ಸಿನೆಮಾ ಮತ್ತು ವಾಸ್ತವ ಬದುಕು


Team Udayavani, Dec 29, 2017, 6:00 AM IST

Hudugiya-chinthane.jpg

ಕಥೆಗಳಲ್ಲಿ , ಸಿನೆಮಾ-ನಾಟಕಗಳಲ್ಲಿ ಹೆಣ್ಣುಮಕ್ಕಳು ವೀರಾವೇಶದಿಂದ ಯುದ್ಧ ಮಾಡುತ್ತಾರೆ. ಕುಸ್ತಿಯಲ್ಲಿ ಕೀಚಕ‌ನಂಥ ಎದುರಾಳಿಯನ್ನು  ಮಣ್ಣು ಮುಕ್ಕಿಸುತ್ತಾರೆ. ಕಾಮುಕರನ್ನೂ ಹಿಗ್ಗಾಮುಗ್ಗಾ ಚಚ್ಚಿ ಹಾಕುತ್ತಾರೆ. ಇದು ತೆರೆಯ ಮೇಲಿನ ಕಥೆಯಷ್ಟೇ. ಆದರೆ ವಾಸ್ತವದಲ್ಲಿ ಎಲ್ಲವೂ ಉಲ್ಟಾ ಆಗಿರುತ್ತದೆ! ತೆರೆಯ ಮೇಲೆ ಮೂವತ್ತು ಜನರೊಂದಿಗೆ ಕತ್ತಿವರಸೆಯಾಡಿ ಗೆಲ್ಲುವ ಹುಡುಗಿ, ವಾಸ್ತವದಲ್ಲಿ 30 ಕೆ.ಜಿ.ಯಷ್ಟಿರುವ ನರಪೇತಲನ ಹಿಂಸೆ ತಾಳದೆ ತತ್ತರಿಸಿ ಹೋಗುತ್ತಾಳೆ. ಮೊನ್ನೆಯಷ್ಟೇ, “ದಂಗಲ್‌’ ನಟಿ ಝೈರಾ ವಿಮಾನದಲ್ಲಿ ತನಗಾದ ಕಿರುಕುಳದ ಬಗ್ಗೆ ಹೇಳಿಕೊಂಡು, ಕಣ್ಣೀರಿಟ್ಟಿದ್ದು ಇದಕ್ಕೊಂದು ತಾಜಾ ನಿದರ್ಶನ. 

ದಂಗಲ್‌ ಸಿನೆಮಾ ನೋಡಿದವರಿಗೆಲ್ಲ ಚೆನ್ನಾಗಿ ನೆನಪಿರುತ್ತದೆ. ತಮಗೆ ಯಾರೋ ಹುಡುಗರು ತಮಾಷೆ ಮಾಡಿದರೆಂದು ಅವರಿಗೆ ಆ ಚಿಕ್ಕ ವಯಸ್ಸಿನಲ್ಲೇ ಅಕ್ಕ-ತಂಗಿ (ಗೀತಾ-ಬಬಿತಾ) ಸೇರಿ ಸರಿಯಾಗಿ ಚಚ್ಚುತ್ತಾರೆ. ನಂತರ ನಡೆಯುವ ಕುಸ್ತಿ ಆಖಾಡದಲ್ಲೂ ತನಗಿಂತ ಬಲಿಷ್ಠ ಎಂದು ಗೊತ್ತಿದ್ದರೂ, ಹುಡುಗರೊಂದಿಗೆ ಕುಸ್ತಿಯಾಡಿ, ಅವರಿಗೆ ಮಣ್ಣು ಮುಕ್ಕಿಸಿ, ಧೂಳು ತುಂಬಿಕೊಂಡ ಕೈಯನ್ನು ಕೊಡವಿಕೊಂಡು ಗೀತಾ ಎದ್ದು ಬರುತ್ತಿದ್ದರೆ ಸುತ್ತಲೂ ಚಪ್ಪಾಳೆಯ ಸುರಿಮಳೆ. ಸಿನೆಮಾ ಮುಗಿಯುವವರೆಗೂ ಈ ಗಟ್ಟಿಗಿತ್ತಿಯರ ಸಾಹಸ ಎಲ್ಲರನ್ನೂ ರೋಮಾಂಚನಗೊಳಿಸುತ್ತದೆ. ಸಿನೆಮಾದಲ್ಲಿ ಕುಸ್ತಿಯ ಸನ್ನಿವೇಶಗಳನ್ನು ಉಸಿರು ಬಿಗಿಹಿಡಿದು ವೀಕ್ಷಿಸುವ ಸಿನಿಪ್ರಿಯರು, “ಅಬ್ಟಾ , ಧೈರ್ಯ ಅಂದ್ರೆ ಹೀಗಿರಬೇಕು’ ಅಂತ ಹೇಳಿಕೊಂಡು ಹೊರಬರುತ್ತಾರೆ!
.
ಇನ್ನೊಂದು ಘಟನೆಯನ್ನು ನೋಡೋಣ. ಆರ್ಥಿಕ, ಸಾಮಾಜಿಕ ಸಂಕಷ್ಟಗಳನ್ನೆಲ್ಲ ಎದುರಿಸುತ್ತಲೇ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿರುತ್ತಾಳೆ ಆ ಹುಡುಗಿ. ಬಾಕ್ಸಿಂಗ್‌ ರಿಂಗ್‌ನಲ್ಲಿ ಅವಳ ಒಂದೊಂದು ಪಂಚ್‌ ನೋಡಿದ್ರೆ, ಮುಂದಿನ ಅಂತಾರಾಷ್ಟ್ರೀಯ ಕೂಟಗಳಲ್ಲೆಲ್ಲ ದೇಶಕ್ಕೆ ಚಿನ್ನದ ಪದಕ ಕಟ್ಟಿಟ್ಟ ಬುತ್ತಿ ಎಂಬ ಭಾವನೆ. ಇನ್ನೂ 21ರ ಹರೆಯದ ಆ ಯುವತಿಯ ದಿಟ್ಟತನದ ಎದುರು ಬೇರಾವುದೂ ಲೆಕ್ಕಕ್ಕಿಲ್ಲ ಎಂದು ನೋಡುಗರಿಗೆ ಅನಿಸದೇ ಇರದು. ಆದರೆ, ಮುಂದೆ ಆಗುವುದೇ ಬೇರೆ.
.
ಮೇಲೆ ಹೇಳಿರುವ ಎರಡೂ ಸನ್ನಿವೇಶಗಳು ನೋಡಲು, ಕೇಳಲು ರೋಚಕವಾಗಿವೆ. ಆದರೆ, ವಾಸ್ತವ ಬೇರೆಯೇ ಆಗಿರುತ್ತದೆ. ಸಿನೆಮಾ, ಕ್ರೀಡೆ, ವಿಜ್ಞಾನ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡುವ ಮೂಲಕ ಹೆಣ್ಣುಮಕ್ಕಳು ಸಮಾಜಕ್ಕೆ ಯಾವ ಸಂದೇಶ ನೀಡಲು ಬಯಸುತ್ತಿದ್ದಾರೆಯೋ, ವಾಸ್ತವ ಅದಕ್ಕೆ ಸಂಪೂರ್ಣ ತದ್ವಿರುದ್ಧವಾಗುವುದು ವಿಷಾದನೀಯ. ಇಲ್ಲಿರುವ ಎರಡೂ ಉದಾಹರಣೆಗಳನ್ನು ನೋಡಿ- ಮೊದಲನೆಯದರಲ್ಲಿ ಸಿನೆಮಾದಲ್ಲಿ ಹುಡುಗರನ್ನು ಸರಿಯಾಗಿ ಚಚ್ಚುವ ಯುವತಿ ಝೈರಾ ವಾಸಿಂ, ನಿಜ ಜೀವನದಲ್ಲಿ ತನಗೆ ಎದುರಾದ ಕಿರುಕುಳ ಸನ್ನಿವೇಶವನ್ನು  ಧೈರ್ಯವಾಗಿ ಎದುರಿಸಲಾಗದೇ ಸೋತಳು. ಮೊನ್ನೆ ಮೊನ್ನೆಯಷ್ಟೇ ವಿಮಾನದಲ್ಲಿ ಸಹಪ್ರಯಾಣಿಕನಿಂದ ಆದ ಕಿರುಕುಳ, ಮಾನಸಿಕ ಯಾತನೆಗೆ ಸ್ವಲ್ಪವೂ ಎದುರಾಡಲು ಸಾಧ್ಯವಾಗದೇ ಕಣ್ಣೀರಾದಳು. ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವವರು ಯಾರೂ ಇಲ್ಲ ಎಂದು ನೊಂದುಕೊಂಡಳು.

ಇನ್ನು ಎರಡನೇ ಘಟನೆ ನೋಡಿದರೆ, ನಿಜ ಜೀವನದಲ್ಲೇ ಬಾಕ್ಸಿಂಗ್‌ ಪಟುವಾಗಿದ್ದುಕೊಂಡು, ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಬೇಕಾಗಿದ್ದ ಹೈದರಾಬಾದ್‌ನ ಯುವತಿಯೊಬ್ಬಳು ಕೋಚ್‌ ನೀಡುತ್ತಿದ್ದ ಲೈಂಗಿಕ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದಳು. ಇದು 2009ರಲ್ಲಿ ನಡೆದ ಘಟನೆ. ಇಂಥ ಎಷ್ಟೋ ಘಟನೆಗಳು ಇಂದಿಗೂ ನಮ್ಮ ಸುತ್ತ ನಡೆಯುತ್ತಲೇ ಇವೆ. ತೆರೆಯ ಮೇಲೆ ಎಲ್ಲವನ್ನೂ ಎಲ್ಲರನ್ನೂ ಎದುರಿಸುವ ಸಾಮರ್ಥ್ಯ ನಮಗಿದೆ ಎಂದು ತೋರಿಸುವವರು ನಿಜಜೀವನದಲ್ಲಿ ಅಂಥ ಸಂದರ್ಭ ಎದುರಾದರೆ, ಕುಗ್ಗಿ ಹೋಗುತ್ತಾರೆ. ಝೈರಾ ವಾಸಿಂಗೆ ಆಗಿದ್ದೂ ಇದೇ ಸ್ಥಿತಿ. ಸಿನೆಮಾದಲ್ಲಿ ಕುಸ್ತಿಪಟು ಆಗಿದ್ದ ಆಕೆ, ತೆರೆಯ ಮೇಲೆ ತನಗಿಂತ ಬಲಿಷ್ಠನನ್ನು ಚಿತ್‌ ಮಾಡಿದ್ದ ಆಕೆ, ವಾಸ್ತವದಲ್ಲಿ ತನಗೇ ಹಿಂಸೆ ಆಗುತ್ತಿದ್ದರೂ, ಕಿರುಕುಳ ಕೊಟ್ಟವನು ಸಣಕಲನಂತೆ ಕಂಡರೂ ಅವನನ್ನು ಎದುರಿಸುವ ಧೈರ್ಯ ತೋರಲಿಲ್ಲ. ಆ ಕ್ಷಣದಲ್ಲಿ ತೀರಾ ಅಧೀರಳಾಗಿ ಹೋದ ಆ ಹೆಣ್ಣುಮಗಳಿಗೆ ಕಣ್ಣೀರಷ್ಟೇ ಜೊತೆಯಾಗುತ್ತದೆ. ಕಾಲ್ಪನಿಕ ಡೈಲಾಗ್‌ಗಳು, ಚಪ್ಪಾಳೆ ಗಿಟ್ಟಿಸಿಕೊಳ್ಳುವಂಥ ಫೈಟಿಂಗ್‌ ಒತ್ತಟ್ಟಿಗಿರಲಿ, ಹೀಗೇಕೆ ಮಾಡುತ್ತಿದ್ದೀಯಾ ಎಂದು ಕೇಳುವಷ್ಟು ಧ್ವನಿಯೂ ಇಲ್ಲವಾಗಿರುತ್ತದೆ.

ಇದು ಝೈರಾ ಒಬ್ಬಳ ಸ್ಥಿತಿಯಲ್ಲ, ಈಕೆಯೇನೋ ಸಿನೆಮಾ ನಟಿಯಷ್ಟೆ. ಆದರೆ, ನಿಜಜೀವನದಲ್ಲೇ ಕುಸ್ತಿಪಟುಗಳೂ, ಕ್ರೀಡಾಳುಗಳೂ ಆದವರೇ ತಮ್ಮ ಮೇಲೆ ದೌರ್ಜನ್ಯವಾದಾಗ ತುಟಿಪಿಟಿಕೆನ್ನದೆ ಕಣ್ಣಂಚಲ್ಲಿ ನೀರು ತುಂಬಿಕೊಂಡು, ಸುಮ್ಮನಾಗಿದ್ದಿದೆ. ಈ ಪಟ್ಟಿಯಲ್ಲಿ ಮಹಿಳಾ ಹಾಕಿ ತಂಡದ ಸದಸ್ಯರು, ಜಿಮ್ನಾಸ್ಟ್‌ಗಳು, ಸೆಲೆಬ್ರಿಟಿಗಳಾದ ಕಲ್ಕಿ ಕೊಚ್ಚಿನ್‌, ಟ್ವಿಂಕಲ್‌ ಖನ್ನಾ, ಸೋಫಿಯಾ ಹಯಾತ್‌, ಸೋಮಿ ಅಲಿ, ಲೇಡಿ ಗಾಗಾ, ವಿಶ್ವಪ್ರಸಿದ್ಧ ಸಿತಾರಾ ವಾದಕಿ ಅನೌಷ್ಕಾ ಶಂಕರ್‌ ಕೂಡಾ ಸೇರುತ್ತಾರೆ. ಇವರ ಪಾಡೇ ಹಿಂಗಾದರೆ, ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಸ್ಥಿತಿಯಂತೂ ಕೇಳುವುದೇ ಬೇಡ. ಬಸ್ಸು , ಆಟೋ, ರೈಲು, ಶಾಲೆ, ಕಚೇರಿ, ರಸ್ತೆ… ಎಲ್ಲೆಲ್ಲೂ ಮೈಕೈ ಮುಟ್ಟುವವರು, ಅಸಹ್ಯವಾಗಿ ವರ್ತಿಸುವವರು, ಕಿರುಕುಳ ನೀಡುವವರು ಇರುತ್ತಾರೆ. ಅಷ್ಟೇ ಏಕೆ, ಮನೆಗಳೂ ಈಗ ಸುರಕ್ಷಿತವಲ್ಲ ಎಂಬಂಥ ಸ್ಥಿತಿಯಿದೆ. ಕ್ಷಣಕ್ಷಣದ ಇಂಥ ಎಲ್ಲ ಅಡ್ಡಿ-ಆಂತಕಗಳನ್ನೂ ಎದುರಿಸುತ್ತ, ಸಮಾಜದ ಕೊಂಕು ನುಡಿಗಳನ್ನು ಆಲಿಸುತ್ತ¤ ಬದುಕಬೇಕಾದಂಥ ಹೀನಾಯ ಪರಿಸ್ಥಿತಿ ಮಹಿಳೆಯರದ್ದು.

ಲೈಂಗಿಕ ಕಿರುಕುಳ ಎನ್ನುವುದು ಹೆಣ್ಣಿನ ಘನತೆ ಹಾಗೂ ವ್ಯಕ್ತಿತ್ವಕ್ಕಾಗುವ ಭೀಕರ ಗಾಯ. ಅದನ್ನು ಅಷ್ಟು ಸುಲಭದಲ್ಲಿ ವಾಸಿಮಾಡಲು ಸಾಧ್ಯವಿಲ್ಲ. ಆಕೆಗೆ ಎಲ್ಲ ರೀತಿಯಿಂದಲೂ ಸಾಂತ್ವನ ಹೇಳಬೇಕಾದ್ದು ಸಮಾಜದ ಕರ್ತವ್ಯ. ಆದರೆ, ನಾವೀಗ ಸೂಕ್ಷ್ಮತೆ ಕಳೆದುಕೊಂಡ ಸಮಾಜದಲ್ಲಿ ಬದುಕುತ್ತಿದ್ದೇವೆ. ದೈಹಿಕವಾಗಿ, ಮಾನಸಿಕವಾಗಿ ನೋವುಂಡ ಸಂತ್ರಸ್ತೆಯರಲ್ಲಿ ಆತ್ಮವಿಶ್ವಾಸ ತುಂಬಿ, ಅವರು ಆತ್ಮಗೌರವದಿಂದ ಬದುಕಲು ಪ್ರೇರಣೆ ನೀಡುವ ಬದಲಿಗೆ, ಆಕೆ ತನಗಾದ ದೌರ್ಜನ್ಯವನ್ನು ಬಹಿರಂಗಪಡಿಸುವ ಧೈರ್ಯ ತೋರಿದರೂ, ಸಮಾಜವು ಆಕೆಗಾದ ಅನ್ಯಾಯದ ಬಗ್ಗೆ ಮಾತಾಡುವುದಿಲ್ಲ. ಬದಲಿಗೆ ಅವಳನೇ ಪ್ರಶ್ನಿಸುತ್ತದೆ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿ ಮಾಡಲಾಗುತ್ತದೆ. ಒಂದು ಹೆಣ್ಣಿಗೆ ಅನ್ಯಾಯವಾಗಿದೆ ಎಂದು ತಿಳಿದ ನಂತರವೂ, ಇದೆಲ್ಲಾ ಹುಡುಗಿಯ ತಪ್ಪಿನಿಂದಲೇ ಆಗಿರುವುದು, ಎಲ್ಲವೂ ಪ್ರಚಾರ ಗಿಟ್ಟಿಸುವ ತಂತ್ರವೆಂದೇ ಆಕೆಯನ್ನು ಹಳಿಯಲಾಗುತ್ತದೆ. ಹಾಗಾಗಿ, ದೌರ್ಜನ್ಯದ ಬಗ್ಗೆ ಹೇಳಿಕೊಳ್ಳುವುದೂ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹೆಣ್ಣಾಗಿ, ಎಲ್ಲವನ್ನು ಎದುರಿಸಿ ಬಾಳುವುದು ಸುಲಭವಲ್ಲ. ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಯಾವುದೇ ದೌರ್ಜನ್ಯ, ಕಿರುಕುಳಕ್ಕೆ ಒಳಗಾಗದ ಹೆಣ್ಣನ್ನು ಹುಡುಕುವುದೆಂದರೆ, ಸಾವಿಲ್ಲದ ಮನೆಯ ಸಾಸಿವೆ ತಂದಂತೆ. ಪರಿಸ್ಥಿತಿ ಹೀಗಿರುವಾಗ, ಎಲ್ಲವನ್ನು ಎದುರಿಸಿ ನಮಗೆ ನಾವೇ ಶಕ್ತಿಯಾಗಬೇಕು. ಅಸಹಾಯಕಳಾಗಿ ತಲೆತಗ್ಗಿಸುವುದನ್ನು ಕಣ್ಣೀರಿಡುವುದನ್ನು ಬಿಟ್ಟು ಮುಷ್ಟಿ ಬಿಗಿ ಹಿಡಿದು ನಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಬೇಕು. ಹೀಗೆಲ್ಲ ಅಂದುಕೊಂಡಾಗಲೇ ಮಾರ್ಟಿನ್‌ ಲೂಥರ್‌ ಕಿಂಗ್‌ ಮಾತು  ನೆನಪಾಗುತ್ತದೆ- The time is always right to do what is right..

– ಹಲೀಮತ್‌ ಸ ಅದಿಯಾ

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.