ಮಂಜು ಮತ್ತು ಚಹಾ

Team Udayavani, Jan 25, 2019, 12:30 AM IST

w-10.jpg

ಇಬ್ಬನಿ ದಟ್ಟವಾಗಿ ಆವರಿಸಿದೆ. ಎದುರಿನಲ್ಲಿ ಬರುವವರು ಸ್ಪಷ್ಟವಾಗಿ ಕಾಣಿಸದಷ್ಟು ಗಾಢ ಆವರಣ. ಕಾಣಿಸಬೇಕಾದರೆ ಎದುರಿನಿಂದ ಯಾರಾದರೂ ಬರಲೇಬೇಕು. ಯಾರು ಬರುತ್ತಾರೆ ಹೇಳಿ- ಈ ಚಳಿಗಾಲದಲ್ಲಿ ! ಯಾರಿಗೂ ಮನೆಯಿಂದ ಹೊರಬರುವ ಇಚ್ಛೆಯಿಲ್ಲ. ಬಂದರೂ ನಡುಕ ಹುಟ್ಟಿಸುವಂಥ ಚಳಿಯನ್ನು ಸಹಿಸುವವರಾರು?

ಇಂಥಾದ್ದೊಂದು ಗಳಿಗೆಯಲ್ಲಿ ಮನೆಯಿಂದ ಹೊರಬಂದು ಮಂಜನ್ನು ಸೀಳಿಕೊಂಡು ನಡೆಯುತ್ತ ಬರುತ್ತೇನೆ. ಓಣಿಯ ಮೂಲೆಯಲ್ಲಿರುವ ಚಹಾದಂಗಡಿಯ ಮುಂದೆ ಇರುವ ಕಾಲು ಮುರಿದ ಬೆಂಚಿನಲ್ಲಿ ಕುಳಿತುಕೊಳ್ಳುತ್ತೇನೆ. ಚಹಾದಂಗಡಿಯ ತಾತ ಚಹಾದ ಕಪ್ಪನ್ನು ಮುಂದೆ ಚಾಚುತ್ತಾನೆ. ನಾನು ಅದನ್ನು ಪಡೆದು ಬಂದು ಗುಟುಕು ಚಹಾ ಹೀರುತ್ತೇನೆ. ಬಿಸಿಯಾದ ಚಹಾ ಹೊಟ್ಟೆಯೊಳಗೆ ಇಳಿಯುತ್ತಿರುವಂತೆ ಹೊಸ ಉತ್ಸಾಹ ಬರುತ್ತದೆ. ಬೆಳಗಿನ ಆ ಚಹಾ ಕುಡಿಯುವ ಸುಖವನ್ನು ಬಲ್ಲವನೇ ಬಲ್ಲ.

ತಾತನ ಬಗ್ಗೆ ಒಂದು ಮಾತು ಹೇಳಲೇಬೇಕು. ಆ ಮನುಷ್ಯ ಯಾವಾಗಲೂ ತಣ್ಣಗೆ. ಬಹಳ ಬಯಕೆಯಿಲ್ಲ, ಪಯಣದ ತವಕವಿಲ್ಲ. ಇದ್ದಲ್ಲಿಯೇ ಸ್ಥಾವರದಂತೆ ಸ್ಥಾಪನೆಯಾಗಿದ್ದಾನೆ. “ಯಾಕೆ ಅಜ್ಜ , ಒಂದೇ ಕಡೆ ಇರಿ¤àರಿ?’ ಎಂದು ಕೇಳಿದರೆ ಸುಮ್ಮನೆ ನಗುತ್ತಾನೆ. ಆ ನಗುವಿನಲ್ಲಿ ಸಾವಿರ ಅರ್ಥಗಳಿವೆ. ಅದನ್ನು ಅರ್ಥಮಾಡಿಕೊಂಡರೆ ಅದೇ ಗುಂಗಿನಲ್ಲಿ ಕಳೆದುಹೋಗುತ್ತೇನೆ.

ತಣ್ಣಗಿನ ಆ ಮನುಷ್ಯನನ್ನು ಕಂಡು ಹೆದರುವವರು ಬಹಳ ಮಂದಿ. ಮಾತನಾಡಿಸಲು ಹಿಂದೇಟು ಹಾಕುತ್ತಾರೆ. ಅವನಲ್ಲಿಯೂ ಮಾತಿಲ್ಲ, ಸುಮ್ಮನೆ ವ್ಯವಹಾರ ಮಾತ್ರ. ಮಾತನಾಡಿಸಬೇಕೆನ್ನಿಸಿದಾಗ ಒಂದು ಬೀಡಿ ಹೊತ್ತಿಸುತ್ತಾನೆ. ಒಲೆಯ ಹೊಗೆ ಮತ್ತು ಬೀಡಿಯ ಹೊಗೆ ಒಂದರೊಡನೊಂದು ಸೇರಿಕೊಂಡು ವಿಚಿತ್ರ ವಿನ್ಯಾಸವನ್ನು ಉಂಟುಮಾಡುತ್ತದೆ. ಒಂದು ಬೂದಿಯಾಗಲಿರುವುದನ್ನು  ಬೆಚ್ಚಗೊಳಿಸಲು ಹೊಮ್ಮಿದ ಹೊಗೆಯಾದರೆ, ಇನ್ನೊಂದು ಬೆಚ್ಚಗಿಡಲೆಂದೇ ಬೂದಿಯಾಗುವಂಥಾದ್ದಾಗಿರುತ್ತದೆ. ಇದು ಚಳಿಗಾಲದ ಒಂದು ಅನುಭವ.

ಬಿಸಿನೀರಿನ ಸ್ನಾನ ಮಾಡಿದರೆ ಹೊರಗಿನ ದೇಹ ಬಿಸಿಯಾಗುತ್ತದೆ. ಬಿಸಿ ಚಹಾ ಕುಡಿದರೆ ಒಳಗಿನದ್ದೂ ಬಿಸಿಯಾಗುತ್ತದೆ. ಎರಡನೆಯ ವಿಧಾನವೇ ಉತ್ತಮ!
“ಈ ವರ್ಷ ಚಳಿ ಸ್ವಲ್ಪ ಜಾಸ್ತಿ’ ಎಂದು ಜನ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಾರೆ. ಅದು ಒಂದು ರೀತಿಯ ಸುಳ್ಳು ಆಪಾದನೆಯೂ ಹೌದು. ಚಳಿ ಎಂದರೆ ಎಲ್ಲರಿಗೂ ಇಷ್ಟವೇ. ಆದರೂ ಚಳಿಗೆ ಬೈಯುವುದು ಒಂದು ವಾಡಿಕೆ.

ಚಳಿಯಾಗಲಿ, ಮಳೆಯಾಗಲಿ, ಸೆಕೆಯಾಗಲಿ- ಪ್ರಕೃತಿಯ ಸೋಜಿಗ. ಅದನ್ನು ಸುಮ್ಮನೆ ಅನುಭವಿಸಬೇಕೇ ಹೊರತು ದೂಷಿಸಿ ಸುಖವಿಲ್ಲ. ಮಾತನಾಡುತ್ತಿರುವಂತೆಯೇ ಚಳಿಗಾಲ ನಿಧಾನವಾಗಿ ಕಳೆದುಹೋಗುತ್ತಿದೆಯಲ್ಲ !

ಪ್ರಶಾಂತ್‌ ಎಸ್‌. ಕೆಳಗೂರ್‌
ಪ್ರಥಮ ಎಂಸಿಜೆ, ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.