ಮಾತಿಗೊಂದು ವೇದಿಕೆ

Team Udayavani, Oct 18, 2019, 5:00 AM IST

ಆಗ ತಾನೆ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿ ಪದವಿಯತ್ತ ಪ್ರತಿಷ್ಠಿತ ಕಾಲೇಜಿಗೆ ಕಾಲಿರಿಸಿದ್ದೆ. ಕಲಾವಿಭಾಗದ ವಿದ್ಯಾರ್ಥಿಯಾಗಿದ್ದರಿಂದ ಬಿಎ ಪದವಿಯನ್ನು ಆಯ್ಕೆ ಮಾಡುವುದು ಖಚಿತವಾಗಿತ್ತು. ಕೆಲವರ ಸಲಹೆಯಿಂದ ಮತ್ತು ನನ್ನದೇ ಅಸಕ್ತಿಯಿಂದ ಪತ್ರಿಕೋದ್ಯಮ ವಿಷಯವನ್ನು ತೆಗೆದುಕೊಂಡಿದ್ದೆ. ಆದರೆ, ಪತ್ರಿಕೋದ್ಯಮ ವಿಭಾಗದ ಬಗ್ಗೆ ನನಗೆ ಕಿಂಚಿತ್ತೂ ಜ್ಞಾನವಿರಲಿಲ್ಲ. ಆದರೂ ಪತ್ರಿಕೋದ್ಯಮ ವಿಷಯ ಆಯ್ಕೆ ಮಾಡಿಕೊಂಡಿದ್ದೆ. ಇತಿಹಾಸವೆಂದರೆ ಮೊದಲೇ ಕಬ್ಬಿಣದ ಕಡಲೆಯಾಗಿದ್ದರಿಂದ ಇತಿಹಾಸ ವಿಷಯವಿಲ್ಲದಿರುವ ಒಂದು ಕಾಂಬಿನೇಷನ್‌(ಪತ್ರಿಕೋದ್ಯಮ, ಅರ್ಥಶಾಸ್ತ್ರ, ಐಚ್ಛಿಕ ಕನ್ನಡ) ಇದ್ದುದರಿಂದ ಅದನ್ನೇ ಆಯ್ಕೆಮಾಡಿದ್ದೆ.

ವಿದ್ಯಾರ್ಥಿಗಳಲ್ಲಿರುವ ಸಭಾಕಂಪನ ಹೋಗಲಾಡಿಸುವುದಕ್ಕೆ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿಗಳು ಆರಂಭಿಸಿದ ಒಂದು ವೇದಿಕೆಯಿತ್ತು. ಎಲ್ಲರೂ ಆ ವೇದಿಕೆಯಲ್ಲಿ ಕಡ್ಡಾಯವಾಗಿ ಮಾತನಾಡಬೇಕು ಎಂದು ನಮ್ಮ ವಿಭಾಗದ ಮುಖ್ಯಸ್ಥರು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದರು. ನಮ್ಮ ವಿಭಾಗದ ಮುಖ್ಯಸ್ಥರು ಮಾಡಿದ್ದ ಕಡ್ಡಾಯ ಘೋಷಣೆಯು ವೇದಿಕೆಯನ್ನೇರುವ ಮೊದಲೇ ಭಯಪಡುತ್ತಿದ್ದ ನನ್ನನ್ನು ಇನ್ನಷ್ಟು ಭಯಭೀತನನ್ನಾಗಿ ಮಾಡಿತ್ತು. ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ತಮ್ಮ ಪರಿಚಯವನ್ನು ಹೇಳುವ ಸಂಪ್ರದಾಯವು ಮೊದಲಿನಿಂದಲೇ ನಡೆದುಕೊಂಡುಬಂದಿತ್ತು. ಮೊದಲ ಬಾರಿ ಭಯದಿಂದಲೇ ಪರಿಚಯವನ್ನು ಮಾಡಿಕೊಂಡಿದ್ದೆ. ನಂತರದ ಕೆಲವು ದಿನಗಳಲ್ಲಿ ವೇದಿಕೆಯತ್ತ ನಾನು ಧಾವಿಸಿರಲಿಲ್ಲ. ಆ ವೇದಿಕೆಯಲ್ಲಿ ಸೀನಿಯರ್‌ಗಳು ಲೀಲಾಜಾಲವಾಗಿ ಮಾತನಾಡುತಿದ್ದುದು ನನ್ನಲ್ಲಿ ಆಶ್ಚರ್ಯವನ್ನುಂಟುಮಾಡಿತ್ತು. ಅಲ್ಲಿ ನಮ್ಮ ಪ್ರಥಮ ವರ್ಷದ ವಿದ್ಯಾರ್ಥಿಗಳ ಭಾಗವಹಿಸುವಿಕೆಯು ಸ್ವಲ್ಪ ವಿರಳವಾಗಿತ್ತು. ಇದನ್ನು ಗಮನಿಸಿದ ಕಾರಣವೋ ಏನೋ ನಮ್ಮ ವಿಭಾಗದ ಮುಖ್ಯಸ್ಥರು ಮತ್ತು ಉಪನ್ಯಾಸಕರು ನಮ್ಮಲ್ಲಿ ಧೈರ್ಯ ತುಂಬಿದರು. ನಮ್ಮ ಸೀನಿಯರ್‌ಗಳು ಕೂಡ ಮಾತನಾಡಲು ಹುರಿದುಂಬಿಸಿದರು. ಅವರು ನೀಡಿದ ಧೈರ್ಯವು ವೇದಿಕೆಯಲ್ಲಿ ನಿಂತು ಮಾತನಾಡಲು ನಮ್ಮಲ್ಲಿ ಆಶಾಭಾವನೆ ಮೂಡಿಸಿತು. ಆ ವೇದಿಕೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಮುಕ್ತವಾಗಿ ಭಾಗವಹಿಸಲು ಅವಕಾಶವಿತ್ತು. ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶವಿತ್ತು. ಯಾವುದೇ ಭಯವಿಲ್ಲದೆ ಮಾತನಾಡುವುದನ್ನು ಕಲಿಯಲು ಮೊದಲ ವರ್ಷದಲ್ಲೇ ಆ ವೇದಿಕೆ ನನಗೆ ಸಹಾಯ ಮಾಡಿತ್ತು. ದ್ವಿತೀಯ ವರ್ಷಕ್ಕೆ ಕಾಲಿರಿಸುವ ಹೊತ್ತಿಗೆ ಮಾತಿನ ವೇದಿಕೆಯು ಇಷ್ಟವಾಗಿತ್ತು. ಅಂತಿಮ ವರ್ಷದ ಹೊತ್ತಿಗೆ ಆ ವೇದಿಕೆಗೆ ನಾನೊಬ್ಬ ಚಿರಪರಿಚಿತ ವ್ಯಕ್ತಿಯಾಗಿ ಬದಲಾಗಿದ್ದೆ.

ಆ ವೇದಿಕೆಯು ಮಾತುಗಾರರ ವೇದಿಕೆ ಎಂಬ ಟ್ಯಾಗ್‌ಲೈನ್‌ನಿಂದಲೇ ಪ್ರಸಿದ್ಧಿಯಾಗಿದೆ.

ಅಕ್ಷಯ ಕೃಷ್ಣ ಪಿ.
ಪ್ರಥಮ ಎಂ. ಎ. (ಪತ್ರಿಕೋದ್ಯಮ)
ಮಂಗಳೂರು ವಿ. ವಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮುಂಜಾನೆ ಸಮಯ ಏಳು ಗಂಟೆ ಸಿ ಕ್ಯೂ, ಸಿ ಕ್ಯೂ. ಗುಡ್‌ ಮಾರ್ನಿಂಗ್‌ ಕರಾವಳಿ ಮಾರ್ನಿಂಗ್‌ ನೆಟ್‌, ಡಿಸಾಸ್ಟರ್‌ ಮ್ಯಾನೇಜ್ಮೆಂಟ್‌ ನೆಟ್‌, ನೆಟ್‌ ಕಂಟ್ರೋಲರ್‌ VU3VXT...

  • ಲೈಟ್‌ ಆಗಿ ಮಳೆಗಾಲ ಶುರುವಾಗುವಾಗ ಮನಸ್ಸಲ್ಲೆಲ್ಲ ಏನೋ ಒಂಥರಾ ಖುಷಿ. ಫ‌ಸ್ಟ್‌ ಡೇ ಕಾಲೇಜಿಗೆ ಕಾಲು ಇಡುತ್ತೇವೆ. ಫ‌ಸ್ಟ್‌ಡೇ ತರಗತಿಗೆ ಹಾಜರಾಗುತ್ತೇವೆ. ನಮ್ಮ...

  • ಪ್ರಥಮ ಎಂಸಿಜೆಯ ಮೊದಲ ಸೆಮಿಸ್ಟರ್‌ ಪರೀಕ್ಷೆ ಮುಗಿಸಿ, ಕಾಲೇಜಿನ ಲೈಬ್ರೆರಿಯಿಂದ ಕಾದಂಬರಿ ಪುಸ್ತಕಗಳನ್ನ ಹೊತ್ತು ಮನೆ ಸೇರಿದ್ದೆ. ಇನ್ನು ಈ ಪುಸ್ತಕ ಓದಿ ಮುಗಿಯುವವರೆಗೂ...

  • ಓದು ಮುಗಿದ ಮೇಲೆ ಹಳ್ಳಿಗಳಲ್ಲಿ ಹೆತ್ತವರನ್ನು ಬಿಟ್ಟು ಊರು ತೊರೆದ ಯುವ ಜನಾಂಗ. ಇದರಿಂದ ಬದುಕಿನ ಕೊನೆ ದಿನಗಳಲ್ಲಿ ವಯಸ್ಸಾದ ಹೆತ್ತವರು ಎದುರಿಸುತ್ತಿರುವ...

  • ಪ್ರೇಮವೆಂದರೆ ದಿನವೂ ಸಂಭ್ರಮ. "ಅಚ್ಚಾಗಿದೆ ಎದೆಯಲಿ ನಿನ್ನದೇ ಹಸಿಬಿಸಿ ಸಂದೇಶ' ಎನ್ನುತ್ತ ಪಿಸುಗುಡುವ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್‌ ಡೇ ಒಂದು ನೆಪ. ಮನುಷ್ಯನ...

ಹೊಸ ಸೇರ್ಪಡೆ