ದುರ್ಗದ ಮೊಳಕಾಲ್ಮೂರು ಸೀರೆ

Team Udayavani, Nov 8, 2019, 4:00 AM IST

ಮೊಳಕಾಲ್ಮೂರು ಎಂಬ ಚಿತ್ರದುರ್ಗದ ಚಿಕ್ಕ ಪ್ರದೇಶದಲ್ಲಿ ತಯಾರಾಗುವ ಈ ರೇಶಿಮೆ ಸೀರೆ, ತನ್ನ ವಿಶಿಷ್ಟ ವಿನ್ಯಾಸಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದೆಲ್ಲೆಡೆ ಜನಪ್ರಿಯತೆ ಪಡೆದಿದೆ.

ದೇವಾಲಯದ ಪ್ರಾದೇಶಿಕ ವೈಭವವನ್ನು ತೋರ್ಪಡಿಸುವಂತೆ ಈ ಸೀರೆಯ ವಿನ್ಯಾಸವನ್ನು ಮಾಡಿರುವುದು ಅಲ್ಲಿನ ನೇಯ್ಗೆಗಾರರ ವಿಶೇಷತೆ. ಈ ಭಾಗದಲ್ಲಿ 440ರಷ್ಟು ಕೈಮಗ್ಗದ ರೇಶಿಮೆ ಸೀರೆಯ ತಯಾರಕರಿದ್ದು, ಈ ಪ್ರದೇಶದ ಮುಖ್ಯ ವ್ಯವಹಾರ ಉದ್ದಿಮೆಯಾಗಿ ಮೊಳಕಾಲ್ಮೂರು ಸೀರೆ ಜನಪ್ರಿಯತೆ ಪಡೆದಿದೆ.

ಇತ್ತೀಚೆಗೆ ಜಿಯೋಗ್ರಾಫಿಕ್‌ ಇಂಡೆಕ್ಸ್‌ (ಭೌಗೋಳಿಕ ಸೂಚ್ಯಂಕ) ಪಡೆದ ಮೊಳಕಾಲ್ಮೂರು ಸೀರೆಯನ್ನು ಚರಿತ್ರೆಯ ಪುಟಗಳಲ್ಲಿ ವೀಕ್ಷಿಸಿದರೆ, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಅವರ ಕಾಲದಲ್ಲಿ ವಿಶೇಷ ಪ್ರೋತ್ಸಾಹ ಪಡೆದು, ಬೆಳೆದು ಬಂದಿರುವುದು ಕಂಡುಬರುತ್ತದೆ.

ಹೆಚ್ಚಿನ ಭಾರತೀಯ ಸಾಂಪ್ರದಾಯಿಕ ಸೀರೆಯ ವಿನ್ಯಾಸಗಳಲ್ಲಿ ನಿಸರ್ಗದಿಂದ ಪ್ರೇರಣೆ ಪಡೆದು ಚಿತ್ರಿತವಾಗಿರುವ ವಿನ್ಯಾಸಗಳಲ್ಲಿ ಅಧಿಕವಾಗಿ ಕಂಡು ಬರುತ್ತದೆ. ಸಂಸ್ಕೃತಿ, ಉಡುಗೆ, ತೊಡುಗೆ, ಸಂಪ್ರದಾಯಗಳು ಪರಸ್ಪರ ಒಂದಕ್ಕೊಂದು ತಳಕು ಹಾಕಿ ಕೊಂಡಿ ರುವುದು, ಪ್ರಭಾವ ಬೀರುವುದೂ- ಭಾರತೀಯತೆಯ ವೈಶಿಷ್ಟéತೆಯೇ ಹೌದು.

ನಿಸರ್ಗದಲ್ಲಿ ವಿವಿಧ ವಿನ್ಯಾಸಗಳಲ್ಲಿ ವೈವಿಧ್ಯಮಯ ರಂಗಿನ ಸಂಯೋಜನೆಯೊಂದಿಗೆ ಕಂಡುಬರುವ ಹೂವು, ಎಲೆ, ಮರ, ಗಿಡ ಇತ್ಯಾದಿಗಳು ಮೊಳಕಾಲ್ಮೂರು ಸೀರೆಯ ಅಂಚಿನಲ್ಲಿ ಅಂದದ ರೂಪ ಪಡೆಯುತ್ತವೆ.

ಉದ್ದ ಅಂಚನ್ನು ಹೊಂದಿರುವ, ವಿವಿಧ ರಂಗಿನ ವಿನ್ಯಾಸದಲ್ಲಿ ಹೂವು, ಪ್ರಾಣಿ, ಪಕ್ಷಿ, ಹಣ್ಣುಗಳ ಚಿತ್ತಾರದಿಂದ ಕಂಗೊಳಿಸುವ ಮೊಳಕಾಲ್ಮೂರು ರೇಶಿಮೆ ಸೀರೆ ಸಾಂಪ್ರದಾಯಿಕ ಮೆರುಗನ್ನು ಹೊಂದಿರುವುದು ಮಹತ್ವಪೂರ್ಣ.
ಚಿಕ್ಕ ಅಂಚನ್ನು ಹೊಂದಿರುವ ಸೀರೆಗಳೂ ಜನಪ್ರಿಯತೆ ಪಡೆದಿದ್ದು; ನವಿಲು, ಮಾವಿನಹಣ್ಣು ಹಾಗೂ ಬುಗುಡಿಯಾಕೃತಿಯ ವಿನ್ಯಾಸವನ್ನು ಹೊಂದಿರುತ್ತದೆ.
“ಮಹಾರಾಜಾ ನವಿಲಿನ ವಿನ್ಯಾಸ’ವನ್ನೇ ಮುಖ್ಯವಾಗಿ ಹೊಂದಿರುವ ಶುದ್ಧ ಮಲಬರಿ ರೇಶಿಮೆ ಸೀರೆಯು ಉತ್ಕೃಷ್ಟ ಗುಣಮಟ್ಟವನ್ನು ಹೊಂದಿದೆ.

“ಬುಟ್ಟಾ’ ಸೀರೆಗಳೂ ಮೊಳಕಾಲ್ಮೂರು ಸೀರೆಯ ಒಂದು ವಿಶೇಷತೆ. ಪಾರಂಪರಿಕ ಹಾಗೂ ಕಂಪ್ಯೂಟರ್‌ಗಳಿಂದಲೂ ವಿನ್ಯಾಸ ಮಾಡಲಾಗುತ್ತಿರುವ ಇಂದಿನ ಮೊಳಕಾಲ್ಮೂರು ಬುಟ್ಟಾ ಸೀರೆಗಳು 2 ಅಂಚನ್ನೂ ಹೊಂದಿರುತ್ತದೆ. ಬುಟ್ಟಾ ಸೀರೆಗಳನ್ನು ಎರಡು ವೈವಿಧ್ಯಮಯ ರಂಗಿನ, ಕಾಂಟ್ರಾಸ್ಟ್‌ ಬಣ್ಣದ ನೂಲಿನಿಂದ ತಯಾರಿಸಲಾಗುತ್ತದೆ.

ಮೊಳಕಾಲ್ಮೂರು ಸೀರೆಗಳನ್ನು ವಧುವಿಗಾಗಿಯೂ ತಯಾರಿಸಲಾಗುತ್ತದೆ. ಇದು ದುಬಾರಿ ವೆಚ್ಚದ ಸೀರೆಯಾಗಿದ್ದು ಉತ್ಕೃಷ್ಟ ಗುಣಮಟ್ಟದ ಜರಿಯನ್ನು ಬಳಸಿ ತಯಾರಿಸಲಾಗುತ್ತದೆ. ಅಂತೆಯೇ ವಧುವಿನ ಅಲಂಕಾರಕ್ಕೆ ಇದು ವೈಭವದ ಮೆರುಗನ್ನು ನೀಡುತ್ತದೆ.

ಇಂದು ಮೊಳಕಾಲ್ಮೂರು ಸೀರೆ ಅಧಿಕವಾಗಿ ಬಳಕೆಯಾಗುವ ಪ್ರದೇಶಗಳೆಂದರೆ ಮೈಸೂರು, ಬೆಂಗಳೂರು, ಶಿವಮೊಗ್ಗ ಹಾಗೂ ಗುಲ್ಬರ್ಗಾ. ಇಲ್ಲಿ ಈ ಸಾಂಪ್ರದಾಯಿಕ ತೊಡುಗೆಯು ಮಹತ್ವಪೂರ್ಣವಾಗಿದೆ.

ಈ ಸೀರೆಯು ಭಾರತದಾದ್ಯಂತ ಮಾರುಕಟ್ಟೆ ಹೊಂದಿದ್ದುದು ಕೂಡ ಇನ್ನೊಂದು ವಿಶೇಷ. ಅಮೆರಿಕ ಹಾಗೂ ಆಸ್ಟ್ರೇಲಿಯಾಗಳಿಗೆ ಅಧಿಕವಾಗಿ ರಫ್ತಾಗುವ ಈ ಸೀರೆ ಆಧುನಿಕತೆಗೆ ತಕ್ಕಂತೆ ಸಾಂಪ್ರದಾಯಿಕತೆಯ ಜೊತೆಗೆ ಹೊಸತನ್ನು ಅಳವಡಿಸಿಕೊಂಡು ಆಕರ್ಷಕತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.

ಇಂದು ಆನ್‌ಲೈನ್‌ ಸೌಲಭ್ಯಗಳಿಂದಾಗಿ ವಿಶ್ವಾದ್ಯಂತ ಎಲ್ಲೆಡೆಯೂ ಬೇಡಿಕೆಗೆ ತಕ್ಕಂತೆ ಮೊಳಕಾಲ್ಮೂರು ಸೀರೆಯ ಪೂರೈಕೆಯು ಸಾಧ್ಯವಾಗಿದೆ.

ಈ ಒಂದು ಕಲಾತ್ಮಕ ಹಾಗೂ ಸಾಂಪ್ರದಾಯಿಕ ಸೀರೆಯ ಪಾರಂಪರಿಕ ಮಹತ್ವವನ್ನು ಉಳಿಸಿ ಬೆಳೆಸಲು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಕೈ ಜೋಡಿಸಿವೆ.
ಈ ಸೀರೆಯನ್ನು ತೊಡುವಾಗ, ಉಡುವ ಸೀರೆಗೆ ಸಾಂಪ್ರದಾಯಿಕ ಆಭರಣಗಳು ವಿಶೇಷ “ಲುಕ್‌’ ನೀಡುತ್ತವೆ. ಕತ್ತಿನ ಹಾರ, ಕಿವಿಯೋಲೆ ಹಾಗೂ ಸೊಂಟದ ಪಟ್ಟಿ ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಈ ಸೀರೆಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ.

ಮೊಳಕಾಲ್ಮೂರು ಸೀರೆಯನ್ನು ಅಧಿಕ ಸಮಯ ಬಾಳಿಕೆ ಬರುವಂತೆ ಜತನದಿಂದ ಕಾಪಾಡಲು ಡ್ರೈಕ್ಲೀನ್‌ ವಿಧಾನ ಬಳಸಿದರೆ ಉತ್ತಮ. ಮಸ್ಲಿನ್‌ ಬಟ್ಟೆಯಲ್ಲಿ ಸುತ್ತಿ, ತೇವಾಂಶ ಅಧಿಕವಿಲ್ಲದ ಹಾಗೂ ಅಧಿಕ ಉಷ್ಣತೆ ಇಲ್ಲದ ಪ್ರದೇಶದಲ್ಲಿ ಇರಿಸಿದರೆ ದೀರ್ಘ‌ಕಾಲವಾದರೂ, ರೇಶಿಮೆಯ ಹೊಳಪು, ನುಣುಪು ಹಾಗೂ ಮೆರುಗು ಮಾಸುವುದಿಲ್ಲ.

ಹೀಗೆ ಕರುನಾಡಿನ ಸಾಂಪ್ರದಾಯಿಕ ಸೀರೆಯಾಗಿರುವ ಮೊಳಕಾಲ್ಮೂರು ಸೀರೆ ತನ್ನ ವಿಶಿಷ್ಟತೆಯೊಂದಿಗೆ ಜನಪ್ರಿಯವಾಗಿದೆ.

ಅನುರಾಧಾ ಕಾಮತ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೊನ್ನೆ ಗೆಳತಿಯ ಮನೆಗೆ ಹೋಗಿದ್ದೆ. ಅವಳ ಮನೆಗೆ ಹೋಗುವ ದಾರಿಯಲ್ಲಿ ರಸ್ತೆ ಬದಿಯಲ್ಲಿ ಒಂದು ದೊಡ್ಡ ಮರವಿತ್ತು. ಬಿಸಿಲಿನಿಂದ ನಡೆದು ಹೋಗುವವರಿಗೆಲ್ಲ ಆ ಮರ ನೆರಳು...

  • "ಎರಡು ಜಡೆ ಸೇರಿದರೆ ಜಗಳ' ಎನ್ನುತ್ತಾರೆ. ಇದು ಸತ್ಯಕ್ಕೆ ದೂರವಾದ ಮಾತು. ಶಾಲೆಯಲ್ಲಾಗಲಿ, ಕಾಲೇಜಿನಲ್ಲಾಗಲಿ, ಗೆಳತಿಯರಿಬ್ಬರು ಆತ್ಮೀಯರಾದಷ್ಟು ಗೆಳೆಯರಿಬ್ಬರು...

  • ಕ್ಯಾಪ್ಸಿಕಮ್‌, ದೊಣ್ಣೆಮೆಣಸು, ದಪ್ಪಮೆಣಸು ಇತ್ಯಾದಿ ಹೆಸರುಗಳಿಂದ ಕರೆಯುವ ಈ ಮೆಣಸಿನಕಾಯಿಯಿಂದ ಹಲವಾರು ವೈವಿಧ್ಯಗಳನ್ನು ತಯಾರಿಸಬಹುದು. ಕ್ಯಾಪ್ಸಿಕಮ್‌...

  • ಇತ್ತೀಚೆಗೆ ನಟಿ ಅನುಷ್ಕಾ ಶೆಟ್ಟಿ ಯಾವ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲವಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದ ಅಭಿಮಾನಿಗಳ ಮುಂದೆ ಅನುಷ್ಕಾ ಶೆಟ್ಟಿ...

  • ಹೆಣ್ಣು ಎಂದರೆ ಮಮತೆಯ ಒಡಲು, ಕರುಣೆಯ ಕಡಲು, ತ್ಯಾಗದ ಪ್ರತೀಕ ಎಂದೆಲ್ಲಾ ಹೇಳುತ್ತಾರೆ. ಅಷ್ಟೇ ಅಲ್ಲ, ಭೂಮಿ ತೂಕದ ಹೆಣ್ಣು ಎಂದು ಹೇಳು ವು ದರ ಮೂಲಕ ಹೆಣ್ಣು ಎಂದರೆ...

ಹೊಸ ಸೇರ್ಪಡೆ