ಹಮ್‌ ಆಪ್ಕೆ ಹೈ ಕೌನ್‌ ಚಿತ್ರದ ನಿಶಾಗೆ 25!

Team Udayavani, Aug 16, 2019, 5:00 AM IST

q-19

ಬಾಲಿವುಡ್‌ ಸಿನಿಪ್ರಿಯರಿಗೆ ಹಮ್‌ ಆಪ್ಕೆ ಹೈ ಕೌನ್‌ ಚಿತ್ರ ನೆನಪಿರಬಹುದು. 1994ರ ಆಗಸ್ಟ್‌ 5 ರಂದು ಬಿಡುಗಡೆಯಾದ ಹಮ್‌ ಆಪ್ಕೆ ಹೈ ಕೌನ್‌ ಚಿತ್ರ ಬರೋಬ್ಬರಿ ನೂರು ವಾರಗಳ ಯಶಸ್ವಿ ಪ್ರದರ್ಶನವನ್ನು ಕಂಡು ಬಾಲಿವುಡ್‌ನ‌ಲ್ಲಿ ಸಾಕಷ್ಟು ದಾಖಲೆಯನ್ನೆ ಬರೆದಿತ್ತು. ನಟಿ ಮಾಧುರಿ ದೀಕ್ಷಿತ್‌, ಸಲ್ಮಾನ್‌ ಖಾನ್‌ ಜೋಡಿಗೆ ಸಾಕಷ್ಟು ಹೆಸರು ಮತ್ತು ಜನಪ್ರಿಯತೆ ಈ ಚಿತ್ರದಿಂದ ಸಿಕ್ಕಿದ್ದಂತೂ ಸುಳ್ಳಲ್ಲ. ಅದರಲ್ಲೂ ಬಾಲಿವುಡ್‌ನ‌ ಸಿನಿಪ್ರಿಯರಂತೂ, ಚಿತ್ರದಲ್ಲಿ ಬರುವ ನಿಶಾ ಎನ್ನುವ ಪಾತ್ರದ ಮೂಲಕವೇ ಕರೆಯುವಷ್ಟರ ಮಟ್ಟಿಗೆ ಹಮ್‌ ಆಪ್ಕೆ ಹೈ ಕೌನ್‌ ಚಿತ್ರ ಮಾಧುರಿ ದೀಕ್ಷಿತ್‌ ಅವರ ಜನಪ್ರಿಯತೆಯನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಿತ್ತು. ಹಮ್‌ ಆಪ್ಕೆ ಹೈ ಕೌನ್‌ ಚಿತ್ರ ಎಷ್ಟರ ಮಟ್ಟಿಗೆ ಜನಪ್ರಿಯವಾಗಿತ್ತು ಎಂದರೆ, ಇಂದಿಗೂ ಅದೆಷ್ಟೋ ಜನರ ಬಾಯಲ್ಲಿ ಈ ಚಿತ್ರದ ಹಾಡುಗಳು ಆಗಾಗ್ಗೆ ಗುನುಗುಡುತ್ತಲೇ ಇರುತ್ತದೆ. ಭಾರತದ ಮದುವೆಯ ಸಂಭ್ರಮವನ್ನು ಈ ಹಾಡುಗಳು ಮತ್ತಷ್ಟು ಹೆಚ್ಚಿಸಿದ್ದವು ಎಂಬ ಕೀರ್ತಿಗೂ ಪಾತ್ರವಾಗಿದ್ದವು.

ಇತ್ತೀಚೆಗೆ ಹಮ್‌ ಆಪ್ಕೆ ಹೈ ಕೌನ್‌ ಚಿತ್ರ ತೆರೆಕಂಡು ಬರೋಬ್ಬರಿ 25 ವರ್ಷಗಳನ್ನು ಪೂರೈಸಿದೆ. ಇದೇ ಖುಷಿಯನ್ನು ನಟಿ ಮಾಧುರಿ ದೀಕ್ಷಿತ್‌ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. “ಹಾಯ್‌ ನಾನು ನಿಮ್ಮ ನಿಶಾ… ಹಮ್‌ ಆಪ್ಕೆ ಹೈ ಕೌನ್‌ 25 ವರ್ಷದ ಸಂಭ್ರಮವನ್ನು ಆಚರಣೆ ಮಾಡುತ್ತಿದ್ದೇನೆ’ ಎಂದು ಒಂದು ವಿಡಿಯೋ ಮಾಡಿದ್ದಾರೆ. ಚಿತ್ರದ ತಮ್ಮ ಪಾತ್ರದ ಹೆಸರಿನ ಮೂಲಕವೇ ಮಾತನಾಡಿದ್ದಾರೆ.

ಹಮ್‌ ಆಪ್ಕೆ ಹೈ ಕೌನ್‌ ಚಿತ್ರವನ್ನು ಜನರು ಸ್ವೀಕರಿಸಿದ ರೀತಿ, ಅದಕ್ಕೆ ಸಿಕ್ಕ ಪ್ರತಿಕ್ರಿಯೆ, ತಮ್ಮ ಚಿತ್ರ ಬದುಕಿನಲ್ಲಿ ಅದು ತಂದುಕೊಟ್ಟ ಜನಪ್ರಿಯತೆ ಇತ್ಯಾದಿ ವಿಷಯಗಳ ಬಗ್ಗೆ ಮಾಧುರಿ ದೀಕ್ಷಿತ್‌ ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರಕ್ಕೆ ಆಯ್ಕೆ ಮಾಡಿದ ನಿರ್ದೇಶಕ ಸೂರಜ್‌ ಬರ್ಜತ್ಯ, ನಿರ್ಮಾಪಕರು, ಸಹ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರು ಹೀಗೆ ಎಲ್ಲರಿಗೂ ಮಾಧುರಿ ಧನ್ಯವಾದ ಗಳನ್ನು ಸಮರ್ಪಿಸಿದ್ದಾರೆ. ಇನ್ನು ಮಾಧುರಿ ದೀಕ್ಷಿತ್‌ ಅವರ ಮಧುರವಾದ ನೆನಪಿನ ಮಾತುಗಳನ್ನು ಕೇಳಿ 90ರ ದಶಕದ ಅವರ ಫ್ಯಾನ್ಸ್‌ ಕೂಡ ಒಮ್ಮೆ ದಶಕದ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಂತೂ ಸುಳ್ಳಲ್ಲ.

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.