ಪ್ರಿಯಾಂಕಾನಿಕ್‌ ವಾರ್ಷಿಕೋತ್ಸವ

Team Udayavani, Dec 6, 2019, 5:10 AM IST

ಬಾಲಿವುಡ್‌ ಚೆಲುವೆ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನಸ್‌ಗೆ ಇದೇ ಡಿಸೆಂಬರ್‌ ಮೊದಲ ವಾರ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಕಳೆದ ವರ್ಷ ಡಿ. 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್‌ ಜೋನಸ್‌ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್‌ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಪ್ರಿಯಾಂಕಾ ಹಾಗೂ ನಿಕ್‌ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕದಲ್ಲಿ ಮಾಡಿಕೊಂಡಿದ್ದರು.

ಯಶಸ್ವಿಯಾಗಿ ಒಂದು ವರ್ಷದ ವೈವಾಹಿಕ ಜೀವನವನ್ನು ಪೂರೈಸಿರುವ ಪ್ರಿಯಾಂಕಾ ಮತ್ತು ನಿಕ್‌ ಜೋಡಿ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪರಸ್ಪರ ಶುಭ ಕೋರಿದ್ದಾರೆ.

ಪ್ರಿಯಾಂಕಾ ತನ್ನ ಇನ್ಸಾಗ್ರಾಮ್‌ದಲ್ಲಿ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಾನು ನೀಡಿದ ಮಾತು ಅಂದು, ಇಂದು ಹಾಗೂ ಶಾಶ್ವತವಾಗಿರುತ್ತೆ. ನೀವು ನನಗೆ ಖುಷಿ, ಗೌರವ, ಉತ್ಸಾಹ ಎಲ್ಲವನ್ನು ಒಂದೇ ಕ್ಷಣದಲ್ಲಿ ಕೊಟ್ಟಿದ್ದೀರಿ. ನನ್ನನ್ನು ಹುಡುಕಿದ್ದಕ್ಕಾಗಿ ಧನ್ಯವಾದಗಳು. ನನ್ನ ಪತಿ ನಿಕ್‌ ಜೋನಸ್‌ಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಹಾಗೆಯೇ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ನಾವು ತುಂಬಾ ಅದೃಷ್ಟಶಾಲಿ ಎಂದು ಎನಿಸುತ್ತಿದೆ- ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

ಮತ್ತೂಂದೆಡೆ, ನಿಕ್‌ ಜೋನಸ್‌ ಕೂಡ ಮದುವೆಯ ಸ್ಪಷೆಲ್‌ ಫೋಟೋವನ್ನು ತಮ್ಮ ಇನ್ಸಾಗ್ರಾಮ್‌ದಲ್ಲಿ ಹಂಚಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಈ ದಿನ ನಾವು ಜೊತೆಯಾಗಿ ಇರುವುದಾಗಿ ಪ್ರತಿಜ್ಞೆ ಮಾಡಿದ್ದೇವೆ. ನಾನು ನಿನ್ನನ್ನು ಮನಸ್ಫೂರ್ವಕವಾಗಿ ಇಷ್ಟಪಡುತ್ತೇನೆ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್‌ ಜೋನಸ್‌ ಅವರಿಗೆ ಸ್ಪೆಷಲ್‌ ಸಪ್ರೈìಸ್‌ ಆಗಿ ಗಿನೋ ಹೆಸರಿನ ನಾಯಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಸಪ್ರೈಸ್‌ ನೋಡಿ ನಿಕ್‌ ಮೊದಲು ಶಾಕ್‌ ಆಗಿದ್ದರು. ಗಿನೋ ನಾಯಿಯ ವಿಡಿಯೋವನ್ನು ತಮ್ಮ ಇನ್ಸಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ ಒಂದೇ ಪ್ರೇಮ್‌ನಲ್ಲಿ ಎಷ್ಟು ಕ್ಯೂಟ್‌ ಇದೆ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡಿದ್ದರು.

ಒಟ್ಟಾರೆ ಪ್ರಿಯಾಂಕಾ ಮತ್ತು ನಿಕ್‌ ತಾರಾ ಜೋಡಿಯ ಮದುವೆ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಕೂಡ ಸೋಶಿಯಲ್‌ ಮೀಡಿಯಾಗಳಲ್ಲಿ ಶುಭ ಕೋರುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ