ಯಾಕೆ ಯಾವ ಹುಡುಗನೂ ಇಷ್ಟವಾಗುವುದಿಲ್ಲ !


Team Udayavani, Mar 1, 2019, 12:30 AM IST

v-21.jpg

ಓದು ಮುಗಿಯಿತು. ಕೆಲಸವೂ ಸಿಕ್ಕಿತು. ಬದುಕಿನ ಮುಂದಿನ ಘಟ್ಟ ಮದುವೆಯೇ ತಾನೆ? “ಯಾರನ್ನಾದ್ರೂ ಇಷ್ಟಪಟ್ಟಿದ್ದೀಯ?’ ಅಂತ ಅಪ್ಪ ಕೇಳಿದಾಗ, ನಿಂಗಾಗಿ ಕಾಯ್ತಿನಿ ಅಂತ ಹೇಳಿ ಯಾವ ಹುಡುಗ ಹೆಸರನ್ನೂ ಹೇಳಲಿಲ್ಲ. ಹೇಳಬೇಕು ಅಂತ ಅನ್ನಿಸಲೂ ಇಲ್ಲ. ಸರಿ, ಮನೆಯವರೇ ನನಗಾಗಿ ಗಂಡು ಹುಡುಕೋಕೆ ಶುರು ಮಾಡಿದರು. ಇಷ್ಟು ದಿನ, ನಂಗಿಷ್ಟ ಆಗ್ತಿಲ್ಲ ಅನ್ನೋ ಕಾರಣಕ್ಕೆ ಹುಡುಗರನ್ನು  ರಿಜೆಕ್ಟ್ ಮಾಡ್ತಿದ್ದೆ. ಆದರೆ, ಈಗ “ಯಾಕೆ ಇಷ್ಟ ಆಗ್ತಿಲ್ಲ?’ ಅನ್ನೋ ಪ್ರಶ್ನೆಗೆ ಕಾರಣ ಸಮೇತ ಉತ್ತರಿಸಬೇಕು. 

ಈ ಹುಡುಗನನ್ನಾದ್ರೂ ಒಪ್ಕೊಳ್ಳೇ ಮಾರಾಯ್ತಿ. ಒಳ್ಳೆ ಕೆಲಸ, ಬೆಂಗ್ಳೂರಲ್ಲಿ ಸ್ವಂತ ಮನೆ ಇದೆ ಅಂತೆ. ಇನ್ನೇನ್‌ ಬೇಕು ನಿಂಗೆ…” ಅಮ್ಮ ಹೇಳುತ್ತಲೇ ಇದ್ದಳು. ಅವನ ಎಫ್ಬಿ ಪ್ರೊಫೈಲ್‌ ಜಾಲಾಡಿ, ಈಗಾಗಲ್ಲೇ ಅವನನ್ನು ರಿಜೆಕ್ಟ್ ಮಾಡಿರೋ ವಿಷ್ಯ ಅಮ್ಮನಿಗೆ ಗೊತ್ತಿಲ್ಲ. ಯಾವುದೋ ಹುಡುಗನ ಜಾತಕ ಬಂದರೂ, ನಾನು ಮೊದಲು ಮಾಡೋ ಕೆಲಸ ಅವನ ಫೇಸ್‌ಬುಕ್‌ ಪ್ರೊಫೈಲ್‌ ಚೆಕ್‌ ಮಾಡೋದು. ಹುಡುಗ ಎಂಥವನೆಂದು ಹೇಳಲು ಜಾತಕ ಯಾಕೆ, ಎಫ್ಬಿ ಗೋಡೆಯೇ ಸಾಕಲ್ಲ? ಈ ಹುಡುಗ ಹಾಕೋ ಸ್ಟೇಟಸ್‌, ಶೇರ್‌ ಮಾಡೋ ಪೋಸ್ಟ್‌ಗಳನ್ನು ನೋಡಿದರೇ ಗೊತ್ತಾಗುತ್ತೆ ಹುಡುಗ ತುಂಬಾ ಬೋರಿಂಗ್‌ ಅಂತ. ಬೇರೆಯವರ ಪೋಸ್ಟ್‌ಗಳಿಗೆ ಅವನು ಕಮೆಂಟ್‌ ಮಾಡಿರೋ ರೀತಿಯೂ ಹಿಡಿಸಲಿಲ್ಲ. ಬೇಡ ಅನ್ನೋಕೆ ಇದಕ್ಕಿಂತ ಕಾರಣ ಬೇಕೇ?

ಇವನನ್ನೂ ಸೇರಿಸಿದರೆ, ನಾನು ಉಹೂಂ ಅಂದ ಹುಡುಗರ ಸಂಖ್ಯೆ 26 ಕ್ಕೇರುತ್ತೆ. ಇನ್ನು ಸ್ಕೂಲು, ಕಾಲೇಜು, ಫೇಸ್‌ಬುಕ್‌ನಲ್ಲಿ ಪ್ರಪೋಸ್‌ ಮಾಡಿದವರನ್ನೆಲ್ಲ ಸೇರಿಸಿದರೆ ಸಂಖ್ಯೆ ಐವತ್ತಾಗಬಹುದೇನೋ. ಹಲೋ, ಐವತ್ತಾ ಅಂತ ಕಣ್ಣರಳಿಸಬೇಡಿ! ನಾನು ಯಾವೆಲ್ಲಾ ಕಾರಣಕ್ಕೆ “ನೋ’ ಅಂದೆ ಅಂತ ಹೇಳಿದರೆ ನಿಮಗೂ ಅದು ಸರಿ ಅನ್ನಿಸುತ್ತೆ.

ಅದು ಫ‌ಸ್ಟ್‌ ಪಿಯುಗೆ ಸೇರಿದ ಮೂರನೇ ದಿನ. ಕ್ಲಾಸ್‌ ಮುಗಿಸಿ ಬರುವಾಗ, ಹಿಂದಿಂದ ಬಂದ ಅವನು, “”ಎಕ್ಸ್‌ಕ್ಯೂಸ್‌ಮಿ, ಎಕನಾಮಿಕ್ಸ್‌ ನೋಟ್ಸ್‌ ಕೊಡ್ತೀರಾ?” ಅಂತ ಕೇಳಿದ. ಕೊಡಲ್ಲ ಅನ್ನೋದಕ್ಕೆ ಹೆದರಿ, ಬ್ಯಾಗಿಂದ ನೋಟ್ಸ್‌ ಎತ್ತಿಕೊಟ್ಟೆ. ಮುಂದಿನ ಎರಡು ದಿನ ಕ್ಲಾಸ್‌ಗೆà ಬರಲಿಲ್ಲ ಆಸಾಮಿ. ಎಲ್ಲಿಗೆ ಹೋದ ಅಂತ ಯಾರನ್ನಾದ್ರೂ ಕೇಳ್ಳೋಣ ಅಂದ್ರೆ, ಅವನ ಹೆಸರೂ ನನಗೆ ಗೊತ್ತಿರಲಿಲ್ಲ. ಎರಡು ದಿನಗಳ ನಂತರ ಬಂದ ಅವನು, “”ಸಾರಿ, ನಂಗೆ ಹುಷಾರಿರಲಿಲ್ಲ’ ಅಂತ ಅನುಕಂಪ ಗಿಟ್ಟಿಸಲು ಟ್ರೈ ಮಾಡಿದ. ಮತ್ತೆ ಒಂದು ವಾರದ ನಂತರ ಅಕೌಂಟ್ಸ್‌ ನೋಟ್ಸ್‌ ನೆಪದಲ್ಲಿ ಹಿಂದೆ ಬಂದ. ಕಾಲೇಜಿಗೆ ಬಂದಮೇಲೂ ನೋಟ್ಸ್‌ ಬರೆಯುವಷ್ಟು ಡೀಸೆಂಟ್‌ ಹುಡುಗ ಅಲ್ಲ ಅಂತ ಅವನನ್ನು ನೋಡಿದರೇ ಗೊತ್ತಾಗ್ತಾ ಇತ್ತು. ಮುಂದೆ, ನನ್ನನ್ನು  ಮಾತಾಡಿಸೋಕೆ ಅವನು ಮಾಡಿದ ಪ್ರಯತ್ನಗಳು ಒಂದೆರಡಲ್ಲ. “”ಲೇ, ಅವನೇನು  ನಿಂಗ್‌ ಲವ್‌ ಲೆಟರ್‌ ಕೊಟ್ನಾ? ನೋಟ್ಸ್‌ ಕೇಳಿದ್ದೇ ದೊಡ್‌ ತಪ್ಪು ಅಂತೀಯಲ್ಲ ! ಫ್ರೆಂಡ್‌ ಮಾಡಿಕೊಳ್ಳೋಕೆ ಟ್ರೈ ಮಾಡಿರಬಹುದು” ಅಂತ ರೂಂಮೇಟ್‌ ಬೈದಾಗ, “”ನೋಡು, ಕೆಲ ಹುಡುಗರ ಜೊತೆ ಸ್ನೇಹ ಕೂಡ ಸಲ್ಲ” ಅಂತ ಫಿಲಾಸಫಿ ಕೊಟ್ಟಿದ್ದೆ . ಅದೇ, ನನ್ನ ಪೆಹಲಾ ಪೆಹಲಾ ರಿಜೆಕ್ಷನ್‌.

ಡಿಗ್ರಿಯಲ್ಲಿ ಹಿಂದೆ ಬಿದ್ದಿದ್ದ ಹುಡುಗನೊಬ್ಬ ಈಗಲೂ ಆಗಾಗ ಮೆಸೇಜ್‌ ಮಾಡುತ್ತಿರುತ್ತಾನೆ. ಒಳ್ಳೆ ಹುಡುಗ, ಓದಿನಲ್ಲಿ ಜಾಣ, ನೋಡಲೂ ಚೆನ್ನಾಗಿದ್ದ. ಗೆಳತಿಯರೆಲ್ಲ ಅವನ ಹೆಸರು ಹಿಡಿದು ರೇಗಿಸುತ್ತಿದ್ದರು. ಆಗ ನನ್ನ ಕೆನ್ನೆ ಚೂರೂ ಕೆಂಪಾಗುತ್ತಿರಲಿಲ್ಲ. ಅಂದರೆ ಅರ್ಥ ಏನು, ಇವನು ನನಗಾಗಿ ಹುಟ್ಟಿದವನಲ್ಲ ಅಂತ ತಾನೆ? ಆಮೇಲೆ ಒಂದಿಬ್ಬರು ಸೀನಿಯರ್‌ಗಳು ಫ್ರೆಂಡ್‌ಶಿಪ್‌ ನೆಪದಲ್ಲಿ ಹತ್ತಿರಾಗಲು ಪ್ರಯತ್ನಿಸಿದರು. ಎಲ್ಲರೂ ಒಳ್ಳೆಯವರೇ. ಆದರೂ, ಸ್ನೇಹದ ಎಲ್ಲೆ ಮೀರಿ ಆಚೆ ಹೋಗುವುದು ನಂಗೆ ಇಷ್ಟವಿರಲಿಲ್ಲ. ನಾನೇ ಎಲ್ಲಾದ್ರೂ ತುಂಬಾ ಸಲಿಗೆ ಕೊಟ್ಟುಬಿಟ್ನಾ ಅಂತ ಗೊಂದಲವಾಗುತ್ತಿತ್ತು. ಫೇಸ್‌ಬುಕ್‌ನಲ್ಲೂ ಅಷ್ಟೇ, ನನ್ನದೇ ಅಭಿರುಚಿಯ ಒಂದಿಬ್ಬರು ಹುಡುಗರು ಸಿಕ್ಕಿದ್ದರು. ಸಾಹಿತ್ಯ-ಸಂಗೀತ ಅಂತೆಲ್ಲ ಚರ್ಚೆ ನಡೆಸಿ, ಕೊನೆಗೆ ಪ್ರೀತಿಯ ವಿಷಯಕ್ಕೆ ಬಂದಾಗ ಗಲಿಬಿಲಿಯಾಯ್ತು. ಮನೆಯಲ್ಲಿ ಒಪ್ಪಲ್ಲ, ನಂಗೆ ಬಾಯ್‌ಫ್ರೆಂಡ್‌ ಇದಾನೆ ಅಂತೆಲ್ಲಾ ಹೇಳಿ ಮೆತ್ತಗೆ ಜಾರಿಕೊಂಡೆ. ಸ್ನೇಹವನ್ನೇ ತಪ್ಪಾಗಿ ಅರ್ಥೈಸಿದ ಅವರಿಂದ ಸ್ವಲ್ಪ ಅಂತರವನ್ನೂ ಕಾಯ್ದುಕೊಂಡೆ. ಅದು ಪ್ರೀತಿ-ಪ್ರೇಮದ ಗುಂಗು ತಲೆಗೆ ಏರುವ ವಯಸ್ಸೇ. ಆದರೆ, ಬದುಕಿಡೀ ಜೊತೆಗಿರಬೇಕಾದ ಹುಡುಗ ಇವನೇ ಅಂತ ಯಾರಿಗೂ ಮನಸ್ಸು ಕೊಡಲಿಲ್ಲ.

ಓದು ಮುಗಿಯಿತು. ಕೆಲಸವೂ ಸಿಕ್ಕಿತು. ಬದುಕಿನ ಮುಂದಿನ ಘಟ್ಟ ಮದುವೆಯೇ ತಾನೆ? “ಯಾರನ್ನಾದ್ರೂ ಇಷ್ಟಪಟ್ಟಿದ್ದೀಯ?’ ಅಂತ ಅಪ್ಪ ಕೇಳಿದಾಗ, ನಿಂಗಾಗಿ ಕಾಯ್ತಿನಿ ಅಂತ ಹೇಳಿ ಯಾವ ಹುಡುಗ ಹೆಸರನ್ನೂ ಹೇಳಲಿಲ್ಲ. ಹೇಳಬೇಕು ಅಂತ ಅನ್ನಿಸಲೂ ಇಲ್ಲ. ಸರಿ, ಮನೆಯವರೇ ನನಗಾಗಿ ಗಂಡು ಹುಡುಕೋಕೆ ಶುರು ಮಾಡಿದರು. ಇಷ್ಟು ದಿನ, ನಂಗಿಷ್ಟ ಆಗ್ತಿಲ್ಲ ಅನ್ನೋ ಕಾರಣಕ್ಕೆ ಹುಡುಗರನ್ನು  ರಿಜೆಕ್ಟ್ ಮಾಡ್ತಿದ್ದೆ. ಆದರೆ, ಈಗ “ಯಾಕೆ ಇಷ್ಟ ಆಗ್ತಿಲ್ಲ?’ ಅನ್ನೋ ಪ್ರಶ್ನೆಗೆ ಕಾರಣ ಸಮೇತ ಉತ್ತರಿಸಬೇಕು. 

ಮೊದಲು ಬಂದ ಒಂದೆರಡು ಪ್ರಪೋಸಲ್‌ಗ‌ಳು ಚೆನ್ನಾಗಿ ಇದ್ದವು. ಆದರೆ, ನಂಗೆ ಪ್ರಪೋಸ್‌ ಮಾಡಿದ ಹುಡುಗರೇ ಇವರಿಗಿಂತ ಚೆನ್ನಾಗಿದ್ದರು. ಅವರಿಗೇ ಓಕೆ ಅಂದಿಲ್ಲ, ಕಾದು ನೋಡೋಣ ನನಗೆ ಇವನಿಗಿಂತ ಚೆನ್ನಾಗಿರೋನು ಸಿಕ್ಕೇ ಸಿಗ್ತಾನೆ ಅಂತ ಜಂಭದಲ್ಲಿ “ನೋ’ ಎಂದೆ. ಮತ್ತೂಂದೆರಡು ಹುಡುಗರು ನನಗಿಂತ ಎರಡೇ ಇಂಚು ಎತ್ತರದವರು. ಆರಡಿಯ ಸುಂದರಾಂಗನಲ್ಲದಿದ್ದರೂ, ಮೂರಿಂಚಿನ ಹೀಲ್ಸ್‌ ಹಾಕಿ ಗಂಡನ ಭುಜ ಹಿಡಿದು ನಡೆಯಬೇಕು ಅಂತ ಆಸೆ ಪಡೋದರಲ್ಲಿ ತಪ್ಪೇನಿಲ್ಲವಲ್ಲ?

ಮ್ಯಾಟಿರಮೊನಿಯಲ್ಲಿ ಅಕ್ಕ ಹುಡುಕಿದ ಸಂಬಂಧ ಮನೆಯವರೆಲ್ಲರಿಗೂ ಬಹಳ ಹಿಡಿಸಿತ್ತು. ಎತ್ತರ, ಬಣ್ಣ, ಸಂಬಳ, ಮನೆ, ಕಾರು.. ಎಲ್ಲವೂ ಇತ್ತು. ಆದರೆ, ಯಾಕೋ ಆ ಹುಡುಗ ಮನಸ್ಸಿಗೆ ಇಷ್ಟವಾಗಲೇ ಇಲ್ಲ. ಮೊಸರಲ್ಲಿ ಕಲ್ಲು ಹುಡುಕಿದಂತೆ, “ಹುಡುಗನ ಹೆಸರು ಚೆನ್ನಾಗಿಲ್ಲ, ಮದುವೆಯಾದ್ಮೇಲೆ ಸರ್‌ನೆàಮ್‌ ಚೇಂಜ್‌ ಮಾಡಿಕೊಳ್ಳೋಕೆ ಆಗಲ್ಲ. ಅದಕ್ಕೇ ನಂಗಿವನು ಬೇಡ’ ಅಂದಿºಟ್ಟೆ !

ಹುಡುಗನ ಟೇಸ್ಟ್‌ ನಂಗೆ ಮ್ಯಾಚ್‌ ಆಗ್ತಾ ಇಲ್ಲ, ಕನ್ನಡಾನೇ ಸರಿ ಬರಲ್ಲ, ಸಂಗೀತ-ಸಾಹಿತ್ಯದಲ್ಲಿ ಆಸಕ್ತಿ ಇಲ್ಲ. ಮೀಟ್‌ ಮಾಡೋಕೆ ಹೋದಾಗ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲಿಲ್ಲ. ಹುಡುಗಂಗೆ ಒಬ್ಬಳು ಗರ್ಲ್ ಫ್ರೆಂಡ್‌ ಇದ್ದಳಂತೆ, ಹುಡುಗನ ಮನೆಯಲ್ಲಿ ತುಂಬಾ ಸಂಪ್ರದಾಯ, ಅವರಮ್ಮ ಜೋರು, ಅಂಕಲ್‌ ಥರ ಇದಾನೆ… ಹೀಗೆ ನೋ ಅನ್ನಲು ನಾನಾ ಕಾರಣಗಳು.

ಕಳೆದ ತಿಂಗಳು ಮಾವ ತೋರಿಸಿದ್ದ ಹುಡುಗನೇನೋ ಒಪ್ಪಿಗೆಯಾದ. ನಮ್ಮಿಬ್ಬರ ನಡುವೆ ಬಹಳಷ್ಟು ಕಾಮನ್‌ ಇಂಟ್ರೆಸ್ಟ್‌ ಗಳಿದ್ದವು. ಆದರೆ, ಅವರಮ್ಮ ಇಷ್ಟ ಆಗ್ತಿಲ್ಲ. ಆ ಹುಡುಗನೋ, ಎಲ್ಲದಕ್ಕೂ ಅಮ್ಮನ ಒಪ್ಪಿಗೆ ಕೇಳ್ಳೋ “ಮಮ್ಮಾಸ್‌ ಬಾಯ್‌’. ಮುಂದೆ ಆ ವಿಷಯವೇ ನಮ್ಮಿಬ್ಬರ ನಡುವಿನ ವಿರಸಕ್ಕೆ ಕಾರಣವಾದರೆ? “ತುತ್ತಾ ಮುತ್ತಾ?’ ಅನ್ನೋ ಗೊಂದಲ ಅವನಿಗೂ ಬೇಡ, ಸೊಸೆ ಬಂದ ಮೇಲೆ ಮಗ ಮಾತು ಕೇಳ್ತಿಲ್ಲ ಅನ್ನೋ ಅಪವಾದ ನನಗೂ ಬೇಡ. ಏನಂತೀರಾ?

ಹೌದು, ನನ್ನದೇ ವಯಸ್ಸಿನ ಗೆಳತಿಯರಿಗೆಲ್ಲ ಮದುವೆಯಾಗಿದೆ. ಒಂದಿಬ್ಬರಿಗೆ ಮಕ್ಕಳೂ ಆಗಿವೆ. ಹಾಗಂದ‌ ಮಾತ್ರಕ್ಕೆ ನಾನು ಮುದುಕಿಯಾಗಿಲ್ಲ. ಅವಳು ಯಾರನ್ನೂ ಒಪ್ತಿಲ್ಲ, ಈಗಲ್ಲ ಅಂದ್ರೆ ಇನ್ನಾವಾಗ ಮದುವೆಯಾಗ್ತಿàಯಾ? ನಿನ್ನ ಮದುವೆಯಾಗೋಕೆ ಯುವರಾಜ ಕಾಯ್ತಾ ಇದಾನೆ ಅಂದ್ಕೊಡ್ಯಾ… ಹೀಗೆಲ್ಲಾ  ಜನ ಮಾತಾಡ್ತಾರೆ ಅಂತ ಯಾರನ್ನೋ ಮದುವೆಯಾಗಲು ನಾನು ತಯಾರಿಲ್ಲ. ಮನಸ್ಸಿಗೆ ಹಿಡಿಸುವ ಸಂಗಾತಿ ಸಿಗುವವರೆಗೂ ಕಾಯೋಣ ಅಂತಿದೀನಿ. ನೋಡಿ ಮಾಡಿ ಖರೀದಿಸಿದ ಸೀರೆಯೇ, ಮನೆಗೆ  ಬಂದ ಮೇಲೆ ಚೆನ್ನಾಗಿಲ್ಲ ಅನ್ನಿಸುತ್ತೆ. ಎಕ್ಸ್‌ಚೇಂಜ್‌ ಆಫ‌ರ್‌ ಇದ್ದರೂ ಮೋಸ ಹೋದ ಭಾವನೆ ಕಾಡುತ್ತೆ. ಹೀಗಿರುವಾಗ, ಬದುಕಿಡೀ ಜೊತೆಗಿರಬೇಕಾದ ಹುಡುಗನನ್ನು ಆರಿಸುವಾಗ ಎಚ್ಚರ ಬೇಡವೇ?

ರೋಹಿಣಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.