ಸಪೋಟಾ ಸವಿ


Team Udayavani, Mar 1, 2019, 12:30 AM IST

v-19.jpg

ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂಗಳಿಂದ ಸಮೃದ್ಧವಾದ ಸಪೋಟಾ ಹಣ್ಣಿನ ಸೇವನೆಯಿಂದ ರಕ್ತಹೀನತೆ ಮತ್ತು ಎಸಿಡಿಟಿ ಶಮನವಾಗುವುದು. ದೇಹವನ್ನು ತಂಪಾಗಿಸುವ ಈ ಹಣ್ಣನ್ನು ಬಳಸಿ ಹಲವಾರು ವೈವಿಧ್ಯಗಳನ್ನು ತಯಾರಿಸಬಹುದು.

ಸಪೋಟಾ ಹಣ್ಣಿನ ಸ್ಮೋದಿ
ಬೇಕಾಗುವ ಸಾಮಗ್ರಿ:
ಸಪೋಟಾ ಹಣ್ಣು- ನಾಲ್ಕು, ಹಾಲು- ಒಂದು ಕಪ್‌, ಖರ್ಜೂರ- ಎರಡು, ಸಕ್ಕರೆ- ರುಚಿಗೆ ಬೇಕಷ್ಟು, ವೆನಿಲಾ ಐಸ್‌ಕ್ರೀಂ- ಸ್ವಲ್ಪ.

ತಯಾರಿಸುವ ವಿಧಾನ: ಸಿಪ್ಪೆ ತೆಗೆದ ಸಪೋಟಾ ಹಣ್ಣನ್ನು ತಂಪಾದ ಹಾಲು, ಸಕ್ಕರೆ ಮತ್ತು ಖರ್ಜೂರದ ಜೊತೆ ಮಿಕ್ಸಿಯಲ್ಲಿ ರುಬ್ಬಿ. ನಂತರ, ಸರ್ವ್‌ ಮಾಡುವಾಗ ಮೇಲಿನಿಂದ ಐಸ್‌ಕ್ರೀಮ್‌ ಹಾಕಿ ಸವಿಯಲು ಕೊಡಬಹುದು.

ಸಪೋಟಾ ಪೇಡಾ 
ಬೇಕಾಗುವ ಸಾಮಗ್ರಿ:
ಸಪೋಟಾ ಹಣ್ಣು- ಆರು, ಸಕ್ಕರೆ- ಐದು ಚಮಚ, ಖರ್ಜೂರ- ಆರು, ತುಪ್ಪ- ನಾಲ್ಕು ಚಮಚ, ಚಿರೋಟಿ ರವೆ- ಐದು ಚಮಚ, ಸಪ್ಪೆ ಖೋವಾ- ಎರಡು ಚಮಚ, ಕೊಬ್ಬರಿಪುಡಿ- ಆರು ಚಮಚ, ಬಾದಾಮಿ ಪುಡಿ- ನಾಲ್ಕು ಚಮಚ, ಏಲಕ್ಕಿ- ಕಾಲು ಚಮಚ.

ತಯಾರಿಸುವ ವಿಧಾನ: ಸಪೋಟಾ ಹಣ್ಣು ಮತ್ತು ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ಮಿಕ್ಸಿಯಲ್ಲಿ ರುಬ್ಬಿ ಬಾಣಲೆಗೆ ಹಾಕಿ ಕಾಯಲು ಇಡಿ. ನಂತರ, ಇದಕ್ಕೆ ತುಪ್ಪ, ಸಕ್ಕರೆ ಹಾಗೂ ಚಿರೋಟಿ ರವೆ ಸೇರಿಸಿ ತಳ ಹಿಡಿಯದಂತೆ ಸೌಟಿನಿಂದ ಮಗುಚುತ್ತಾ ಇರಬೇಕು. ಇದಕ್ಕೆ ಖೋವಾ, ಬಾದಾಮಿತರಿ ಮತ್ತು ಏಲಕ್ಕಿಪುಡಿ ಸೇರಿಸಿ ಉಂಡೆಗೆ ಬರುವಷ್ಟು ಗಟ್ಟಿಯಾಗಿ ಕಾಯಿಸಿ ಒಲೆಯಿಂದ ಇಳಿಸಿ. ಆರಿದ ನಂತರ ಪೇಡಾದ ಆಕಾರದಲ್ಲಿ ಉಂಡೆ ಮಾಡಿ ಪುಡಿ ಮಾಡಿಟ್ಟುಕೊಂಡಿರುವ ಕೊಬ್ಬರಿತುರಿಯಲ್ಲಿ ಹೊರಳಿಸಿ ಮೇಲಿನಿಂದ ತುಪ್ಪದಲ್ಲಿ ಹುರಿದ ಗೋಡಂಬಿ-ದ್ರಾಕ್ಷಿಯಿಂದ ಅಲಂಕರಿಸಿ. 

ಸಪೋಟಾ ಕುಲ್ಫಿ 
ಬೇಕಾಗುವ ಸಾಮಗ್ರಿ:
ಸಪೋಟಾ- ನಾಲ್ಕು, ಬಾಳೆಹಣ್ಣು- ಒಂದು, ಹಾಲು- ಒಂದು ಕಪ್‌, ಕೊಬ್ಬರಿತುರಿ- ಎರಡು ಚಮಚ, ಸಣ್ಣಗೆ ಹೆಚ್ಚಿದ ಖರ್ಜೂರ- ನಾಲ್ಕು ಚಮಚ, ತುಪ್ಪದಲ್ಲಿ ಹುರಿದ ಬಾದಾಮಿ ತರಿ- ಎರಡು ಚಮಚ, ಜೇನುತುಪ್ಪ- ಎರಡು ಚಮಚ, ಸಕ್ಕರೆ ರುಚಿಗೆ.

ತಯಾರಿಸುವ ವಿಧಾನ: ಮಿಕ್ಸಿಜಾರಿಗೆ ಸಪೋಟಾ, ಬಾಳೆಹಣ್ಣು, ಹಾಲು, ಸಕ್ಕರೆ, ಸ್ವಲ್ಪ ಖರ್ಜೂರ, ಕೊಬ್ಬರಿತುರಿ ಮತ್ತು ಜೇನುತುಪ್ಪ ಇತ್ಯಾದಿಗಳನ್ನು ಹಾಕಿ, ಚೆನ್ನಾಗಿ ರುಬ್ಬಿ ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಉಳಿದ ಖರ್ಜೂರ ಮತ್ತು ಬಾದಾಮಿತರಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಕುಲ್ಫಿ ಮೋಡ್‌ಗೆ ಹಾಕಿ ಫ್ರೀಜರ್‌ನಲ್ಲಿಟ್ಟು ಗಟ್ಟಿಯಾಗಿಸಿ ಸರ್ವ್‌ ಮಾಡಬಹುದು.

ಸಪೋಟಾ ವಿದ್‌ ಓಟ್ಸ್‌ 
ಬೇಕಾಗುವ ಸಾಮಗ್ರಿ:
 ಸಣ್ಣಗೆ ಹೆಚ್ಚಿದ ಸಪೋಟಾ- ನಾಲ್ಕು, ಸಣ್ಣಗೆ ಹೆಚ್ಚಿದ ಬಾಳೆಹಣ್ಣು, ಪಪ್ಪಾಯಿ, ಸೇಬು, ಖರ್ಬುಜ ಇತ್ಯಾದಿ ಹಣ್ಣುಗಳ ಮಿಶ್ರಣ- ಆರು ಚಮಚ, ಓಟ್ಸ್‌ – ನಾಲ್ಕು ಚಮಚ, ತಂಪಾದ ಹಾಲು- ಒಂದು ಕಪ್‌, ಜೇನುತುಪ್ಪ- ಎರಡು ಚಮಚ, ಸಕ್ಕರೆ ಅಥವಾ ಬೆಲ್ಲ – ರುಚಿಗೆ ಬೇಕಷ್ಟು .

 ತಯಾರಿಸುವ ವಿಧಾನ: ಓಟ್ಸ್‌ನ್ನು ಬಾಣಲೆಯಲ್ಲಿ ಬಾಡಿಸಿಟ್ಟುಕೊಳ್ಳಿ. ಮಿಕ್ಸಿಂಗ್‌ ಬೌಲ್‌ಗೆ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳನ್ನು ಹಾಕಿ ಜೇನುತುಪ್ಪ ಸೇರಿಸಿ ಸೌಟಿನಿಂದ ಸ್ವಲ್ಪ ಮ್ಯಾಶ್‌ಮಾಡಿಕೊಳ್ಳಿ. ನಂತರ, ಹಾಲು ಮತ್ತು ಬೇಕಿದ್ದರೆ ಸಕ್ಕರೆ ಸೇರಿಸಿ. ಕೊನೆಗೆ ಓಟ್ಸ್‌ ಸೇರಿಸಿ ಪುನಃ ಮಿಶ್ರಮಾಡಿ. ಮೇಲಿನಿಂದ ಬಾದಾಮಿತರಿ ಮತ್ತು ಕಾರ್ನ್ಫ್ಲೇಕ್ಸ್‌ ಉದುರಿಸಿ ಸರ್ವ್‌ ಮಾಡಬಹುದು.

ಗೀತಸದಾ

ಟಾಪ್ ನ್ಯೂಸ್

200

ಮುಂದಿನ ಐಪಿಎಲ್ ಗೆ ಇನ್ನೆರಡು ತಂಡಗಳ ಸೇರ್ಪಡೆ

122

ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ

kangana

“ನಾಲ್ಕನೇ” ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ನಟಿ ಕಂಗನಾ

ದೀಪಾವಳಿಗೆ ಮುಂಚಿತವಾಗಿ ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ

 ದೀಪಾವಳಿ: ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ, ಸುರಕ್ಷಿತವಾಗಿರುವುದು ಹೇಗೆ?

1-33

ಮಾವನಿಗೆ ದಾದಾ ಸಾಹೇಬ್ ಫಾಲ್ಕೆ, ಅಳಿಯನಿಗೆ ಅತ್ಯುತ್ತಮ ನಟ ಪ್ರಶಸ್ತಿ

Untitled-1

ಗೋವಾದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಪಿ.ಚಿದಂಬರಂ

1-rr

ಪಾಕ್ ವಿರುದ್ಧ ಸೋಲಿನ ಬಳಿಕ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

k-20

ಸೆರಗು-ಲೋಕದ ಬೆರಗು

ಟ್ರೆಂಡಿ ಪಾದರಕ್ಷೆಗಳು 

ಟ್ರೆಂಡಿ ಪಾದರಕ್ಷೆಗಳು 

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

MUST WATCH

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

udayavani youtube

ಅಡಿಕೆಯನ್ನು ಸುಲಭವಾಗಿ ಬೆಳೆಯುವ ಹಲವು ವಿಧಾನಗಳು

ಹೊಸ ಸೇರ್ಪಡೆ

200

ಮುಂದಿನ ಐಪಿಎಲ್ ಗೆ ಇನ್ನೆರಡು ತಂಡಗಳ ಸೇರ್ಪಡೆ

122

ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ

1-yrrt

ಕಳವಾಗಿ 2 ಸಂತೆಗೆ ಹೋದರೂ ಮಾಲೀಕರ ಸೇರಿದ 7 ಕುರಿಗಳು

gow theft – protest

ಗೋ ಕಳ್ಳಸಾಗಾಣಿಕೆ ತಡೆಯಲು ಕ್ರಮಕ್ಕೆ ಆಗ್ರಹ; ರಸ್ತೆ ತಡೆ ಮಾಡಿ ಪ್ರತಿಭಟನೆ

ಯಡಿಯೂರಪ್ಪ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

ಯಡಿಯೂರಪ್ಪ ಪ್ರಚಾರದಿಂದ ಬಿಜೆಪಿಗೆ ಆನೆ ಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.