ಭಾಷೆ ಮೀರಿದ ಭಾವ

Team Udayavani, May 24, 2019, 6:00 AM IST

ಮೊದಲಿನಿಂದಲೂ ವಾಚಾಳಿಯಲ್ಲದ ನನಗೆ ಎಲ್ಲಿ ನಾನು ಕೂಪಮಂಡೂಕದಂತಾಗಿ ಬಿಡುತ್ತೇನೋ ಎಂಬ ಭಯವಿತ್ತು. ಹೊಸದೇನನ್ನಾದರೂ ಕಲಿಯಬೇಕೆನ್ನುವ ಬಯಕೆ ಇತ್ತಾದರೂ ಏನು ಕಲಿಯಬೇಕು ಎನ್ನುವುದು ತಿಳಿದಿರಲಿಲ್ಲ. ಹೀಗೊಂದು ದಿನ ರಾಹುಲ್‌ ಎಂಬಾತನ ಪರಿಚಯವಾಯಿತು. ಅವನಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ, ಅವನು ಮೂಲತಃ ಕೇರಳದ ಮಲಯಾಳಿಯಾಗಿದ್ದ. ಆತನ ಭಾಷೆ ಕೇಳಿದ ನನಗೆ ನಾನೇಕೆ ಮಲಯಾಳ ಕಲಿಯಬಾರದು? ಎಂದೆನಿಸಿತು. ಧೈರ್ಯಮಾಡಿ ಅವನಲ್ಲಿ, “”ಅಣ್ಣಾ, ನನಗೂ ನಿಮ್ಮ ಭಾಷೆ ಕಲಿಸುವಿರಾ?” ಎಂದು ಕೇಳಿದೆ. ಅಷ್ಟು ಕೇಳಿದ್ದೇ ತಡ ಆತ ನನ್ನ ಒಡಹುಟ್ಟಿದವನಂತೇ ಆಗಿಬಿಟ್ಟ.

ಅವನು ನನ್ನ ಮೊದಲ ಮಲಯಾಳಂ ಗುರು. ಹೊಸ ಭಾಷೆಯಲ್ಲಿ ಕುಶ‌ಲೋಪರಿ ವಿಚಾರಿಸುವುದನ್ನು ಕಲಿತ ನನಗೆ ಎಲ್ಲೇ ಮಲಯಾಳಿಗಳು ಸಿಕ್ಕರೂ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. “ನೀವು ಮಲಯಾಳಿಗಳಾ?’ ಎಂದು ಪ್ರಾರಂಭವಾಗುತ್ತಿದ್ದ ಮಾತು ಮುಗಿಯುತ್ತಲೇ ಇರಲಿಲ್ಲ. ಈಗಲೂ ನನ್ನ ಭಾಷಾ ಕಲಿಕೆ ನಡೆಯುತ್ತಲೇ ಇದೆ. ಕಾಲೇಜು ಹಾಗೂ ಹಾಸ್ಟೆಲ್‌ನಲ್ಲಿರುವ ಬಹುತೇಕ ಮಲಯಾಳಿಗಳು ನನ್ನ ಸ್ನೇಹಿತರು. ಕಾಲೇಜು, ಪರೀಕ್ಷೆ, ಓದು, ಹಾಸ್ಟೆಲ್‌ನಲ್ಲಿ ಇರುವ ನನಗೆ ಮನೆಯ ನೆನಪು ಇವೆಲ್ಲದರ ನಡುವೆ ಹೊಸಬರೊಬ್ಬರ ಪರಿಚಯವಾದಾಗ ಏನೋ ಸಂತೋಷ, ಮನಸ್ಸಿಗೆ ನೆಮ್ಮದಿ. ನನ್ನ ಹಾಗೂ ಮಲಯಾಳಿಗಳ ನಂಟು ಕೇವಲ ಹರಟೆ, ಅಥವಾ ವಾಟ್ಸಾಪ್‌ ಗ್ರೂಪಿಗೆ ಸೀಮಿತವಾಗಿಲ್ಲ. ಹೊಸ ವಿಷಯಗಳ ಕುರಿತು ಚರ್ಚೆ, ಕೇರಳ ಹಾಗೂ ಕರ್ನಾಟಕದ ನಡುವಿನ ವ್ಯತ್ಯಾಸಗಳ ವಿಮರ್ಶೆ, ಅಲ್ಲಿನ ಸಂಸ್ಕೃತಿ, ರಾಜಕೀಯ ಬೆಳವಣಿಗೆ, ಸಿನಿಮಾ ರಂಗದಲ್ಲಾಗುವ ಬೆಳವಣಿಗೆ ಹೀಗೆ ಹಲವಾರು ವಿಷಯಗಳ ವಿನಿಮಯವೂ ನಡೆಯುತ್ತದೆ. ದಿನದಲ್ಲಿ ಕನಿಷ್ಟ ಮೂವತ್ತು ನಿಮಿಷವನ್ನು ಭಾಷಾ ಕಲಿಕೆಗಾಗಿ ಮೀಸಲಿಟ್ಟಿರುವ ನನಗೆ ಆಗಿರುವ ಲಾಭಗಳು ಹಲವು. ಈಗ ಮಲಯಾಳಿಗಳಿಗೆ ಕನ್ನಡ ಕಲಿಸುತ್ತ ಅವರಿಂದ ದಿನವೂ ಹೊಸ ಶಬ್ದಗಳನ್ನು ಕಲಿಯುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾಗಿದೆ. ಪರಿಚಿತರೂ ನಮ್ಮನ್ನು ಸರಿಯಾಗಿ ಮಾತನಾಡಿಸದ ಈ ಕಾಲದಲ್ಲಿ ಭಾಷೆಯಿಂದಾಗಿ ಅಪರಿಚಿತರೂ ನನ್ನವರಾಗಿದ್ದಾರೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.

ಸಿಂಧೂ ಹೆಗಡೆ
ಪ್ರಥಮ ಬಿ. ಎ.ಎಸ್‌ಡಿಎಮ್‌ ಕಾಲೇಜು, ಉಜಿರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮುಂಜಾನೆ ಸಮಯ ಏಳು ಗಂಟೆ ಸಿ ಕ್ಯೂ, ಸಿ ಕ್ಯೂ. ಗುಡ್‌ ಮಾರ್ನಿಂಗ್‌ ಕರಾವಳಿ ಮಾರ್ನಿಂಗ್‌ ನೆಟ್‌, ಡಿಸಾಸ್ಟರ್‌ ಮ್ಯಾನೇಜ್ಮೆಂಟ್‌ ನೆಟ್‌, ನೆಟ್‌ ಕಂಟ್ರೋಲರ್‌ VU3VXT...

  • ಲೈಟ್‌ ಆಗಿ ಮಳೆಗಾಲ ಶುರುವಾಗುವಾಗ ಮನಸ್ಸಲ್ಲೆಲ್ಲ ಏನೋ ಒಂಥರಾ ಖುಷಿ. ಫ‌ಸ್ಟ್‌ ಡೇ ಕಾಲೇಜಿಗೆ ಕಾಲು ಇಡುತ್ತೇವೆ. ಫ‌ಸ್ಟ್‌ಡೇ ತರಗತಿಗೆ ಹಾಜರಾಗುತ್ತೇವೆ. ನಮ್ಮ...

  • ಪ್ರಥಮ ಎಂಸಿಜೆಯ ಮೊದಲ ಸೆಮಿಸ್ಟರ್‌ ಪರೀಕ್ಷೆ ಮುಗಿಸಿ, ಕಾಲೇಜಿನ ಲೈಬ್ರೆರಿಯಿಂದ ಕಾದಂಬರಿ ಪುಸ್ತಕಗಳನ್ನ ಹೊತ್ತು ಮನೆ ಸೇರಿದ್ದೆ. ಇನ್ನು ಈ ಪುಸ್ತಕ ಓದಿ ಮುಗಿಯುವವರೆಗೂ...

  • ಓದು ಮುಗಿದ ಮೇಲೆ ಹಳ್ಳಿಗಳಲ್ಲಿ ಹೆತ್ತವರನ್ನು ಬಿಟ್ಟು ಊರು ತೊರೆದ ಯುವ ಜನಾಂಗ. ಇದರಿಂದ ಬದುಕಿನ ಕೊನೆ ದಿನಗಳಲ್ಲಿ ವಯಸ್ಸಾದ ಹೆತ್ತವರು ಎದುರಿಸುತ್ತಿರುವ...

  • ಪ್ರೇಮವೆಂದರೆ ದಿನವೂ ಸಂಭ್ರಮ. "ಅಚ್ಚಾಗಿದೆ ಎದೆಯಲಿ ನಿನ್ನದೇ ಹಸಿಬಿಸಿ ಸಂದೇಶ' ಎನ್ನುತ್ತ ಪಿಸುಗುಡುವ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್‌ ಡೇ ಒಂದು ನೆಪ. ಮನುಷ್ಯನ...

ಹೊಸ ಸೇರ್ಪಡೆ