ಕೊಡೆಗೂ ಸಿಕ್ಕಿದೆ ಗೂಡು…

Team Udayavani, Jul 12, 2019, 5:00 AM IST

ಕ್ಯಾಪ್ಸೂಲ್‌ ಗೊತ್ತಲ್ವಾ? ಈ ಮಳೆಗಾಲದಲ್ಲಿ ನೀವೆಲ್ಲರೂ ಮರೆಯದೇ ಒಂದೊಂದು ಕ್ಯಾಪ್ಸೂಲ್‌ ಖರೀದಿಸಿ. ಹಾಂ, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ತೆಗೆದುಕೊಳ್ಳುವ ಕ್ಯಾಪೂಲ್ಸ್‌ ಅಲ್ಲ ಇದು. ಮಳೆಯಲ್ಲಿ ಒದ್ದೆಯಾದ ನಿಮ್ಮ ಛತ್ರಿಯನ್ನು ಜೋಪಾನವಾಗಿ ಇರಿಸುವ ಕ್ಯಾಪ್ಸೂಲ್‌. ಅಂದರೆ, ಛತ್ರಿಯನ್ನು ಇಡಲು ಕ್ಯಾಪ್ಸೂಲ್‌ ಕೇಸ್‌ ಅಂಬ್ರೆಲಾ ಪಾಕೆಟ್‌…

ಇದು ಮಳೆಗಾಲ. ಆದರೆ, ಮಳೆ ಬರೋದು ಆಗೊಮ್ಮೆ ಈಗೊಮ್ಮೆ ಮಾತ್ರ. ಹಾಗಂತ ಛತ್ರಿ, ರೇನ್‌ಕೋಟ್‌ ಇಲ್ಲದೆ ಮನೆಯಿಂದ ಹೊರಡುವ ಹಾಗಿಲ್ಲ. ಬೆಳಗ್ಗೆ ಇದ್ದ ಬಿಸಿಲನ್ನು ಮರೆಸಿ ಬಿಡುವಂತೆ ಸಂಜೆ ಮಳೆ ಸುರಿಯಬಹುದು. ಹಾಗಾಗಿ ಛತ್ರಿಯನ್ನು ಜೊತೆಯಲ್ಲಿಯೇ ಒಯ್ಯುವುದು ಜಾಣತನ.

ಛತ್ರಿಯಲ್ಲೂ ಫ್ಯಾಷನ್‌
ಮೊದಲೆಲ್ಲ ಛತ್ರಿ ಎಂದ ಕೂಡಲೇ ಕಣ್ಮುಂದೆ ಬರುತ್ತಿದ್ದುದು, ಕಪ್ಪು ಬಣ್ಣದ, ಮಾರುದ್ದದ ಕೊಡೆಗಳು. ಚೀಲದಲ್ಲಿ ಇಡಲಾಗದ ಉದ್ದದ ಕೊಡೆಗಳನ್ನು , ಕೈಯಲ್ಲೇ ಹಿಡಿದುಕೊಳ್ಳಬೇಕಿತ್ತು. ಆದರೆ, ಕಪ್ಪು ಬಣ್ಣದ ಅಂಥ ಛತ್ರಿಗಳನ್ನು ಬಣ್ಣ ಬಣ್ಣದ ಕೊಡೆಗಳು ಯಾವಾಗಲೋ ರಿಪ್ಲೇಸ್‌ ಮಾಡಿಬಿಟ್ಟಿವೆ. ಅದರಲ್ಲೂ ಫ್ಯಾಷನ್‌ಪ್ರಿಯರು, ಬೋರಿಂಗ್‌ ಬ್ಲಾಕ್‌ ಬದಲಿಗೆ ಬಣ್ಣದ ಛತ್ರಿಗಳನ್ನೇ ಹೆಚ್ಚು ಇಷ್ಟಪಡುತ್ತಾರೆ.

ಕೊಡೆಗೊಂದು ಗೂಡು
ಒದ್ದೆಯಾದ ಈ ಛತ್ರಿಗಳನ್ನು ಮತ್ತೆ ಬ್ಯಾಗಿನಲ್ಲಿ ಇಟ್ಟುಕೊಳ್ಳುವುದು ದೊಡ್ಡ ತಲೆನೋವು. ಅದರಿಂದ ಬ್ಯಾಗ್‌ ಕೂಡಾ ಒದ್ದೆಯಾಗುತ್ತದೆ. ಆದರೆ, ಇನ್ಮುಂದೆ ಆ ತೊಂದರೆ ಅನುಭವಿಸಬೇಕಿಲ್ಲ. ಚಿಕ್ಕ ಛತ್ರಿಗಳನ್ನಿಡಲು ಕೇಸ್‌ಗಳು ಸಿಕ್ಕುತ್ತಿವೆ. ಕನ್ನಡಕ, ಲೆನ್ಸ್‌ಗಳನ್ನು ಇಡಲು ಕೇಸ್‌ಗಳು ಇರುವಂತೆ ಛತ್ರಿಗಳಿಗೂ ಕೇಸ್‌ಗಳಿವೆ. ನೋಡಲು ಕ್ಯಾಪ್ಸೂಲ್‌ನಂತಿರುವ ಈ ಗೂಡಿನೊಳಗೆ ಒದ್ದೆ ಕೊಡೆಯನ್ನು ಇಟ್ಟು , ಚಿಂತೆ ಇಲ್ಲದೆ ಬ್ಯಾಗಿನಲ್ಲಿಡಬಹುದು. ಈ ಮಳೆಗಾಲದಲ್ಲಿ ಟ್ರೆಂಡಿಂಗ್‌ನಲ್ಲಿದೆ ಈ ಕ್ಯಾಪ್ಸೂಲ್‌ ಕೇಸ್‌ ಪಾಕೆಟ್‌ ಅಂಬ್ರೆಲಾ, ಅಂದರೆ 3 ಪೋಲ್ಡ್‌ ಅಥವಾ 4 ಪೋಲ್ಡ್‌ ಛತ್ರಿಗಳ ಗೂಡು! ಇವು ಬಹುತೇಕ ಎಲ್ಲಾ ಕೊಡೆ ಅಂಗಡಿಯಲ್ಲಿ ಮತ್ತು ಆನ್‌ಲೈನ್‌ ತಾಣಗಳಲ್ಲಿ ದೊರಕುತ್ತವೆ.

ಅದಿತಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಂಗಳೂರು: ಕುಲಶೇಖರದಿಂದ ಮೂಡುಬಿದಿರೆ- ಕಾರ್ಕಳ ನಡುವಿನ ಸುಮಾರು 60 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಮತ್ತೂಮ್ಮೆ ಭೂಸ್ವಾಧೀನ ಪ್ರಕ್ರಿಯೆ...

  • ಕನ್ನಡ ದೃಶ್ಯ ಜಗತ್ತನ್ನು ಕಲಾತ್ಮಕವಾಗಿ ಶ್ರೀಮಂತಗೊಳಿಸಿದ ಕೆಲವೇ ಕೆಲವು ನಿರ್ದೇಶಕರ ಪೈಕಿ ಗಿರೀಶ್‌ ಕಾಸರವಳ್ಳಿ ಕೂಡ ಒಬ್ಬರು. ಚೊಚ್ಚಲ ನಿರ್ದೇಶನ, "ಘಟಶ್ರಾದ್ಧ'...

  • ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ....

  • ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು...

  • ಮಂಗಳೂರು: ಪಾಶ್ಚಾತ್ಯ ಪ್ರಭಾವದಿಂದಾಗಿ ಭಾರತೀಯ ಸಂಗೀತವು ಸ್ವಲ್ಪ ಮಂಕಾಗಿ ಕಂಡರೂ ಮತ್ತೆ ಚಿಗುರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|...