Udayavni Special

ಲಕ್ಷ್ಮಿಯ ವರ ಪಡೆಯಲು ವರಲಕ್ಷ್ಮೀ


Team Udayavani, Aug 9, 2019, 5:00 AM IST

e-21

ಗಣೇಶ ಚತುರ್ಥಿ ಹೇಗೆ ಸಾರ್ವಜನಿಕ ಉತ್ಸವವಾಗಿದೆಯೋ ಅದೇ ರೀತಿ ವರಮಹಾಲಕ್ಷ್ಮೀ ವ್ರತವೂ ಸಾರ್ವಜನಿಕವಾದ ಸಂಭ್ರಮವಾಗುತ್ತಿದೆ. ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಖಾಸಗಿಯಾಗಿ ಆಚರಿಸಲ್ಪಡುತ್ತಿದ್ದ ಈ ಆಚರಣೆಯು ಇತ್ತೀಚೆಗಿನ ದಿನಗಳಲ್ಲಿ ನಾಡಿನ ಎಲ್ಲಾ ಭಾಗಗಳಲ್ಲಿ ಬಹಳ ಉತ್ಸಾಹದಿಂದ ಆಯೋಜನೆಗೊಳ್ಳುತ್ತಿದೆ. ದೇವಸ್ಥಾನಗಳಲ್ಲಿ, ಮಹಿಳಾ ಸಂಘಟನೆಗಳಲ್ಲಿ ಈ ವ್ರತವನ್ನು ಸಾಮೂಹಿಕವಾಗಿ ಆಚರಿಸಲಾಗುತ್ತಿದೆ. ಈ ದಿನದಲ್ಲಿ ಪ್ರವಚನ, ಸಂಗೀತ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗುತ್ತಿದೆ.

ಆಷಾಢಮಾಸದ ಅಮಾವಾಸ್ಯೆಯು ಮುಗಿದು ಶ್ರಾವಣ ಮಾಸಾರಂಭವಾಗಿದೆ. ಶ್ರಾವಣವನ್ನು ಹಬ್ಬಗಳ ಮಾಸ ಎಂದೇ ಕರೆಯುತ್ತಾರೆ. ಏಕೆಂದರೆ, ಆ ಮಾಸದಲ್ಲಿ ಇದ್ದಷ್ಟು ಹಬ್ಬಗಳು ಬೇರಾವ ಮಾಸಗಳಲ್ಲೂ ಇರುವುದಿಲ್ಲ. ಆದ್ದರಿಂದ ಶ್ರಾವಣವನ್ನು “ಹಬ್ಬಗಳ ತೇರು’ ಎಂದರೂ ತಪ್ಪಿಲ್ಲ. ಅಮಾವಾಸ್ಯೆಯ ನಂತರದ ಐದನೆಯ ದಿನ ನಾಗರ ಪಂಚಮಿಯಾದರೆ, ಶುಕ್ಲಪಕ್ಷದ ಶುಕ್ರವಾರ ವರಮಹಾಲಕ್ಷ್ಮೀ. ಶ್ರಾವಣದ ಪ್ರತಿ ಮಂಗಳವಾರವೂ ಮಂಗಳಗೌರೀ ವ್ರತ, ಕೃಷ್ಣ ಜನ್ಮಾಷ್ಟಮಿ, ಉಪಾಕರ್ಮ- ಹೀಗೆ ಹಬ್ಬಗಳ ಸಾಲುಸಾಲೇ ಬರುತ್ತದೆ. ಸುಮಂಗಲಿಯರಿಗೆ ಅದರಲ್ಲೂ ನವವಿವಾಹಿತೆಯರಿಗೆ ಸಂಭ್ರಮವೋ ಸಂಭ್ರಮ.

ಆಷಾಢದಲ್ಲಿ ಎಡೆಬಿಡದೆ ಸುರಿಯುತ್ತಿರುವ ವರುಣನ ಆರ್ಭಟ, ಬೀಸುತ್ತಿರುವ ಗಾಳಿ ಇವೆಲ್ಲವೂ ಕಡಿಮೆಯಾಗಿ, ಹಿತಕರವಾದ ವಾತಾವರಣ ಎಲ್ಲರಲ್ಲೂ ಉಲ್ಲಾಸ ಮೂಡಿಸುತ್ತದೆ. ಆದ್ದರಿಂದಲೇ ಇರಬೇಕು ಆ ಮಾಸದಲ್ಲಿ ಹೆಚ್ಚು ಹಬ್ಬಗಳು ಹುಟ್ಟಿಕೊಂಡಿರುವುದು. ಆದರೆ, ಈಗ ಹವಾಮಾನದ ವೈಪರೀತ್ಯದಿಂದಾಗಿ ಏರುಪೇರಾಗಿ ಬಿಟ್ಟಿರುವುದು ಒಂದು ವಿಪರ್ಯಾಸವೇ ಸರಿ.

ಕಾಲಘಟ್ಟವು ಏನೇ ಇರಲಿ, ಬೆಲೆಯೇರಿಕೆಯ ಬಿಸಿ ಎಷ್ಟೇ ತಟ್ಟಿದ್ದರೂ ಆಚರಣೆಯನ್ನಂತೂ ಯಾರೂ ಕೈ ಬಿಟ್ಟಿಲ್ಲ. ಅದ್ದೂರಿಯಾಗಿ ಮಾಡುತ್ತಿದ್ದವರು ಸಣ್ಣ ಮಟ್ಟಿಗಾದರೂ ಆಚರಿಸುತ್ತಿರುವುದನ್ನು ನೋಡಿದರೆ, ಅವರಿಗೆ ದೇವರಲ್ಲಿರುವ ಶ್ರದ್ಧೆ, ನಂಬಿಕೆ, ಭಕ್ತಿಯನ್ನು ಪ್ರತಿಬಿಂಬಿಸುತ್ತದೆ. ಹೊಸದಾಗಿ ಮದುವೆಯಾದ ತರುಣಿಯರು ತವರಿಗೆ ಬಂದು, ಮಂಗಳಗೌರೀ ವ್ರತವನ್ನು ಕೈಗೊಳ್ಳುತ್ತಾರೆ. ಐದು ಜನ ಸುವಾಸಿನಿಯರಿಗೆ ಮೊರದ ಬಾಗಿನವನ್ನೂ ಕೊಡುತ್ತಾರೆ. ಇದರ ನಂತರ ಬರುವ ವರಮಹಾಲಕ್ಷ್ಮೀ ವ್ರತ ಮಹತ್ವವನ್ನೂ ಪಡೆದುಕೊಂಡಿದೆ.

ಲಕ್ಷ್ಮೀ ಅಂದರೆ ಸಂಪತ್ತಿನ ಅಧಿದೇವತೆ. ಅವಳ ಕೃಪಾಕಟಾಕ್ಷವಿಲ್ಲದೆ ತೃಣಮಾತ್ರವೂ ಕದಲುವುದಿಲ್ಲ. ಅವಳನ್ನು “ಆದಿಶಕ್ತಿ’, “ಜಗದಂಬೆ’ ಎನ್ನುತ್ತಾರೆ. ಜಗಸ್ಥಿತೇ ಜಗನ್ಮಾತಾ, ಮಹಾಲಕ್ಷ್ಮೀ ನಮೋಸ್ತುತೇ ಎಂದು ಹಾಡಿ ಹೊಗಳುತ್ತಾರೆ. ಶ್ರೀಲಕ್ಷ್ಮೀಯ ಪೂಜೆ ಎಂದರೆ ಧನಕನಕಗಳ ಪ್ರಾಪ್ತಿಗಾಗಿ ಎಂದು ಹಲವರ ನಂಬಿಕೆ. ಕೇಳಿದ್ದನ್ನು ದಯಪಾಲಿಸುವ ಆಕೆ “ಕಾಮಿತಾರ್ಥ ಪ್ರದಾಯಿನಿ’ಯೂ ಹೌದು.

ಕೆಲವಾರು ವರ್ಷಗಳ ಹಿಂದೆ ಕೇವಲ ಕೆಲವರ ಮನೆಯಲ್ಲಿ ಮಾತ್ರ ಆಚರಣೆಯಲ್ಲಿದ್ದ ಈ ವ್ರತ ಇತ್ತೀಚೆಗೆ ಸರ್ವವ್ಯಾಪಿಯಾಗುತ್ತಿದೆ. ಅನಾದಿ ಕಾಲದಿಂದಲೂ ಕೆಲವರು ವಂಶಪಾರಂಪರ್ಯ ವಾಗಿ ಆಚರಿಸಿಕೊಂಡು ಬಂದಿದ್ದಾರೆ. ಕೇವಲ ಧನ-ಸಂಪತ್ತಿಗಾಗಿ ಮಾತ್ರವಲ್ಲದೆ, ಸುಖ, ನೆಮ್ಮದಿ, ಆರೋಗ್ಯ, ಸಂತಾನಭಾಗ್ಯಕ್ಕಾಗಿಯೂ ಲಕ್ಷ್ಮೀದೇವಿಯನ್ನು ಆರಾಧಿಸತೊಡಗಿದ್ದಾರೆ.

ಶುಕ್ಲ ಪಕ್ಷದ ಶುಕ್ರವಾರದಂದು ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಅಂದು ಮಂಟಪದ ರಚನೆ ಮಾಡಿ, ಬಾಳೆಕಂದು, ಹೂಮಾಲೆಗಳಿಂದ ಸಿಂಗರಿಸುತ್ತಾರೆ. ಲಕ್ಷ್ಮೀದೇವಿಯ ಮುಖವಾಡಕ್ಕೆ ಸೀರೆಯುಡಿಸಿ, ದೇವರ ಎದುರಿನಲ್ಲಿ ಕಲಶವಿಡುತ್ತಾರೆ. ದೇವಿಯನ್ನು ಚಿನ್ನಾಭರಣಗಳಿಂದ ಅಲಂಕರಿಸುತ್ತಾರೆ. ಪುರೋಹಿತರ ಸಮ್ಮುಖದಲ್ಲಿ ಪೂಜೆ ನೆರವೇರಿಸಿ, ಮುತ್ತೈದೆಯರಿಗೆ ಬಾಗಿನ, ಫ‌ಲ, ತಾಂಬೂಲ, ಪುಷ್ಪಾದಿಗಳಿಂದ ಸತ್ಕರಿಸುತ್ತಾರೆ. ಕೆಲವರು ಅನ್ನದಾನವನ್ನೂ ಮಾಡುತ್ತಾರೆ.

ಇಷ್ಟೆಲ್ಲ ಪೂಜೆಗೆ ಅರ್ಹವೆನಿಸಿದ ಈ ದೇವಿಯ ಮಹಾತ್ಮೆಗೆ ಒಂದು ಪೌರಾಣಿಕ ಹಿನ್ನೆಲೆಯೂ ಇದೆ. ಭೂಲೋಕದಲ್ಲಿರುವ ಜನರೆಲ್ಲ ಬಹಳ ಕಷ್ಟ-ಸಂಕಟಗಳನ್ನು ಅನುಭವಿಸುತ್ತಿದ್ದುದನ್ನು ಕಂಡು ಕೈಲಾಸದಲ್ಲಿದ್ದ ಪಾರ್ವತಿ ದೇವಿಗೆ ಕನಿಕರವಾಗಿ, ಅವರ ಜೀವನ ಸುಖಮಯವಾಗುವಂತೆ ಮಾಡಲು ಯಾವುದಾದರೂ ಒಂದು ವ್ರತಾಚರಣೆಯನ್ನು ತಿಳಿಸಬೇಕೆಂದು ಪರಮೇಶ್ವರನನ್ನು ಆಗ್ರಹಿಸುತ್ತಾಳೆ. ಆಗ ಶಿವನು ತಿಳಿಸಿದ ವ್ರತವೇ ವರಮಹಾಲಕ್ಷ್ಮಿ ಪೂಜೆ. ಶ್ರಾವಣಮಾಸದ ಶುಕ್ಲಪಕ್ಷದ ಶುಕ್ರವಾರದಂದು ಈ ವ್ರತವನ್ನು ಕೈಗೊಂಡು, ಭಕ್ತಿಪ್ರಧಾನವಾಗಿ ದೇವಿಯನ್ನು ವಿಧಿ-ವಿಧಾನದಿಂದ ಆರಾಧಿಸಿದರೆ ಜನರ ಅಭೀಷ್ಟ ನೆರವೇರುತ್ತದೆ. ನಂಬಿದವರನ್ನು ದೇವಿ ಎಂದೂ ಕೈ ಬಿಡಲಾರಳು ಎಂದು ಹೇಳಿ, ಅದಕ್ಕೆ ನಿದರ್ಶನವಾಗಿ ಒಂದು ಕಥೆಯನ್ನು ತಿಳಿಸುತ್ತಾನೆ.

ಚಾರುಮತಿ ಎಂಬುವವಳು ಒಬ್ಬಳು ಬಡ ಮುತ್ತೈದೆ. ಯಾವಾಗಲೂ ಮನೆಕೆಲಸ, ಪತಿ ಸೇವೆ, ಮಕ್ಕಳಸೇವೆ ಅಂತ ಇತರರ ಚಾಕರಿಯಲ್ಲಿಯೇ ಅವಳ ಜೀವ ಅರ್ಧವಾಗಿರುತ್ತದೆ. ಆದರೆ, ಅವಳು ಮಾತ್ರ ಲಕ್ಷ್ಮೀದೇವಿಯ ಭಕ್ತೆ. ಒಂದು ದಿನ ಅವಳು ಮಲಗಿರುವಾಗ ದೇವಿಯು ಅವಳ ಕನಸಿನಲ್ಲಿ ಬಂದು, “”ನಾನು ಇಂಥ ಒಂದು ದಿನ ಭೂಲೋಕಕ್ಕೆ ಬರುತ್ತೇನೆ. ನೊಂದವರು, ಭಕ್ತರು ಶಾಸ್ತ್ರೋಕ್ತವಾಗಿ ನನ್ನನ್ನು ಅರ್ಚಿಸಿದರೆ ಅವರ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ'” ಎಂದು ಅಶರೀರವಾಣಿಯಂತೆ ನುಡಿಯುತ್ತಾಳೆ.

ಎಚ್ಚರವಾದ ಚಾರುಮತಿಗೆ ಅದು ಕನಸೋ, ನನಸೋ ತಿಳಿಯದೆ ಕಸಿವಿಸಿಯಾಯಿತು. ನಡೆದದ್ದನ್ನು ತನ್ನ ಮನೆಯವರ ಮುಂದೆ ತಿಳಿಸುತ್ತಾಳೆ. ದೇವಿಯು ಅರುಹಿದಂತೆ ಶುಕ್ರವಾರದ ದಿನದಂದು ಎಲ್ಲರೂ ಲಕ್ಷ್ಮೀದೇವಿಯನ್ನು ಅರ್ಚಿಸಿ, ಭಕ್ತಿ, ಶ್ರದ್ಧೆಯಿಂದ ಬೇಡಿಕೊಳ್ಳುತ್ತಾರೆ. ಕ್ರಮೇಣ ಚಾರುಮತಿ ಮಾತ್ರವಲ್ಲದೆ, ಅವಳ ಮನೆಯವರ ಕಷ್ಟವೂ ಪರಿಹಾರಗೊಳ್ಳುತ್ತದೆ. ಅವಳಿಗೆ ದೇವಿಯ ಸಂಪೂರ್ಣ ಅನುಗ್ರಹವಾಗಿ ಅವಳ ಅದೃಷ್ಟವೇ ಬದಲಾಗುತ್ತದೆ. ತನಗೆ ಪ್ರಾಪ್ತವಾದ ಸಂಪತ್ತನ್ನು ಬಡಬಗ್ಗರಿಗೂ ಹಂಚುತ್ತ ದೇವರ ಕೃಪೆಗೆ ಪಾತ್ರಳಾಗುತ್ತಾಳೆ. ಅವಳಿಂದ ವಿಷಯವನ್ನು ತಿಳಿದ ಅಕ್ಕಪಕ್ಕದವರು ಪ್ರತಿವರ್ಷ ಈ ವ್ರತವನ್ನು ನಡೆಸಿಕೊಂಡು ಬರುತ್ತಾ, ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಹೀಗೆ ಪರಶಿವನು ಪಾರ್ವತಿಯ ಮೂಲಕ ಇಡೀ ಲೋಕಕ್ಕೆ ವ್ರತದ ಮಹಿಮೆಯನ್ನು ತಿಳಿಸಿಕೊಟ್ಟು, ಅದು ಕ್ರಮೇಣ ಆಚರಣೆಗೆ ಬಂದು ಇಂದಿಗೂ ರೂಢಿಯಲ್ಲಿದೆ.

ವಿನಾಯಕನ ಉತ್ಸವ ಹೇಗೆ ಸಾರ್ವಜನಿಕ ಉತ್ಸವವಾಗಿದೆಯೋ ಅದೇ ರೀತಿ ವರಮಹಾಲಕ್ಷ್ಮೀ ವ್ರತವೂ ಸಾರ್ವಜನಿಕವಾಗುತ್ತಿದೆ. ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಆಚರಿಸಲ್ಪಡುತ್ತಿದ್ದ ಈ ಆಚರಣೆಯು ರಾಜ್ಯದ ಎಲ್ಲಾ ಭಾಗಗಳಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇವಸ್ಥಾನಗಳಲ್ಲಿ, ಮಹಿಳಾ ಸಂಘಟನೆಗಳಲ್ಲಿ ಈ ವ್ರತವನ್ನು ಸಾಮೂಹಿಕವಾಗಿ ಬಹಳ ವೈಭವದಿಂದ ಆಚರಿಸಲಾಗುತ್ತಿದೆ. ಆ ದಿನಗಳಲ್ಲಿ ಪ್ರವಚನ, ಸಂಗೀತ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಒಟ್ಟಿನಲ್ಲಿ ಹೇಳುವುದಾದರೆ ಈ ಹಬ್ಬಗಳು ಜಾತಿ, ಮತ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುತ್ತಿರುವುದು ಸಮಾಧಾನಕರವಾದ ಸಂಗತಿ. ಈ ಮೂಲಕ ಎಲ್ಲರಲ್ಲೂ ಜಾತ್ಯಾತೀತದ ಕಹಳೆ ಮೊಳಗಿದರೆ ಅದಕ್ಕಿಂತ ಸಂತೋಷದ ವಿಷಯ ಬೇರೊಂದಿಲ್ಲ. ಈ ಎಲ್ಲಾ ಕಾರಣಕ್ಕಾದರೂ ಇಂಥ ಆಚರಣೆಗಳು ಸರ್ವವ್ಯಾಪಿಯಾಗಬೇಕು.

ಪುಷ್ಪಾ ಎನ್‌.ಕೆ. ರಾವ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Pandya”ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

“ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

ಲಂಡನ್‌ನಲ್ಲಿ ಲಸಿಕೆ ಪ್ರಯೋಗ

ಲಂಡನ್‌ನಲ್ಲಿ ಲಸಿಕೆ ಪ್ರಯೋಗ

5.87 ಕೋಟಿ ಅಮೆರಿಕನ್ನರ ಅಂಚೆ ಮತ

5.87 ಕೋಟಿ ಅಮೆರಿಕನ್ನರ ಅಂಚೆ ಮತ

IPL-2

ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k-20

ಸೆರಗು-ಲೋಕದ ಬೆರಗು

ಟ್ರೆಂಡಿ ಪಾದರಕ್ಷೆಗಳು 

ಟ್ರೆಂಡಿ ಪಾದರಕ್ಷೆಗಳು 

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಚಳಿಯಲ್ಲಿ ನೆಲ್ಲಿಯಿಂದ ಕೇಶ ಸುಂದರ!

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶದಿಂದ ಕೃಷಿಯಲ್ಲಿ ಕ್ರಾಂತಿ’

“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶದಿಂದ ಕೃಷಿಯಲ್ಲಿ ಕ್ರಾಂತಿ’

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

Pandya”ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

“ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ದಸ್ತಗಿರಿ

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ದಸ್ತಗಿರಿ

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.