Udayavni Special

ಅಂಗನವಾಡಿಗೆ ಹೋಗುತ್ತಿದ್ದ ದಿನಗಳವು!


Team Udayavani, Sep 21, 2018, 6:00 AM IST

z-11.jpg

ನೆನಪುಗಳು ಅಂದರೇನೇ ಹಾಗೆ. ಮನಸ್ಸಿಗೆ ಖುಷಿ ನೀಡುವಂತಹ ಅನೇಕ ನೆನಪುಗಳು ಒಂದು ಕಡೆಯಾದರೆ, ಮನಸ್ಸಿನಿಂದ ಮಾಸಿ ಹೋಗಬೇಕೆನಿಸುವ ನೆನಪುಗಳು ಇನ್ನೊಂದು ಕಡೆ. ಬಾಲ್ಯ ಎನ್ನುವುದು ಸವಿನೆನಪುಗಳ ಬುತ್ತಿ ಅಂತಾನೆ ಹೇಳಬಹುದು ಅಲ್ವೆ? ನಾವು ಮಾಡಿದ ತುಂಟಾಟ, ಚೇಷ್ಟೆಗಳು, ಗೊತ್ತಿಲ್ಲದೆ ಮಾಡಿರುವ ಅವಾಂತರಗಳು ಇವೆಲ್ಲವೂ ಆ ಬುತ್ತಿಯೊಳಗೆ ಸೇರಿಕೊಂಡು ಸುಮ್ಮನೆ ಮೆಲುಕು ಹಾಕಿಕೊಂಡು ಕೂರುವಾಗ ನಮಗೆ ನಗೆಯ ರಸದೂಟವನ್ನು ಬಡಿಸುತ್ತದೆ.

ನಾನು ಅಂಗನವಾಡಿಗೆ ಹೋಗುತ್ತಿದ್ದ ಸಮಯದಲ್ಲಿ ನಡೆದ ಘಟನೆಯಿದು. ನಮ್ಮ ಟೀಚರ್‌ ನಮಗೆಲ್ಲ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಅವುಗಳಲ್ಲಿ ಓಟ, ಕಪ್ಪೆ ಜಿಗಿತ, ನೆನಪಿನ ಶಕ್ತಿ ಆಟಗಳಂತಹ ಸ್ಪರ್ಧೆಗಳು ಕೆಲವು. ನಾವೆಲ್ಲ ಆ ಸ್ಪರ್ಧೆಗಳಲ್ಲಿ ಭಾಗವಹಿಸಿದೆವು ಹಾಗೂ ವಿಜೇತರಾದೆವು. ಒಂದು ದಿನ ಬಹುಮಾನ ವಿತರಣಾ ಸಮಾರಂಭವನ್ನು ಕೂಡ ಏರ್ಪಡಿಸಿದ್ದರು. ಆ ದಿನ ನನ್ನ ಗೆಳತಿಯೊಬ್ಬಳು ಬಂದಿರಲಿಲ್ಲ. ಹಾಗಾಗಿ ಅವಳ ಬಹುಮಾನ ಟೀಚರ್‌ನ ಬಳಿಯೇ ಉಳಿದಿತ್ತು. ಮರುದಿನ ಬಂದ ನನ್ನ ಗೆಳತಿಗೆ ಟೀಚರ್‌ ಅವಳಿಗೆ ಸೇರಬೇಕಾಗಿದ್ದ ಬಹುಮಾನವನ್ನು ಕೊಟ್ಟರು. “ಅವಳಿಗೆ ಬಹುಮಾನ ಕೊಟ್ಟರು. ಆದರೆ ನನಗೆ ಕೊಡಲಿಲ್ಲ’ ಎನ್ನುವ ಬೇಸರದಿಂದ ಮುಖ ಗಂಟು ಹಾಕಿಕೊಂಡು ಮೂಲೆಯಲ್ಲಿ ಕೂತೆ. ನನ್ನ ಗೆಳತಿಗೆ ಬಹುಮಾನ ಕೊಟ್ಟ ದಿನ ನನಗೂ ಕೊಡಲೇಬೇಕಿತ್ತು ಅನ್ನುವ ಸಣ್ಣ ಹೊಟ್ಟೆ ಉರಿ ಅಂತ ಹೇಳಬಹುದೇನೋ ಇದಕ್ಕೆ. ಕುಂಬಳಕಾಯಿ ಥರ ಆಗಿದ್ದ ನನ್ನ ಮುಖವನ್ನು ನೋಡಿದ ಟೀಚರ್‌ಗೆ ನನ್ನ ಬೇಸರಕ್ಕೆ ಕಾರಣ ಏನು ಅಂತ ಗೊತ್ತಾಯೊ¤à ಏನೋ. ತಮ್ಮಲ್ಲಿ ಹೆಚ್ಚಿಗೆ ಉಳಿದಿದ್ದ ಬಹುಮಾನವನ್ನು ನನಗೆ ತಂದು ಕೊಟ್ಟರು. ನನಗೆ ಎಷ್ಟು ಖುಷಿಯಾಯಿ ತೆಂದರೆ ನನ್ನ ಗೆಳತಿಯ ಹತ್ತಿರ “ನನಗೆ ಇನ್ನೊಂದು ಬಹುಮಾನ’ ಅಂತ ಹೇಳಿಕೊಂಡು ಕುಣಿದೆ. ಇದು ನನ್ನ ಚೇಷ್ಟೆಯ ಪರಮಾವಧಿಯಾಗಿದ್ದರೂ ಕೂಡ, ನಮ್ಮ ಟೀಚರ್‌ ಮಕ್ಕಳಿಗೆ ಬೇಸರವಾಗಬಾರದೆನ್ನುವ ಉದ್ದೇಶ ದಿಂದ ತಮ್ಮಲ್ಲಿ ಉಳಿದಿದ್ದ ಬಹುಮಾನವನ್ನು ನನಗೆ ಕೊಟ್ಟರು. ಇದನ್ನು ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಆದರೆ, ನಮ್ಮ ಟೀಚರ್‌ನ ಪ್ರೀತಿಯನ್ನು ಕಂಡು ನನ್ನ ಮನ ಕರಗುತ್ತದೆ.

ಮಕ್ಕಳ ಮನಸ್ಸನ್ನು ಅರಿಯುವ ಗುರುಗಳಿಗೆ ನನ್ನ ಕಡೆಯಿಂದ ಹ್ಯಾಟ್ಸಾಪ್‌.

ವಾಣಿ 
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು

ಟಾಪ್ ನ್ಯೂಸ್

ಮನಗೂಳಿ ಗ್ರಾಮದಲ್ಲಿ ಮತ್ತೆ ಭೂಕಂಪನದ ಅನುಭವ ? ಮನೆಯಿಂದ ಹೊರಬಂದ ಜನರಿಂದ ಜಾಗರಣೆ

ಮನಗೂಳಿ ಗ್ರಾಮದಲ್ಲಿ ಮತ್ತೆ ಭೂಕಂಪನದ ಅನುಭವ ? ಮನೆಯಿಂದ ಹೊರಬಂದ ಜನರಿಂದ ಜಾಗರಣೆ

ಪ್ರಯಾಣ ದರ ಹೆಚ್ಚಿಸುವಂತೆ ಸರಕಾರದ ಮೊರೆಹೋದ ಖಾಸಗಿ ಬಸ್‌ ಮಾಲಕರು

ಪ್ರಯಾಣ ದರ ಹೆಚ್ಚಿಸುವಂತೆ ಸರಕಾರದ ಮೊರೆಹೋದ ಖಾಸಗಿ ಬಸ್‌ ಮಾಲಕರು

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅಭಿಮತ

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ನರವಣೆ ಅಭಿಮತ

ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್‌ ಆರೋಪ

ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್‌ ಆರೋಪ

ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ

ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

Curent bill

80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?  
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

udayavani youtube

ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ

udayavani youtube

ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1

udayavani youtube

ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ ! | Udayavani

udayavani youtube

ದೇಹದ ತೂಕಕ್ಕೂ, ಮೊಣಕಾಲ ಆರೋಗ್ಯಕ್ಕೂ ಸಂಬಂಧ ಇದೆಯೇ?

ಹೊಸ ಸೇರ್ಪಡೆ

ಎಎಂಯು-ಮಾಹೆ ಒಪ್ಪಂದ ಪತ್ರಕ್ಕೆ ಸಹಿ

ಎಎಂಯು-ಮಾಹೆ ಒಪ್ಪಂದ ಪತ್ರಕ್ಕೆ ಸಹಿ

ಮನಗೂಳಿ ಗ್ರಾಮದಲ್ಲಿ ಮತ್ತೆ ಭೂಕಂಪನದ ಅನುಭವ ? ಮನೆಯಿಂದ ಹೊರಬಂದ ಜನರಿಂದ ಜಾಗರಣೆ

ಮನಗೂಳಿ ಗ್ರಾಮದಲ್ಲಿ ಮತ್ತೆ ಭೂಕಂಪನದ ಅನುಭವ ? ಮನೆಯಿಂದ ಹೊರಬಂದ ಜನರಿಂದ ಜಾಗರಣೆ

ಟೆಂಡರ್‌ ಕೆಲಸದ ನಿರ್ವಹಣೆ ಬಗ್ಗೆ ನಿಗಾ ವಹಿಸಲು ಆಗ್ರಹ

ಟೆಂಡರ್‌ ಕೆಲಸದ ನಿರ್ವಹಣೆ ಬಗ್ಗೆ ನಿಗಾ ವಹಿಸಲು ಆಗ್ರಹ

ಪ್ರಯಾಣ ದರ ಹೆಚ್ಚಿಸುವಂತೆ ಸರಕಾರದ ಮೊರೆಹೋದ ಖಾಸಗಿ ಬಸ್‌ ಮಾಲಕರು

ಪ್ರಯಾಣ ದರ ಹೆಚ್ಚಿಸುವಂತೆ ಸರಕಾರದ ಮೊರೆಹೋದ ಖಾಸಗಿ ಬಸ್‌ ಮಾಲಕರು

ಮೂಲ್ಕಿ ನಗರ ಪಂಚಾಯತ್‌ : 30 ಲಕ್ಷ ರೂ. ಮಿಗತೆ ಬಜೆಟ್‌

ಮೂಲ್ಕಿ ನಗರ ಪಂಚಾಯತ್‌ : 30 ಲಕ್ಷ ರೂ. ಮಿಗತೆ ಬಜೆಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.