ಅರಳಿನ ಸವಿ

Team Udayavani, Jun 8, 2018, 6:00 AM IST

ತಂಪು ಗುಣದ, ಬೇಗನೆ ಜೀರ್ಣವಾಗುವ ಅರಳಿಗೆ ವಿವಿಧ ತರಕಾರಿಗಳು, ಹಣ್ಣು ಇತ್ಯಾದಿಗಳನ್ನು ಸೇರಿಸಿ ಪಾನಕ, ರಾಯತ ಇತ್ಯಾದಿ ಹಲವಾರು ರೀತಿಯ ಸವಿರುಚಿಗಳನ್ನು ತಯಾರಿಸಬಹುದು.

ಅರಳಿನ ರಾಯತ 
ಬೇಕಾಗುವ ಸಾಮಗ್ರಿ: ಅರಳು-‰ ಅರ್ಧ ಕಪ್‌, ತೆಂಗಿನತುರಿ- ಒಂದು ಕಪ್‌, ಜೀರಿಗೆ- ಕಾಲು ಚಮಚ,  ಸಕ್ಕರೆ- ಒಂದು ಚಮಚ, ಕೆಂಪುಮೆಣಸಿನ ಪುಡಿ- ಅರ್ಧ ಚಮಚ, ಹೆಚ್ಚಿದ ಸೇಬು ಮತ್ತು ಈರುಳ್ಳಿ – ಒಂದು, ಕ್ಯಾರೆಟ್‌ತುರಿ- ನಾಲ್ಕು ಚಮಚ, ಮೊಸರು- ಎರಡು ಕಪ್‌, ಉಪ್ಪು$ ರುಚಿಗೆ.

ತಯಾರಿಸುವ ವಿಧಾನ: ತೆಂಗಿನತುರಿಗೆ ಉಪ್ಪು, ಸಾಸಿವೆ ಸೇರಿಸಿ ನಯವಾಗಿ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ಇದಕ್ಕೆ ಸೇಬು, ಈರುಳ್ಳಿ, ಕ್ಯಾರೆಟ್‌ತುರಿ, ಸಕ್ಕರೆ, ಉಪ್ಪು ಬೇಕಷ್ಟು ಮೊಸರು ಸೇರಿಸಿ ಹದ ಮಾಡಿಕೊಂಡು ಇಂಗಿನ ಒಗ್ಗರಣೆ ನೀಡಿ. ನಂತರ ಸರ್ವ್‌ ಮಾಡುವಾಗ ಮೇಲಿನಿಂದ ಅರಳನ್ನು ಹರಡಿ ಸರ್ವ್‌ ಮಾಡಿ.

ಅರಳು ಬೂಂದಿ ಲಡ್ಡು 
ಬೇಕಾಗುವ ಸಾಮಗ್ರಿ: ಕಡಲೆಹಿಟ್ಟು – ಎರಡು ಕಪ್‌, ಅರಳು- ಒಂದೂವರೆ ಕಪ್‌, ನೆಲಕಡ್ಲೆ ತರಿ- ಅರ್ಧ ಕಪ್‌, ಗೋಡಂಬಿ ತರಿ – ಕಾಲು ಕಪ್‌, ಬೆಲ್ಲ – ಕಾಲು ಕೆ.ಜಿ., ಏಲಕ್ಕಿ ಸುವಾಸನೆಗೆ.

ತಯಾರಿಸುವ ವಿಧಾನ: ಒಂದು ಕಪ್‌ ಕಡ್ಲೆಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಲಸಿ ಸೇಮೆ ಅಚ್ಚಿನಲ್ಲಿ ಕಾದ ಎಣ್ಣೆಗೆ ಒತ್ತಿ ಕರಿಯಿರಿ. ನಂತರ ಉಳಿದ ಕಡ್ಲೆಹಿಟ್ಟನ್ನು ದೋಸೆಹಿಟ್ಟಿನ ಹದಕ್ಕೆ ಕಲಸಿ ಬೂಂದಿ ತಟ್ಟೆಯಿಂದ ಕಾದ ಎಣ್ಣೆಗೆ ಹಾಕಿ ಬೂಂದಿಕಾಳುಗಳನ್ನು ಕರಿದು ತೆಗೆಯಿರಿ. ನಂತರ ಬೆಲ್ಲಕ್ಕೆ ಸ್ವಲ್ಪ$ ನೀರು ಸೇರಿಸಿ ಬಾಣಲೆಯಲ್ಲಿ ಪಾಕಕ್ಕೆ ಇಡಿ. ನೂಲು ಪಾಕವಾದಾಗ  ಪಾಕವನ್ನು ನೀರಿಗೆ ಹಾಕಿದ ತಕ್ಷಣ ಗಟ್ಟಿಯಾದ್ರೆ ಸಾಕು  ಒಲೆಯಿಂದ ಇಳಿಸಿ ಪುಡಿಮಾಡಿದ ಅರಳು, ಗೋಡಂಬಿ ಮತ್ತು ನೆಲಕಡ್ಲೆ ತರಿ, ಬೂಂದಿಕಾಳು, ಸೇಮೆ, ಏಲಕ್ಕಿಪುಡಿ ಇತ್ಯಾದಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಬೇಕು.

ಅರಳಿನ ಪಾನಕ 
 ಬೇಕಾಗುವ ಸಾಮಗ್ರಿ:
ಅರಳು- ಆರು ಚಮಚ, ನೆನೆಸಿದ ಖರ್ಜೂರ- ಎರಡು, ನೆನೆಸಿದ ಒಣದ್ರಾಕ್ಷಿ- ಹತ್ತು, ಜೇನುತುಪ್ಪ- ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ : ಮಿಕ್ಸಿಜಾರಿಗೆ ಅರಳು, ಒಣದ್ರಾಕ್ಷಿ ಮತ್ತು ಖರ್ಜೂರ ಹಾಕಿ, ಇದಕ್ಕೆ ಸ್ವಲ್ಪ$ ನೀರು ಸೇರಿಸಿ, ನುಣ್ಣಗೆ ರುಬ್ಬಿ, ಮಿಕ್ಸಿಂಗ್‌ ಬೌಲ್‌ಗೆ ಹಾಕಿ ಬೇಕಷ್ಟು ನೀರು ಹಾಗೂ ಜೇನುತುಪ್ಪ ಸೇರಿಸಿ ಹದಮಾಡಿಕೊಂಡು ಸರ್ವ್‌ ಮಾಡಬಹುದು.

ಅರಳಿನ ಸಂಡಿಗೆ 
ಬೇಕಾಗುವ ಸಾಮಗ್ರಿ:
ಅರಳು- ಎರಡು ಕಪ್‌, ಸಬ್ಬಕ್ಕಿ- ಎರಡು ಕಪ್‌, ಹಸಿಮೆಣಸು- ನಾಲ್ಕು, ಇಂಗು- ಸುವಾಸನೆಗಾಗಿ, ಉಪ್ಪು ರುಚಿಗೆ ಬೇಕಷ್ಟು. 

ತಯಾರಿಸುವ ವಿಧಾನ: ಸಬ್ಬಕ್ಕಿಯನ್ನು ತೊಳೆದು ಹಿಂದಿನ ದಿನ ರಾತ್ರಿ ನನೆಯಲು ಹಾಕಿ. ಮರುದಿನ ಇದಕ್ಕೆ ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು. ನಂತರ ಹತ್ತು ನಿಮಿಷ ನನೆಸಿದ ಅರಳಿಂದ ನೀರು ಚೆನ್ನಾಗಿ ತೆಗೆದು, ಬೆಂದ ಸಬ್ಬಕ್ಕಿಗೆ ಸೇರಿಸಿ. ನಂತರ ಹಸಿಮೆಣಸು, ಉಪ್ಪು$ ಮತ್ತು ಇಂಗನ್ನು ರುಬ್ಬಿಕೊಂಡು ಇದಕ್ಕೆ ಸೇರಿಸಿ. ಚೆನ್ನಾಗಿಮಿಶ್ರಮಾಡಿ. ದಪ್ಪಪ್ಲಾಸ್ಟಿಕ್‌ ಹಾಳೆಯಲ್ಲಿ ಸಂಡಿಗೆ ಬಿಟ್ಟು ನಾಲ್ಕು ಬಿಸಿಲು ಒಣಗಿಸಿದರೆ ಸಂಡಿಗೆ ಸಿದ್ಧ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಹಿಳೆಯರ ಪೈಕಿ ಅನೇಕರು ಹೊಟ್ಟೆತುಂಬಾ ನೀರು ಕುಡಿಯುವುದು ಕಡಿಮೆ. ಅದರಲ್ಲಿಯೂ ಮನೆಯ ಹೊರಗೆ ಕೆಲಸ ಮಾಡುವವರು, ಪ್ರಯಾಣ ಮಾಡುವವರು, ಕಾರ್ಮಿಕ ಮಹಿಳೆಯರು ನೀರು ಕುಡಿಯಲು...

  • ತುಳಸೀ ಗೌಡರ ಬದುಕಿನಲ್ಲಿ ತೀವ್ರ ನೋವಿನ ಹಾದಿ ಎದುರಾದಾಗ ಅವರಿಗೆ ನೆರಳಾದುದು ಹಸಿರು ಗಿಡಗಳು. ನಿಸ್ವಾರ್ಥವಾಗಿ ಹಸಿರು ಸಿರಿಯನ್ನು ಪ್ರೀತಿಸಿದ ಅವರು ನಿಜಕ್ಕೂ...

  • ಹದಿನೇಳು ವರ್ಷದ ಹಿಂದೆ ಮದುವೆಯಾಗಿ ಈ ಬೃಹತ್‌ ಮನೆಯೊಳಗೆ ಕಾಲಿಟ್ಟಾಗ ನನಗೆ ವಾಸ್ತುಶಾಸ್ತ್ರದ ಬಗ್ಗೆ ತಿಳಿವಳಿಕೆಯೇ ಇರಲಿಲ್ಲ. ಅತ್ತೆ ಸರಸ್ವತಿ ಅವರಾಗಲಿ, ಮಾವ...

  • ಉಡುಪಿ -ಕುಂದಾಪುರ ನಡುವೆ ಓಡಾಡುವ ಎಕ್ಸ್‌ಪ್ರೆಸ್‌ ಬಸ್‌ "ಭಾರತಿ'ಯಲ್ಲಿ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ರೇಖಾ, ಮೂಲತಃ ಬಾಗಲಕೋಟೆಯವರು. ಆದರೆ, ಸುಮಾರು...

  • ನಂಗಿದು ಬೇಡ, ಬೇರೆ ಮಾಡಿಕೊಡು'' ಎಂದು ರಚ್ಚೆ ಹಿಡಿದು ಅಳುತ್ತ ನೆಲದಲ್ಲಿ ಹೊರಳಾಡುತ್ತಿದ್ದ ಹತ್ತು ವರ್ಷದ ಮೊಮ್ಮಗನ ಹಠಕ್ಕೆ ಮಣಿದು, ನೋಯುತ್ತಿದ್ದ ತನ್ನ ಮೊಣಕಾಲುಗಳನ್ನು...

ಹೊಸ ಸೇರ್ಪಡೆ