ಧಾರಾವಾಹಿಗಳೆಂಬ ಮನೆಮನೆ ಕತೆಗಳು


Team Udayavani, Nov 16, 2018, 6:00 AM IST

27.jpg

ಕನ್ನಡ, ಕಸ್ತೂರಿ ಕನ್ನಡ ಎನ್ನುವ ತುಂಬು ಅಭಿಮಾನ ಕನ್ನಡದ ಮನೆ ಮನೆಗಳಲ್ಲಿದೆ. ಅದರ ಮಹತ್ವ ಗೊತ್ತಾಗಬೇಕಾದರೆ ಪರಸ್ಥಳದಲ್ಲಿ  ಕನ್ನಡ ಭಾಷೆ ಕಿವಿಗೆ ಬಿದ್ದಾಗ ಅಥವಾ ಕನ್ನಡಿಗರು ಪರನಾಡಿನಲ್ಲಿ ಎದುರಾಗುವಾಗ ಸ್ಪುರಿಸುವ ಆಪ್ತ ಭಾವಕ್ಕೆ ಬೆಲೆ ಕಟ್ಟಲಾಗದು. ಬಹುಶಃ ಎಲ್ಲ ಭಾಷೆಯ ಜನರಿಗೂ ಹೀಗೆ ಇರುತ್ತದೆ. 

ನಮ್ಮ ಕನ್ನಡದ ಹಲವಾರು ಕಿರುತೆರೆ ಧಾರಾವಾಹಿಗಳು ಪೈಪೋಟಿಯಿಂದ ವೀಕ್ಷಕರಿಗೆ ಉಣಬಡಿಸುವ ರಸದೌತಣಗಳ ಬಗ್ಗೆ ಚಿಂತಿಸಿದಾಗ ಹೀಗೆ ಒಂದು ಕುಟುಂಬ ಅಥವಾ ಮನೆಯ ಸದಸ್ಯರು ಇದ್ದರೆ ಅದು ಮನೆ ಎನ್ನಿಸಿಕೊಳ್ಳುತ್ತದಾ? ಕುಟುಂಬದ ಜೊತೆಯಲ್ಲಿ, ಮನೆ ಎಂಬೋ ನೆಮ್ಮದಿಯ ತಾಣದಲ್ಲಿ ಕಳೆವ  ಸಮಯಕ್ಕೆ ಬೆಲೆ ಕಟ್ಟಲಾಗದು. ಮನೆ ಅದೆಷ್ಟು ವೈಭವೋಪೇತವಿರಲಿ ಅಥವಾ ಪುಟ್ಟ ಸರಳವಾದ ಮನೆಯಾಗಿರಲಿ, ಅದು ನಮ್ಮದು. ದಣಿದ ಮೈಮನಗಳ ವಿಶ್ರಾಂತಿಯ ತಾಣ. ಮನೆಯಲ್ಲಿ, ಹೆತ್ತವರ ಜೊತೆ ಅಥವಾ ಮಡದಿ, ಮಕ್ಕಳ ಒಡನಾಟ, ಪತಿ, ಪತ್ನಿಯ ಸಾಂಗತ್ಯದ ಕ್ಷಣಗಳು ಎಲ್ಲ ಒತ್ತಡವನ್ನು ಕಳೆದು ಮೈಮನಸ್ಸನ್ನು ಹಗುರಾಗಿಸುವ ತಂಪಿನ ತಾಣ ಎನ್ನುವುದು ಸತ್ಯ. ಮುಕ್ತವಾಗಿ ಮನಸ್ಸುಗಳು ಬೆಸೆಯುವ  ಮನೆ ಬರೀ ನಾಲ್ಕು ಗೋಡೆಗಳ ಕಟ್ಟಡವಲ್ಲ. ಅದಕ್ಕೊಂದು ಪಾವಿತ್ರ್ಯವಿದೆ. ಮನೆಯವರು ಒಬ್ಬರ ಹಿತಕ್ಕಾಗಿ ಇನ್ನೊಬ್ಬರು ಆತ್ಮಾರ್ಥವಾಗಿ ಶ್ರಮಿಸುವ ನಿಸ್ವಾರ್ಥತೆ. ಈಗ  ಕುಟುಂಬದ ಬಂಧಗಳು ಸಡಿಲವಾಗುತ್ತಿವೆ ಎನ್ನುವ ಕೂಗು ಮೇಲಿಂದ ಮೇಲೆ ಕೇಳಿ ಬರುತ್ತಿವೆ; ಹಾಗೇ ಬಂಧಗಳು ಬಿಗಿಯಾಗಿ ಬೆಸೆದ ಮನೆಗಳೂ ಸಹಸ್ರಾರು. ಸಾಮಾನ್ಯವಾಗಿ ಮನೆ ಎಂದರೆ ಎಲ್ಲ ವಯೋಮಾನದ ಸದಸ್ಯರೂ ಇರುತ್ತಾರೆ. ಇಂದಿಗೆ ಮನೆಯ ಒಳಗಿದ್ದೇ  ಮನರಂಜನೆ ಎಂಬ ಹೆಸರಿನ ಕಾರ್ಯಕ್ರಮಗಳನ್ನು ತೋರಿಸುವ ಟೆಲಿವಿಷನ್‌ ನಿಧಾನವಾಗಿ ಮನೆಯವರ ಮುಂದೆ ಉಣಬಡಿಸುವ ಧಾರಾವಾಹಿಗಳೆಂಬ ಮನೆ ಮನೆ ಕಥೆಗಳು ಒಟ್ಟಾರೆಯಾಗಿ ವೀಕ್ಷಕರಿಗೆ ಅದೇನನ್ನು ಕೊಡುತ್ತವೆ?

ಸೂಕ್ಷ್ಮವಾಗಿ ಯಾಕೆ; ಮೇಲಿಂದ ಮೇಲೆ ಕಣ್ಣು ಹಾಯಿಸಿದರೂ ಸಾಕು ಕಾಣುವುದು ಪ್ರತಿ ಧಾರಾವಾಹಿಗಳಲ್ಲಿ ಅಳುವ ಹೆಣ್ಣುಮಗಳು, ಆ ಹೆಣ್ಣಿನ ಮೇಲೆ ಮನಸೋ ಇಚ್ಛೆ ದಬ್ಟಾಳಿಕೆ ನಡೆಸುವುದು ಮತ್ತೂಬ್ಬ ಸ್ತ್ರೀ.   ಆಕೆ ಕೊಡುವ ಕಿರುಕುಳ ಜೀವಾಪಾಯದ ತನಕ ಮುಂದುವರಿಯುತ್ತದೆ. ಪರಮ ಸಾಧ್ವಿಯ ಹಾಗೆ ಚಿತ್ರಿಸುವ ಅಳುವ ಹೆಣ್ಣು ಮೂಕವಾಗಿ ಎಲ್ಲವನ್ನೂ ಸಹಿಸಿ ಸದಾ ಅಳುವುದೊಂದೇ ಉಳಿದಿದ್ದು ಎಂಬಂಥ ಚಿತ್ರಣ. ಆಕೆ  ಮನೆಯಲ್ಲಿರುವ  ಪ್ರತಿಯೊಬ್ಬರ ಬೇಕು-ಬೇಡಗಳನ್ನು ಗಮನಿಸಿ ಕೂತ ಕಡೆಗೆ ಒದಗಿಸುವ ಸಾಧ್ವಿ. ಆಗ ತಾನೇ ಮುಖಕ್ಕೆ ಅಪ್ಪಳಿಸುವಂಥ ನಿಂದನೆ ಕೇಳಿದರೂ ಮರೆಯಲ್ಲಿ ಕಣ್ಣು, ಮೂಗು ಒರೆಸಿ ಅತ್ತ ಗುರುತೇ ಇಲ್ಲದ ಹಾಗೆ ನಗು ಎಳೆದು ಮೋರೆಗೆ ತುಂಬಿ ಸಭೆಗೆ ಹಾಜರಾಗುತ್ತಾಳೆ. ಮನೆ ಎಂದರೆ ತೀರಾ ಹತ್ತಿರದ ರಕ್ತ ಸಂಬಂಧಿಗಳ ನೆಲೆ. ಇಲ್ಲಿ ಯಾವ್ಯಾವುದೋ ಜನರು, ಅದು ಹ್ಯಾಗೆ ಸಂಬಂಧಿಕರೋ ಅವರೆಲ್ಲ ಒಡ್ಡೋಲಗಕ್ಕೆ ಕೂತ ಹಾಗೆ ಕೂತು ಸಂಚು ರೂಪಿಸುತ್ತಿರುತ್ತಾರೆ. ಉಣ್ಣುವ ಊಟಕ್ಕೆ ಅಮಲಿನ ಪುಡಿಯೋ, ಅಮಲು ತರುವ ದ್ರವವನ್ನೋ ಸುರಿಯುವುದು, ಕುಡಿಯುವ ಪೇಯಕ್ಕೆ ಇನ್ನೇನಾದರೂ ಬೆರಕೆ ಮಾಡುವುದು, ನಡೆಯುವ ನೆಲಕ್ಕೆ ಅಥವಾ  ಮಹಡಿ ಮೆಟ್ಟಲಿಗೆ ಎಣ್ಣೆ ಹಾಕುವುದು ಇಂಥ ಕಚಡಾ ಕಾರ್ಯವನ್ನು ಹಿರಿಯ ಮಹಿಳೆಯರಿಂದ ಧಾರಾವಾಹಿಗಳಲ್ಲಿ ಮಾಡಿಸುವುದು ಗಮನಿಸಬಹುದು. ಇಷ್ಟೊಂದು ಅಗ್ಗವಾಗಿ ಇರ್ತಾರಾ  ಮಹಿಳೆಯರೆಂದರೆ ! ಕಿರುತೆರೆ ಧಾರಾವಾಹಿಗಳು ಹೀಗೆ ಕುತಂತ್ರ, ವಂಚನೆ, ಮೋಸ, ಕಠಿಣಾತಿ ಕಠಿಣ ಸ್ಥಿತಿಯಲ್ಲೂ “ಗುಟ್ಟು’ ಕಾಪಾಡಿಕೊಳ್ಳುವ ಅವಸ್ಥೆ! ಅವಸ್ಥೆಯೇ ನಿಜ. ಕಿರುತೆರೆಗೆ ಸಂಬಂಧಿಸಿದವರೊಬ್ಬರು  ಭೇಟಿಯಾದಾಗ ಹೀಗ್ಯಾಕೆ  ಕುತ್ಸಿತ, ವಂಚನೆಗಳೇ  ಮುಖ್ಯವಾಗುವ ಬದಲಾಗಿ ಉತ್ತಮ ಕಥಾವಸ್ತು ಇರುವ ಧಾರಾವಾಹಿ ಏಕಿಲ್ಲ? ಎಂದು ವಿಚಾರಿಸಿದ್ದೆವು. ಅಲ್ಲದೆ, ಅದಕ್ಕೇ ನಾವು ಮಲಯಾಳ ಚಿತ್ರಗಳನ್ನು ಆಯ್ಕೆ ಮಾಡುತ್ತೇವೆ ಎಂದಿದ್ದೆವು. 

ಆ ಮಾತಿಗೆ ಅವರು ಕೊಟ್ಟ ಉತ್ತರ ನೂರಕ್ಕೆ ನೂರು ಸತ್ಯ. ಅವರೇ ಹೇಳಿದ ಪ್ರಕಾರ… ಕನ್ನಡದ ಧಾರಾವಾಹಿಗಳಲ್ಲಿ ಮಹಿಳೆಗೇ ಪ್ರಾಧಾನ್ಯ. ಆಕೆ ಆತಿಯಾಗಿ ಒಡವೆಗಳನ್ನು ಹಾಕಿರಬೇಕು; ಹಾಗೇ ದುಬಾರಿ ಸೀರೆಗಳು ಕೂಡ. ಒಮ್ಮೆ ತೊಟ್ಟ ಉಡುಗೆ ಪುನಃ ಸಲ್ಲದು.  ವೈಭವೋಪೇತವಾದ ಮನೆ ಅಗತ್ಯವಾಗಿ ಬೇಕು. ಅಲ್ಲಿ ಅತ್ಯಾಧುನಿಕ ಆಸನಗಳು, ವ್ಯವಸ್ಥೆ, ಸುಸಜ್ಜಿತ ಕೋಣೆಗಳು ಬೇಕೇಬೇಕು. ಇಂಥ ಕಥೆಗಳಲ್ಲಿ ಗಂಡಸರು ನಾಮ… ಕೇ ವಾಸ್ತೆ ಇದ್ದರೆ ಸಾಕು. ಕಥೆಗೆ ಸಂಬಂಧಿಸಿದ ಪಾತ್ರಗಳೆಲ್ಲ ಅದೇ ಮನೆಯಲ್ಲಿದ್ದರೇ ಖರ್ಚು ಕಡಿಮೆ. ಅಂಥ ವೈಭವೋಪೇತ ಮನೆಗಳಲ್ಲಿ ಮನೆಯ  ನಿರ್ವಹಣೆಗೆ ಮನೆ ಸೊಸೆ ಸಾಕು. ಅನ್ಯ ಸಹಾಯಕರು ಅಲ್ಲಿ ಇದ್ದರೆ ವೆಚ್ಚ ಜಾಸ್ತಿ. ಮಹಿಳಾ ವೀಕ್ಷಕರೇ ಹೆಚ್ಚಿಗೆ ಇರುವ ಕಾರಣಕ್ಕೇ ದುಬಾರಿ ಸೀರೆಗಳು, ಕಿಲೋಗಟ್ಟಲೆ ಆಭರಣ ಅದೂ ನಿತ್ಯ ನಿತ್ಯ ಬದಲಾಯಿಸಿ ಹಾಕ್ಕೊಳ್ಳತಕ್ಕದ್ದು. ಅತ್ಯಂತ ಸಿರಿ ಸಂಪತ್ತಿನ ಆ ಮನೆಗಳಲ್ಲಿ ಇನ್ನೇನು ಬೇಕು ಎಂದು ಅವರು ಹೇಳಿದ್ದರೆಂದು ಊಹಿಸಬಲ್ಲಿರಾ? ಇಲ್ಲಿ ಕೇಳಿ.

ದಿನ ದಿನ ಜಗಳ, ದೂಷಣೆ, ವ್ಯಂಗ್ಯ, ಹೀನಾಯ, ಗದರುವಿಕೆ, ಏಟು, ಸಂಚುಗಳು,  ಪ್ರತಿ ಕಾರ್ಯಕ್ಕೂ ವಿಘ್ನ, ಅಳು, ಗೋಳಾಟ, ಅಪಘಾತ, ಪೆಟ್ಟು, ಮುರಿಯುವ ಕೈಕಾಲುಗಳು, ಬ್ಯಾಂಡೇಜ್‌, ಆಹಾರ ಸೇವಿಸುವ ಹೊತ್ತಿಗೆ ಕಾಲು ಕೆದರಿ ಜಗಳ ಹುಟ್ಟುವುದು, ಆಹಾರ ದೂರ ತಳ್ಳಿ ಎದ್ದು ಹೋಗುವುದು, ಎಲ್ಲರ ಕೆಂಗಣ್ಣು ಪರಮ ಸಾಧ್ವಿಯಾಗಿ ಕಟೆದು ನಿಲ್ಲಿಸುವ ಮನೆ ಸೊಸೆಯತ್ತ. ಆಕೆ ಅದೆಷ್ಟು ಅವರೆಲ್ಲ ಬೈದು ಭಂಗಿಸಿದರೂ ಕಣ್ಣೊರೆಸಿ ನಗು ನಗುತ್ತ ಅವರನ್ನೆಲ್ಲ ಉಪಚರಿಸುವ ಸಹನೆ, ತಾಳ್ಮೆ,  ಗರ್ಭಿಣಿ ತಾನು ಎನ್ನುವ ಸುಳ್ಳು ಹೇಳಿ ಯಾಮಾರಿಸುವ ಹೊಸ ಟ್ರಿಕ್‌, ದುರುಗುಟ್ಟಿ ಕಣ್ಣಲ್ಲೇ ಸುಡುವ ಹಿರಿಯ ಮಹಿಳೆ. ಜಗಳ, ಕದನ, ಕಾದಾಟ, ಸಮಸ್ಯೆ, ಕಷ್ಟ, ಕೋಟಲೆಗಳು ಸರಣಿಯಲ್ಲಿ ಸಾಗುತ್ತಿರಬೇಕು. ಒಟ್ಟಿನಲ್ಲಿ ಅದು ಕುರುಕ್ಷೇತ್ರದ  ಯುದ್ಧಭೂಮಿ. ಅಲ್ಲಿ ಮಹಿಳೆ ಎಂದರೆ ಕೇವಲ ಮನೆಯ ಕೆಲಸಕ್ಕೆ ಸೀಮಿತ. ಆಕೆ ಕಾಲೇಜಿಗೆ ಹೋಗಿ ಕಲಿಯುವ ದೃಶ್ಯಗಳಿಲ್ಲವೇ ಇಲ್ಲ. ಅವಳಿಗೆ ಅದ್ಯಾವ ಹಾಬಿಗಳು ಇಲ್ವೇ ಇಲ್ಲ. ನೌಕರಿ ಮಾಡುವ ಸ್ತ್ರೀ ಅಲ್ಲ. ಸಮವಯಸ್ಕರ ಜೊತೆಗೆ ಕಲೆಯುವ ಅವಕಾಶ ಕಾಣಿಸದು. ಉತ್ತಮ ವಿಚಾರಗಳನ್ನು ಹಂಚಿಕೊಳ್ಳುವ ಸ್ನೇಹಿತೆಯೂ ಇಲ್ಲ. ಬೌದ್ಧಿಕ ಸಾಹಚರ್ಯೆಗೆ ಅಲ್ಲಿ ಸ್ಥಾನವಿಲ್ಲ. ಥಳಕು ಬಳಕು ಮುಖ್ಯ  ಅಂತ ಹೇಳಿದರೂ ಅಲ್ಪಸ್ವಲ್ಪವಾದರೂ ಹೆಣ್ಣಿಗೆ ಮನೆಯ ನಾಲ್ಕು ಗೋಡೆಯ ಹೊರಗೆ ಬದುಕು ಬೇಡವಾ? ಕೇವಲ ವಿನೀತವಾಗಿ ನಿಲ್ಲುವ ರೋಲ…! ಸ್ವಂತ ಭಾವನೆಗಳಿಲ್ಲದ ಹಾಕಿಟ್ಟ ಪಾತ್ರೆಗೆ ಹೊಂದಿಕೊಳ್ಳುವ ಹಾಗೆ ಸೀಮಿತವಾದ ಬದುಕು. ಇದು ಬರೇ ಧಾರಾವಾಹಿ ಅಂತ ಗೊತ್ತು; ಆದರೆ, ಸ್ವಲ್ಪ ಬದಲಾವಣೆ ಕೊಡಲಾಗದೆ ಇದ್ದರೆ ಅದೇನು ಚೆನ್ನ ಅಥವಾ ಮನೆ ಸೊಸೆಗೆ ಇರುವ ಸ್ಥಾನ ಇವಿಷ್ಟೆಯಾ. ಇಂಥ ಧಾರಾವಾಹಿಗಳನ್ನು ನೋಡಿದ ಯುವತಿ ಲಗ್ನವಾಗಲು ಒಪ್ಪುತ್ತಾಳಾ? 

ಹೀಗೇಕೆ ಎಂದು ದಿಗ್ಭ್ರಮೆಯಲ್ಲಿ ಕೇಳಿದಾಗ ಅವರು ಕೊಟ್ಟ ಉತ್ತರ ಇಂದಿಗೂ ಮರೆಯುವಂತಿಲ್ಲ. ಕಥೆಯೇ ಇಲ್ಲದೆ ವರ್ಷಗಟ್ಟಲೆ ಆಫ್ರಿಕನ್‌ ಸ್ನೆಯಿಲ… ಥರ ತೆವಳುವ ಈ ಧಾರಾವಾಹಿಗಳ ಹೆಚ್ಚಿನ ವೀಕ್ಷಕರು ಮಹಿಳೆಯರು. ಅದರಲ್ಲೂ ಮಧ್ಯಮ ವರ್ಗದವರು. ಬದುಕಿನಲ್ಲಿ ಕಷ್ಟ-ಸುಖಗಳನ್ನು ಅನುಭವಿಸುವ ಅವರಿಗೆ ಅತೀವ  ಶ್ರೀಮಂತರ ಕಥೆಗಳು ಹೆಚ್ಚು ಹತ್ತಿರವಾಗುತ್ತದೆ. ಅವರ ಉಡುಗೆ, ತೊಡುಗೆ, ಆಹಾರ, ವಿಹಾರ, ವೈಭವದ ಬದುಕು, ಐಷಾರಾಮಿ ಕಾರುಗಳು, ಮನೆಯಲ್ಲೂ ಉಡುವ ರೇಷ್ಮೆ ಸೀರೆಗಳು, ಅರಮನೆಯ ಹಾಗಿರುವ ಮನೆಗಳು ಎಲ್ಲವನ್ನೂ ಮಧ್ಯಮವರ್ಗದ ಮಹಿಳೆ ಕಾಣಲು ಇಚ್ಛಿಸುತ್ತಾಳೆ. ಅವುಗಳನ್ನು ಬೆರಗಾಗಿ ನೋಡುವ ಆಕೆಗೆ ಅವರಿಗಿಂತ ತಾನು, ತನ್ನ ಕುಟುಂಬದವರು ಸುಖೀಗಳು ಎನ್ನಿಸುವುದು ಮುಖ್ಯ. ಅದಕ್ಕಾಗಿ ನಿರಂತರವಾಗಿ ಕಷ್ಟ ಕಷ್ಟ ಕಷ್ಟ. ರಾಶಿ ಚಿನ್ನ ಹೇರಿದ ಸೊಸೆಗೆ ಸುಖ, ನೆಮ್ಮದಿ ಇಲ್ಲವಾದಾಗ ಅವರಿಗಿಂತ ತಾನೇ ನೆಮ್ಮದಿಯಾಗಿದ್ದೇನೆ ಎನಿಸಬೇಕು, ಕದನ, ಕಾದಾಟ, ವಂಚನೆ, ಮೋಸ ನಿತ್ಯದ ಬದುಕಾಗುವಾಗ ತನ್ನಲ್ಲಿ ಹಾಗಿಲ್ಲವೆಂಬ ಸಂತೃಪ್ತಿ ಉಕ್ಕುತ್ತದೆ, ಈಗಂತೂ ಗಂಡಸರನ್ನು ವಿಲನ್‌ ಪಾತ್ರದಲ್ಲಿ ತರುವ ಬದಲಿಗೆ ಒಬ್ಬ ಯುವತಿಯನ್ನೇ ವಿಲನ್‌ ಆಗಿ  ಕುಣಿಸಿದರೆ ಹೆಚ್ಚು ಪ್ರಭಾವ ಬೀರುತ್ತದೆ. ಒಬ್ಬರಿಗೊಬ್ಬರು ನಂಬದಂಥ ವಾತಾವರಣವನ್ನು ಸೃಷ್ಟಿಸತಕ್ಕದ್ದು. ಅತೀವವಾಗಿ ಕಂಡ ಕಂಡ ಗೋಸಾಯಿಗಳ ಹಿಂದೆ ಹೋಗಿ ಮನೆಯ ಕಷ್ಟ ಹೇಳಿ ಮೊರೆಯಿಡುವಿಕೆ, ಇವೆಲ್ಲ ವಾಸ್ತವವಾಗಿ ಸಾಮಾನ್ಯ ಮಹಿಳೆಯನ್ನು ಸೆಳೆದುಕೊಳ್ಳಲು ಮಾಡುವ ಅತಿ ಬುದ್ಧಿವಂತಿಕೆಯ ತಂತ್ರ ಎಂದು ಅವರ ಮಾತಿನಿಂದ ಅರ್ಥವಾದಾಗ ಬೆಚ್ಚಿಬೀಳುವ ಹಾಗಾಗಿತ್ತು. ಇವನ್ನೆಲ್ಲ ನಿತ್ಯ ಕಾಣುವ ಅತ್ತೆ ತನ್ನ ಸೊಸೆಯತ್ತ ಸಂಶಯದ ದೃಷ್ಟಿ ಹಾಯಿಸಿ ಅವಳು ಕೊಟ್ಟಿದ್ದು ತಿನ್ನಲು ಅನುಮಾನಿಸಿದರೆ! ಸೊಸೆ ಆ ತನಕ ವಿಶ್ವಾಸವಾಗಿದ್ದ ಅತ್ತೆಯತ್ತ ದುರುದುರು ನೋಡಿ ಗುರಾಯಿಸಿದರೆ ಮನೆ ಮನೆಯ ಸ್ಥಿತಿ ಹದಗೆಡದೆ ಇದ್ದೀತೇ? 

ಸೊಸೆ ಕೊಟ್ಟ ಕಾಫಿ ಅತ್ತೆ ಮುಟ್ಟಲಿಕ್ಕಿಲ್ಲ. ಅತ್ತೆ ಮಾಡಿದ ತಿಂಡಿ ಸೊಸೆ ತಿನ್ನಲಿಕ್ಕಿಲ್ಲ. ಇವೆಲ್ಲ ಮನೆ-ಮನೆಗಳನ್ನು ನಿಧಾನವಾಗಿ ಒಡೆಯುವ  ವಿಷವಲ್ಲವೇ? ಸುಖ-ಸೌಹಾರ್ದತೆಗೆ ಸಿರಿವಂತಿಕೆಗಿಂತ ಮಿಗಿಲಾದದ್ದು ಪರಸ್ಪರ ಮಧುರ ಸಂಬಂಧಗಳು. ಈ ಧಾರಾವಾಹಿಗಳು ದಿನೇ ದಿನೇ ತೆವಳುತ್ತ ಉಣಬಡಿಸುವ  ಕಾಳಗ, ಕದನ, ಮೋಸ, ವಂಚನೆ ಎನ್ನುವ ನಿಧಾನ ವಿಷ ಕಲ್ಲು, ಇಟ್ಟಿಗೆ, ಸಿಮೆಂಟ್‌, ಗಾರೆ ಸೇರಿಸಿ ಕಟ್ಟಿದ ಮನೆ ಮನೆಗಳನ್ನು ಮುರಿದು ಹಾಕುವುದರಲ್ಲಿ ಅನುಮಾನವಿಲ್ಲ. 

ಇತರ ಭಾಷೆಗಳ, ಮಲಯಾಳ ಚಾನೆಲ…ಗಳಲ್ಲಿ ಅದು ಹೇಗೆ ಅವರು ಉತ್ತಮವಾದ  ಕಥೆಗಳನ್ನು ಆಯ್ಕೆ ಮಾಡಿ ವೀಕ್ಷಕರ ಮನ ಗೆಲ್ಲುತ್ತಾರೆ? ಈ ಪರಿಯ ಮಹಿಳಾ ವಿಲನ್‌ಗಳು ಅಲ್ಲಿಲ್ಲ. ವಿಲನ್‌ಗಳೆಲ್ಲ ಪುರುಷರೇ. ಸರಳವಾಗಿ ಪಂಚೆ, ಅಡ್ಡ ಮುಂಡು ಉಟ್ಟ ನಟ-ನಟಿಯರ ಅಬ್ಬರದ, ಐಷಾರಾಮಿ ಬದುಕಿಲ್ಲದ, ಪ್ರಾಕೃತಿಕ ದೃಶ್ಯಗಳಿಂದ ಕೂಡಿದ್ದು ಹಿಟ್‌ ಆಗುತ್ತದೆ. ಅಲ್ಲಿ ನಡೆಯುವುದು ಇÇÉೇಕೆ ನಡೆಯಬಾರದು?

ಮುಕ್ತಾಯವಾಗಿ ಕನ್ನಡದ ಸಿರಿಗಂಪನ್ನು ಸಮರ್ಥವಾಗಿ ಬಿಂಬಿಸಿ ವೀಕ್ಷಕರ ಮನಗೆದ್ದ  ಟೆಲಿವಿಷನ್‌ ಧಾರಾವಾಹಿಗಳೂ ಇವೆೆ. ಅವುಗಳು ಜನತೆಯ ಮನದಲ್ಲಿ ಅಚ್ಚಳಿಯದ ಪ್ರಭಾವ ಬೀರುವುದು ನಿಜ. ಆದರೆ, ಅಂಥ ಕಲಾತ್ಮಕತೆಯ ಅಭಾವ ಜಾಸ್ತಿಯಾಗಿ ಥಳುಕು ಬಳುಕಿನ ಟೊಳ್ಳು ಎದ್ದೆದ್ದು ಕುಣಿಯುತ್ತದೆ. ಅತ್ತೆಯ ಕಥೆಗಳಿವೆ, ನಿರ್ದೇಶಕರಿದ್ದಾರೆ, ತಾಂತ್ರಿಕ ವರ್ಗವಿದೆ. ಎಲ್ಲ ಇದ್ದೂ ಕ್ವಾಲಿಟಿಗಿಂತ ಅಬ್ಬರವೇ ಹೆಚ್ಚಾಗುತ್ತಿದೆ. ಇಂಥ ಕಥೆಗಳು ಸಮಾಜಕ್ಕೆ ಕೊಡುವುದೇನನ್ನು ?

ಕೃಷ್ಣವೇಣಿ ಕಿದೂರು

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.