ನಿರ್ಮಾಣದತ್ತ ಪ್ರಿಯಾಂಕಾ ಚಿತ್ತ

Team Udayavani, Nov 1, 2019, 4:52 AM IST

ಇತ್ತೀಚೆಗೆ ಸಿನಿಮಾಗಳಿಗಿಂತ ಬೇರೆ ಬೇರೆ ವಿಷಯಕ್ಕೆ ಟ್ರೋಲ್‌ ಆಗಿ ಚರ್ಚೆಯಾಗುವ ನಟಿಮಣಿಯರಲ್ಲಿ ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ಕೂಡ ಒಬ್ಬರು. ತನ್ನ ಚಿತ್ರ-ವಿಚಿತ್ರ ಫ್ಯಾಷನ್‌, ಹೇಳಿಕೆಗಳ ಮೂಲಕ ಟ್ರೋಲ್‌ ಆಗುತ್ತಿದ್ದ ಪ್ರಿಯಾಂಕಾ, ಮದುವೆ ನಂತರ ಸ್ಕೈ ಈಸ್‌ ಪಿಂಕ್‌ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ, ಇತ್ತೀಚಿಗಷ್ಟೆ ರಿಲೀಸ್‌ ಆದ ಈ ಸಿನಿಮಾ ಹೇಳಿಕೊಳ್ಳುವ ಮಟ್ಟಿಗೆ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಸದ್ಯ ಪತ್ನಿ ನಿಕ್‌ ಜೋನಸ್‌ ಜೊತೆ ಯುಎಸ್‌ಎನಲ್ಲಿ ನೆಲೆಸಿರುವ ಪ್ರಿಯಾಂಕಾ ಚೋಪ್ರಾ ಈಗ ಮತ್ತೂಂದು ಸಿನಿಮಾ ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ.

ಹೌದು, ಬಾಲಿವುಡ್‌ನ‌ ಖ್ಯಾತ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಂದ ಹಾಗೆ ಪ್ರಿಯಾಂಕಾ ಸಂಜಯ್‌ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂದು ಅಂದ್ಕೋಬೇಡಿ. ಸಂಜಯ್‌ ಲೀಲಾ ಬನ್ಸಾಲಿ ಸಿನಿಮಾಕ್ಕೆ ಪ್ರಿಯಾಂಕಾ ಬಂಡವಾಳ ಹೂಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ ನಾಯಕ ನಟಿಯಾಗಿ ಬಾಲಿವುಡ್‌ನ‌ಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಈಗ ಸಂಜಯ್‌ ಲೀಲಾ ಬನ್ಸಾಲಿ ಅವರ ಬಿಗ್‌ ಬಜೆಟ್‌ ಸಿನಿಮಾಕ್ಕೆ ನಿರ್ಮಾಪಕಿಯಾಗಿ ಬಂಡವಾಳ ಹೂಡುವ ಯೋಚನೆಯಲ್ಲಿದ್ದಾರಂತೆ. ಈಗಾಗಲೆ ಸಂಜಯ್‌ ಲೀಲಾ ಬನ್ಸಾಲಿ ಜೊತೆ ಮಾತುಕತೆ ಕೂಡ ನಡೆಸಲಾಗಿದ್ದು, ಪ್ರಿಯಾಂಕಾ ಯೋಚನೆಗೆ ಬನ್ಸಾಲಿ ಕೂಡ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಬನ್ಸಾಲಿ ನಿರ್ದೇಶನದ ಮುಂಬರುವ ಚಿತ್ರ ಬಿಗ್‌ ಬಜೆಟ್‌ ಚಿತ್ರವಾಗಿದ್ದು, ಪ್ರಿಯಾಂಕಾ ಈ ಚಿತ್ರದಲ್ಲಿ ಕೋ-ಪ್ರೊಡ್ನೂಸರ್‌ ಆಗಿ ಕೆಲಸ ಮಾಡುವ ಯೋಜನೆ ಮಾಡಿದ್ದರಂತೆ. ಆದರೆ ಇದು ವಕೌìಟ್‌ ಆಗದ ಕಾರಣ ಈಗ ಒಬ್ಬರೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. 2015ರಲ್ಲಿ ರಿಲೀಸ್‌ ಆದ ಸೂಪರ್‌ ಹಿಟ್‌ ಬಾಜೀರಾವ್‌ ಮಸ್ತಾನಿ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರಿಂದ, ಪ್ರಿಯಾಂಕಾ ಮತ್ತು ಸಂಜಯ್‌ ಲೀಲಾ ಬನ್ಸಾಲಿ ನಡುವೆ ಉತ್ತಮ ಬಾಂಧವ್ಯವಿದೆ. ಹಾಗಾಗಿ, ಇವರಿಬ್ಬರ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಶುರುವಾದರೂ ಅಚ್ಚರಿ ಇಲ್ಲ. ಶೀಘ್ರದಲ್ಲಿಯೇ ಈ ಬಗ್ಗೆ ಒಂದಷ್ಟು ಮಾಹಿತಿಗಳು ಹೊರಬೀಳಲಿದೆ ಎನ್ನುತ್ತವೆ ಬಾಲಿವುಡ್‌ ಮೂಲಗಳು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಹಿಳೆಯರ ಪೈಕಿ ಅನೇಕರು ಹೊಟ್ಟೆತುಂಬಾ ನೀರು ಕುಡಿಯುವುದು ಕಡಿಮೆ. ಅದರಲ್ಲಿಯೂ ಮನೆಯ ಹೊರಗೆ ಕೆಲಸ ಮಾಡುವವರು, ಪ್ರಯಾಣ ಮಾಡುವವರು, ಕಾರ್ಮಿಕ ಮಹಿಳೆಯರು ನೀರು ಕುಡಿಯಲು...

  • ತುಳಸೀ ಗೌಡರ ಬದುಕಿನಲ್ಲಿ ತೀವ್ರ ನೋವಿನ ಹಾದಿ ಎದುರಾದಾಗ ಅವರಿಗೆ ನೆರಳಾದುದು ಹಸಿರು ಗಿಡಗಳು. ನಿಸ್ವಾರ್ಥವಾಗಿ ಹಸಿರು ಸಿರಿಯನ್ನು ಪ್ರೀತಿಸಿದ ಅವರು ನಿಜಕ್ಕೂ...

  • ಹದಿನೇಳು ವರ್ಷದ ಹಿಂದೆ ಮದುವೆಯಾಗಿ ಈ ಬೃಹತ್‌ ಮನೆಯೊಳಗೆ ಕಾಲಿಟ್ಟಾಗ ನನಗೆ ವಾಸ್ತುಶಾಸ್ತ್ರದ ಬಗ್ಗೆ ತಿಳಿವಳಿಕೆಯೇ ಇರಲಿಲ್ಲ. ಅತ್ತೆ ಸರಸ್ವತಿ ಅವರಾಗಲಿ, ಮಾವ...

  • ಉಡುಪಿ -ಕುಂದಾಪುರ ನಡುವೆ ಓಡಾಡುವ ಎಕ್ಸ್‌ಪ್ರೆಸ್‌ ಬಸ್‌ "ಭಾರತಿ'ಯಲ್ಲಿ ಬಸ್‌ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ರೇಖಾ, ಮೂಲತಃ ಬಾಗಲಕೋಟೆಯವರು. ಆದರೆ, ಸುಮಾರು...

  • ನಂಗಿದು ಬೇಡ, ಬೇರೆ ಮಾಡಿಕೊಡು'' ಎಂದು ರಚ್ಚೆ ಹಿಡಿದು ಅಳುತ್ತ ನೆಲದಲ್ಲಿ ಹೊರಳಾಡುತ್ತಿದ್ದ ಹತ್ತು ವರ್ಷದ ಮೊಮ್ಮಗನ ಹಠಕ್ಕೆ ಮಣಿದು, ನೋಯುತ್ತಿದ್ದ ತನ್ನ ಮೊಣಕಾಲುಗಳನ್ನು...

ಹೊಸ ಸೇರ್ಪಡೆ