ರಾತ್ರಿ ನಿದ್ದೆ ಬರುವುದಿಲ್ಲವೆ?

Team Udayavani, Jun 28, 2019, 5:00 AM IST

ರಾತ್ರಿ ಬೇಗ ನಿದ್ರೆ ಬರೋದಿಲ್ಲ, ಬೆಳಗ್ಗೆ ಬೇಗ ಏಳುವುದಕ್ಕೂ ಆಗುವುದಿಲ್ಲ- ಇದು ಅನೇಕರ ಸಮಸ್ಯೆ. ಮಹಿಳೆಯರ ಪಾಲಿಗಂತೂ ಇದು ತುಂಬಾ ಕಷ್ಟದ ವಿಷಯ. ಇನ್ನೊಂದರ್ಧ ಗಂಟೆ ಮಲಗುತ್ತೇನೆ ಅಂತ ಅಲಾರಾಂನ ತಲೆ ಮೊಟಕುವಂತಿಲ್ಲ. ಯಾಕಂದ್ರೆ, ಏಳುವುದು ಚೂರು ಲೇಟಾದರೂ ಅಂದಿನ ಕೆಲಸಗಳು ಹಳಿ ತಪ್ಪುತ್ತವೆ. ಮಕ್ಕಳಿಗೆ ಸ್ಕೂಲ್‌ ಬಸ್‌ ತಪ್ಪುತ್ತದೆ, ಗಂಡನಿಗೂ ಆಫೀಸ್‌ಗೆ ಲೇಟಾಗುತ್ತದೆ. ಇನ್ನು ಉದ್ಯೋಗಸ್ಥ ಮಹಿಳೆಯರ ಪಾಡನ್ನು ಕೇಳುವುದೇ ಬೇಡ. ಹಾಗಾದ್ರೆ, ಈ ಸಮಸ್ಯೆಗೆ ಪರಿಹಾರವೇನು? ನಿದ್ರಾಹೀನತೆಯಿಂದ ಪಾರಾಗಿ, ಬೆಳಗ್ಗೆ ಉಲ್ಲಾಸದಿಂದ ಏಳಬೇಕು ಅಂತಿದ್ರೆ ಏನು ಮಾಡಬೇಕು ಅಂದಿರಾ?

– ರಾತ್ರಿ ತಡವಾಗಿ ಮಲಗುವ ಅಭ್ಯಾಸವಿದ್ದವರಿಗೆ ಬೆಳಗ್ಗೆ ಬೇಗ ಎಚ್ಚರವಾಗುವುದಿಲ್ಲ. ಹಾಗಾಗಿ, ಬೇಗ ಮಲಗುವುದನ್ನು ರೂಢಿಸಿಕೊಳ್ಳಿ.
– ಸಂಜೆ ವೇಳೆ ವ್ಯಾಯಾಮ ಅಥವಾ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡಿದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಹತ್ತು ನಿಮಿಷ ವಾಕಿಂಗ್‌ ಮಾಡಿದರೂ ಆದೀತು.
-ಆಹಾರ ಸೇವಿಸಿದ ತಕ್ಷಣ ಮಲಗುವುದು ಸರಿಯಲ್ಲ. ಇದು ಅಜೀರ್ಣ ಸಮಸ್ಯೆಯನ್ನುಂಟು ಮಾಡುವುದಲ್ಲದೆ, ನಿದ್ರಾಹೀನತೆಗೂ ಕಾರಣವಾಗುತ್ತದೆ. ಮಲಗುವ ಕನಿಷ್ಠ 3 ಗಂಟೆ ಮುಂಚೆ ಊಟ ಮಾಡಬೇಕು. ಮಾಂಸಾಹಾರವಾದರೆ 4-5 ಗಂಟೆಗಳ ಮುಂಚೆ ಸೇವಿಸಬೇಕು.
– ಮಗುವಿನಂತೆ ಮಲಗುವುದು ಅಂತಾರೆ. ಅಂದರೆ, ಮಕ್ಕಳಿಗೆ ಯಾವ ಚಿಂತೆಯೂ ಇರುವುದಿಲ್ಲ. ಈ ಕಾರಣದಿಂದಲೇ ಮಕ್ಕಳು ಹಾಸಿಗೆಗೆ ಜಾರಿದೊಡನೆ ನಿದ್ದೆ ಹೋಗುತ್ತಾರೆ. ಹಾಗೆಯೇ, ಮಲಗುವಾಗ ಎಲ್ಲ ಚಿಂತೆಗಳನ್ನು ದೂರ ಮಾಡಿದರೆ ಬೇಗ ನಿದ್ದೆ ಬರುತ್ತದೆ.
-ಮಲಗುವ ಮುನ್ನ ಹತ್ತು ನಿಮಿಷ ಕಣ್ಣು ಮುಚ್ಚಿ ಕುಳಿತು, ನಾಳೆ ಮಾಡಬೇಕಾದ ಕೆಲಸಗಳ ಕುರಿತು ಮನದಲ್ಲಿಯೇ ಲೆಕ್ಕಾಚಾರ ಹಾಕಿ. ನಂತರ ಐದು ನಿಮಿಷ ದೀರ್ಘ‌ವಾಗಿ ಉಸಿರಾಡಿ, ಎಲ್ಲ ವಿಚಾರಗಳನ್ನೂ ಮರೆತು ದಿಂಬಿಗೆ ತಲೆ ಕೊಡಿ.
– ಮಲಗುವ ಒಂದು ಗಂಟೆಗೂ ಮುನ್ನ ಟಿ.ವಿ. ಆಫ್ ಮಾಡಿ, ಮೊಬೈಲ್‌ ತೆಗೆದು ಪಕ್ಕಕ್ಕೆ ಇಡಿ.

ಪುಷ್ಪಲತಾ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮತ್ತೆ...

  • ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...

  • ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ....

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...