ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!


Team Udayavani, Dec 27, 2020, 1:00 PM IST

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಗಾಲದಲ್ಲಿ ಹೇರಳವಾಗಿ ಸಿಗುವ ನೆಲ್ಲಿಕಾಯಿ ಕೂದಲ ಆರೋಗ್ಯ ಹಾಗೂ ಸೌಂದರ್ಯಕ್ಕೆ ನಿಸರ್ಗವೇ ನೀಡಿದ ಉತ್ತಮ ಬಳುವಳಿ.

ಚಳಿಗಾಲಕ್ಕಾಗಿ ವಿಶೇಷ ಹೇರ್‌ಪ್ಯಾಕ್‌
ಸಾಮಗ್ರಿ: 2 ನೆಲ್ಲಿಕಾಯಿ ತುಂಡುಗಳು, 1/2 ಕಪ್‌ ದಪ್ಪ ಮೊಸರು, 8 ಚಮಚ ಮೆಂತ್ಯೆಕಾಳು, 1/4 ಕಪ್‌ ಕರಿಬೇವಿನೆಲೆ.
ನೆಲ್ಲಿಕಾಯಿ ಕೂದಲಿನ ಬೆಳವಣಿಗೆಗೆ ಸಹಾಯಕ ಹಾಗೂ ಕಾಂತಿವರ್ಧಕ. ಮೊಸರು ಉತ್ತಮ ನೈಸರ್ಗಿಕ ಕಂಡೀಷನರ್‌. ಮೆಂತ್ಯೆ ಹೊಟ್ಟು ನಿವಾರಕ ಹಾಗೂ ಕರಿಬೇವಿನ ಎಲೆ ಕೂದಲು ಉದುರುವುದನ್ನು ನಿವಾರಣೆ ಮಾಡುತ್ತದೆ. ಹೀಗೆ ಈ ಹೇರ್‌ಪ್ಯಾಕ್‌ ಚಳಿಗಾಲದಲ್ಲಿ ವಾರಕ್ಕೊಮ್ಮೆ ಉಪಯೋಗಿಸಬಹುದಾದ ಕೂದಲ ಟಾನಿಕ್‌!

ವಿಧಾನ: ಒಂದು ಬೌಲ್‌ನಲ್ಲಿ ಎಲ್ಲ ಸಾಮಗ್ರಿಗಳನ್ನು ಹಾಕಿ, ರಾತ್ರಿ ಫ್ರಿಜ್‌ನಲ್ಲಿಡಬೇಕು. ಮರುದಿನ ನೀರು ಸೇರಿಸದೇ ಎಲ್ಲವನ್ನು ಅರೆಯಬೇಕು. ಇದನ್ನು ಕೂದಲಿಗೆ ಲೇಪಿಸಿ, 1-2 ಗಂಟೆ ಹಾಗೆಯೇ ಬಿಡಬೇಕು. ತದನಂತರ ಕೂದಲು ತೊಳೆದರೆ ಚಳಿಗಾಲದಲ್ಲಿ ಕಾಂತಿಯುತವಾಗಿ, ಸೊಂಪಾಗಿ ಕೂದಲು ಬೆಳೆಯುತ್ತದೆ.

ನೆಲ್ಲಿ-ಶಿಕಾಕಾಯಿ ಶ್ಯಾಂಪೂ
ಸಾಮಗ್ರಿ:
5 ಚಮಚ ನೆಲ್ಲಿಕಾಯಿ ಹುಡಿ, 5 ಚಮಚ ಶಿಕಾಕಾಯಿ ಹುಡಿ, 5 ಚಮಚ ಅಂಟುವಾಳದ ಹುಡಿ, 1/2 ಚಮಚ ಕಹಿಬೇವಿನ ಎಲೆಯ ಪುಡಿ, 2 ಚಿಟಿಕೆ ದಾಲಿcàನಿ ಹುಡಿ, 3 ಕಪ್‌ ಕುದಿಸಿ ತಣಿಸಿದ ನೀರು. ದುಂಡಗಿನ ತಳದ ಪಾತ್ರೆಯಲ್ಲಿ ಎಲ್ಲ ಸಾಮಗ್ರಿ ತೆಗೆದುಕೊಂಡು 2 ಕಪ್‌ ನೀರಿನೊಂದಿಗೆ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಬಿಸಿ ಮಾಡುವಾಗ ಚೆನ್ನಾಗಿ ಮಿಶ್ರಮಾಡಿ 15 ನಿಮಿಷದ ಬಳಿಕ ಆರಿಸಬೇಕು. ತದನಂತರ ಇದನ್ನು ಸೋಸಬೇಕು. ಆರಿದ ಬಳಿಕ 10-15 ಹನಿ ಲ್ಯಾವೆಂಡರ್‌ ತೈಲ ಅಥವಾ ಶ್ರೀಗಂಧ ತೈಲ ಬೆರೆಸಿದರೆ ಪರಿಮಳಯುಕ್ತವಾದ ಶ್ಯಾಂಪೂ ರೆಡಿ. ಆರಿದ ಬಳಿಕ ಕೂದಲಿಗೆ ಲೇಪಿಸಿದರೆ ಉತ್ತಮ ನೊರೆ ಬರುತ್ತದೆ. ನೆಲ್ಲಿ , ಶಿಕಾಕಾಯಿ, ಕಹಿಬೇವಿನಂಥ ಮೂಲಿಕೆಗಳ ಸಣ್ತೀ ಇರುವುದರಿಂದ ಉತ್ತಮ ಕಂಡೀಷನರ್‌ ಸಹಿತ ಹೌದು. ಜೊತೆಗೆ ಚಳಿಗಾಲದಲ್ಲಿ ಕೂದಲು ಉದುರುವುದನ್ನು ಹಾಗೂ ಹೊಟ್ಟು ಉದುರುವುದನ್ನು ನಿವಾರಣೆ ಮಾಡುತ್ತದೆ. ಈ ಶ್ಯಾಂಪೂ ಲೇಪಿಸಿ 5-10 ನಿಮಿಷದ ಬಳಿಕ ಕೂದಲು ತೊಳೆದರೆ ರೇಶಿಮೆಯ ಮೆರುಗನ್ನು ಕೂದಲು ಪಡೆಯುತ್ತದೆ. ಯಾವುದೇ ರಾಸಾಯನಿಕವಿಲ್ಲದ  ಸುಲಭದಲ್ಲೇ ಮನೆಯಲ್ಲಿ ತಯಾರಿಸಬಹುದಾದ ಈ ಶ್ಯಾಂಪೂವನ್ನು ಫ್ರಿಜ್‌ನಲ್ಲಿ ಫ್ರಿಜ್‌ ಮಾಡಿ, ಐಸ್‌ಕ್ಯೂಬ್‌ನಂತೆ ಸಂಗ್ರಹಿಸಿ, ಬೇಕಾದ ದಿನಗಳಲ್ಲಿ ಬಳಸಬಹುದು.

ಕೂದಲಿಗೆ ರಂಗು ನೀಡುವ ನೆಲ್ಲಿ , ಹೆನ್ನಾ ಹೇರ್‌ ಮಾಸ್ಕ್
5 ಚಮಚ ನೆಲ್ಲಿಕಾಯಿ ಪುಡಿ, 3 ಚಮಚ ಮದರಂಗಿ/ಹೆನ್ನಾ ಪುಡಿ ಹಾಗೂ ಒಂದು ಬೌಲ್‌ನಲ್ಲಿ ನೀರು- ಇವೆಲ್ಲವನ್ನು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಬ್ರಶ್‌ನ ಮೂಲಕ ಕೂದಲಿಗೆ ಲೇಪಿಸಬೇಕು. 2-3 ಗಂಟೆಗಳ ಬಳಿಕ, ನೆಲ್ಲಿ-ಶಿಕಾಕಾಯಿ ಶ್ಯಾಂಪೂ ಬಳಸಿ ಕೂದಲು ತೊಳೆದರೆ, ಕೂದಲಿಗೆ ನೈಸರ್ಗಿಕ ರಂಗು (ಹೇರ್‌ ಡೈ) ಹಚ್ಚಿದಂತೆ ಹೊಳಪು ಬರುತ್ತದೆ. ಜೊತೆಗೆ ಚಳಿಗಾಲದಲ್ಲಿ ಕೂದಲಿಗೆ ಬೇಕಾಗುವ ಅಧಿಕ ಪೋಷಕಾಂಶ ದೊರೆತು ಕೂದಲು ಸ್ನಿಗ್ಧವಾಗಿ ಹೊಳೆಯುತ್ತದೆ. ಈ ಹೇರ್‌ ಮಾಸ್ಕ್ ಬಳಸುವಾಗ ಗಾಢ ಕಪ್ಪು ರಂಗು ಬಯಸುವವರು, ದಪ್ಪವಾದ ಕಾಫಿ ಡಿಕಾಕ್ಷನ್‌ ಈ ಮಿಶ್ರಣಕ್ಕೆ ಬೆರೆಸಿದರೆ, ಕೂದಲು ಕಪ್ಪು ವರ್ಣ ಪಡೆಯುತ್ತದೆ. ಚಹಾದ ಡಿಕಾಕ್ಷನ್‌ ಬೆರೆಸಿದರೆ ಕೂದಲು ಕಂದು ವರ್ಣ ಪಡೆಯುತ್ತದೆ.

ನೆಲ್ಲಿ ಹಾಗೂ ನಿಂಬೆಹಣ್ಣಿನ ಗೃಹೋಪಚಾರ
ಚಳಿಗಾಲದಲ್ಲಿ ತಲೆಯಲ್ಲಿ ತುರಿಕೆ, ಗುಳ್ಳೆ ಹಾಗೂ ಹೊಟ್ಟು ಉದುರುವುದು ಅಧಿಕ. ಜೊತೆಗೆ ಅಧಿಕ ಜಿಡ್ಡಿನಂಶ ಉಳ್ಳ ಕೂದಲಿಗೆ ಕೊಳೆ-ಧೂಳಿನಿಂದ ಕೂಡಿದ ಕೂದಲನ್ನು ಹಾನಿಯಿಲ್ಲದೇ ಶುಭ್ರಗೊಳಿಸಲು ಈ ಹೇರ್‌ಪ್ಯಾಕ್‌ ಪರಿಣಾಮಕಾರಿ.

ಸಾಮಗ್ರಿ: ನೆಲ್ಲಿಕಾಯಿ ರಸ 20 ಚಮಚ, ನಿಂಬೆರಸ 5 ಚಮಚ, ನೀರು 5 ಚಮಚ,  ಮೊಸರು 5 ಚಮಚ- ಈ ಎಲ್ಲಾ ಸಾಮಗ್ರಿಗಳನ್ನು ಒಂದು ಬೌಲ್‌ನಲ್ಲಿ ಬೆರೆಸಿ ಚೆನ್ನಾಗಿ ಕಲಕಿ, ಕೂದಲಿಗೆ ಲೇಪಿಸಿ ಹೇರ್‌ಪ್ಯಾಕ್‌ ಮಾಡಬೇಕು. 2-3 ಗಂಟೆಗಳ ಬಳಿಕ ಬೆಚ್ಚಗೆ ನೀರಿನಿಂದ ಶ್ಯಾಂಪೂ ಬಳಸಿ ಕೂದಲು ತೊಳೆದರೆ ಕೂದಲು ಶುಭ್ರವಾಗಿ ಹೊಳೆಯುತ್ತದೆ. ಬಿಳಿಕೂದಲ ನಿವಾರಣೆಗೆ ನೆಲ್ಲಿ , ತುಳಸೀ ಹೇರ್‌ಪ್ಯಾಕ್‌
5 ಚಮಚ ತುಳಸೀ ಎಲೆಯ ಪೇಸ್ಟ್‌ ತೆಗೆದುಕೊಂಡು 10 ಚಮಚ ನೆಲ್ಲಿಕಾಯಿ ಪುಡಿ ಹಾಗೂ 5 ಚಮಚ ನೀರು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಕೂದಲಿಗೆ ಲೇಪಿಸಿ ಚೆನ್ನಾಗಿ ಮಾಲೀಶು ಮಾಡಬೇಕು. ಈ ಹೇರ್‌ಪ್ಯಾಕನ್ನು 20 ನಿಮಿಷಗಳ ಬಳಿಕ ತೊಳೆದರೆ ಬಿಳಿಕೂದಲನ್ನು ಕ್ರಮೇಣ ಕಪ್ಪಾಗಿಸುತ್ತದೆ. ಬಾಲನೆರೆ (ಮಕ್ಕಳಲ್ಲಿ ಉಂಟಾಗುವ ಬಿಳಿ ಕೂದಲಿನ) ನಿವಾರಣೆಗೂ ಇದು ಉಪಯುಕ್ತ.

ನೆಲ್ಲಿ+ಬಾದಾಮಿ ತೈಲದ ಹೇರ್‌ ಮಸಾಜ್‌
1-8 ಚಮಚ ನೆಲ್ಲಿಕಾಯಿ ಜ್ಯೂಸ್‌ (ರಸ)ದೊಂದಿಗೆ 4 ಚಮಚ ಬಾದಾಮಿ ತೈಲ ಬೆರೆಸಿ ಕೂದಲಿಗೆ ರಾತ್ರಿ ಚೆನ್ನಾಗಿ ಮಾಲೀಶು ಮಾಡಬೇಕು. ಮರುದಿನ ಬೆಳಿಗ್ಗೆ ಬಿಸಿನೀರು, ಶ್ಯಾಂಪೂ ಬಳಸಿ ಕೂದಲು ತೊಳೆಯಬೇಕು. ಇದರಿಂದ ಚಳಿಗಾಲದಲ್ಲಿ ಒಣಗುವ ಕೂದಲು ಸ್ನಿಗ್ಧವಾಗಿ ಹೊಳೆಯುತ್ತದೆ. ಇದು ಉತ್ತಮ ಹೇರ್‌ ಕಂಡೀಷನರ್‌ ಕೂಡ ಹೌದು. ವಾರಕ್ಕೆ 2-3 ಸಾರಿ ಈ ರೀತಿ ಮಾಲೀಶು ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ನೆಲ್ಲಿಪುಡಿ+ಕೊಬ್ಬರಿ ಎಣ್ಣೆ ಹೇರ್‌ಪ್ಯಾಕ್‌
6 ಚಮಚ ಕೊಬ್ಬರಿ ಎಣ್ಣೆ , 3 ಚಮಚ ನೆಲ್ಲಿಕಾಯಿ ಪುಡಿಯನ್ನು ಒಂದು ಬೌಲ್‌ನಲ್ಲಿ ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಕೂದಲಿಗೆ ಲೇಪಿಸಿ, ಚೆನ್ನಾಗಿ ಮಾಲೀಶು ಮಾಡಿ, 3 ಗಂಟೆಯ ಬಳಿಕ ತೊಳೆಯಬೇಕು. ಇದು ಹೇರ್‌ ಫಾಲಿಕಲ್‌ಗ‌ಳಿಗೆ  ಪೋಷಣೆ ನೀಡುತ್ತದೆ, ಕೂದಲು ಕಪ್ಪಾಗಿಸುತ್ತದೆ.

ಚಳಿಗಾಲದಲ್ಲಿ ನಿತ್ಯ 1/2 ಕಪ್‌ ನೀರಿನಲ್ಲಿ 2-3 ಚಮಚ ನೆಲ್ಲಿರಸ ಬೆರೆಸಿ ಸೇವಿಸಿದರೆ ಕೂದಲ ಆರೋಗ್ಯ, ಸೌಂದರ್ಯ ವರ್ಧಿಸುತ್ತದೆ. ನೆಲ್ಲಿಯನ್ನು ಆಹಾರದಲ್ಲಿ ಬಳಸಿದರೂ ಪರಿಣಾಮಕಾರಿ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

ಕೈಗೆ ಕಚ್ಚಿ ವ್ಯಾನ್ ನಿಂದ ಜಿಗಿದು ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ 11ರ ಬಾಲಕ

ಕೈಗೆ ಕಚ್ಚಿ, ವ್ಯಾನ್ ನಿಂದ ಜಿಗಿದು ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ 11ರ ಬಾಲಕ

siddaramaih

ಬಿಜೆಪಿಯವರು ನೀತಿ ಹೇಳುವುದು ಬದ್ನೆಕಾಯಿ ತಿನ್ನೋಕಾ..?: ಸಿದ್ದರಾಮಯ್ಯ ಟೀಕೆ

12

ಗಂಗಾವತಿ: ಬೃಹತ್ ಮರ ತೆರವಿಗೆ ಮೀನಾಮೇಷ; ಅಧಿಕಾರಿಗಳ ನಿರ್ಲಕ್ಷ್ಯ

US woman reunited with family after 51 years

ಮಗುವಾಗಿದ್ದಾಗ ಕಿಡ್ನಾಪ್ ಆಗಿದ್ದಾಕೆ 51 ವರ್ಷಗಳ ಬಳಿಕ ಕುಟುಂಬ ಸೇರಿದರು..

TDY-1

ರಿಷಬ್‌ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಚಿತ್ರಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ

ವಿಡಿಯೋ…: 9 ಗಂಟೆ ತಡವಾಗಿ ಬಂದ ರೈಲನ್ನು ಪ್ರಯಾಣಿಕರು ಬರಮಾಡಿಕೊಂಡದ್ದು ಹೀಗೆ

ವಿಡಿಯೋ…: 9 ಗಂಟೆ ತಡವಾಗಿ ಬಂದ ರೈಲನ್ನು ಪ್ರಯಾಣಿಕರು ಬರಮಾಡಿಕೊಂಡದ್ದು ಹೀಗೆ

ಕೇಂದ್ರ V/s ಸುಪ್ರೀಂಕೋರ್ಟ್: ಕೊಲಿಜಿಯಂ ಶಿಫಾರಸು ಮಾಡಿದ ಸೌರಭ್ ಹೆಸರನ್ನು ತಿರಸ್ಕರಿಸಿದ್ದೇಕೆ?

ಕೇಂದ್ರ V/s ಸುಪ್ರೀಂಕೋರ್ಟ್: ಕೊಲಿಜಿಯಂ ಶಿಫಾರಸು ಮಾಡಿದ ಸೌರಭ್ ಹೆಸರನ್ನು ತಿರಸ್ಕರಿಸಿದ್ದೇಕೆ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡುಗೆಗೆ ಮಾತ್ರ ಬಳಸೋದಲ್ಲ… ಜಾಯಿಕಾಯಿಯಲ್ಲಿದೆ ಹಲವು ಔಷಧೀಯ ಗುಣ…

ಅಡುಗೆಗೆ ಮಾತ್ರ ಬಳಸೋದಲ್ಲ… ಜಾಯಿಕಾಯಿಯಲ್ಲಿದೆ ಹಲವು ಔಷಧೀಯ ಗುಣ…

5

ಮಾದಕ ವಸ್ತುಗಳ ಬಗ್ಗೆ ತಪ್ಪು ನಂಬಿಕೆಗಳು

3

ಸ್ತನ ಕ್ಯಾನ್ಸರ್‌ ಬೇಗನೆ ಪತ್ತೆ ಹಚ್ಚಿದರೆ ಜೀವ ಉಳಿಸಬಹುದು

2

ಕಣ್ಣುಗಳಿಂದ ಆಲಿಸುವುದು ಸಂಜ್ಞಾಭಾಷೆಯ ಬಗ್ಗೆ ತಪ್ಪು ಮಾಹಿತಿ- ಸತ್ಯಾಂಶಗಳು

1-asdasdasda

ಮಣಿಪಾಲ ಕೆಎಂಸಿ: ಅತಿದೊಡ್ಡ ಮೂತ್ರಕೋಶದ ಕಲ್ಲು ಹೊರ ತೆಗೆದ ವೈದ್ಯರ ತಂಡ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಕೈಗೆ ಕಚ್ಚಿ ವ್ಯಾನ್ ನಿಂದ ಜಿಗಿದು ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ 11ರ ಬಾಲಕ

ಕೈಗೆ ಕಚ್ಚಿ, ವ್ಯಾನ್ ನಿಂದ ಜಿಗಿದು ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡ 11ರ ಬಾಲಕ

siddaramaih

ಬಿಜೆಪಿಯವರು ನೀತಿ ಹೇಳುವುದು ಬದ್ನೆಕಾಯಿ ತಿನ್ನೋಕಾ..?: ಸಿದ್ದರಾಮಯ್ಯ ಟೀಕೆ

12

ಗಂಗಾವತಿ: ಬೃಹತ್ ಮರ ತೆರವಿಗೆ ಮೀನಾಮೇಷ; ಅಧಿಕಾರಿಗಳ ನಿರ್ಲಕ್ಷ್ಯ

US woman reunited with family after 51 years

ಮಗುವಾಗಿದ್ದಾಗ ಕಿಡ್ನಾಪ್ ಆಗಿದ್ದಾಕೆ 51 ವರ್ಷಗಳ ಬಳಿಕ ಕುಟುಂಬ ಸೇರಿದರು..

11

ವಚನ ಪಾಲಿಸಿದರೆ ಸಿಎಂಗೆ ಸನ್ಮಾನ; ಮಾತು ತಪ್ಪಿದರೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.