ಸೌತ್‌ಮುಖಿ ಮಸ್ತ್ ಮಸ್ತ್ ಲೇಡಿ

Team Udayavani, Mar 1, 2019, 12:30 AM IST

v-18.jpg

ಹಿಂದಿಯ ಟಿಪ್‌… ಟಿಪ್‌… ಬರ್ಸಾ ಪಾನಿ… ಹಾಡಿಗೆ ನಡು ಬಳುಕಿಸಿ 90ರ ದಶಕದಲ್ಲಿ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದ ಬಾಲಿವುಡ್‌ ಚೆಲುವೆ ರವೀನಾ ಟಂಡನ್‌, ನಂತರ ನಟ ಕಂ ನಿರ್ದೇಶಕ ಉಪೇಂದ್ರ ಅವರ ಉಪೇಂದ್ರ ಚಿತ್ರದ ಮೂಲಕ ನಾಯಕ ನಟಿಯಾಗಿ ಚಂದನವನಕ್ಕೂ ಕಾಲಿಟ್ಟಿದ್ದರು. ಅದರಲ್ಲೂ ಉಪೇಂದ್ರ ಚಿತ್ರದ ಮಸ್ತ್.. ಮಸ್ತ್… ಹುಡುಗಿ ಬಂದ್ಲು ಹಾಡಿಗೆ ಬೋಲ್ಡ್‌ ಆ್ಯಂಡ್‌ ಗ್ಲಾಮರಸ್‌ ಆಗಿ ಹೆಜ್ಜೆ ಹಾಕಲಿದ್ದ ರವೀನಾ ತಮ್ಮ ನಟನೆ ಮತ್ತು ಸೌಂದರ್ಯದಿಂದ ಒಂದೇ ಚಿತ್ರದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನೇ ಸೃಷ್ಟಿಸಿದ್ದರು. ಇನ್ನೇನು ರವೀನಾ ಇತರ ಬಾಲಿವುಡ್‌ ನಾಯಕಿಯರಂತೆ ಕನ್ನಡದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ ಎಂದು ಚಿತ್ರರಂಗ ಅಂದುಕೊಳ್ಳುವ ವೇಳೆಗೆ, ಬಾಲಿವುಡ್‌ಗೆ ಯೂ-ಟರ್ನ್ ತೆಗೆದುಕೊಂಡ ರವೀನಾ ಟಂಡನ್‌, ಹಿಂದಿಯ ಖ್ಯಾತ ನಿರ್ಮಾಪಕ, ವಿತರಕ ಅನಿಲ್‌ ತಡಾನಿ ಅವರ ಕೈಹಿಡಿದು ಹಸೆಮಣೆ ಏರಿದರು. ವೈವಾಹಿಕ ಜೀವನಕ್ಕೆ ಅಡಿಯಿಟ್ಟ ನಂತರ ಚಿತ್ರರಂಗದಿಂದ ಒಂದಷ್ಟು ಅಂತರವನ್ನು ಕಾಯ್ದುಕೊಂಡ ರವೀನಾ, ಜಾಹೀರಾತುಗಳು, ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಒಂದಷ್ಟು ವಿವಾದಗಳ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ ಬೆಳ್ಳಿತೆರೆ ಮೇಲೆ ನಟಿಯಾಗಿ ಕಾಣಿಸಿಕೊಂಡಿದ್ದು ತೀರಾ ಅಪರೂಪ.

ಇನ್ನು ಚಿತ್ರರಂಗಕ್ಕೆ ರೀ-ಎಂಟ್ರಿ ಕೊಡುವ ಬಗ್ಗೆ ಆಗಾಗ್ಗೆ ಕೇಳಿಬರುತ್ತಿದ್ದ ಪ್ರಶ್ನೆಗಳಿಗೆ, ತನಗೆ ಇಷ್ಟವಾಗುವ ಕಥೆಗಳು, ಪಾತ್ರಗಳು ಉತ್ತಮ ತಂತ್ರಜ್ಞರ ತಂಡ ಸಿಕ್ಕರೆ ಅಭಿನಯಿಸುವುದಾಗಿ ಹೇಳುತ್ತಿದ್ದರೂ, ಇಲ್ಲಿಯವರೆಗೂ ಅಂಥ ಯಾವುದೇ ಚಿತ್ರಗಳಲ್ಲಿ ರವೀನಾ ಕಾಣಿಸಿಕೊಂಡಿರಲಿಲ್ಲ. ಆದರೆ, ಇದೀಗ ಎರಡು ದಶಕದ ನಂತರ ರವೀನಾ ಮತ್ತೂಮ್ಮೆ ಕನ್ನಡದತ್ತ ಮುಖ ಮಾಡಿದ್ದು, ಚಿತ್ರರಂಗದಲ್ಲಿ ತಮ್ಮ ಸೆಕೆಂಡ್‌ ಇನ್ನಿಂಗ್ಸ್‌ ಅನ್ನು ಕನ್ನಡ ಚಿತ್ರರಂಗದ ಮೂಲಕವೇ ಶುರು ಮಾಡುವ ಯೋಚನೆಯಲ್ಲಿದ್ದಾರೆ.

ಹೌದು, ಕೆಜಿಎಫ್ ಚಾಪ್ಟರ್‌-2 ಬಹುಕೋಟಿ ವೆಚ್ಚದಲ್ಲಿ, ಬಹುತಾರಾಗಣದಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರದಲ್ಲಿ ಮಹತ್ವವಿರುವ ಪಾತ್ರದಲ್ಲಿ ರವೀನಾ ನಟಿಸುತ್ತಿದ್ದಾರೆ. ಕೆಜಿಎಫ್ ಚಾಪ್ಟರ್‌- 1 ಆರಂಭದ ದೃಶ್ಯದಲ್ಲಿ ಓರ್ವ ರಾಜಕಾರಣಿ ಮಹಿಳೆ ದಾಖಲೆ ಒಂದಕ್ಕೆ ಸಹಿ ಹಾಕುವ ದೃಶ್ಯ ಇದೆ. ಆ ಪಾತ್ರದ ಹೆಸರು ರಮಿಕಾ ಸೇನ್‌. ಈ ರಮಿಕಾ ಪಾತ್ರದಲ್ಲೇ, ರವೀನಾ ನಟಿಸುತ್ತಿದ್ದಾರೆ. ಚಿತ್ರತಂಡ ಈಗಾಗಲೇ ರವೀನಾ ಜೊತೆ ಚರ್ಚಿಸಿದ್ದು, ರವೀನಾ ನಟಿಸೋಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್‌ನ‌ಲ್ಲಿ ರವೀನಾ ಮತ್ತೂಂದು ಇನ್ನಿಂಗ್ಸ್‌ ಶುರು ಮಾಡೋಕೆ ವೇದಿಕೆ ಸಿದ್ಧವಾಗಿದೆ.

ಅಂದ್ಹಂಗೆ ರವೀನಾ ಪತಿ ಅನಿಲ…ಗೂ ತಡಾನಿ ಅವರೇ ಕೆಜಿಎಫ್ ಸಿನಿಮಾವನ್ನು ಹಿಂದಿಯಲ್ಲಿ ವಿತರಣೆ ಮಾಡಿದ್ದರಿಂದ, ರವೀನಾಗೂ ವೈಯಕ್ತಿಕವಾಗಿ ಕೆಜಿಎಫ್ ಸಿನಿಮಾ ಹತ್ತಿರವಾಗಿದೆ. ಒಟ್ಟಾರೆ ರೀ-ಎಂಟ್ರಿ ಕೊಡುತ್ತಿರುವ ರವೀನಾ ಮತ್ತೂಮ್ಮೆ ಕನ್ನಡ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಅಚ್ಚುಮೆಚ್ಚಾಗುತ್ತಾರೆ ಅನ್ನೋದಕ್ಕೆ ಉತ್ತರ ಸಿಗಬೇಕಾದರೆ, ಕೆಜಿಎಫ್ ಚಾಪ್ಟರ್‌-2 ತೆರೆಗೆ ಬರುವವರೆಗೂ ಕಾಯಬೇಕು.

ಟಾಪ್ ನ್ಯೂಸ್

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.