ಅಪ್ಪ ಎಂಬ ಎವರ್‌ಗ್ರೀನ್‌ ಹೀರೋ !

Team Udayavani, Dec 6, 2019, 5:00 AM IST

ನಾನು ನೋಡಿದ ಮೊದಲ ವೀರ ಅಂತಾರಲ್ಲ, ಹಾಗೆಯೇ ನನ್ನ ಜೀವನದಲ್ಲಿ ನಾನು ಕಂಡ ಮೊದಲನೆಯ ಧೀರ ನನ್ನ ಅಪ್ಪ. ಎಲ್ಲರ ಜೀವನದಲ್ಲಿ ಒಬ್ಬೊಬ್ಬರು ಆದರ್ಶ ವ್ಯಕ್ತಿಗಳಿರುತ್ತಾರೆ. ಆದರೆ, ನನ್ನ ಜೀವನದ ಆದರ್ಶ ವ್ಯಕ್ತಿ ಎಂದರೆ ನನ್ನಪ್ಪ.
ಜೊತೆಯಾಗಿ ಬದುಕುವ ಎಲ್ಲರೂ ನಮ್ಮ ಲೈಫ್ ಪಾರ್ಟ್‌ನರ್‌ಗಳೇ. ಯಾರಿಗಾದರೂ ಲೈಫ್ ಪಾರ್ಟ್‌ನರ್‌ ಎಂಬ ಬಿರುದು ಕೊಡುವ ಬದಲು, ನಮಗೆ ವಿದ್ಯೆಬುದ್ಧಿ ಇಲ್ಲದ ಸಮಯದಲ್ಲಿ ನಮ್ಮನ್ನು ಎಲ್ಲ ರೀತಿಯಲ್ಲೂ ಸಾಕಿಸಲಹಿ, ತಿದ್ದಿ-ತೀಡಿ, ಸರಿ-ತಪ್ಪುಗಳನ್ನು ನಮಗೆ ಮನವರಿಕೆ ಮಾಡಿ ಯಾವ ರೀತಿ ಬದುಕನ್ನು ಸಾಗಿಸಬೇಕೆಂದು ನಮಗೆ ತಿಳಿಸಿಕೊಡುವ ಅಪ್ಪನೇ ನಮ್ಮ ನಿಜವಾದ ಲೈಪ್‌ ಪಾರ್ಟನರ್‌. ಎಲ್ಲ  ಅಪ್ಪಂದಿರೂ ಕೂಡ ತಮ್ಮ ಸಂತೋಷ-ಸುಖಗಳನ್ನು ತ್ಯಜಿಸಿ ತಮ್ಮ ಮಕ್ಕಳಿಗೆ ನೀಡುತ್ತಾರೆ. ಆದರೆ, ಅದನ್ನು ಅರ್ಥಮಾಡಿಕೊಳ್ಳುವಷ್ಟು ತಾಳ್ಮೆ ನಮಗೆ ಇರುವುದಿಲ್ಲ.
ತನಗೆ ಉಟ್ಟುಕೊಳ್ಳಲು ಬಟ್ಟೆ ಇಲ್ಲದಿದ್ದರೂ ತನ್ನ ಮಗ-ಮಗಳಿಗೆ ಆ ಕೊರತೆ ಇರಬಾರದು ಎಂದು ಒಳ್ಳೊಳ್ಳೆಯ ಬಟ್ಟೆ ತಂದುಕೊಡುತ್ತಾರೆ. ಆದರೆ, ನಮಗೆ ಎಷ್ಟೇ ಸೌಕರ್ಯಗಳು ಇದ್ದರೂ ನಾವು ಹೇಳುವುದು ನನಗೆ ಅಪ್ಪ ಏನೂ ತಂದುಕೊಡುವುದಿಲ್ಲ ಎಂದು. ಆದರೆ, ಅಪ್ಪ ಮಾತ್ರ ಎಲ್ಲರಲ್ಲಿಯೂ ನನ್ನ ಮಗಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಹೇಳುತ್ತಾರೆ. ಇದು ನನಗೂ ನನ್ನಪ್ಪನಿಗೂ ಇರುವ ವ್ಯತ್ಯಾಸ. ಅಪ್ಪ ಎಂಬ ಎರಡು ಅಕ್ಷರದ ಮೇಲೆ ಎರಡು ಕೋಟಿ ಜವಾಬ್ದಾರಿಯಿದೆ. ಮಗಳಾಗಲಿ-ಮಗನಾಗಲಿ ಅವರನ್ನು ಬೆಳೆಸುವ ಹಾದಿಯಲ್ಲಿ ಅಪ್ಪನು ತನಗೆ ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಸರಿದಾರಿ ತೋರಿಸುವ ಗುರುವಿನ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾನೆ.
ನನ್ನ ಲೈಫ್ನಲ್ಲಿ ನನ್ನ ಅಪ್ಪ ನಾನು ತಪ್ಪು ಮಾಡಿದಾಗ ತಪ್ಪು ಮಗಳೇ, ಸರಿ ಮಾಡಿದಾಗ ಸರಿ ಮಗಳೇ ಎಂದು ಹೇಳುತ್ತಾ ನನ್ನನ್ನು ಬೆಳೆಸಿದ್ದಾರೆ. ನನ್ನ ಸಂತೋಷದಲ್ಲಿ ಅವರು ಕೂಡ ಸಂತೋಷವನ್ನು ಕಾಣುತ್ತಾರೆ. ನನ್ನ ಕನಸನ್ನೇ ಅವರ ಕನಸನ್ನಾಗಿಸಿದ್ದಾರೆ. ಇಂತಹ ಒಳ್ಳೆಯ ಲೈಫ್ ಪಾರ್ಟ್‌ ನರ್‌ನ್ನು ನಾನು ಪಡೆದದ್ದು ನನ್ನ ಯಾವ ಜನ್ಮದ ಫ‌ಲವೊ?
ಸುಶ್ಮಿತಾ ಶೆಟ್ಟಿ 
ಪ್ರಥಮ ಬಿ.ಕಾಂ. ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮನಸ್ಸಿದ್ದರೆ ಮಾರ್ಗ' ಎಂಬ ಮಾತು ಎಲ್ಲರ ಜೀವನಕ್ಕೂ ತುಂಬ ಮುಖ್ಯವಾದುದು. ಆದರೆ, ಈ ಮಾತನ್ನು ಕೆಲವರಿಂದ ಮಾತ್ರ ಸಾಧ್ಯಗೊಳ್ಳಿಸಲಾಗುತ್ತದೆ. ನಿರಂತರ ಶ್ರಮ, ಅವಮಾನ,...

  • ನಮಃ ಶ್ರೀ ಯತಿರಾಜಾಯ | ವಿವೇಕಾನಂದ ಸೂರಯೇ | ಸಚ್ಚಿತ್ಸುಖಸ್ವರೂಪಾಯ | ಸ್ವಾಮಿನೇ ತಾಪಹಾರಿಣೇ || ಜಗತ್ತಿನ ಬಹುಪಾಲು ಜನರು ಕೇವಲ ಇತಿಹಾಸಕ್ಕೆ ಸೇರಿದವರಾಗಿರುತ್ತಾರೆ....

  • ಕಾಜಿ ಎನ್ನುವ ಈ ಕಿರುಚಿತ್ರ ಮಹಿಳೆಯರ ಸಮಸ್ಯೆಗಳನ್ನು ಕೇಂದ್ರೀಕರಿಸಿರುವ ಚಿತ್ರ. ಕಾಜಿ ಕೇವಲ ವಿಧವೆಯ ಕಥೆಯನ್ನು ಹೇಳುತ್ತದೆ ಅಂದರೆ ಶುದ್ಧ ತಪ್ಪು. ಬದುಕಿನ...

  • ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ದಾಳಿ ನಡೆಸಿದ ಗುಂಡುಗಳು ಸ್ಫೋಟಗೊಳ್ಳದೆ ಇನ್ನೂ ಭೂಮಿಯ ಆಳದಲ್ಲಿ ಸೇರಿವೆ. ಆದರೆ, ಇದರ ಬಗ್ಗೆ ಜನರಿಗೆ ಯಾವುದೇ ಮಾಹಿತಿ...

  • ಈ ಜಗತ್ತು ಎಲ್ಲಾ ಜೀವಸಂಕುಲಗಳನ್ನು ಹೊಂದಿದೆ. ಈ ಜೀವಸಂಕುಲದಲ್ಲಿ ಬೇರೆ ಬೇರೆ ರೀತಿಯ ಪ್ರಾಣಿಗಳು ಕಾಣಸಿಗುತ್ತವೆ. ಕೆಲವು ಪ್ರಾಣಿಗಳು ನೋಡಲು ಸುಂದರವಾಗಿರುತ್ತವೆ....

ಹೊಸ ಸೇರ್ಪಡೆ

  • ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ (ಸೆಸ್‌) ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದ...

  • ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌...

  • ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಗರಿಗೆದರುತ್ತಿದ್ದು, ಸಚಿವಾಕಾಂಕ್ಷಿಗಳಲ್ಲಿ...

  • ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು...

  • ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ...