Udayavni Special

ಅಂತಿಮ ವರ್ಷ ವಿದಾಯದ ಬೇಸರ

ಮೊದಲ ವರ್ಷ ಬೆರಗು, ಎರಡನೇ ವರ್ಷ ಬೆಚ್ಚಗೆ...

Team Udayavani, Feb 21, 2020, 4:56 AM IST

chitra-3

ಲೈಟ್‌ ಆಗಿ ಮಳೆಗಾಲ ಶುರುವಾಗುವಾಗ ಮನಸ್ಸಲ್ಲೆಲ್ಲ ಏನೋ ಒಂಥರಾ ಖುಷಿ. ಫ‌ಸ್ಟ್‌ ಡೇ ಕಾಲೇಜಿಗೆ ಕಾಲು ಇಡುತ್ತೇವೆ. ಫ‌ಸ್ಟ್‌ಡೇ ತರಗತಿಗೆ ಹಾಜರಾಗುತ್ತೇವೆ. ನಮ್ಮ ಒಬ್ಬರನ್ನು ಬಿಟ್ಟು ಅಲ್ಲಿರುವ ಎಲ್ಲರೂ ಏಲಿಯನ್ಸ್‌ ಅಂತ ಅನಿಸುತ್ತದೆ. ಒಂದು ಅಂತೂ ಸತ್ಯ. ಫ‌ಸ್ಟ್‌ಡೇ ಕಾಲೇಜಲ್ಲಿ ಒಬ್ಬ ಬೆಸ್ಟ್‌ ಫ್ರೆಂಡ್‌, ಒಬ್ಬ ಬೆಸ್ಟ್‌ ಕ್ರಷ್‌, ಯಾವತ್ತೂ ಮರೆಯಲಾಗದಿರೊ ಬೆಸ್ಟ್‌ ಲೆಕ್ಚರ್ ಸಿಗುತ್ತಾರೆ. ಹಾಗೇ ಮುಂದೆ ದೊಡ್ಡ ಗ್ಯಾಂಗ್‌ ಕೂಡ ರಚನೆಯಾಗಿಯೇ ಆಗುತ್ತದೆ. ದಿನಗಳೇನೂ ಮುಂದೆ ಹೋಗುತ್ತ ಇರುತ್ತದೆ. ಕಣ್ಣು ಬಿಡುವಷ್ಟರಲ್ಲಿ ಫ‌ಸ್ಟ್‌ ಇಂಟರ್ನಲ್‌ ಬಂದೇ ಬಿಡುತ್ತದೆ.

ಅಬ್ಬಬ್ಟಾ ಇಂಟರ್ನಲ್‌ ಅಂದರೆ ಏನು ಅಂತಾನೆ ಗೊತ್ತಿರಲ್ಲ, ಅದನ್ನು ಹೇಗೋ ಕಷ್ಟಪಟ್ಟು ಪಾಸ್‌ ಆಗುತ್ತೀವಿ. ಫ‌ಸ್ಟ್‌ ಇಯರ್‌ ಅಲ್ಲಿ ಚೈಲ್ಡ್‌ಗಳಾಗಿ ಇರುವ ನಾವು ಎರಡನೇ ವರ್ಷಕ್ಕೆ ಕಾಲಿಡುವಾಗ ಕಾಲೇಜಿನ ಅನೇಕ ವಿಚಾರಗಳನ್ನು ತಿಳಿದಿರುತ್ತೇವೆ. ಫ್ರೆಂಡ್ಸ್‌ ಗೆ ನೋಟ್ಸ್‌ ಬರೆದುಕೊಡುವುದೇನು, ಊಟ ಮಾಡುವಾಗ “ಬಿಲ್‌ ನಾನೇ ಕೊಡುತ್ತೇನೆ’ ಅನ್ನುವುದೇನು. ಎರಡನೇ ವರ್ಷ ಒಂಥರಾ ಬೆಚ್ಚನೆ ವರ್ಷ. ಆದರೆ, ಕ್ಲಾಸ್‌ ಬಂಕ್‌ ಹೊಡೆಯುವಾಗ ಮಾತ್ರ ಹಿಂದೇಟು ಹಾಕುತ್ತೀವಿ.

ಎಲ್ಲ ತರಲೆ ಮಾಡಿಯಾದರೂ ಒಬ್ಬ ಹೇಳುತ್ತಾನೆ “ಲೋ… ಮಗ ಫ‌ಸ್ಟ್‌ ಇಯರ್‌ ಆಯಿತು ಕಣೋ ನಾವು ಇನ್ನೂ ಏನೂ ಕಿತಾಪತಿ ಮಾಡೇ ಇಲ್ಲ’ ಅಂತ. ಅದಕ್ಕೆ ಇನ್ನೊಬ್ಬ ಹೇಳುತ್ತಾನೆ- “ಮಗ ಇನ್ನು ಎರಡು ವರ್ಷ ಇದೆ. ಏನಾದರೂ ಮಾಡೋಣ ಸುಮ್ಮನೆ ಇರೋ’.

ತರಗತಿಯ ಫ್ರೆಂಡ್ಸ್‌ ಜೊತೆ ಸೇರಿ ಬೀಚ್‌, ಪಾರ್ಕ್‌, ಫಾಲ್ಸ್‌, ಫೋಟೋ-ಶೂಟ್‌ ಅನ್ನೋ ತಿರುಗಾಟದಲ್ಲೇ ಕಾಲೇಜು ರಜಾ ದಿನಗಳು ಮುಗಿದಿರುತ್ತವೆ. ಇನ್ನೂ ನಾವು ಸೆಕೆಂಡ್‌ಇಯರ್‌ಅಂತ ಬಟರ್‌ಫ್ಲೈಲ್ಸ್‌ ತರ ಆಕಾಶದೆತ್ತರ ಹಾರಾಡುವುದೇ ಸರಿ. ಅದರಲ್ಲೂ ಸೆಕೆಂಡ್‌ ಇಯರ್‌ಅಲ್ಲಿ “ಲವ್‌ ಗಿವ್‌’ ಅನ್ನೋ ಗೊಂದಲಕ್ಕೆ ಬಿದ್ದು ಓದು ಹಾಳುಮಾಡಿಕೊಳ್ಳುವುದೂ ಇದೆ.

ಪಾರ್ಕ್‌ ಸುತ್ತಾಡುವುದೇನು, ಕೈ ಕೈಹಿಡಿದು ಕೊಂಡು ದಾರಿಯಲ್ಲಿ ನಡೆಯುವುದೇನು. ಈ ಲವ್‌ ಮತ್ತು ಫ್ರೆಂಡ್‌ಶಿಪ್‌ಗ್ಳ ನಡುವೆ ಸೆಕೆಂಡ್‌ ಇಯರ್‌ನ ಪರೀಕ್ಷೆಗಳು ಮುಗಿದು ಹೋಗಿರುತ್ತವೆ. ದಿನಗಳು ಉರುಳಿದ ಹಾಗೇ ಫೈನಾಲ್‌ಇಯರ್‌ ನಮ್ಮ ಕಣ್ಣ ಮುಂದೆ ಕೂತಿರುತ್ತದೆ. ಏಕಾಗ್ರತೆಯನ್ನು ತಂದುಕೊಳ್ಳುವುದು ಹೇಗೆ ಎಂಬುದೇ ಆಗ ನಮ್ಮ ಮುಂದಿನ ಸವಾಲು.

ಫೈನಲ್‌ ಇಯರ್‌ನಲ್ಲಿ ಮಳೆಗಾಲನೂ ಇಲ್ಲ, ಚಳಿಗಾಲನೂ ಇಲ್ಲ ಯಾವಾಗಲೂ ಪರೀಕ್ಷೆ ಕಾಲವೆ. ಜೊತೆಗೆ ಸೀನಿಯರ್‌ ಎಂಬ ಹವಾ ಅಂತೂ ಬೇಜಾನ್‌ ಜೋರಾಗಿರುತ್ತದೆ. ಎಂಟು ಗಂಟೆ ಕ್ಲಾಸ್‌ ಅಂದರೆ ಆರಾಮಾಗಿ ಹತ್ತು ಗಂಟೆಗೆ ಕ್ಲಾಸ್‌ಗೆ ಬರುವುದು. ಫ‌ಸ್ಟ್‌ಇಯರ್‌ನಲ್ಲಿದ್ದ ಫ್ರೆಂಡ್ಸ್‌ ಗ್ಯಾಂಗ್‌ಅಬ್ಬಬ್ಟಾ ಅಂದರೆ ಮೂರು ಪ್ರತ್ಯೇಕ ಪಕ್ಷವಾಗಿರುತ್ತದೆ. ಚಿಂದಿಚಿತ್ರಾನ್ನ ಆಗಿದ್ದರೂ ವಿಶೇಷವೇನೂ ಇಲ್ಲ. ಮುನಿಸುಗಳ ನಡುವೆಯೂ ಆ ಫೆಸ್ಟ್‌, ಸೆಮಿನಾರ್‌, ಟ್ರಿಪ್‌, ಕ್ಯಾಂಪ್‌- ಅನ್ನೋ ಜಂಜಾಟದಲ್ಲಿ ಫೈನಲ್‌ಇಯರ್‌ ಪರೀಕ್ಷೆ ಬೇರೆ ಹತ್ತಿರ ಬಂದಿರುತ್ತದೆ. ಲವ್‌ ಅನ್ನೋ ಹಳ್ಳಕ್ಕೆ ಬಿದ್ದವರ ಜೀವನದಲ್ಲಿ ಎಷ್ಟೋ ಸಲ ಆ ಪುಟ್ಟ ಹೃದಯಗಳ ನಡುವೆ ಮನಸ್ತಾಪ, ಬ್ರೇಕಪ್‌, ಪ್ಯಾಚಾಪ್‌- ಇದೆಲ್ಲದರ ನಡುವೆಯೂ ಮನಸ್ಸು ಒಡೆದು ಚೂರಾಗುವುದುಂಟು.

ನಾವು ತುಂಬಾ ಇಷ್ಟಪಡುವ “ಕಾಲೇಜ್‌ ಡೇ’ ಬಂದಿರುತ್ತದೆ. ಫೈನಲ್‌ ಇಯರ್‌ ಕಾಲೇಜು ಡೇ ದಿನ ಮಾತ್ರ ಎಲ್ಲರೂ ತಪ್ಪದೇ ಹಾಜರ್‌. ಎಲ್ಲದಕ್ಕೂ “ಕೊನೆಯದಾಗಿ’ ಎಂಬ ವಿಶೇಷಣ ಬೇರೆ. ಲಾಸ್ಟ್‌ ಡ್ಯಾನ್ಸ್‌, ಡೆಡಿಕೇಶನ್‌ ಸಾಂಗ್‌, ಲಾಸ್ಟ್‌ ಎಂಜಾಯ್‌ಮೆಂಟ್‌. ಅಬ್ಟಾ… ಇದನ್ನೆಲ್ಲ ನೆನಪಿಸಿಕೊಳ್ಳಲು ಬೇಜಾರುಗುತ್ತದೆ. ಬೇಜಾರು ಮುಗಿಯುವಾಗಲೇ “ಬೀಳ್ಕೊಡುಗೆ’ಯ ದಿನವೂ ಬಂದಿರುತ್ತದೆ. ಆ ದಿನ ವಾಚ್‌ಮಾನ್‌ನಿಂದ ಹಿಡಿದು ಪ್ರಿನ್ಸಿಪಾಲ್‌ರವರೆಗೂ ಎಲ್ಲರ ಹತ್ರನೂ ಫೋಟೊ ಗಿಟ್ಟಿಸಿಕೊಳ್ಳುತ್ತೀವಿ. ಈ ಫೈನಾಲ್‌ಇಯರ್‌ ಮುಗಿಯುವಷ್ಟರಲ್ಲಿ ಬ್ರೇಕಪ್‌ ಆಗಿರುವ ಫ್ರೆಂಡ್ಸ್‌ ಗ್ಯಾಂಗ್‌, ಅಹಂ-ಜಗಳಗಳ ನಡುವೆಯೂ ಮತ್ತೆ ಒಂದಾಗುವುದುಂಟು.

ವಿದಾಯದ ದಿನ ಹಿಂದೆ ತಿರುಗಿ ನೋಡಿದ್ರೆ, “ಇಷ್ಟೆಲ್ಲ ಮಾಡಿದ್ದು ನಾವೇನಾ’ ಅನಿಸುತ್ತದೆ. ಪದವಿಯ ದಿನಗಳು ಬೇಗ ಬೇಗನೇ ಮುಗಿಯುತ್ತವೆ. ಮೊದಲ ವರ್ಷದ ಮೊದಲ ದಿನದ ಬೆಪ್ಪುತಕ್ಕಡಿಯಂತಹ ನೋಟವು, ಅಂತಿಮ ವರ್ಷಕ್ಕೆ ಬರುವಾಗ ಎಷ್ಟೊಂದು ಬದಲಾಗಿರುತ್ತದೆ. ಬದುಕೂ ಹಾಗೆಯೇ ಇರಬಹುದು.

ಸೌಮ್ಯ ಕಾರ್ಕಳ
ತೃತೀಯ ಬಿ.ಎ. ಆಳ್ವಾಸ್‌ ಕಾಲೇಜು ಮೂಡುಬಿದಿರೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ದೊಡ್ಡಬಳ್ಳಾಪುರ ಕೃಷಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ

ದೊಡ್ಡಬಳ್ಳಾಪುರ ಕೃಷಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

whatsapp-message

ನಿಮ್ಮ ವಾಟ್ಸಾಪ್ ಸಂದೇಶಗಳ ಮೇಲೆ ಸರ್ಕಾರದ ಹದ್ದಿನಕಣ್ಣು ? ಪಿಐಬಿ ಹೇಳಿದ್ದೇನು ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

bng-tdy-3

ಮಕ್ಕಳಿಗಾಗಿ ಕಾರ್ಯಕ್ರಮ ರೂಪಿಸಿ ಕಳುಹಿಸಿ

ದಿಲ್ಲಿ ಟ್ರಾಫಿಕ್ ಪೊಲೀಸ್ ಗೆ ಕೋವಿಡ್ 19 ಸೋಂಕು, ಚಿಕಿತ್ಸೆಗಾಗಿ ಏಮ್ಸ್ ಗೆ ದಾಖಲು

ದಿಲ್ಲಿ ಟ್ರಾಫಿಕ್ ಪೊಲೀಸ್ ಗೆ ಕೋವಿಡ್ 19 ಸೋಂಕು, ಚಿಕಿತ್ಸೆಗಾಗಿ ಏಮ್ಸ್ ಗೆ ದಾಖಲು

08-April-6

ದಿನಬಳಕೆ ವಸ್ತುಗಳ ದರ ಹೆಚ್ಚಳಕ್ಕೆ ಹೈರಾಣಾದ ಸಾರ್ವಜನಿಕರು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

08-April-5

ಅಭಿವೃದ್ಧಿಗೆ ಕೊರೊನಾ ಲಾಕ್‌ಡೌನ್‌ ಅಡ್ಡಿ