ಆಧುನೀಕತೆ-ಸಾಂಪ್ರದಾಯಿಕತೆಗಳ ಮಿಶ್ರಣ: ಜಾಕೆಟ್‌ ಬ್ಲೌಸ್‌


Team Udayavani, Apr 14, 2017, 3:50 AM IST

14-SAMPADA-3.jpg

ಜಾಕೆಟ್‌, ವೇಸ್ಟ್‌ಕೋಟ್‌, ಶ್ರಗ್‌ ಯಾವೆಲ್ಲಾ ಡ್ರೆಸ್‌ಗಳ ಮೇಲೆ ತೊಡುತ್ತೀರಾ? ಡೆನಿಮ್‌, ಟೀಶರ್ಟ್‌, ಶಾರ್ಟ್‌ ಡ್ರೆಸ್‌, ಕುರ್ತಾ? ಹೌದು, ಇದೆಲ್ಲಾ ಡ್ರೆಸ್‌ಗಳ ಮೇಲೂ ನಿಮ್ಮಿಷ್ಟದ ವೇಸ್ಟ್‌ಕೋಟ್‌ ಅಥವಾ ಜಾಕೆಟ್‌ ಧರಿಸಿರುತ್ತೀರಾ? ಹಾಗೆಂದ ಮೇಲೆ ಸೀರೆ ಮೇಲೆ ಯಾಕಿಲ್ಲ? ಸೀರೆಗೆ ಜಾಕೆಟ್‌ ತೊಡುವುದಾ?! ಎಂದು ಹುಬ್ಬೇರಿಸಬೇಡಿ. ಯಾವುದಾವುದೋ ಡ್ರೆಸ್‌ ಮೇಲೆ ಜಾಕೆಟ್‌ ಹೊಂದುತ್ತದೆ ಎಂದಾದರೆ ಹೆಣ್ಣನ್ನು ಇನ್ನಷ್ಟು ಸುಂದರವಾಗಿಸುವ ಸೀರೆ ಉಟ್ಟಾಗ ಏಕೆ ಜಾಕೆಟ್‌ ಧರಿಸಬಾರದು. ಸಾಂಪ್ರದಾಯಿಕ ಸೀರೆಗೂ ಮಾಡರ್ನ್ ಜಾಕೆಟ್‌ಗೂ ಎಲ್ಲಿಯ ಸಂಬಂಧ. ಜಾಕೆಟ್‌ ತೊಟ್ಟರೆ ಸೀರೆಯ ಅಂದ ಕೆಡುವುದಿಲ್ಲವೇ ಎಂದು ಕೇಳುತ್ತೀರಾ? ಇಲ್ಲ, ಸೀರೆ ಉಟ್ಟಾಗ ಧರಿಸಲೆಂದೇ ವಿಶೇಷ ವಿನ್ಯಾಸಗಳ ಜಾಕೆಟ್‌ಗಳು ಈಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ನಿಮ್ಮ ಸೀರೆಗೆ ತಕ್ಕಂತಹ ವಿನ್ಯಾಸದ ಜಾಕೆಟ್‌ ತೊಟ್ಟು ಸೀರೆಯ ಚಂದ ಹೆಚ್ಚಿಸಬಹುದು. ಸೀರೆಗೊಪ್ಪುವ ಜಾಕೆಟ್‌ ಅಷ್ಟೇ ಅಲ್ಲ ಜಾಕೆಟನ್ನೇ ಹೋಲುವ ಬ್ಲೌಸ್‌ ಕೂಡ ತೊಟ್ಟು ಖುಷಿಪಡಬಹುದು. ಸೀರೆಯಲ್ಲೂ ಟ್ರೆಂಡಿಯಾಗಿ ಕಾಣಬಹುದು. ಜಾಕೆಟ್‌ಗಳನ್ನು ಮ್ಯಾಚ್‌ ಮಾಡುವ ನಾಲ್ಕು ಬಗೆಗಳು ಇಲ್ಲಿವೆ.

ಜಾಕೆಟ್‌ ಸ್ಟೈಲ್‌ ಸ್ಯಾರಿ ಬ್ಲೌಸ್‌
ದಿನಕ್ಕೊಂದು ಫ್ಯಾಷನ್‌ ಪರಿಚಯಿಸುವ ಸೋನಂ ಕಪೂರ್‌, ಏನು ತೊಟ್ಟರೂ ಚೆಂದ ಕಾಣುವ ಜಾಕ್ವೆಲಿನ್‌ ಫೆರ್ನಾಂಡೀಸ್‌ ಸೇರಿ ಹಲವು ಬಾಲಿವುಡ್‌ ತಾರೆಯರು ಈ ಜಾಕೆಟ್‌ ಸ್ಟೈಲ್‌ ಬ್ಲೌಸ್‌ ತೊಟ್ಟು ಬ್ಲೌಸ್‌ಗೊಂದು ಐಡೆಂಟಿಟಿಯನ್ನು ಈಗಾಗಲೇ ನೀಡಿದ್ದಾರೆ. ಶಾರ್ಟ್‌ ಕುರ್ತಿಯಷ್ಟು ಉದ್ದ ಈ ರವಿಕೆ ಇರುತ್ತದೆ. ಎರಡೂ ಬದಿಗಳಲ್ಲಿ ಕುರ್ತಿಗೆ ಇರುವಂತೆಯೇ ಸೈಡ್‌ ಸ್ಲಿಟ್‌ ಇರುತ್ತದೆ. ಕಾಲರ್‌ ನೆಕ್‌, ಉದ್ದ ತೋಳು ಈ ವಿನ್ಯಾಸದ ರವಿಕೆಗೆ ಚಂದವಾಗಿ ಒಪ್ಪುತ್ತದೆ. ಈ ರವಿಕೆ ಮೇಲೆ ಸೀರೆಯನ್ನು ಯಾವತ್ತೂ ಉಡುವಂತೆಯೇ ಉಡಬೇಕು. ರವಿಕೆ ಇನ್ನೂ ಚೆಂದವಾಗಿ ತೋರಬೇಕೆಂದರೆ ಉತ್ತರ ಭಾರತೀಯರ ಹಾಗೆ ಸೆರಗು ಮುಂಭಾಗ ಬರುವಂತೆ ಸೀರೆ ಉಡಿ. ಸದ್ಯಕ್ಕಂತೂ ಇದು ಭಾರಿ ಟ್ರೆಂಡಿಂಗ್‌ನಲ್ಲಿದೆ. ವಿಶೇಷವಾಗಿ ಯುವತಿಯರಿಗೆ ಕಾಲೇಜು ಸಮಾರಂಭ, ಪಾರ್ಟಿಗಳಿಗೆ ಹೇಳಿಮಾಡಿಸಿದ ಮಾಡರ್ನ್- ಟ್ರೆಡಿಷನಲ್‌ ಕಾಂಬೊ ಇದು.

ಜಾಕೆಟ್‌ ಬ್ಲೌಸ್‌ ವಿತ್‌ ಧೋತಿ ಸ್ಯಾರಿ
ಧೋತಿ ಸ್ಯಾರಿ ಗೊತ್ತಿದೆಯಲ್ಲಾ, ನಮ್ಮ ಹಿರಿಯರು ಕಚ್ಚೆ ಸೀರೆ ಅಂತ ಧರಿಸುತ್ತಿದ್ದ ಸೀರೆಯ ಸ್ವಲ್ಪ ಮಟ್ಟಿನ ರೂಪಾಂತರ ಇದು. ಈ ಸೀರೆ ಜಾಕೆಟ್‌ ಬ್ಲೌಸ್‌ ಹೇಳಿ ಮಾಡಿಸಿದ ಜೋಡಿ. ಧೋತಿ ಸೀರೆಗಾದರೆ ಬ್ಲೌಸ್‌ ಸ್ವಲ್ಪ ಗಿಡ್ಡ ಇರಲಿ. ಸೊಂಟದವರೆಗೂ ಬಂದರೆ ಸಾಕು. ಉದ್ದನೆಯ ಬ್ಲೌಸ್‌ ಈ ರೀತಿಯ ಸೀರೆಗೊಪ್ಪುವುದಿಲ್ಲ.

ಸ್ಯಾರಿ ವಿತ್‌ ಶಾರ್ಟ್‌ ಜಾಕೆಟ್‌
ನಿಮ್ಮಿಷ್ಟದ ಸೀರೆ ಉಡಿ, ಅದಕ್ಕೊಪ್ಪುವ ರವಿಕೆಯನ್ನು ತೊಡಿ. ಅದರ ಮೇಲೆ ವೇಸ್ಟ್‌ಕೋಟ್‌ ರೀತಿಯ ಡಿಸೈನರ್‌ ಜಾಕೆಟ್‌ ತೊಡಿ. ಜಾಕೆಟ್‌ ಸೀರೆಗೆ ಒಪ್ಪುವಂತಿರಲಿ. ಕುಂದನ್‌, ಜರ್ದೋಸಿ ಬಳಸಿ ಕಸೂತಿ ಮಾಡಿರುವ ಜಾಕೆಟ್‌ಗಳು ಇನ್ನೂ ಚೆಂದ ಕಾಣಿಸುತ್ತವೆ. ಸೆರಗು ಮೇಲೆ ಬರುವಂತೆ ಅಥವಾ ಸೆರಗಿನ ಮೇಲೆ ಜಾಕೆಟ್‌ ಬರುವಂತೆ ಹೇಗೆ ತೊಟ್ಟರೂ ಸರಿಯೆ. ಮಧ್ಯವಯಸ್ಕ ಮಹಿಳೆಯರಿಗೆ ಇದು ಹೆಚ್ಚು ಒಪ್ಪುತ್ತದೆ.

ಡಿಸೈನರ್‌ ಜಾಕೆಟ್‌ ವಿತ್‌ ಪ್ಲೇನ್‌ ಸ್ಯಾರಿ
ತುಂಬಾ ಆಕರ್ಷಕವಾಗಿ ಕಾಣುವ ಕಾಂಬಿನೇಷನ್‌ ಇದು. ಸಾದಾ ಸೀರೆಗೆ ಕಾಂಟ್ರಾಸ್ಟ್‌ ಬಣ್ಣದ ಸ್ಲಿàವ್‌ಲೆಸ್‌ ಜಾಕೆಟ್‌ ಧರಿಸುವುದೇ ಈಗಿನ ಫ್ಯಾಷನ್‌. ಸೀರೆಗೆ ತೊಡುವ ರವಿಕೆ ಕೂಡ ಸ್ಲಿವ್‌ಲೆಸ್‌ ಇರಬೇಕು. ಆಗಮಾತ್ರ ಈ ಕಾಂಬಿನೇಷನ್‌ ಎದ್ದು ಕಾಣುತ್ತದೆ. ಈ ಕಾಂಬಿನೇಷನ್‌ ನೀವು ಪ್ರಯತ್ನಿಸುವಾಗ ಒಂದಷ್ಟು ಅಂಶಗಳ ಬಗ್ಗೆ ಗಮನವಿರಲಿ. ಸೀರೆ ಆದಷ್ಟು ಸರಳವಾಗಿರಲಿ. ಹೆಚ್ಚೆಂದರೆ ಚಿಕ್ಕ ಜರಿ ಅಂಚು ಇರಲಿ. ಜಾಕೆಟ್‌ ಆದಷ್ಟೂ ಅದ್ದೂರಿಯಾಗಿರಲಿ. ಕಸೂತಿ, ಮಿರರ್‌ ವರ್ಕ್‌ ಇರುವ ಜಾಕೆಟ್‌ಗಳು ಚೆನ್ನಾಗಿ ಕಾಣುತ್ತವೆ. ಆದಷ್ಟು ಸೀರೆ ಮತ್ತು ಜಾಕೆಟ್‌ ವಿರುದ್ಧ ಬಣ್ಣದ್ದಾಗಿರಲಿ. ಇದು ಅತ್ಯುತ್ತಮ ಪಾರ್ಟಿವೇರ್‌ ಕೂಡ ಆಗುತ್ತದೆ.

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.