Udayavni Special

ವಸ್ತ್ರಸಂಹಿತೆಯ ಕಾಂತಾಸಮ್ಮಿತೆ


Team Udayavani, Sep 7, 2018, 6:00 AM IST

20.jpg

ಪ್ರಸ್ತುತ ದಿನಗಳಲ್ಲಿ ಪ್ರತಿ ಸಾಮಾಜಿಕ ಮೌಲ್ಯವೂ ಪುನರ್‌ ವಿಮರ್ಶೆಗೆ ಒಳಗಾಗುತ್ತಿರುವುದು ಸಮಾಧಾನಕರ ಸಂಗತಿ. ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀಯರ ಮೇಲೆ ಹೇರಲಾಗಿರುವ ಹಲವಾರು ವಿಚಾರಗಳಲ್ಲಿ ವಸ್ತ್ರಸಂಹಿತೆಯೂ ಒಂದು. ಭಾರತೀಯ ಪರಂಪರೆಯನ್ನು ಯಾಂತ್ರಿಕವಾಗಿ ನಂಬುವವರು ಅದನ್ನು ಬದಲಿಸಲು ಆಗದ ಪರಮ ವಾಕ್ಯವೆಂದು ಚಾಚೂತಪ್ಪದೆ ಅದರಲ್ಲೇ ಅಂಧವಿಶ್ವಾಸ ತಾಳುತ್ತಾರೆ. ನಮ್ಮಲ್ಲಿ ಸೀರೆ ಉಡುವುದು ಭಾರತೀಯ ಸಂಸ್ಕೃತಿಯ ದ್ಯೋತಕವೆಂದು ಸಂಭ್ರಮಿಸುತ್ತ ಅದರ ಮೂಲದಲ್ಲಿರುವ ತೊಡಕುಗಳನ್ನು ಮರೆಯಾಗಿಸಿದೆ. ಭಾರತೀಯ ಸಂಪ್ರದಾಯಗಳಲ್ಲಿ ಅಗಾಧ ನಂಬಿಕೆಯ ಫ‌ಲವಾಗಿ ರೂಪುಗೊಂಡ ಈ ಮನೋಧರ್ಮ ಭಾರತೀಯತೆಯನ್ನು ಪ್ರತಿನಿಧಿಸುವ ಎಲ್ಲಾ ಆಚಾರ, ವಿಚಾರ ಮತ್ತು ಸಂಪ್ರದಾಯವನ್ನು ಕಾಪಾಡುವ ಹೊಣೆಗಾರಿಕೆ ಕೇವಲ ಸ್ತ್ರೀಯರದು ಎಂದು ಭಾವಿಸುತ್ತದೆ. ಈ ವಿಚಾರ ಪ್ರಸ್ತಾಪಿಸುವಾಗ ನನಗೆ ಕೆಲವು ವರ್ಷಗಳ ಹಿಂದೆ ಮುಂಬಯಿಯಲ್ಲಿ ಜರಗಿದ ಅಂತರಾಷ್ಟ್ರೀಯ “ಫಿಲಂ ಫೆಸ್ಟಿವಲ್‌’ ಸಂದರ್ಭದಲ್ಲಿ ಜಪಾನಿನ Eat the Kimono (ಈಟ್‌ ದಿ ಕಿಮಾನೊ) ಡಾಕ್ಯುಮೆಂಟರಿ ಚಿತ್ರ ನೆನಪಿಗೆ ಬರುತ್ತದೆ. ಅದು ಮುಖ್ಯವಾಗಿ ಹಾನಂಗಿ ಗೆನೆಶು ಎಂಬ ಜಪಾನಿನ ಜನಪದ ನರ್ತಕಿಯ ಬದುಕಿನ ಅವಳ ಹೋರಾಟದ ಕುರಿತಾದ ಕಿರುಚಿತ್ರವಾಗಿತ್ತು. ಜಪಾನಿನ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಉಡುಪಾದ ಕಿಮಾನೋವನ್ನು ಬಹಿಷ್ಕರಿಸಬೇಕೆಂದು ಅವಳು ನಡೆಸುವ ಹೋರಾಟದ ಕುರಿತು ಹಾಗೂ ಅದರಿಂದ ಅವಳು ಪಡುವ ಕಷ್ಟಕಾರ್ಪಣ್ಯಗಳನ್ನು ಅದು ಚಿತ್ರಿಸುತ್ತದೆ.

ಚಿತ್ರ ಪ್ರಾರಂಭವಾಗುವುದು ಜಪಾನಿನ ಖ್ಯಾತ ನರ್ತಕಿಯನ್ನು ಹಾನಂಗಿ ಗೆನೆಶು ಕೊಲೆಮಾಡಿದ ಕಾರಣ ಕೈದಿಯಾಗಿ ಜೈಲು ಸೇರುವ ಸಂದರ್ಭದಿಂದ ಹಾಗೂ ಪಿರಮಿಡ್‌ ಸಂಸ್ಕೃತಿಯನ್ನು ಅಳಿಸಿ ಹಾಕಲು ಅವಳು ನಡೆಸುವ ಹೋರಾಟ ಅದು ಚಿತ್ರಿಸುತ್ತದೆ. ಈ ಸಂಸ್ಕೃತಿ ಹೇಗೆ ಒಬ್ಬರನ್ನು ಉನ್ನತ ಸ್ಥಾನದಲ್ಲಿರಿಸಿ ಉಳಿದವರ ಸಣ್ತೀವನ್ನು ಅಳಿಸಿ ಹಾಕುತ್ತದೆ ಎಂಬ ಬದುಕಿನ ಸೂಕ್ಷ್ಮಚಿಂತನೆಗೆ ಅದು ಬೊಟ್ಟು ಮಾಡಿ ತೋರಿಸುತ್ತದೆ. ಬದುಕಿನಲ್ಲಿ ಕೀರ್ತಿ, ಯಶಸ್ಸು ಪಡೆದವರು ಶಕ್ತ ವರ್ಗವಾಗಿ ವ್ಯವಸ್ಥೆಯ ಶಕ್ತಿಗಳಿಂದ ಉಳಿದವರನ್ನು ಮುಂದೆ ಬರಲು ಬಿಡದೇ ತಾವೇ ಸತತ ಸುದ್ದಿಯಲ್ಲಿದ್ದು , ಕೀರ್ತಿಯ ತುತ್ತತುದಿ ಏರುತ್ತಾರೆ ಎಂಬ ಸತ್ಯದಿಂದ ಈ ಶ್ರೇಣೀಕೃತ ವ್ಯವಸ್ಥೆಯನ್ನೇ ನಾಶಮಾಡಿ ಬಿಡುವ ಹೋರಾಟದಲ್ಲಿ ಅವಳು ತೊಡಗುತ್ತಾಳೆ. ಜೈಲಿನಲ್ಲಿ ಕೈದಿಗಳೊಂದಿಗೆ ಪರಸ್ಪರ ಸ್ಪರ್ಧಿಸಿ ಕಾದಾಡುವುದಕ್ಕಿಂತ ತಮ್ಮನ್ನು ಕೈದಿಯಾಗಿ ಪರಿವರ್ತಿಸಿದ ಈ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿ ಎಂದು ಕೈದಿಗಳಲ್ಲಿ ಜಾಗೃತಿ ಮೂಡಿಸುತ್ತಾಳೆ. ಜಪಾನಿನ ಮಹಿಳೆಯರನ್ನು ಸದಾ ಸಾಂಪ್ರದಾಯಿಕ ಬೇಡಿಯಲ್ಲಿ ಬಂಧಿಸುವ ಜಪಾನಿನ ಸಾಂಪ್ರದಾಯಿಕ ಉಡುಪಾದ ಕಿಮಾನೋವನ್ನು ಕಿತ್ತುಹಾಕಿ ಎಂಬ ಘೋಷಣೆಯ ಮೂಲಕ ಮಹಿಳೆಯರನ್ನು ಸಾಂಪ್ರದಾಯಿಕ ಬೇಡಿಯಿಂದ ಮುಕ್ತ ಮಾಡುವ ಹಾದಿಗೆ ಕರೆ ಕೊಡುತ್ತಾಳೆ. ಇಲ್ಲಿ ಜನಪದ ನರ್ತಕಿಯ ವ್ಯಕ್ತಿಚಿತ್ರಕ್ಕಿಂತ ಮುಖ್ಯವಾಗಿ ಅವಳು ಎತ್ತಿಕೊಂಡಿರುವ ಬಂಡಾಯ ಶ್ರೇಣೀಕೃತ ಅಧಿಪತ್ಯ ಮುರಿಯಲು ಅವಳು ನಡೆಸುವ ಹೋರಾಟ ಗಮನ ಸೆಳೆಯುತ್ತದೆ. ಈ ಕಿರುಚಿತ್ರ ನನಗೆ ತಟ್ಟಿದ್ದು ಒಂದು ಸಮಕಾಲೀನ ವಾಸ್ತವ ಹೆಣ್ಣಿನ ಉಡುಪಿನ ಸಾಂಕೇತಿಕತೆಯ ಮೂಲಕ ತನ್ನಂತೆ ಇತರ ಸಮುದಾಯದವರಿಗೂ ಇದು ಅನ್ವಯವಾಗುತ್ತದೆ ಎಂದು ದಾಖಲಿಸುವ ರೀತಿಯಿಂದ, ಹೆಣ್ಣು ಯಾವ ಯಾವ ರೀತಿಯಲ್ಲಿ ಶೋಷಿತಳಾಗುತ್ತಿದ್ದಾಳೆ ಎಂಬ ವಾಸ್ತವದ ಮೇಲೆ ಬೆಳಕು ಚೆಲ್ಲುವುದರಿಂದ. ಇದು ಭಾರತೀಯ ಮಹಿಳೆಯರಿಗೂ ಸಾಂಕೇತಿಕವಾಗಿದೆ. ಭಾರತೀಯ ಮಹಿಳೆಯರಿಗೂ ತಮ್ಮ ಸಾಂಪ್ರದಾಯಿಕತೆಯಿಂದ ಸಂಬಂಧ ಕಳೆದುಕೊಳ್ಳುವುದು ಅಷ್ಟು ಸುಲಭವಾಗಿಲ್ಲ. ಆದ್ದರಿಂದಲೇ ಈ ಉಡುಪಿನ ಘೋಷಣೆ ನಮಗೂ ಪ್ರಸ್ತುತವಾಗುತ್ತದೆ.

ನಮ್ಮಲ್ಲಿ ಮಹಿಳೆಯರು ತಮ್ಮನ್ನು ತಾವು ಅಭಿವ್ಯಕ್ತಿಗೊಳಿಸುವ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವುದೇ ಅಪರೂಪ. ಇದರಿಂದ ಸಾಂಪ್ರದಾಯಿಕತೆಯ ಅಧಿಪತ್ಯ ಹಿಂದಿನಂತೆ ಇಂದು ಕೂಡ ಮಹಿಳೆಯರನ್ನು ಆಳುತ್ತಲೇ ಇದೆ. ಜಡವಾದ ಸಂಸ್ಕೃತಿಯನ್ನು ವೈಭವೀಕರಿಸಿಕೊಂಡಿರುವುದರಿಂದ ಅದರಲ್ಲೇ ಮಗ್ನರಾಗಿ ಅದು ಲಿಂಗ ತಾರತಮ್ಯದಿಂದ ರೂಪುಗೊಂಡಿದೆ. ಮದ್ರಾಸಿನಲ್ಲಿ ತಿರುಪತಿಯ ವೆಂಕಟೇಶ್ವರ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಘಟನೆಯ ಬಗ್ಗೆ ಇಲ್ಲಿ ಉಲ್ಲೇಖೀಸಬಹುದೇನೋ. ಇದು ಸುಮಾರು ಹತ್ತು ವರ್ಷದ ಹಿಂದೆಯಷ್ಟೇ ಜರುಗಿದ ಸಂಗತಿ.

ಆಗ ತಿರುಪತಿಯ ವೆಂಕಟೇಶ್ವರ ಮೆಡಿಕಲ್‌ ಕಾಲೇಜಿಗೆ ವಿದ್ಯಾರ್ಥಿನಿಯರು ಸೀರೆ ಉಟ್ಟೇ ಹೋಗುತ್ತಿದ್ದರು. ಅಲ್ಲಿಯ ವಿದ್ಯಾರ್ಥಿನಿಲಯದ ವಸತಿಗೃಹದಿಂದ ಕಾಲೇಜಿಗೆ ಬರುವ ದಾರಿಯಲ್ಲೆಲ್ಲಾ ಹಾವುಗಳು ಬಹಳವಿರುತ್ತಿದ್ದುದರಿಂದ ಆ ದಾರಿ ಬಂದ್‌ ಮಾಡಿದ್ದರಂತೆ. ಆದರೆ ಶಾರ್ಟ್‌ಕಟ್‌ ಆದ್ದರಿಂದ ಹುಡುಗಿಯರು ಆ ದಾರಿಯಲ್ಲೇ ಹೋಗುತ್ತಿದ್ದರಂತೆ. ಒಮ್ಮೆ ಒಂದು ವಿಷದ ಹಾವು ವಿದ್ಯಾರ್ಥಿನಿಯೊಬ್ಬಳ ಸೀರೆಯ ನೆರಿಗೆಯೊಳಗೆ ಸೇರಿದ್ದು ವಿದ್ಯಾರ್ಥಿನಿಗೆ ಗೊತ್ತಾಗದೇ ಒಳಗಡೆಯೇ ಕಚ್ಚಿದ್ದ ಕಾರಣ ನಾಚಿಕೆಯಿಂದ ಸೀರೆ ಬಿಚ್ಚಲಾಗದೇ ವಿಷವೇರಿ ಅವಳು ಸತ್ತಿದ್ದಳು. ಇಂತಹ ಒಂದು ಸುದ್ದಿ ಯಾವುದೇ ಒಂದು ಗಂಭೀರ ಘಟನೆಯಾಗದೇ ಚರ್ಚೆ, ಚಿಂತನೆಗೆ ಎಡೆಮಾಡದೇ ಹೋಗಿತ್ತು. ಇದೇ ರೀತಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗಲೂ ಸೀರೆ ಚಕ್ರಕ್ಕೆ ಸಿಕ್ಕಿ ಅಪಘಾತಗಳು ಸಾಕಷ್ಟು ಆಗಿವೆ. ಇದೆಲ್ಲಾ ಯೋಚಿಸುವಾಗ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಇದ್ದು , ಸ್ವಲ್ಪವೇ ಸಂತೃಪ್ತ ವರ್ಗವಿರುವ ಭಾರತದಲ್ಲಿ ಸೀರೆ ಎನ್ನುವ ಸಾರ್ವಜನಿಕ ಉಡುಪು ಹೆಗ್ಗಳಿಕೆ ಮಾಡಿಕೊಳ್ಳಲು ವಿನಾ ಬೇರೆಲ್ಲಾ ವಿಚಾರದಲ್ಲೂ ತೊಡಕು ತರುವಂತಹದ್ದು. ಆರ್ಥಿಕ ವಿಚಾರದಲ್ಲಂತೂ ಸೀರೆ ದುಬಾರಿ ಉಡುಪು. ಅದನ್ನುಟ್ಟು ಕೆಲಸಮಾಡುವುದು ಅದೊಂದು ರೀತಿಯ ಶಿಕ್ಷೆ. ಸಲೀಸಾಗಿ ಕೆಲಸಮಾಡುವ ಸಾಮರ್ಥ್ಯವನ್ನೂ ಇದು ಕಸಿಯುತ್ತದೆ. ಸೆರಗು ಜಾರುವುದು, ನೆರಿಗೆ ಕಳಚಿ ಹೋಗಿ ಬತ್ತಲೆಯಾಗುವುದು- ಹೀಗೆ ಬಸ್ಸು ಹತ್ತುವಾಗ ಮುಜುಗರವಾಗುವಂತಹ ಪ್ರಸಂಗ ಯಾವಾಗಲೂ ತಂದೊಡ್ಡುತ್ತದೆ. ಪೂನಾದಲ್ಲಿ ಸ್ವಾತಿ ಎಂಬ ಅಧ್ಯಾಪಕಿ ಕಾಲೇಜಿನಲ್ಲಿ ಜೀನ್ಸ್‌ ಹಾಕಿ ಬಂದ ತಪ್ಪಿಗೆ ಕೆಲಸವನ್ನೇ ಕಳೆದುಕೊಳ್ಳಬೇಕಾಗಿ ಬಂತು. ಆದರೆ, ಅವಳು ದಿಟ್ಟತನದಿಂದ ಕೋರ್ಟ್‌ ಕಟ್ಟೆ ಏರಿ ಉಡುಪಿನ ಆಯ್ಕೆ ತನ್ನ ಮೂಲಭೂತ ಹಕ್ಕು ಎಂದು ವಾದಿಸಿ ಜಯಗಳಿಸಿ ತನ್ನ ಹಕ್ಕನ್ನು ಸ್ಥಾಪಿಸಿದಳು. ಆದರೆ ನಮ್ಮಲ್ಲಿ ಗಂಡಸರು ಏನು ಹೇಳುತ್ತಾರೋ ಎಂಬ ಭೀತಿಯೇ ಕಾಡುವುದರಿಂದ ಮಹಿಳೆಯರಿಗೆ ತನ್ನೆಲ್ಲಾ ಹಿತಾಸಕ್ತಿಗೆ ಲಕ್ಷ್ಮಣ ರೇಖೆ ಹಾಕಬೇಕಾಗುತ್ತದೆ.

ಇಂದು ಲಿಂಗಬೇಧವಿಲ್ಲದ ವ್ಯವಸ್ಥೆಯಲ್ಲಿ ಸ್ತ್ರೀ-ಪುರುಷರು ಸಮಾನರು ಎಂದು ನಾವು ತಿಳಿಯುತ್ತೇವೆ. ಆದರೂ ಹಂತ ಹಂತದಲ್ಲೂ ಪರಂಪರಾಗತ ಮೌಲ್ಯಗಳೇ ಇನ್ನೂ ನಮ್ಮನ್ನು ಆಳುತ್ತ ಜೀವಂತವಾಗಿವೆ. ಇಂದಿನ ಸ್ತ್ರೀಚಳವಳಿಗಳೆಲ್ಲಾ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಹಾಗೂ ಇತರ ದೌರ್ಜನ್ಯಗಳ ಬಗ್ಗೆ ಮಾತ್ರ ನಡೆಯುತ್ತಿವೆ. ಆದರೆ ಚಿಕ್ಕ ಚಿಕ್ಕ ಸಮಸ್ಯೆಗಳು ದಂಗುಬಡಿಸುವಂತೇ ಇದ್ದುದು ನಮಗೆ ಕಾಣಿಸುವುದೇ ಇಲ್ಲ. ಯಾಕೆಂದರೆ, ಸ್ತ್ರೀಯರ ಸುಪ್ತಪ್ರಜ್ಞೆಯಲ್ಲಿ ಪುರುಷರ ಟೀಕೆಗೊಳಗಾಗುವ ಭೀತಿಯ ಕಾರಣದಿಂದ ಪುರುಷರ ದೃಷ್ಟಿಯಲ್ಲಿ ತಾನು ಸಭ್ಯಳಾಗಿ ಕಾಣುವುದು ಮುಖ್ಯ ಎಂದು ಬದಲಾವಣೆಯ ಅಪೇಕ್ಷೆ ಇದ್ದಾಗಲೂ ಸ್ತ್ರೀಯರು ಅದನ್ನು ಮಾಡಲಾರರು. Eat the Kimono ಅಂತಹ ಚಳವಳಿ ನಮಗೂ ಅಗತ್ಯ. ಸಾಮೂಹಿಕವಾಗಿ ಮೇಲ್‌ರಚನೆಯಲ್ಲಿ ಉಂಟಾದ ಪರಿವರ್ತನೆಯನ್ನು ಸುತ್ತಲ ಸಮಾಜವೂ ಖಂಡಿತವಾಗಿ ಅನುಸರಿಸಲು ಸಾಧ್ಯ. 

ಕೆ. ತಾರಾ ಭಟ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಏಕಾಏಕಿ ತುಂಬಿ ಹರಿದ ನದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ಏಕಾಏಕಿ ತುಂಬಿ ಹರಿದ ನದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ: ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ: ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ಭಿವಂಡಿಯಲ್ಲಿ ಕುಸಿದ ಬಹುಮಹಡಿ ಕಟ್ಟಡ: 10 ಜನರು ಸಾವು, ಇನ್ನೂ ಹಲವರು ಸಿಲುಕಿರುವ ಶಂಕೆ

ಭಿವಂಡಿಯಲ್ಲಿ ಕುಸಿದ ಬಹುಮಹಡಿ ಕಟ್ಟಡ: 10 ಜನರು ಸಾವು, ಇನ್ನೂ ಹಲವರು ಸಿಲುಕಿರುವ ಶಂಕೆ

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಗಡಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ

ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಗಡಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ

ನದಿ ಪಾತ್ರವನ್ನೇ ಬದಲಿಸಿದ ಉತ್ತರಾ ನೆರೆ: ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಹೊಳೆ ಹರಿವಿನ ದಿಕ್ಕನ್ನೇ ಬದಲಿಸಿದ ಉತ್ತರಾ ನೆರೆ:ಕಾಪು ಲೈಟ್ ಹೌಸ್ ನ ಸಂಪರ್ಕ ವ್ಯವಸ್ಥೆ ಕಡಿತ

ಖುಷಿ ಖುಷಿಯ ಸಂಬಂಧಗಳ ಬದುಕು

ಖುಷಿ ಖುಷಿಯ ಸಂಬಂಧಗಳ ಬದುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಬನ್‌-ಪ್ರಿಯೆ

ಬನ್‌-ಪ್ರಿಯೆ

ಆತ್ಮವಿಶ್ವಾಸ ತುಂಬುವ ತ್ರಿಚಕ್ರ

ಆತ್ಮವಿಶ್ವಾಸ ತುಂಬುವ ತ್ರಿಚಕ್ರ

MUST WATCH

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavaniಹೊಸ ಸೇರ್ಪಡೆ

ಏಕಾಏಕಿ ತುಂಬಿ ಹರಿದ ನದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ಏಕಾಏಕಿ ತುಂಬಿ ಹರಿದ ನದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ: ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ: ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ಭಿವಂಡಿಯಲ್ಲಿ ಕುಸಿದ ಬಹುಮಹಡಿ ಕಟ್ಟಡ: 10 ಜನರು ಸಾವು, ಇನ್ನೂ ಹಲವರು ಸಿಲುಕಿರುವ ಶಂಕೆ

ಭಿವಂಡಿಯಲ್ಲಿ ಕುಸಿದ ಬಹುಮಹಡಿ ಕಟ್ಟಡ: 10 ಜನರು ಸಾವು, ಇನ್ನೂ ಹಲವರು ಸಿಲುಕಿರುವ ಶಂಕೆ

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಪಂಜಾಬ್ ಸೋಲಿಗೆ ಕಾರಣವಾಯ್ತು ಅಂಪಾಯರ್ ತಪ್ಪು ನಿರ್ಧಾರ! ಗರಂ ಆದ ಸೆಹವಾಗ್

ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಗಡಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ

ಏಳು ದಶಕಗಳಿಂದ ಕತ್ತಲೆಯಲ್ಲಿ ಬದುಕುತ್ತಿದ್ದ ಗಡಿ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.