ಗೆಜ್ಜೆ ಮಾತಾಡುತಾವ !


Team Udayavani, Jun 29, 2018, 6:00 AM IST

x-23.jpg

ಈಗ ಹೆಣ್ಣು-ಗಂಡಿನ ಅಡಿಯಾಳಲ್ಲ, ಹೆಣ್ಣು ಗಂಡಿಗೆ ವಿಧೇಯಳಾಗಿರಬೇಕೆಂದಿಲ್ಲ ಎನ್ನುವ ಕಾಲ. ಹಣೆಗೆ ಬೊಟ್ಟು, ಕೈಗೆ ಬಳೆಯನ್ನು ಬದಿಗೊತ್ತಿ, ಪ್ಯಾಂಟ್‌ ಶರ್ಟ್‌ ಹಾಕಿ ತಾನು ಗಂಡಿಗೆ ಸರಿಸಮಾನಳು ಎನ್ನುವ ಕಾಲ, ಆಗ ಸಹಜವಾಗಿ ಸ್ತ್ರೀಯ ಸ್ವತ್ತಾಗಿದ್ದ ಗೆಜ್ಜೆಯೂ ಬದಿಗೆ ಬಿತ್ತು. ಆದರೆ, ಸಂಪೂರ್ಣವಾಗಿ ಬದಿಗೆ ಹೋಯಿತು ಎನ್ನುವಂತಿಲ್ಲ, ಫ್ಯಾಷನ್‌ ಜಗತ್ತಿನಲ್ಲಿ ಒಂದು ಕಾಲಿಗೆ ಶಬ್ಧವಿಲ್ಲದ ಗೆಜ್ಜೆ ಆ್ಯಂಕಲೆಟ್‌ ಬಂದರೆ, ಸೀರೆ, ಲಂಗ ಹಾಕಿದ ಹೆಣ್ಣು ಮಕ್ಕಳು ಮತ್ತು ಸ್ತ್ರೀಯರು ನಿಃಶಬ್ದದ ಗೆಜ್ಜೆ ಧರಿಸತೊಡಗಿದರು. ಈಗ ಗೆಜ್ಜೆಗಳ ಶಬ್ಧ ಸಂಪೂರ್ಣವಾಗಿ ನಿಂತಿಲ್ಲ, ಚಿಕ್ಕಮಕ್ಕಳ ಕಾಲಲ್ಲಿ, ಕೆಲವು ಹೆಣ್ಣುಮಕ್ಕಳ ಕಾಲಿನ ಗೆಜ್ಜೆಗಳು ಶಬ್ಧವನ್ನು ಕಳೆದುಕೊಂಡಿಲ್ಲ. 

ಸಂಜೆ ಬಾಲ್ಕನಿಯಲ್ಲಿ ನಿಂತು ಹೊರಗೆ ನೋಡುತ್ತಿದ್ದೆ, ಎರಡು ವರ್ಷದ ಪುಟ್ಟ ಮಗುವೊಂದು ಓಡುತ್ತಿದ್ದರೆ ಕಾಲಲ್ಲಿದ್ದ ಗೆಜ್ಜೆ “ಕಿಣಿ ಕಿಣಿ’ ಶಬ್ದ ಮಾಡುತ್ತಿತ್ತು, “ಪುಟ್ಟ’ ಎಂದರೆ ಮಗು ನಮ್ಮ ಹಿಂದೆಯೇ ಓಡಿಬರುತ್ತಿದ್ದಳು. ಮಗುವಿನ ವೇಷಭೂಷಣದಿಂದ ಒಂದು ಕ್ಷಣ ಮಗುವು ಗಂಡೋ, ಹೆಣ್ಣೋ ಎನ್ನುವ ಅನುಮಾನ ಬಂದರೂ ಕಾಲಲ್ಲಿದ್ದ ಗೆಜ್ಜೆಯಿಂದಾಗಿ ಅದು ಹೆಣ್ಣುಮಗುವೇ ಎನ್ನುವುದು ದೃಢವಾಯಿತು. ಹೆಣ್ಣು ಮಕ್ಕಳಿಗೇ ಏಕೆ ಗೆಜ್ಜೆ ಎಂಬ ಪ್ರಶ್ನೆ ಮನದಲ್ಲಿ ಮೂಡಿತು. 

ಹೆಣ್ಣು ಮೊದಲು ಯಾತಕ್ಕಾಗಿ ಗೆಜ್ಜೆ ಕಟ್ಟಿಕೊಂಡಿರಬಹುದು? ಕುತ್ತಿಗೆಯ ಸರ, ಕೈಯ ಬಳೆ, ಕಾಲಿನ ಗೆಜ್ಜೆ ಎಲ್ಲವೂ ಒಂದು ಕಾಲದಲ್ಲಿ ಗಂಡು-ಹೆಣ್ಣಿಗೆ ಹಾಕಿದ ಸಂಕೋಲೆಯಿದ್ದು ಅದೇ ಕ್ರಮೇಣ ಆಲಂಕಾರಿಕ ವಸ್ತುವಾಗಿರಬಹುದೇನೋ. ಇಲ್ಲವೇ ಹೆಣ್ಣು ತನ್ನ ಅಸ್ತಿತ್ವವನ್ನು ಆಗಾಗ ತಿಳಿಸಲು ಕೈಗೆ ಕಿಲಿ ಕಿಲಿ ಶಬ್ಧ ಬರುವ ಬಳೆಗಳು, ಕಾಲಿಗೆ ಕಿಣಿ ಕಿಣಿ ಶಬ್ಧ ಮಾಡುವ ಗೆಜ್ಜೆಯನ್ನು ಹಾಕಿಕೊಂಡಿರಬಹುದೆ? ಕೆಲವು ಗಂಡು ಪ್ರಾಣಿ-ಪಕ್ಷಿಗಳು ಹೆಣ್ಣನ್ನು ಆಕರ್ಷಿಸಲು ವಿಚಿತ್ರ ಶಬ್ಧ ಮಾಡುತ್ತವೆಯಂತೆ, ಅದೇ ರೀತಿ ಹೆಣ್ಣು ಮಕ್ಕಳು ಪುರುಷರನ್ನು ಆಕರ್ಷಿಸಲು ಶಬ್ದ ಬರುವ ಗೆಜ್ಜೆಯನ್ನು ಹಾಕುತ್ತಾರೆಂದು  ಕೆಲವು ಪುರುಷ ಪುಂಗವರ ಅಂಬೋಣ. ಹೆಣ್ಣು ಅಲಂಕಾರ ಪ್ರಿಯಳು, ಹೆಣ್ಣಿನ ಅಲಂಕಾರದ ವಸ್ತುಗಳಲ್ಲಿ ಗೆಜ್ಜೆಯೂ ಒಂದು, ಇದು ಹೆಚ್ಚು ತಲೆಕೆಡಿಸಿಕೊಳ್ಳಲು ಇಚ್ಚಿಸದ ನನ್ನ ಅನಿಸಿಕೆ. ನಮ್ಮ ಅಲೋಚನೆಗಳು ಏನೇ ಇರಲಿ, ವಾದಗಳು ಯಾವುದೇ ಸಿದ್ಧಾಂತವನ್ನು ಪ್ರತಿಪಾದಿಸಲಿ ಗೆಜ್ಜೆ ಹೆಣ್ಣಿಗೆ ಪ್ರಿಯವಾಗಿದ್ದರೆ, ಗೆಜ್ಜೆ ಕಟ್ಟಿಕೊಂಡ ಹೆಣ್ಣು ಗಂಡಿಗೆ ಪ್ರಿಯ. 

ಗೆಜ್ಜೆಯ ಆವಿಷ್ಕಾರ ಯಾವ ಕಾಲದಲ್ಲಿ ಆಗಿರಬೇಕು? ಅತೀ ಹಳೆಯದೆನ್ನಬಹುದಾದ, ಮಾನವ ಬಂಡೆಗಳ ಮೇಲೆ ಬಿಡಿಸಿದ ಚಿತ್ರ ಗಮನಿಸಿದರೆ ಗಂಡಿನ ಒಂದು ಕಾಲಲ್ಲಿ, ಹೆಣ್ಣಿನ ಎರಡು ಕಾಲಲ್ಲಿ ಶಬ್ಧ ಬಾರದ “ಕಾಲ್ಕಡಗ’ ಹಾಕಿಕೊಂಡದ್ದನ್ನು ನೋಡಬಹುದು, ಆದರೆ, ಇವುಗಳನ್ನು ಗೆಜ್ಜೆ ಎಂದು ಕರೆಯಲಾಗುವುದಿಲ್ಲ. ನಾ ಕಂಡ ಗೆಜ್ಜೆಯ ಅತೀ ಹಳೆಯ ಚಿತ್ರವೆಂದರೆ ನೃತ್ಯಗಾತಿಯರ ಕಾಲಲ್ಲಿ, ಅದೇ ಅಲ್ಲದಿದ್ದರೂ ಅಂತಹದೇ ಸ್ವಲ್ಪ ಸಣ್ಣರೀತಿಯ ಗೆಜ್ಜೆಗಳು ಹೆಣ್ಣುಮಕ್ಕಳ ಕಾಲಲ್ಲಿ ಕಂಡು ಬರತೊಡಗಿತು. 

ಈಗ ಹೆಣ್ಣು-ಗಂಡಿನ ಅಡಿಯಾಳಲ್ಲ , ಹೆಣ್ಣು ಗಂಡಿಗೆ ವಿಧೇಯಳಾಗಿರಬೇಕೆಂದಿಲ್ಲ ಎನ್ನುವ ಕಾಲ. ಹಣೆಗೆ ಬೊಟ್ಟು, ಕೈಗೆ ಬಳೆಯನ್ನು ಬದಿಗೊತ್ತಿ, ಪ್ಯಾಂಟ್‌ ಶರ್ಟ್‌ ಹಾಕಿ ತಾನು ಗಂಡಿಗೆ ಸರಿಸಮಾನಳು ಎನ್ನುವ ಕಾಲ, ಆಗ ಸಹಜವಾಗಿ ಸ್ತ್ರೀಯ ಸ್ವತ್ತಾಗಿದ್ದ ಗೆಜ್ಜೆಯೂ ಬದಿಗೆ ಬಿತ್ತು. ಆದರೆ, ಸಂಪೂರ್ಣವಾಗಿ ಬದಿಗೆ ಹೋಯಿತು ಎನ್ನುವಂತಿಲ್ಲ, ಫ್ಯಾಷನ್‌ ಜಗತ್ತಿನಲ್ಲಿ ಒಂದು ಕಾಲಿಗೆ ಶಬ್ಧವಿಲ್ಲದ ಗೆಜ್ಜೆ ಆ್ಯಂಕಲೆಟ್‌ ಬಂದರೆ, ಸೀರೆ, ಲಂಗ ಹಾಕಿದ ಹೆಣ್ಣು ಮಕ್ಕಳು ಮತ್ತು ಸ್ತ್ರೀಯರು ನಿಃಶಬ್ದದ ಗೆಜ್ಜೆ ಧರಿಸತೊಡಗಿದರು. ಈಗ ಗೆಜ್ಜೆಗಳ ಶಬ್ಧ ಸಂಪೂರ್ಣವಾಗಿ ನಿಂತಿಲ್ಲ, ಚಿಕ್ಕಮಕ್ಕಳ ಕಾಲಲ್ಲಿ, ಕೆಲವು ಹೆಣ್ಣುಮಕ್ಕಳ ಕಾಲಿನ ಗೆಜ್ಜೆಗಳು ಶಬ್ಧವನ್ನು ಕಳೆದುಕೊಂಡಿಲ್ಲ. ಪ್ರಸಿದ್ಧ ಹಿಂದಿ ಸಂಗೀತಗಾರ ಬಪ್ಪಿ ಲಹರಿ ಹೆಂಗಸರನ್ನೂ ಮೀರಿ ಕುತ್ತಿಗೆಗೆ ಡಜನುಗಟ್ಟಲೆ ಸರ, ಕೈಗೆ ಬ್ರೇಸ್‌ಲೆಟ್‌ ಹಾಕಿಕೊಂಡರೂ ಗೆಜ್ಜೆ ಹಾಕುವ ಸಾಹಸ ಮಾಡಿದಂತಿಲ್ಲ.   

ಆಕಾರವಿಲ್ಲದೆ ಕೇವಲ ಗೆಜ್ಜೆಯ ಶಬ್ದ ಮಾತ್ರ ಕೇಳುತ್ತಿದ್ದರೆ “ಹೆಣ್ಣು ಪಿಶಾಚಿ’ ಅಡ್ಡಾಡುತ್ತಿದೆಯೆಂದು ಅರ್ಥ, ಈ ಅರ್ಥ ಕಲ್ಪಿಸಿದ್ದು ಸಿನೆಮಾದವರು ಮತ್ತು ಹತ್ತು ಗಂಟೆಯ ನಂತರ ಬರುವ ಟಿ.ವಿ. ಧಾರಾವಾಹಿಯವರು. ನನ್ನ ಮನದಲ್ಲಿ ಗೆಜೆcಗಳು ಯಾವತ್ತೂ ಬಾಲ್ಯದೊಂದಿಗೆ ಬೆಸೆದುಕೊಂಡಿರುತ್ತದೆ. ಗೆಜ್ಜೆಯ ಶಬ್ದ  ಕಿವಿಗೆ ಬಿತ್ತೂ ಮನಸ್ಸು ಬಾಲ್ಯದತ್ತ ಓಡುತ್ತದೆ. ಸಾಯಂಕಾಲ ಶಾಲೆಯಿಂದ ಬರುತ್ತಿದ್ದಂತೆ ಚೀಲವನ್ನು ಒಂದು ಮೂಲೆಗೆ, ಚಪ್ಪಲಿಯನ್ನು ಮತ್ತೂಂದು ಮೂಲೆಗೆ ಎಸೆದು ಅಳುತ್ತ ಕೂತಿದ್ದ ನನ್ನನ್ನು ಅಮ್ಮ ಕೇಳಿದರು, “ಹೆಣೆ ಎಂತ ಆಯಿತಾ?’ 

“ನಂಗ ಗೆಜ್ಜೆ ಬೇಕ್‌’ ಎಂದೆ. ಅಮ್ಮ ಕೈ ಹಿಡಿದು ಎಬ್ಬಿಸುತ್ತ, “ಅಲ್ಲ, ನೀನಿನ್ನೂ ಸಣ್ಣವಳು, ಬಿದ್‌ª ಹೋದ್ರೂ ಗೊತ್ತ ಆತಿಲ್ಲ, ಮೂರನೇಯ ಕ್ಲಾಸಲ್ಲಿ ಫ‌ಸ್ಟ್‌ ಬಾ, ನಾಲ್ಕನೆ ಕ್ಲಾಸಿಗೆ ಹೊಪತ್ತಿಗೆ ಗೆಜ್ಜೆ ತೆಗೆಸಿ ಕೊಡುವಾ’ ಎಂದಾಗ ನನ್ನ ಅಳು ತಾರಕಕ್ಕೇರಿತು. “ನಂಗ ಗೆಜ್ಜೆ ಬೇಕೇ ಬೇಕ್‌, ನನ್ನ ಫ್ರೆಂಡ್ಸ್‌ ಶೋಭಾ, ಪೂರ್ಣಿಮಾ ಎಲ್ಲರ ಹತ್ತಿ¤ರ ಇತ್ತ’ ನನ್ನ ಇಂತಹ ಹಠಗಳಿಗೆಲ್ಲಾ ಅಮ್ಮ ಕ್ಯಾರ್‌ ಮಾಡುತ್ತಿರಲಿಲ್ಲ. ಅರ್ಧ ಗಂಟೆಯಾದರೂ ನನ್ನ ಅಳು ನಿಲ್ಲುವ ಲಕ್ಷಣ  ಕಾಣದಾದಾಗ ಅಮ್ಮನಿಗೆ ಮಗಳು ಅಳುವುದನ್ನು ಕಂಡು ಹೊಟ್ಟೆ ಚುರುಗುಟ್ಟಿರಬೇಕು “ಅಪ್ಪಯ್ಯ ಬರಲಿ, ಹೇಳುವಾ, ನೀ ಈಗ ಕಾಫಿ ಕುಡಿ’ ಎನ್ನುತ್ತಾ ನನ್ನನ್ನೆಬ್ಬಿಸಿದಳು. ರಾತ್ರಿ ಅಪ್ಪ, ಅಮ್ಮ ನನ್ನ ಗೆಜ್ಜೆಯ ಕೋರಿಕೆಯ ಬಗ್ಗೆ ಮಾತಾಡಿಕೊಂಡಿರಬೇಕು.

ಶನಿವಾರ ಸಂಜೆ ನಮ್ಮ ದಂಡು ಗೆಜ್ಜೆ ಖರೀದಿಗೆ ಊರಿನ ಪ್ರಸಿದ್ಧ ಬೆಳ್ಳಿ ಅಂಗಡಿಗೆ ಹೊರಟಿತು, ಅಂಗಡಿಯವರು ತಮ್ಮಲ್ಲಿದ್ದ ಸುಮಾರು ಇಪ್ಪತ್‌‚ತೈದು ಬಗೆಯ ಗೆಜ್ಜೆ ತೋರಿಸಿದರೂ ನನಗೇನೂ ಸಮಾಧಾನವಿಲ್ಲ, ಬೇಡ ಎನ್ನುವಂತೆ ತಲೆಯಲ್ಲಾಡಿಸುತ್ತಿದ್ದೆ. “ಪೂರ್ಣಿಮಾಳ‌ ಕಾಲಲ್ಲಿದ್ದ ಹಾಗಿಂದೇ ಬೇಕು’ ಎನ್ನುತ್ತಾ ಅಳು ಮೂತಿ ಮಾಡಿದೆ. ಕಡೆಗೆ ಪೂರ್ಣಿಮಾಳ ಕಾಲಲ್ಲಿದ್ದ ಗೆಜ್ಜೆ ತರಹದ್ದನ್ನು ಹುಡುಕುತ್ತ ಕುಂದಾಪುರಕ್ಕೇ ಪ್ರದಕ್ಷಿಣೆ ಬಂದೆವು, ಅಂತೂ ಯಾವುದೋ ಅಂಗಡಿಯಲ್ಲಿ ನನ್ನ ಜೀವದ ಗೆಳತಿ ಪೂರ್ಣಿಮಾಳ ಕಾಲಲ್ಲಿ ಇದ್ದ ತರಹದ್ದೇ ಸಿಕ್ಕಿತು, ಬಹುಶಃ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಿರಬೇಕು. ಆದರೆ, ನನ್ನ ಮೊದಲ ಗೆಜ್ಜೆಯ ಶಬ್ದ ಕೇಳುವಷ್ಟರಲ್ಲಿ ತಮ್ಮ ಬಿದ್ದು ಪೆಟ್ಟು ಮಾಡಿಕೊಂಡ, ಅಂಗಡಿ ಅಂಗಡಿ ಹತ್ತಿ ಇಳಿಯುವಷ್ಟರಲ್ಲಿ ಅಮ್ಮ ಕೊಡೆ ಕಳೆದುಕೊಂಡಿದ್ದಳು. ಕಾಲಿಗೆ ಗೆಜ್ಜೆ ಬಂದದ್ದು ಹೆಚ್ಚು ಸಂತೋಷವೋ, ಇಲ್ಲ ಶಾಲೆಯಲ್ಲಿ ಎಲ್ಲರಿಗೂ ಗೆಜ್ಜೆ ತೋರಿಸಿ ಎಲ್ಲರ ಗಮನ ನನ್ನತ್ತ ಸೆಳೆಯುವುದು ಹೆಚ್ಚು ಸಂತೋಷವೋ ಗೊತ್ತಿಲ್ಲ. ಮರುದಿನ ಯುದ್ಧದಲ್ಲಿ ಗೆದ್ದು ಬಂದ ಸೇನಾನಿಯಂತೆ ನಾನು ಶಾಲೆಗೆ ಹೋಗಿದ್ದೆ, ಎಲ್ಲರಿಗೂ ಗೆಜ್ಜೆ ತೋರಿಸುವ ಗಲಾಟೆಯಲ್ಲಿ ಅಪ್ಪಿ ಟೀಚರಿಂದ ಎರಡು ಏಟೂ ಬಿತ್ತು. ಮನೆಯಲ್ಲೂ ಬಂದು ಹೋದವರಿಗೆಲ್ಲ ಗೆಜ್ಜೆ ತೋರಿಸುವ ಗೌಜು ನನ್ನದು. ಗೆಜ್ಜೆ ಶಬ್ದ ದೊಡ್ಡದಾಗಿ ಕೇಳಲು ಸುಮ್ಮನೆ ಆ ಕಡೆಯಿಂದ  ಈ ಕಡೆಗೆ ಓಡುತ್ತಿದ್ದೆ, ರಗಳೆ ತಡೆಯಲಾರದ ಮನೆಯವರು “ಗೀತು, ಸುಮ್ಮನೆ ಒಂದ್‌ ಬದಿಯಲ್ಲಿ ಕೂತ್ಕೊ ಕಾಂಬೊ’ ಎನ್ನುತ್ತಿದ್ದರು. 

ನನ್ನ ಜೀವನದಲ್ಲಿ ಮೊದಲು ಕಲಿತ ಪಾಠಗಳಲ್ಲಿ ಸಂತೋಷದ ಕ್ಷಣಗಳಿಗಿಂತ ದುಃಖದ ಕ್ಷಣಗಳೇ ಜಾಸ್ತಿ.  ಎಂದಿನಂತೆ ಶಾಲೆ ಬಿಟ್ಟವಳು ಕುಣಿಯುತ್ತ, ಹಾರುತ್ತಾ ಗೇಟು ತೆರೆದು ಒಳಗೆ ಬರುತ್ತಿದ್ದಂತೆ ನನ್ನ ಒಂದು ಕಾಲಲ್ಲಿ ಗೆಜ್ಜೆ ಕಾಣಲಿಲ್ಲ, ಯಾವಾಗ ನನ್ನ ಕಾಲಿನಿಂದ ಉದುರಿತ್ತೂ ಗೊತ್ತಾಗಲಿಲ್ಲ. ಹೆದರಿಕೆ, ಅಳು ಎಲ್ಲವೂ ಒಟ್ಟಿಗೆ ಬಂತು, ಆದರೂ ಗಟ್ಟಿಯಾಗಿ ಅಳಲೂ ಹೆದರಿಕೆ, ನನ್ನ ಒಂದು ಕಾಲಲ್ಲಿ ಗೆಜ್ಜೆ ಇಲ್ಲದ್ದು ಮೊದಲು ನನ್ನ ತಮ್ಮನ ಕಣ್ಣಿಗೆ ಬಿತ್ತು. “ಅಮ್ಮ, ಅಮ್ಮ ಅಕ್ಕನ ಒಂದ ಕಾಲಲ್ಲಿ ಗೆಜ್ಜೆ ಇಲ್ಲ’ ಎನ್ನುತ್ತ¤ ಚಾಡಿ ಹೇಳಲು ತಡಮಾಡಲಿಲ್ಲ. ತಮ್ಮನ ಚಾಡಿ ಮಾತು ಅಮ್ಮನ ತನಿಖೆಯಲ್ಲಿ ಮುಂದುವರೆದು, ಗೆಜ್ಜೆ ಕಳೆದು ಹೋದದ್ದು ಖಂಡಿತವಾದಾಗ ಬೆನ್ನಿಗೆ ನಾಲ್ಕು ಗುದ್ದಿ, “ಹೇಳಿದ್ದೆ, ಮೊದಲೇ ನಿಂಗೆ ಬ್ಯಾಡ ಅನ್ನಕಂಡ್‌, ಶುದ್ಧ ಕಪಿಗಳು’ ಎನ್ನುತ್ತಾ ಇದ್ದ ಒಂದು ಗೆಜ್ಜೆಯನ್ನು ಬಿಚ್ಚಿಟ್ಟಳು. ಮತ್ತೆ ಯಾರ ಕಾಲಲ್ಲಿ ಗೆಜ್ಜೆ ಕಂಡರೂ ಕಾಣದಂತೆ ಇರುತ್ತಿ¨ªೆ. ನನ್ನ ಕಾಲಿಗೆ ಗೆಜ್ಜೆ ಬಂದದ್ದು ಎಂಟನೆಯ ಕ್ಲಾಸಿನಲ್ಲಿ ಲೆಕ್ಕದಲ್ಲಿ ನೂರಕ್ಕೆ ನೂರು ತೆಗೆದುಕೊಂಡಾಗ. ಗೆಜ್ಜೆ ಎಷ್ಟು ಚೆಂದವಿದ್ದರೂ ಬೆಳ್ಳಿಯ ಗೆಜ್ಜೆಗಳು ನಮ್ಮ ಕರಾವಳಿಯಲ್ಲಿ ಕಪ್ಪಾಗಲು ಹೆಚ್ಚು ದಿನಗಳು ಬೇಡ. ಮತ್ತೆ ಎರಡು-ಮೂರು ವರ್ಷಕ್ಕೊಮ್ಮೆ ಕಾಲಲ್ಲಿದ್ದ ಗೆಜ್ಜೆ ಬದಲಾಗುತ್ತಾ ಹೋಯಿತು, ಆ ಸಮಯದ ಫ್ಯಾಷನ್ನಿಗೆ ತಕ್ಕಂತೆ ಗೆಜ್ಜೆಗಳು ಬಂದವು. ಮದುವೆಯ ಸಮಯಕ್ಕಂತೂ ಅತೀ ಚೆಂದದ ಗೆಜ್ಜೆಯನ್ನೇ ಖರೀದಿಸಿದ್ದೆ, ಆದರೆ, ಮೊದಲ ರಾತ್ರಿಯಲ್ಲಿಯೇ ಪತಿರಾಯರು “ಮೊದಲು ಈ ಗೆಜ್ಜೆಯನ್ನು ಬಿಚ್ಚಿಡು ಮಾರಾಯತಿ’ ಎಂದರು. ಸುಮ್ಮನೆ ಹೇಳಿದ್ದನ್ನು ಕೇಳಿದೆ. ಈ ಇಪ್ಪತ್ತೈದು ವರ್ಷಗಳ ದಾಂಪತ್ಯದಲ್ಲಿ ಹಲವು ಬಾರಿ ಗೆಜ್ಜೆ ಹಾಕಿಕೊಂಡರೂ, ಗಂಡನಿಗೊ, ಮಕ್ಕಳಿಗೊ ರಗಳೆ ಎನಿಸಿ ಬಿಚ್ಚಿಡುತ್ತಿದ್ದೆ. 

ಗೆಜ್ಜೆಯ ಶಬ್ದ  ಹಳೆಯ ನೆನಪುಗಳನ್ನು  ಹಾಗೂ ಹಲವಾರು ಪ್ರಶ್ನೆ ಗಳನ್ನು ಮನದಲ್ಲಿ ಮೂಡುವಂತೆ ಮಾಡುತ್ತದೆ.

ಗೀತಾ ಕುಂದಾಪುರ

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.