ಬಗೆ ಬಗೆಯ ಬೆಲ್ಟುಗಳು


Team Udayavani, Mar 9, 2018, 7:30 AM IST

s-6.jpg

ಕೆಲವಷ್ಟು ಬೆಲ್ಟುಗಳ ಬಗೆಗಳನ್ನು ಹಿಂದಿನ ಸಂಚಿಕೆಯಲ್ಲಿ ಚರ್ಚಿಸಲಾಗಿತ್ತು. ಅವುಗಳಷ್ಟೇ ಅಲ್ಲದೆ ಇನ್ನು ಕೆಲವು ಮ್ಮಾಡರ್ನ್ ಮತ್ತು ಸ್ಟೈಲಿಶ್‌ ಮಾದರಿಯ ಬೆಲ್ಟಾಗಳು ಮತ್ತು ಮಕ್ಕಳಿಗೆ ಸೂಕ್ತವೆನಿಸುವ ಬೆಲ್ಟಾಗಳ ಬಗೆಗಿನ ವಿಶೇಷ ಮಾಹಿತಿಗಳನ್ನು ತಿಳಿಯೋಣ.

1ಡೈಮಂಡ್‌ ವೈಸ್ಟ್ ಬೆಲ್ಟ್: ಡೈಮಂಡ್‌ ಅಥವಾ ಸುಂದರವಾದ ಹರಳುಗಳನ್ನು ಕೂಡಿಸಿ ತಯಾರಿಸಲಾದ ಬೆಲ್ಟಾಗಳು ಇವುಗಳಾಗಿವೆ. ಪ್ಲೆ„ನ್‌ ಮ್ಯಾಕ್ಸಿ ಡ್ರೆಸ್ಸುಗಳಿಗೆ ಈ ಬಗೆಯ ಬೆಲ್ಟಾಗಳು ಹೊಂದುತ್ತವೆ. ಇವುಗಳನ್ನು ಬೆಲ್ಟಾಗಳಾಗಿ ಮತ್ತು ವೈಸ್ಟ್ ಆಭರಣದಂತೆಯೂ ಧರಿಸಬಹುದಾಗಿದೆ. ಹರಳುಗಳೊಂದಿಗೆ ಬೀಡುಗಳು ಅಥವ ಸಣ್ಣ ಸಣ್ಣ ಹ್ಯಾಂಗಿಂಗುಗಳಿದ್ದರೆ ದಿರಿಸಿನ ಅಂದ ಇಮ್ಮಡಿಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

2ಕ್ಲಾತ್‌ ಬೆಲ್ಟ್: ಹೆಸರೇ ಹೇಳುವಂತೆ ಬಟ್ಟೆಗಳಿಂದ ತಯಾರಾಗುವ ಇವುಗಳು ಸ್ಕರ್ಟುಗಳೊಂದಿಗೆ ಮತ್ತು ಜೀನ್ಸ್ ಪ್ಯಾಂಟುಗಳೊಂದಿಗೆ ಬಹಳ ಸಂದರವಾಗಿ ಒಗ್ಗುತ್ತವೆ. ಟ್ಯಾಸೆಲ್ ಹ್ಯಾಂಗಿಂಗುಗಳುಳ್ಳ, ಸೀ ಶೆಲ್ ಹ್ಯಾಂಗಿಂಗುಳುಳ್ಳ ಅಥವ ಪಾಮ್ ಪಾಮ್ ಹ್ಯಾಂಗಿಂಗುಗಳುಳ್ಳ ಕ್ಲಾತ್‌ ಬೆಲ್ಟ್ಗಳು ಗಲೀì ಲುಕ್ಕನ್ನು ನೀಡುತ್ತವೆ. ಇವುಗಳು ಹೆಚ್ಚಾಗಿ ಟೀನೇಜ್ ಹೆಣ್ಣುಮಕ್ಕಳು ಇಷ್ಟಪಡುವಂತಹದಾಗಿವೆ. 
 
3ಲೆದರ್‌ ಫ್ರಿಂಟ್‌ ಬೆಲ್ಟ್: ಪ್ಯಾಚ್‌ ವರ್ಕುಗಳಿಂದ ಅಲಂಕರಿಸಲ್ಪಡುವ ಈ ಬಗೆಯ ಬೆಲ್ಟಾಗಳು ಹೆಂಗಳೆಯರ ಹಾಟ್ ಫೇವರೇಟ್ ಎನಿಸುವ ಬಗೆಗಳು. ಪೆಂಡೆಂಟ್ ಅನ್ನು ಹೊಂದಿರುವ ಬೆಲ್ಟಾಗಳೂ ಕೂಡ ದೊರೆಯುತ್ತವೆ.
 
4ಮೆಟಲ್ ವೈಸ್ಟ್ ಬೆಲ್ಟ್ ವಿದ್‌ ಹ್ಯಾಂಗಿಂಗ್ಸ್: ಮೆಟಲ್ ಹ್ಯಾಂಗಿಂಗ್ಸ್ಗಳಿರುವ ಬೆಲ್ಟಾಗಳೂ ಕೂಡ ದೊರುತ್ತವೆ. ಹೊಳೆಯುವಂತಹ ಮತ್ತು ಬಣ್ಣಬಣ್ಣಗಳಲ್ಲಿ ಇರುವ ಮೆಟಲ… ಹ್ಯಾಂಗಿಂಗುಗಳು ಟಿನೇಜರ್‌ ಹುಡುಗಿಯರನ್ನು  ಬಲು ಬೇಗ ಆಕರ್ಷಿಸುತ್ತವೆ. ಅಲ್ಲದೆ ಹೆಚ್ಚಿನವರು ಲೆಟರ್ಸ್‌ ಇರುವಂತಹ ಮೆಟಲ್ ಹ್ಯಾಂಗಿಂಗ್‌ ಬೆಲ್ಟನ್ನು ಆಯ್ಕೆ ಮಾಡಲಿಚ್ಚಿಸುತ್ತಾರೆ. ಗಲೀì ಲುಕ್ಕನ್ನು ಕೊಡುವ ಇವುಗಳು ಸುಂದರವಾದ ಬಗೆಗಳಲ್ಲೊಂದು.
 
5 ಕಾರ್ಸೆಟ್ ಬೆಲ್ಟ್: ಇವುಗಳು ವಿಶೇಷವಾದ ಬಗೆಗಳಾಗಿದ್ದು ಬಕಲ್ ಬದಲು (ಹುಕ್‌) ಸ್ಟ್ರೆಚೇಬಲ್ ದಾರಗಳಿರುತ್ತವೆ. ಇವುಗಳನ್ನು ಬಳಸಿ ಬೆಲ್ಟನ್ನು ಸಡಿಲ ಅಥವ ಬಿಗಿಯಾಗಿ ಧರಿಸಿಕೊಳ್ಳಬಹುದು. ವಿವಿಧ ಬಣ್ಣಗಳಲ್ಲಿ ದೊರೆಯುವ ಇವುಗಳು ಮಾಡರ್ನ್ ದಿರಿಸುಗಳಿಗೆ ಬಹಳ ಚೆನ್ನಾಗಿ ಹೊಂದುತ್ತವೆ. 

6 ರೋಪ್‌ ವೀವ್ಸ್ ಬೆಲ್ಟ್: ರೋಪಿನಂತಹ ಮಾದರಿಯುಳ್ಳ ಬೆಲ್ಟಾಗಳು ಇವಾಗಿದ್ದು ಫ್ಯಾಷನೇಬಲ್ ವೈಸ್ಟ್ ಬೆಲ್ಟಾಗಳಾಗಿಯೂ ಬಳಸಲ್ಪಡುವಂತಹುದಾಗಿದೆ.
 
7 ಹೈ ಫ್ಯಾಷನ್‌ ವೈಸ್ಟ್ ಬೆಲ್ಟ್: ಹೆಸರೇ ಹೇಳುವಂತೆ ಚೆಸ್ಟ್ ಲೈನಿನ ಕೆಳಗಿಂದ ಆರಂಭವಾಗಿ ವೈಸ್ಟ್ನ ವರೆಗೂ ಅಗಲವಾದ ಬ್ಯಾಂಡಿನಿಂದ ತಯಾರಿಸಲಾಗುವ ಇವುಗಳು ಬಹಳ ಫ್ಯಾಷನೇಬಲ್ ಬೆಲ್ಟಾಗಳಾಗಿವೆ. ಇವುಗಳು ದಿರಿಸಿನ ಅಂದವನ್ನು ಹೆಚ್ಚಿಸುತ್ತವೆ. ಲೇಸ್‌ ಬೆಲ್ಟಾಗಳು ಇವುಗಳಲ್ಲಿ ಹೆಚ್ಚಿನದಾಗಿ ಬಳಸಲ್ಪಡುವಂತದ್ದು.  

8 ಫ್ಯಾನ್ಸಿ ಬೆಲ್ಟ್: ಬ್ರೈಡಲ್ ವೈಸ್ಟ್ ಬ್ಯಾಂಡುಗಳಾಗಿ ಬಳಸಲು ಸಾಧ್ಯವಾಗುವ ಈ ಬಗೆಯ ಬೆಲ್ಟಾಗಳು ಗ್ರ್ಯಾಂಡ್‌ ಲುಕ್ಕನ್ನು ನೀಡುವುದರೊಂದಿಗೆ ಟ್ರೆಂಡಿಯಾದ ಬಗೆಯೂ ಆಗಿವೆ. 

9 ಎಂಬ್ರಾಯ್ಡ ಬೆಲ್ಟ್: ಎಂಬ್ರಾಯ್ಡ ಬೆಲ್ಟಾಗಳೂ ಕೂಡ ಈಗಿನ ಟ್ರೆಂಡಿ ಬೆಲ್ಟಾಗಳಲ್ಲೊಂದು. ದಪ್ಪವಾದ ಬಟ್ಟೆಗಳಿಂದ ತಯಾರಿಸಿದ ಈ ಬಗೆಯ ಬೆಲ್ಟಾಗಳು ಬಣ್ಣ ಬಣ್ಣದ ಥೆಡ್ಡುಗಳ ಎಂಬ್ರಾಯ್ಡರಿಯಿಂದ ಕೂಡಿರುತ್ತವೆ. ಜೀನ್ಸುಗಳಿಗೆ ಹೆಚ್ಚು ಸೂಕ್ತವೆನಿಸುವ ಈ ಬಗೆಯ ಬೆಲ್ಟಾಗಳು ಗರ್ಲಿ ಲುಕ್ಕನ್ನು ನೀಡುತ್ತವೆ.
 
10ಕ್ರಾಚೆಟ್ ಬೆಲ್ಟ್: ಬಣ್ಣ ಬಣ್ಣಗಳ ಥೆಡ್ಡುಗಳಿಂದ ಕ್ರೋಶ ವರ್ಕಿನಿಂದ ತಯಾರಿಸಿದ ಬೆಲ್ಟಾಗಳಿವಾಗಿದ್ದು ಸುಂದರವಾದ ಬೆಲ್ಟಾಗಳಾಗಿವೆ.

ಚಿಣ್ಣರಿಗೆ ಹೊಂದುವ ಬಣ್ಣ ಬಣ್ಣದ ಬೆಲ್ಟಾಗಳು 
ಮೇಲಿನ ಬಗೆಗಳು ಮಹಿಳೆಯರಿಗಾಗಿ ಮಾರುಕಟ್ಟೆಯಲ್ಲಿ ದೊರೆಯುವ ಟ್ರೆಂಡಿ ಬೆಲ್ಟಾಗಳಾದರೆ ಪುಟ್ಟಪುಟ್ಟ ಮಕ್ಕಳಿಗೆಂದೇ ಅನೇಕ ಮಾದರಿಗಳ ಬೆಲ್ಟಾಗಳು ದೊರೆಯುತ್ತವೆ. ಇಂದಿನ ಜನರು ತಮ್ಮಂತೆ ಮಕ್ಕಳಿಗೂ ಕೂಡ ಟ್ರೆಂಡಿ ಬಟ್ಟೆಗಳನ್ನೂ ಮತ್ತು ಟ್ರೆಂಡಿ ಆಕ್ಸೆಸ್ಸರಿಗಳನ್ನು ಹಾಕಿ ಸಂತೋಷಪಡಲು ಇಚ್ಛಿಸುತ್ತಾರೆ. ಈಗಿನ ಮಕ್ಕಳೂ ಕೂಡ ಆಕರ್ಷಕವಾದ ಆಕ್ಸೆಸ್ಸರಿಗಳಿಂದ ಸಂತೋಷಿಸುತ್ತಾರೆ. ಆದ್ದರಿಂದಲೇ ಮಕ್ಕಳಿಗೆಂದೇ ವಿಶೇಷವಾಗಿ ಮಾದರಿಗೊಳಿಸಿದ ಬೆಲ್ಟಾಗಳು ಇಂದು ಮಳಿಗೆಗೆಳಲ್ಲಿ ದೊರೆಯತ್ತಿವೆ. ಅವುಗಳಲ್ಲಿ ಕೆಲವನ್ನು ಈ ಕೆಳಗಿನಂತೆ ಕಾಣಬಹುದಾಗಿದೆ.
 
1 ಬಣ್ಣ ಬಣ್ಣದ ಎಲ್ಯಾಸ್ಟಿಕ್‌ ಬೆಲ್ಟಾಗಳು: ಹುಕ್‌ ಅಥವಾ ಬಕಲ್‌ ಬೆಲ್ಟಾಗಳಿಗಿಂದ ಮಕ್ಕಳಿಗೆ ಈ ಬಗೆಯ ಎಲ್ಯಾಸ್ಟಿಕ್‌ ಬೆಲ್ಟಾಗಳು ಸೂಕ್ತವೆನಿಸುತ್ತವೆ. ಧರಿಸಲು ಆರಾಮದಾಯಕವಾಗಿರುವ ಇವುಗಳು ನೋಡಲೂ ಕೂಡ ಸುಂದರವಾಗಿರುತ್ತದೆ. 

2 ಕಾರ್ಟೂನ್ಡ್ ಬೆಲ್ಟುಗಳು: ಮಕ್ಕಳನ್ನು ಆಕರ್ಷಿಸಲು ಕಾರ್ಟೂನ್‌ ಪೆಂಡೆಂಟ್ ಅನ್ನು ಹೊಂದಿರುವ ಬೆಲ್ಟಾಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಮಿಕ್ಕಿಮೌಸ್‌, ಟಾಮ…, ಜೆರಿ ಹೀಗೆ ಬಗೆ ಬಗೆಯ ಟಿವಿ ಕಾರ್ಟೂನ್‌ ಚಿತ್ರಗಳುಳ್ಳ ಬೆಲ್ಟಾಗಳು ಮಕ್ಕಳಿಗೆ ಬಹಳ ಸುಂದರವಾದ ಲುಕ್ಕನ್ನು ಕೊಡುತ್ತವೆ.
 
3ಡಿ ರಿಂಗ್‌ ಬೆಲ್ಟಾಗಳು: ಮಕ್ಕಳಿಗೆ ಸುಲಭವಾಗಿ ಹಾಕಿಕೊಳ್ಳಲು ಮತ್ತು ಬಳಸಲು ಸೂಕ್ತವೆನಿಸುವ ಡಿ ರಿಂಗ್‌ ಬೆಲ್ಟಾಗಳು ದೊರೆಯುತ್ತವೆ. ದೊಡ್ಡವರ ಬೆಲ್ಟಾಗಳಂತಹ ಬಕಲುಗಳ ಬದಲು ಡಿ ಆಕಾರದ ರಿಂಗುಗಳಿರುತ್ತವೆ.

4ಕೌ ಬಾಯ್ ಬೆಲ್ಟುಗಳು: ಅಗಲವಾದ ಮತ್ತು ದೊಡ್ಡದಾದ ಪೆಂಡೆಂಟುಗಳುಳ್ಳ ಬೆಲ್ಟಾಗಳಿವು. ಗಂಡು ಮಕ್ಕಳಿಗೆ ಹೆಚ್ಚು ಪ್ರಿಯವೆನಿಸುವ ಬೆಲ್ಟಾಗಳಿವಾಗಿವೆ.

5ಸೂಪರ್‌ ಹೀರೊ ಬೆಲ್ಟಾಗಳು: ಸ್ಪೈಡರ್‌ಮ್ಯಾನ್‌, ಪೋಕೆ ಮಾನ್‌ ಇತ್ಯಾದಿ ಸೂಪರ್‌ ಹೀರೋಗಳ ಚಿತ್ರಗಳುಳ್ಳ ಬೆಲ್ಟಾಗಳೂ ಕೂಡ ದೊರೆಯುತ್ತವೆ. 

6ಜೀನ್ಸ್ ಬೆಲ್ಟುಗಳು: ಜೀನ್ಸ್ ಬೆಲ್ಟಾಗಳು ಮಕ್ಕಳಿಗೆ ಯಾವುದೇ ಹಾನಿಯನ್ನುಂಟುಮಾಡದೆ ಆರಾಮದಾಯಕವಾಗಿರುತ್ತದೆ. ಲೆದರ್‌ ಅಥವ ಬೇರೆ ಬಗೆಯ ಬೆಲ್ಟಾಗಳಿಗಿಂತ ಚಿಕ್ಕ ಮಕ್ಕಳಿಗೆ ಈ ಬಗೆಯ ಬೆಲ್ಟಾಗಳು ಸೂಕ್ತವಾದುದು. ಹೆಚ್ಚಾಗಿ ಚಿಕ್ಕ ಹೆಣ್ಣುಮಕ್ಕಳಿಗೆ ಈ ಬಗೆಯ ಜೀನ್ಸ್ ಬೆಲ್ಟಾಗಳನ್ನು ಹಾಕಬಹುದು. 

7ಚೈನ್‌ ಬೆಲ್ಟಾಗಳು: ಇವು ಸಖತ್‌ ಬೋಲ್ಡ್ ಎನಿಸುವ ಬೆಲ್ಟಾಗಳು. ಮೆಟಲ್ ಚೈನ್‌ ಬೆಲ್ಟಾಗಳು ಫ್ಯಾಷನ್‌ ಮಾತ್ರಕ್ಕೋಸ್ಕರ ಬಳಸಬಹುದಾದ ಬೆಲ್ಟಾಗಳು. 

8 ಬಟರ್‌ ಫ್ಲೈ ಮತ್ತು ಬ್ಲಿಂಗ್‌ ಬೆಲ್ಟಾಗಳು (ಪುಟ್ಟ ಹೆಣ್ಣುಮಕ್ಕಳಿಗಾಗಿ): ಸಣ್ಣ ಹೆಣ್ಣುಮಕ್ಕಳಿಗೋಸ್ಕರವೇ ದೊರೆಯುವಂತಹ ಬೆಲ್ಟಾಗಳು ಇವುಗಳು. ಬಟರ್‌ ಫ್ಲೈ ಪೆಂಡೆಂಟುಗಳುಳ್ಳ ಮತ್ತು ಗ್ಲಿಟ್ಟರ್ಡ್‌ ಬೆಲ್ಟಾಗಳು ದೊರೆಯುತ್ತವೆ. ಸ್ಕರ್ಟುಗಳಿಗೆ ಮತ್ತು ಜೀನ್ಸ್ ಪ್ಯಾಂಟುಗಳಿಗೆ ಬಹಳ ಚೆನ್ನಾಗಿ ಹೊಂದಿಕೆಯಾಗುತ್ತವೆ.

ಪ್ರಭಾ ಭಟ್‌

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.