ಮೇಕಪ್‌ ಇಲ್ಲದೆ ಕಾಜಲ್‌ ನೋಡಿ ಮೆಚ್ಚಿದ ನೆಟಿಜನ್ಸ್‌


Team Udayavani, Jun 7, 2019, 6:00 AM IST

f-20

ನೀವು ಎಂದಾದರೂ ಸಿನಿಮಾ ಸ್ಟಾರ್‌ಗಳ ಮೇಕಪ್‌ ಇಲ್ಲದೆ ಫೋಟೋಗಳನ್ನ ನೋಡಿದ್ದೀರಾ? ಇಂಥದ್ದೊಂದು ಪ್ರಶ್ನೆಯನ್ನ ಅಭಿಮಾನಿಗಳಿಗೆ ಕೇಳಿದರೆ, ಬಹುತೇಕರ ಉತ್ತರ “ಇಲ್ಲ’ ಎಂದೇ ಇರುತ್ತದೆ. ಅದರಲ್ಲೂ ಮೇಕಪ್‌ ಇಲ್ಲದೆ, ಹೀರೋಯಿನ್ಸ್‌ ಮುಖ ನೋಡುವುದಂತೂ ಚಿತ್ರರಂಗದಲ್ಲಿ “ಆಗದ ಮಾತು’ ಅಂತಲೇ ಹೇಳಬಹುದು. ಬಹುತೇಕ ಸ್ಟಾರ್ ತಮ್ಮ ಪಾತ್ರಗಳಲ್ಲಿ ಮಾತ್ರವಲ್ಲದೆ, ಯಾವಾಗಲೂ ತಮ್ಮ ಫೋಟೋಗಳಲ್ಲಿ, ಹೊರಜಗತ್ತಿಗೆ ಸುಂದರವಾಗಿಯೇ ಕಾಣಬೇಕೆಂದು ಬಯಸುತ್ತಾರೆ. ಅದಕ್ಕಾಗಿಯೇ ತಾರೆಯರು ತಮ್ಮ ಸೌಂದರ್ಯ, ಮೇಕಪ್‌ಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಲು ಕೂಡ ಹಿಂದೆ-ಮುಂದೆ ನೋಡುವುದಿಲ್ಲ. ತಮ್ಮ ಅಂದವನ್ನು ಇನ್ನೂ ಅಂದವಾಗಿ ಕಾಣುವಂತೆ ಮಾಡಲು ಕೆಲವರು ಸರ್ಜರಿಗಳ ಮೊರೆಹೋಗಿರುವುದೂ ಉಂಟು. ಒಂದೇ ಮಾತಿನಲ್ಲಿ ಹೇಳುವು ದಾದರೆ, ಸಿನಿಮಾ ಸ್ಟಾರ್ಗೆ ಒಂದರ್ಥದಲ್ಲಿ ಅವರ ಸೌಂದರ್ಯವೇ ಬಂಡವಾಳ ಎನ್ನಬಹುದು.

ಆದರೆ, ಇಲ್ಲೊಬ್ಬಳು ಬಹುಬೇಡಿಕೆಯ ಕಲಾವಿದೆ ಮೇಕಪ್‌ ಇಲ್ಲದ ತನ್ನ ನೈಜ ಫೋಟೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಮುಕ್ತವಾಗಿ ಹಂಚಿಕೊಂಡು, ನೋಡುಗರಿಂದ ಮೆಚ್ಚುಗೆ ಪಡೆದು ಕೊಳ್ಳುತ್ತಾರೆ. ಅಂದ ಹಾಗೆ, ಆ ಹೀರೋಯಿನ್‌ ಬೇರ್ಯಾರೂ ಅಲ್ಲ ಕಾಜಲ್‌ ಅಗರ್‌ವಾಲ್‌.

ಇತ್ತೀಚೆಗೆ ತಮ್ಮ ಮೇಕಪ್‌ ಇಲ್ಲದ ಫೋಟೋ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರುವ ಕಾಜಲ್‌ ಅಗರ್‌ವಾಲ್‌, “ಸೌಂದರ್ಯಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಆ ಉತ್ಪನ್ನಗಳು ನಮ್ಮನ್ನು ಸುಂದರವಾಗಿ ತೋರಿಸುತ್ತಿವೆ. ಮೇಕಪ್‌ ನಮ್ಮ ದೈಹಿಕ ಸೌಂದರ್ಯವನ್ನು ಹೆಚ್ಚಿಸಬಹುದು ಆದರೆ ಇದು ನಮ್ಮ ವ್ಯಕ್ತಿತ್ವವನ್ನು ಹಾಗೂ ನಾವ್ಯಾರು? ಎಂಬುದನ್ನು ಹೇಳಲ್ಲ. ನಾವು ಹೇಗಿದ್ದೇವೋ ಹಾಗೆ ಪ್ರೀತಿಸುವುದೇ ನಮ್ಮ ನಿಜವಾದ ಸೌಂದರ್ಯ’ ಎಂದು ಬರೆದುಕೊಂಡಿದ್ದಾರೆ. ತಮ್ಮ ನಿಜ ಬಣ್ಣ ಹಾಗೂ ಅಂದದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಜಲ್‌ ಅವರ ಈ ಕೆಲಸಕ್ಕೆ ಈಗ ಸೋಷಿಯಲ್‌ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಕಾಜಲ್‌ ಫೋಟೋಗಳು ಅವರ ಬರಹಗಳನ್ನು ಸಿನಿಪ್ರಿಯರು ಶೇರ್‌ ಮಾಡಿ ಭೇಷ್‌ ಎನ್ನುತ್ತಿದ್ದಾರೆ. ನಿಜಕ್ಕೂ ಕಾಜಲ್‌ ಅವರ ಧೈರ್ಯ ಮೆಚ್ಚಬೇಕು, ಸೆಲೆಬ್ರಿಟಿಗಳು ಯಾರೂ ಇಂತಹ ಸಾಹಸಕ್ಕೆ ಕೈಹಾಕುವುದಿಲ್ಲ. ಇದು ಇತರರಿಗೆ ಮಾರ್ಗದರ್ಶನವಾಗಬೇಕು ಎಂದು ಕಾಮೆಂಟ್ಸ್‌ ಬರುತ್ತಿದೆ. ಒಟ್ಟಾರೆ ಸಿನಿಮಾ ಸ್ಟಾರ್ ಅಂದ್ರೆ ತಮ್ಮ ಸೌಂದರ್ಯದಿಂದಲೇ ಅಭಿಮಾನಿಗಳ ಮನಸ್ಸು ಕದ್ದಿರುತ್ತಾರೆ. ಸದಾ ಮೇಕಪ್‌ ಮೂಲಕವೇ ನೋಡಿರುವ ಫ್ಯಾನ್ಸ್‌ಗೆ ಅವರು ಮೇಕಪ್‌ ಇಲ್ಲದೇ ಹೇಗಿರ್ತಾರೆ ಎಂಬುದು ಬಹುತೇಕರಿಗೆ ಗೊತ್ತಿರಲ್ಲ. ಇಂಥ ಸಂದರ್ಭದಲ್ಲಿ ಕಾಜಲ್‌ ನಡೆ ಸೋಷಿಯಲ್‌ ಮೀಡಿಯಾಗಳಲ್ಲಿ ಸಣ್ಣ ಮಟ್ಟಿಗೆ ಸಂಚಲನವನ್ನು ಮೂಡಿಸಿರುವುದಂತೂ ಸುಳ್ಳಲ್ಲ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.