ಚಾಗಿ ಉಡಲು ಇಷ್ಟಪಡುತ್ತಾರೆ.

9ಸಂಬಲ್ಪುರಿ ಕಾಟನ್‌ ಸೀರೆಗಳು: ಇವು ಒಡಿಶಾ ಮೂಲದ ಸೀರೆಗಳಾಗಿದ್ದು ಅತ್ಯಂತ ಗಾಢ‌ವಾದ ಬಣ್ಣಗಳಲ್ಲಿ ದೊರೆಯುತ್ತವೆ. ಈ ಬಗೆಯ ಸೀರೆಗಳ ವಿಶೇಷತೆ ಇರುವುದು ಇವುಗಳ ಪಲ್ಲುವಿನಲ್ಲಿ. ಪಲ್ಲುವು ಅತ್ಯಂತ ಹೆವಿ ಮತ್ತು ಸುಂದರವಾದ ಎಂಬ್ರಾಯಿಡರಿಯನ್ನು ಹೊಂದಿರುತ್ತವೆ. ಸಮಾರಂಭಗಳಲ್ಲಿ ಧರಿಸಲು ಸೂಕ್ತವಾದ ಬಗೆಯಾಗಿವೆ.

10ಬ್ಲಾಕ್‌ ಪ್ರಿಂಟ… ಕಾಟನ್‌ ಸೀರೆಗಳು: ಇವುಗಳು ಹೆಸರೇ ಹೇಳುವಂತೆ ಬ್ಲಾಕ್‌ ಪ್ರಿಂಟ… ವಿಧಾನದಿಂದ ಬೇಕಾದ ಬಗೆ ಬಗೆಯ ಪ್ರಿಂಟುಗಳನ್ನು ಕಾಟನ್‌ ಸೀರೆಗಳ ಮೇಲೆ ಮೂಡಿಸಿ ತಯಾರಿಸುವ ಮಾದರಿಯ ಸೀರೆಯಾಗಿದೆ. ಟ್ರೈಬಲ… ಪ್ರಿಂಟ…, ಹಸೆ ಡಿಸೈನುಗಳ ಪ್ರಿಂಟ…, ಹೂಗಳ ಪ್ರಿಂಟುಗಳು ಇತ್ಯಾದಿ ಬಗೆಗಳ ಕಾಟನ್‌ ಪ್ರಿಂಟ… ಸೀರೆಗಳು ದೊರೆಯುತ್ತವೆ. ಆಯ್ಕೆಗೆ ವಿಫ‌ುಲ ಅವಕಾಶಗಳಿರುತ್ತವೆ.
ಇಷ್ಟೇ ಅಲ್ಲದೆ ಇನ್ನು ಹತ್ತು ಹಲವಾರು ಬಗೆಯ ಕಾಟನ್‌ ಸೀರೆಗಳು ದೊರೆಯುತ್ತವೆ. ಇವುಗಳ ಆಯ್ಕೆ ಸೂಕ್ತವಾಗಿ¨ªಾಗ ಮಾತ್ರ ನಮ್ಮದೇ ಆದ ಸ್ಟೈಲ… ಸ್ಟೇಟ್‌ಮೆಂಟನ್ನು ಸೃಷ್ಟಿಸುವುದು ಸಾಧ್ಯವಾಗುತ್ತದೆ. ಇಂತಹ ಕಾಟನ್‌ ಸೀರೆಗಳು ಹಲವು ಬಗೆಯಲ್ಲಿ ಪ್ರಯೋಜನಕಾರಿಯಾಗಿದೆ. ಧರಿಸಲು ಬಹಳ ಅರಾಮದಾಯಕವಾಗಿರುತ್ತವೆ. ಆಕರ್ಷಕವಾದ ಡಿಸೈನುಗಳಲ್ಲಿ ಲಭಿಸುತ್ತವೆ, ಎÇÉಾ ವಯೋಮಾನದ  ಮಹಿಳೆಯರಿಗೂ ಚೆನ್ನಾಗಿ ಒಪ್ಪುವಂತದ್ದು. ಬೇಸಿಗೆಯಲ್ಲಿ ಧರಿಸಲು ಬಹಳ ಆರಾಮದಾಯಕವೆನಿಸುತ್ತವೆ. ಕಾಟನ್‌ ಸೀರೆಗಳೊಂದಿಗೆ ಟ್ರೈಬಲ… ಜ್ಯುವೆಲ್ಲರಿಗಳು ಅಥವಾ ಆ್ಯಂಟಿಕ್‌ ಆಭರಣಗಳು ಬಹಳ ಚೆನ್ನಾಗಿ ಒಪ್ಪುತ್ತವೆ. ಅಲ್ಲದೆ ಪೆಂಡೆಂಟ… ಸೆಟ್ಟುಗಳು ಅಥವಾ ಸಾದಾ ಮುತ್ತಿನ ಸರಗಳು ಈ ಬಗೆಯ ಸೀರೆಗಳಿಗೆ ಒಪ್ಪವಾಗಿ ಕಾಣುತ್ತವೆ. ಕಾಟನ್‌ ಸೀರೆಗಳೊಂದಿಗೆ ಸಿಂಪಲ… ಆದ ಹೇರ್‌ಸ್ಟೈಲ… ಮಾಡಿಕೊಂಡರೆ ಹೆಚ್ಚು ಎಲಿಗ್ಯಾಂಟ… ಲುಕ್ಕನ್ನು ತಂದುಕೊಡುತ್ತವೆ. ಕಾಟನ್‌ ಸೀರೆಗಳು ಸಾಮನ್ಯವಾಗಿ ಸಿಂಪಲ… ಆಗಿರುವುದರಿಂದ ಬ್ಲೌಸುಗಳನ್ನು ಡಿಸೈನ್‌ ಮಾಡಿಸಿಕೊಂಡು ತಯಾರಿಸಿಕೊಂಡು ಧರಿಸಿದರೆ ಸೀರೆಯ ಅಂದ ಇಮ್ಮಡಿಗೊಳ್ಳುತ್ತವೆ. ಕಾಟನ್‌ ಸೀರೆಗಳನ್ನು ಧರಿಸುವಾಗ ಆದಷ್ಟು ಕಡಿಮೆ ಆಭರಣಗಳನ್ನು ಧರಿಸುವುದು ಹೆಚ್ಚು ಸೂಕ್ತವೆನಿಸುತ್ತದೆ. 

 ಇವುಗಳಿಗೆ ಇಸ್ತ್ರಿಯ ಆವಶ್ಯಕತೆಯಿರುವುದರಿಂದ ಇವುಗಳ ಬಳಕೆಯಲ್ಲಿ ಕಾಳಜಿಯನ್ನು ವಹಿಸುವುದು ಸೂಕ್ತವಾದುದು. ಹೆಚ್ಚೆಚ್ಚು ತೊಳೆಯುವುದರಿಂದ ಇವು ತಮ್ಮ ಹೊಳಪನ್ನು ಕಳೆದುಕೊಳ್ಳುವುದರಿಂದ ಆದಷ್ಟು ಕಡಿಮೆ ಬಾರಿ ತೊಳೆಯುವುದು ಸೂಕ್ತವಾದುದು. 

ಪ್ರಭಾ ಭಟ್‌

ಟಾಪ್ ನ್ಯೂಸ್

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.