Udayavni Special

ಓಟ್ಸ್‌ ವೈವಿಧ್ಯ


Team Udayavani, Sep 28, 2018, 6:00 AM IST

d-16.jpg

ನೋಡಲು ತೆಳು ಅವಲಕ್ಕಿಯಂತೆ ಕಾಣುವ ಓಟ್ಸ್‌ ಉತ್ತಮ ನಾರಿನಂಶವನ್ನು ಹೊಂದಿದ್ದು ಇದರ ಸೇವನೆಯಿಂದ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹಿಗಳಿಗೆ ಉತ್ತಮ ಆಹಾರವಾದ ಓಟ್ಸ್‌  ಸೇವನೆಯಿಂದ ಕೊಬ್ಬು , ಒಬೆಸಿಟಿಯಿಂದಲೂ ಪಾರಾಗಬಹುದು. ಓಟ್ಸ್‌ನ್ನು ಹಾಲು, ವಿವಿಧ ಹಣ್ಣು, ತರಕಾರಿಗಳ ಜೊತೆ ಸೇರಿಸಿ ಹಲವಾರು ವೈವಿಧ್ಯಗಳನ್ನು ತಯಾರಿಸಬಹುದು.

ಓಟ್ಸ್‌ ಉತ್ತಪ್ಪ
ಬೇಕಾಗುವ ಸಾಮಗ್ರಿ: ಓಟ್ಸ್‌ – ಒಂದು ಕಪ್‌, ಚಿರೋಟಿ ರವೆ- ಅರ್ಧ ಕಪ್‌, ಮೊಸರು- ಒಂದು ಕಪ್‌, ಅಕ್ಕಿ ಹಿಟ್ಟು- ಅರ್ಧ ಕಪ್‌, ಜೀರಿಗೆ- ಒಂದು ಚಮಚ, ಶುಂಠಿ- ಅರ್ಧ ಟೀ ಚಮಚ, ಕ್ಯಾರೆಟ್‌ ತುರಿ- ಒಂದು ಕಪ್‌, ಹೆಚ್ಚಿದ ಕ್ಯಾಪ್ಸಿಕಂ- ಒಂದು, ಹಸಿಮೆಣಸು- ಎರಡು, ಹೆಚ್ಚಿದ ಈರುಳ್ಳಿ- ಒಂದು ಕಪ್‌, ಕೊತ್ತಂಬರಿಸೊಪ್ಪು- ಎಂಟು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಓಟ್ಸ್‌ನ್ನು ನುಣ್ಣಗೆ ಪುಡಿಮಾಡಿ ಮಿಕ್ಸಿಂಗ್‌ ಬೌಲ್‌ನಲ್ಲಿ ಹಾಕಿ. ನಂತರ ಇದಕ್ಕೆ ಚಿರೋಟಿರವೆ, ಅಕ್ಕಿಹಿಟ್ಟು , ಮೊಸರು, ಜೀರಿಗೆ, ಶುಂಠಿ, ಉಪ್ಪು ಹಾಗೂ ಬೇಕಷ್ಟು ನೀರು ಸೇರಿಸಿ ದೋಸೆಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಒಲೆಯ ಮೇಲೆ ತವಾ ಇಟ್ಟು ಬಿಸಿಯಾದ ಕೂಡಲೇ ಸ್ವಲ್ಪ ದಪ್ಪಕ್ಕೆ ದೋಸೆ ಹಾಕಿ ಇದರ ಮೇಲೆ ಕ್ಯಾರೆಟ್‌ತುರಿ, ನೀರುಳ್ಳಿ , ಕೊತ್ತಂಬರಿಸೊಪ್ಪು, ಕ್ಯಾಪ್ಸಿಕಂ ಇತ್ಯಾದಿಗಳನ್ನು ಹರಡಿ ಸೌಟಿನಿಂದ ಸ್ವಲ್ಪ ಒತ್ತಿ ದೋಸೆಗೆ ಅಂಟುವಂತೆ ಮಾಡಿ ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ. ನಂತರ ಇದಕ್ಕೆ ತುಪ್ಪಹಾಕಿ ಕವುಚಿ ಹಾಕಿ ಬೇಯಿಸಿದರೆ ರುಚಿಯಾದ ಉತ್ತಪ್ಪಚಟ್ನಿಯೊಂದಿಗೆ ಸವಿಯಲು ಸಿದ್ಧ.

ಓಟ್ಸ್‌ ವಿದ್‌ ಫ್ರೂಟ್ಸ್‌ 
ಬೇಕಾಗುವ ಸಾಮಗ್ರಿ:
ಹಾಲು- ಒಂದು ಕಪ್‌, ಓಟ್ಸ್‌- ಎರಡು ದೊಡ್ಡ ಚಮಚ, ಹೆಚ್ಚಿದ ಬಾಳೆಹಣ್ಣು – ಐದು ಚಮಚ, ಹೆಚ್ಚಿದ ಪಪ್ಪಾಯ, ಸೇಬು, ಸಪೋಟಾ, ಖಬೂಜ- ತಲಾ ನಾಲ್ಕು ಚಮಚ, ಹುರಿದ ಅಗಸೆಬೀಜ- ಎರಡು ಚಮಚ, ಹೆಚ್ಚಿದ ಬಾದಾಮಿ ಮತ್ತು ಖರ್ಜೂರ- ಎರಡು ಚಮಚ, ಸಕ್ಕರೆ, ಬೆಲ್ಲ ಅಥವಾ ಜೇನುತುಪ್ಪ- ರುಚಿಗೆ ಬೇಕಷ್ಟು, ಕಾರ್ನ್ ಫ್ಲೇಕ್ಸ್‌ – ಎರಡು ಚಮಚ.

ತಯಾರಿಸುವ ವಿಧಾನ: ಓಟ್ಸ್‌ನ್ನು ಎರಡು ನಿಮಿಷ ಬಾಣಲೆಯಲ್ಲಿ ಬಿಸಿಮಾಡಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ ಇದಕ್ಕೆ ತಂಪಾದ ಹಾಲು ಹಾಕಿ. ನಂತರ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳನ್ನು ಹಾಕಿ ಚೆನ್ನಾಗಿ ಹೊಂದಿಕೊಳ್ಳುವಂತೆ ಸೌಟಿನಿಂದ ಸ್ವಲ್ಪ ಮ್ಯಾಶ್‌ ಮಾಡಿ. ಸರ್ವಿಂಗ್‌ ಕಪ್‌ಗೆ ಹಾಕಿ ಮೇಲಿನಿಂದ ಅಗಸೆಬೀಜ ಮತ್ತು ಕಾರ್ನ್ ಫ್ಲೇಕ್ಸ್‌ ಹರಡಿದರೆ ಸವಿಯಲು ರೆಡಿ.

ಓಟ್ಸ್‌  ಲಡ್ಡು 
ಬೇಕಾಗುವ ಸಾಮಗ್ರಿ:
ಓಟ್ಸ್‌ ‰- ಒಂದೂವರೆ ಕಪ್‌, ಸಕ್ಕರೆ- ಒಂದು ಕಪ್‌, ಗೋಡಂಬಿ ತರಿ- ಎಂಟು ಚಮಚ, ಏಲಕ್ಕಿ ಸುವಾಸನೆಗಾಗಿ, ತುಪ್ಪ- ಅರ್ಧ ಕಪ್‌.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಓಟ್ಸ್‌ ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿದು ಆರಿದ ನಂತರ ನುಣ್ಣಗೆ ಪುಡಿಮಾಡಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ಇದಕ್ಕೆ ಸಕ್ಕರೆ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ತುಪ್ಪಬಿಸಿಮಾಡಿ ಇದಕ್ಕೆ ಸೇರಿಸಿ ಪುನಃ ಮಿಶ್ರಮಾಡಿ ಬಿಸಿ ಇರುವಾಗಲೇ ಉಂಡೆ ಕಟ್ಟಿ.

ಓಟ್ಸ್‌ ಚಿಕ್ಕಿ 
ಬೇಕಾಗುವ ಸಾಮಗ್ರಿ:
ಓಟ್ಸ್‌ – ಅರ್ಧ ಕಪ್‌, ಬಿಳಿ ಎಳ್ಳು- ಕಾಲು ಕಪ್‌, ಸಕ್ಕರೆ- ಒಂದೂವರೆ ಕಪ್‌,  ಬೆಲ್ಲದ ಪುಡಿ- ಕಾಲು ಕಪ್‌, ಹುರಿದು ಸಿಪ್ಪೆ$ತೆಗೆದು ತರಿತರಿಯಾಗಿಸಿದ ಶೇಂಗಾ- ಒಂದು ಕಪ್‌, ಏಲಕ್ಕಿ ಪುಡಿ ಸುವಾಸನೆಗಾಗಿ. 

 ತಯಾರಿಸುವ ವಿಧಾನ: ಓಟ್ಸ್‌ನ್ನು ಐದು ನಿಮಿಷ ಸಣ್ಣ ಉರಿಯಲ್ಲಿ ಹುರಿದು ಆರಿದ ಮೇಲೆ ಮಿಕ್ಸಿಯಲ್ಲಿ ತರಿತರಿಯಾಗಿಸಿ. ಬಾಣಲೆಯಲ್ಲಿ ಸಕ್ಕರೆ ಮತ್ತು ಬೆಲ್ಲವನ್ನು ನೀರು ಸೇರಿಸದೆ ಸಣ್ಣ ಉರಿಯಲ್ಲಿ ಕರಗಲು ಇಡಿ. ಇದು ಸಂಪೂರ್ಣ ಕರಗಿದ ಮೇಲೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ ತಳ ಬಿಡಲು ಪ್ರಾರಂಭವಾದಾಗ ಒಂದು ಚಮಚ ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ ಮಗುಚಿ ತುಪ್ಪ ಸವರಿದ ಮಣೆಯಲ್ಲಿ ಹರಡಿ, ತುಪ್ಪಸವರಿದ ಲಟ್ಟಣಿಗೆಯಿಂದ ಸರಿ ಮಾಡಿಕೊಳ್ಳಿ. ಬಿಸಿ ಇರುವಾಗಲೇ ಚಾಕುವಿನಿಂದ ಬೇಕಾದ ಆಕಾರಕ್ಕೆ ಕತ್ತರಿಸಿ.

ಗೀತಾಸದಾ

ಟಾಪ್ ನ್ಯೂಸ್

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ಜೆಇಇ ಮುಖ್ಯ‌ ಫ‌ಲಿತಾಂಶ ಪ್ರಕಟ

ಜೆಇಇ ಮುಖ್ಯ‌ ಫ‌ಲಿತಾಂಶ ಪ್ರಕಟ

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

IPL 2021 : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ನೂತನ ಜೆರ್ಸಿ

IPL 2021 : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ನೂತನ ಜೆರ್ಸಿ

ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಶಂಕರ್‌ ಗೌಡ ಕಚೇರಿ ಮೇಲೆ ಪೊಲೀಸರ ದಾಳಿ

ಸ್ಯಾಂಡಲ್‌ವುಡ್ ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಶಂಕರ್‌ ಗೌಡ ಕಚೇರಿ ಮೇಲೆ ಪೊಲೀಸರ ದಾಳಿ

ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ

ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ

ಭವಿಷ್ಯ ನಿಧಿ ಖಾತೆಯಲ್ಲಿ ರಿಲೀವಿಂಗ್‌ ದಿನಾಂಕ ಖುದ್ದಾಗಿ ಅಪ್‌ಡೇಟ್‌ ಮಾಡಿ!

ಭವಿಷ್ಯ ನಿಧಿ ಖಾತೆಯಲ್ಲಿ ರಿಲೀವಿಂಗ್‌ ದಿನಾಂಕ ಖುದ್ದಾಗಿ ಅಪ್‌ಡೇಟ್‌ ಮಾಡಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

k-20

ಸೆರಗು-ಲೋಕದ ಬೆರಗು

ಟ್ರೆಂಡಿ ಪಾದರಕ್ಷೆಗಳು 

ಟ್ರೆಂಡಿ ಪಾದರಕ್ಷೆಗಳು 

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

MUST WATCH

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

ಹೊಸ ಸೇರ್ಪಡೆ

ಉತ್ತಮ ಯೋಜನೆ; ಅನುದಾನ ಕಡಿಮೆ

ಉತ್ತಮ ಯೋಜನೆ; ಅನುದಾನ ಕಡಿಮೆ

ಕೈಗಾರಿಕೆಗೆ ಆದ್ಯತೆಯ ಕೊರತೆ! ಗೌರವ ಹೆಗ್ಡೆ 

ಕೈಗಾರಿಕೆಗೆ ಆದ್ಯತೆಯ ಕೊರತೆ! ಗೌರವ ಹೆಗ್ಡೆ 

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ವಿಜಯ್‌ ಹಜಾರೆ ಏಕದಿನ: ಸೆಮಿಫೈನಲ್‌ಗೆ ಲಗ್ಗೆಯಿರಿಸಿದ ಕರ್ನಾಟಕ

ಜೆಇಇ ಮುಖ್ಯ‌ ಫ‌ಲಿತಾಂಶ ಪ್ರಕಟ

ಜೆಇಇ ಮುಖ್ಯ‌ ಫ‌ಲಿತಾಂಶ ಪ್ರಕಟ

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

ನಂಬರ್‌ ವನ್‌ ಸ್ಥಾನದಲ್ಲಿದ್ದ ಫೆಡರರ್‌ ದಾಖಲೆ ಜೊಕೋ ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.