Udayavni Special

ಫೇರನ್‌, ಪೈಜಾಮಾ,ಕುರ್ತಾ


Team Udayavani, Jul 26, 2019, 5:03 AM IST

kashmiri-dress-1024×76111

ಕಾಶ್ಮೀರದ ಸಾಂಪ್ರದಾಯಕ ಉಡುಗೆ-ತೊಡುಗೆಗಳು ಪ್ರಾಚೀನ ಚರಿತ್ರೆಯನ್ನು ಹೊಂದಿವೆ. ಚೀನಾದ ಯಾತ್ರಿಕ ಹ್ಯುಯೆನ್‌ತ್ಸಾಂಗ್‌ ಬರೆದಿರುವಂತೆ ಆರ್ಯರ ಉಡುಗೆ-ತೊಡುಗೆಯ ಪ್ರಭಾವ ಮಾತ್ರವಲ್ಲದೆ, ಕಾಶ್ಮೀರದ ಜೊತೆ ಅಧಿಕ ಸಂವಹನ ಹೊಂದಿದ್ದ ಪರ್ಶಿಯಾದ ಸಂಸ್ಕೃತಿಯ ಪ್ರಭಾವವೂ ಕಾಶ್ಮೀರಿ ಉಡುಗೆ-ತೊಡುಗೆಗಳ ಮೇಲೆ ಉಂಟಾಗಿದೆ. ಅಂತೆಯೇ ರೋಮನ್ನರ ಹಾಗೂ ಗ್ರೀಕರ ಪ್ರಭಾವವೂ ಮಿಳಿತವಾಗಿದೆ.

ಕಾಶ್ಮೀರಿ ಮಹಿಳೆಯರ ಸಾಂಪ್ರದಾಯಿಕ ಉಡುಗೆಯ ವೈಶಿಷ್ಟéವೆಂದರೆ ಅವುಗಳು ಅಲ್ಲಿನ ತೀವ್ರ ಚಳಿ ಹಾಗೂ ಕಡಿಮೆ ಉಷ್ಣತೆಯ ಹಮಾಮಾನದಿಂದ ದೇಹವನ್ನು ರಕ್ಷಿಸುತ್ತವೆ. ಅಂತೆಯೇ ಈ ಉಡುಗೆಗಳು ಉಣ್ಣೆ ಮಿಶ್ರಿತ ಹತ್ತಿ, ರೇಶೆ¾ ಹಾಗೂ ಉಣ್ಣೆಯಿಂದ ತಯಾರಾದ ದಿರಿಸುಗಳಾಗಿವೆ.

ಪ್ರಾಚೀನ ಕಾಲದಲ್ಲಿ ಬಿಳಿಯ ಲಿನೆನ್‌ ಬಟ್ಟೆಯಿಂದ ಉಡುಗೆ ತಯಾರಿಸುತ್ತಿದ್ದರು. ಈ ಸಾಂಪ್ರದಾಯಿಕ ಉಡುಗೆಗೆ “ಫೇರನ್‌’ ಎಂದು ಕರೆಯಲಾಗುತ್ತದೆ. ಶ್ರೀಮಂತ ಜನರು ಚಳಿಗಾಲದಲ್ಲಿ ಉತ್ತಮ ಗುಣಮಟ್ಟದ ಕಾಶ್ಮೀರಿ ಶಾಲ್‌ಗ‌ಳನ್ನು ಧರಿಸಿದರೆ, ಇತರರು ಸಾಧಾರಣ ಬೆಲೆಯ ಕಾಶ್ಮೀರಿ ಶಾಲ್‌ಗ‌ಳನ್ನು ಉಪಯೋಗಿಸುತ್ತಾರೆ.
“ಫೇರನ್‌’ ಉಡುಗೆಗೆ “ಪ್ರವರ್ನಾ’ ಎಂಬ ಹೆಸರೂ ಇದೆ. ಈ ಉಡುಗೆ 2 ಬಗೆಯ ದಿರಿಸುಗಳಿಂದ ಕೂಡಿದೆ. ಪಂಚೆಯಂತೆ ಸುತ್ತಿಕೊಳ್ಳುವ ಬಿಳಿ ಅಥವಾ ತಿಳಿಬಣ್ಣದ ಉಡುಗೆಗೆ “ಪೊಟ್‌ಶ್‌’ ಎನ್ನುತ್ತಾರೆ. ಅದರ ಮೇಲೆ ಉದ್ದದ ನಿಲುವಂಗಿಯಂತೆ ಕಾಣುವ ಗಾಢಬಣ್ಣದ ರಂಗುರಂಗಿನ, ಕಸೂತಿಯ ಚಿತ್ತಾರ ಉಳ್ಳ ಫೇರನ್‌ ತೊಡುಗೆ ಧರಿಸುತ್ತಾರೆ.

ಕಾಶ್ಮೀರದ ಮಹಿಳೆಯರಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು “ಫೇರನ್‌’ ಅನ್ನು ಸಾಂಪ್ರದಾಯಿಕವಾಗಿ ಧರಿಸುತ್ತಾರೆ. ಮುಸ್ಲಿಂ ಮಹಿಳೆಯರಲ್ಲಿ ನಿಲುವಂಗಿಯ ಉದ್ದ ಹಾಗೂ ತೋಳಿನ ಉದ್ದ ಅಧಿಕವಾಗಿರುತ್ತದೆ. ತಲೆಯ ಮೇಲೆ ಧರಿಸುವ ತಿಳಿವಸ್ತ್ರಕ್ಕೆ “ಕಸಬಾ’ ಎಂದು ಕರೆಯುತ್ತಾರೆ.

ಕಾಶ್ಮೀರದ ಇನ್ನೊಂದು ವಿಶಿಷ್ಟ ಉಡುಗೆಯೆಂದರೆ ಜಮ್ಮುವಿನಲ್ಲಿ ವಾಸಿಸುವ ಡೋಗ್ರಾ ಬುಡಕಟ್ಟು ಜನರು ಧರಿಸುವ ಪೈಜಾಮಾ ಹಾಗೂ ಕುರ್ತಾ. ಇದೇ ರೀತಿಯ ಉಡುಗೆಯನ್ನು ಗುಜ್ಜಾರ್‌ ಜನಾಂಗದ ಕಾಶ್ಮೀರಿ ಮಹಿಳೆಯರು ಧರಿಸುತ್ತಾರೆ.
ಇದರೊಂದಿಗೆ ಅಂದದ ಬಣ್ಣ ಬಣ್ಣದ ಮೇಲ್‌ವಸ್ತ್ರವನ್ನು ತಲೆಯ ಮೇಲೆ ಧರಿಸುತ್ತಾರೆ. ಲಡಾಖ್‌ನಲ್ಲಿ ಧರಿಸುವ ಸಾಂಪ್ರದಾಯಕ ಉಡುಗೆಯ ಹೆಸರು “ಕುಂಟೋಪ್‌’ ಎಂದು. ಇದೂ ಸಹ “ಬೋಕ್‌’ ಎಂದು ಕರೆಯಲಾಗುವ ಆಕರ್ಷಕ ಶಾಲ್‌ನ್ನು ಹೊಂದಿರುತ್ತದೆ.

ಕಾಶ್ಮೀರಿ ಮಹಿಳೆಯರ ಉಡುಗೆಯ ಅಂದಕ್ಕೆ ವಿಶೇಷ ಮೆರುಗು ನೀಡುವುದು ಅವರು ಧರಿಸುವ ದೊಡ್ಡ ಗಾತ್ರದ ಆಕರ್ಷಕ ಶೈಲಿಯ ಬೆಳ್ಳಿಯ ಆಭರಣಗಳು. ಜಮ್ಮು ಕಾಶ್ಮೀರಿ ಮಹಿಳೆಯ ಸಾಂಪ್ರದಾಯಕ ಉಡುಗೆಗಳು ಹೆಚ್ಚಾಗಿ ವೈವಿಧ್ಯಮಯ ಕಿವಿಯ ಬೆಂಡೋಲೆ, ನತ್ತು, ದೊಡ್ಡ ಹಾರ, ಬಳೆ ಹಾಗೂ ಕಾಲಿನ ಗೆಜ್ಜೆಯೊಂದಿಗೆ ಒಪ್ಪಗೊಂಡಿರುತ್ತವೆ. ಬಂಗಾರದ ಆಭರಣಗಳನ್ನು ವಿಶೇಷ ಸಮಾರಂಭಗಳಲ್ಲಿ ಅಧಿಕವಾಗಿ ಧರಿಸಲಾಗುತ್ತದೆ.

ಕಾಶ್ಮೀರಿ ವಧುವಿನ ಸಾಂಪ್ರದಾಯಿಕ ಉಡುಗೆ ಇಂದಿಗೂ ಫೇರನ್‌ ಆಗಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ವೈಭವಯುತವಾಗಿ ವಧುವಿನ ಫೇರನ್‌ ದಿರಿಸಿಗೆ ಕನ್ನಡಿಯಿಂದ ಅಲಂಕಾರ, ಜರತಾರಿ ಕಸೂತಿಗಳ ಆಕರ್ಷಕ ವಿನ್ಯಾಸಗಳನ್ನು ಮಾಡಲಾಗುತ್ತದೆ. ಮದುವೆಗಳಲ್ಲಿ ಧರಿಸುವ ಕಾಶ್ಮೀರಿ ಶಾಲ್‌ಗ‌ಳನ್ನು ಕೈಮಗ್ಗದಿಂದಲೇ ತಯಾರಿಸುತ್ತಾರೆ. ವಿಶಿಷ್ಟವಾಗಿ “ಪಶ್ಮಿನಾ’ ಶಾಲ್‌ಗ‌ಳು ಮಹತ್ವಪೂರ್ಣವಾಗಿವೆ. ಪಶ್ಮಿನಾ ಶಾಲ್‌ಗ‌ಳ ಕುರಿತಾಗಿ ಒಂದು ಮಾತಿದೆ- ಪಶ್ಮಿನಾ ಶಾಲುಗಳಲ್ಲಿ ಎಷ್ಟು ಹುಡುಕಿದರೂ ವಿನ್ಯಾಸದಲ್ಲಿ ಒಂದು ಶಾಲು ಇನ್ನೊಂದನ್ನು ಹೋಲುವ ರೀತಿಯಲ್ಲಿ ಇರುವುದಿಲ್ಲ. ಅಂದರೆ ಅಷ್ಟು ಜತನದಿಂದ ಒಂದೊಂದು ಪಶ್ಮಿನಾ ಶಾಲುಗಳನ್ನು ಕೈಯಿಂದಲೇ ವಿನ್ಯಾಸಗೊಳಿಸಲಾಗುತ್ತದೆ.

ಪ್ರವಾಸಿಗಳ ಮುಖ್ಯ ಆಕರ್ಷಣೆ ಎಂದರೆ ಪಾರಂಪರಿಕ ಕಾಶ್ಮೀರಿ ಉಡುಗೆ-ತೊಡುಗೆ. ವಿಶ್ವದ ಎಲ್ಲೆಡೆಯಿಂದ ಪ್ರವಾಸಕ್ಕೆ ಬರುವ ಪ್ರವಾಸಿಗಳು ಕಾಶ್ಮೀರಿ ಸಾಂಪ್ರದಾಯಕ ಉಡುಗೆ, ಆಭರಣ ತೊಟ್ಟು ಸಂಭ್ರಮಿಸುವುದಲ್ಲದೆ, ತಮ್ಮೊಂದಿಗೆ ನೆನಪಿನಿಂದ ಕಾಶ್ಮೀರಿ ಶಾಲ್‌ಗ‌ಳನ್ನು ಒಯ್ಯುತ್ತಾರೆ.

-ಅನುರಾಧಾ ಕಾಮತ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ವಶಕ್ಕೆ

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ಪೊಲೀಸರ ವಶಕ್ಕೆ

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲುಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

00

ಎರಡು ವರ್ಷದ ಬಳಿಕ ‘ವಕೀಲ್ ಸಾಬ್ ‘ನಾಗಿ ಪವನ್ ಕಲ್ಯಾಣ್ : ದಸಾರಕ್ಕೆ ಟೀಸರ್ ಕೊಡುಗೆ

ಪರಿಸರ ಸ್ನೇಹಿ ದೀಪಾವಳಿಗೆ ಒತ್ತು: ಗೋಮಯ ಹಣತೆ ಬಳಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ

ಪರಿಸರ ಸ್ನೇಹಿ ದೀಪಾವಳಿಗೆ ಒತ್ತು: ಗೋಮಯ ಹಣತೆ ಬಳಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ

“ನಾವು ಬಿಜೆಪಿ ವಿರೋಧಿಗಳೇ ಹೊರತು ದೇಶ ವಿರೋಧಿಗಳಲ್ಲ : ಫಾರೂಕ್ ಅಬ್ದುಲ್ಲಾ

“ನಾವು ಬಿಜೆಪಿ ವಿರೋಧಿಗಳೇ ಹೊರತು ದೇಶ ವಿರೋಧಿಗಳಲ್ಲ : ಫಾರೂಕ್ ಅಬ್ದುಲ್ಲಾ

ತನ್ನನ್ನು ಬೆಳೆಸಿದ ಪಕ್ಷಕ್ಕೆ ಯಾರು ದ್ರೋಹ ಬಗೆದಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ:ಡಿಕೆಶಿ

ತನ್ನನ್ನು ಬೆಳೆಸಿದ ಪಕ್ಷಕ್ಕೆ ಯಾರು ದ್ರೋಹ ಬಗೆದಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ:ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k-20

ಸೆರಗು-ಲೋಕದ ಬೆರಗು

ಟ್ರೆಂಡಿ ಪಾದರಕ್ಷೆಗಳು 

ಟ್ರೆಂಡಿ ಪಾದರಕ್ಷೆಗಳು 

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಹನಿಟ್ರ್ಯಾಪ್‌: 5.45 ಲಕ್ಷ ರೂ. ದರೋಡೆ; ಬಂಧನ

ಹನಿಟ್ರ್ಯಾಪ್‌: 5.45 ಲಕ್ಷ ರೂ. ದರೋಡೆ; ಬಂಧನ

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ವಶಕ್ಕೆ

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ಪೊಲೀಸರ ವಶಕ್ಕೆ

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲುಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

00

ಎರಡು ವರ್ಷದ ಬಳಿಕ ‘ವಕೀಲ್ ಸಾಬ್ ‘ನಾಗಿ ಪವನ್ ಕಲ್ಯಾಣ್ : ದಸಾರಕ್ಕೆ ಟೀಸರ್ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.