ಸ್ನೇಹ ಸಾಗರ

Team Udayavani, Oct 4, 2019, 5:14 AM IST

ರಕ್ತ ಸಂಬಂಧಗಳೂ ಮೀರಿದಾ ಬಂಧವಿದು. ಯಾವ ಬಿಂದುವಿನಲ್ಲಿ ಸಂಧಿಸುವುದೋ!- ಅದು ಯಾವ ಅಮೃತಗಳಿಗೆಯಲ್ಲಿ ಈ ಹಾಡು ಜನ್ಮ ತಾಳಿತೋ ಏನೋ, ಸ್ನೇಹಿತರ ಪಾಲಿನ ರಾಷ್ಟ್ರಗೀತೆಯಾಗಿ ಬಿಟ್ಟಿರುವುದಂತೂ ನಿಜ. ಜಗತ್ತಿನ ಎಲ್ಲಾ ಸಂಬಂಧಗಳಿಗಿಂತಲೂ ಒಂದು ಶ್ರೇಷ್ಠವಾದ ಸಂಬಂಧವಿದೆ ಎಂದರೆ ಅದು ಸ್ನೇಹ ಸಂಬಂಧ ಮಾತ್ರ. ಯಾವ ಜಾತಿ, ಧರ್ಮ, ಲಿಂಗಭೇದ ಕೇಳದೆ ಅರಳುವ, ರಕ್ತ ಹಂಚಿಕೊಂಡು ಒಡಹುಟ್ಟದೇ ಇದ್ದರೂ ಒಂದೇ ತಟ್ಟೆಯಲ್ಲಿ ಹಂಚಿ ತಿನ್ನುವಷ್ಟು ಸಲುಗೆ ಬೆಸೆಯುವ ಸುಂದರ ಪುಷ್ಪವೇ ಈ ಸ್ನೇಹ. ಸ್ನೇಹಿತರೆಂದರೆ ಹೇಗಿರಬೇಕು ಎಂದು ಕೇಳಿದರೆ ಕೃಷ್ಣ-ಸುಧಾಮರ ಹಾಗಿರಬೇಕು ಎನ್ನುತ್ತಾರೆ ಹಿರಿಯರು. ಏಕೆಂದರೆ, ಕಷ್ಟ-ಸುಖ ಇವೆರಡರಲ್ಲೂ ತನ್ನ ಇರುವಿಕೆಯನ್ನು ತೋರುವವನೇ ನಿಜವಾದ ಗೆಳೆಯ. ಆದರೆ, ಇತ್ತೀಚೆಗೆ ಈ ಸ್ನೇಹವೆನ್ನುವುದು ತನ್ನ ನಿಜವಾದ ಅರ್ಥ ಕಳೆದುಕೊಂಡು ಕೇವಲ ವಾಟ್ಸಾಪ್‌-ಫೇಸ್‌ಬುಕ್‌ಗಳಿಗೆ ಮಾತ್ರ ಸೀಮಿತವಾಗಿದೆಯೇ ಎನ್ನುವುದು ನನ್ನ ಅನಿಸಿಕೆ. ಕಾರಣ, ಸ್ನೇಹಿತರ ಆಯ್ಕೆಯಲ್ಲಿ ಎಡವುದು, ಹಾಗೆ ಸ್ನೇಹವೆಂದರೆ ಕೇವಲ ಮೋಜು-ಮಸ್ತಿಗಾಗಿ ಇರುವಂಥದ್ದು ಎನ್ನುವ ತಪ್ಪುಕಲ್ಪನೆಗಳು, ಸ್ನೇಹಿತರ ದಿನಾಚರಣೆಯ ಹೊಸ್ತಿಲಿನಲ್ಲಿರುವ ನಾವು ಹೇಗೆ ನಮ್ಮ ಸ್ನೇಹವನ್ನು ಸ್ಟ್ರಾಂಗ್‌ ಆಗಿ ಜೀವನಪರ್ಯಂತ ಕಾಪಾಡಿಕೊಳ್ಳಬಹುದು ಎನ್ನುವುದಕ್ಕೆ ಇಲ್ಲಿವೆ ನನ್ನ ಕೆಲವು ಸಲಹೆಗಳು.

ಯೋಚಿಸಿ ಸ್ನೇಹ ಬೆಳೆಸಿ
ಸ್ನೇಹಕ್ಕೆ ವಯಸ್ಸಿನ ಮಿತಿಯಿಲ್ಲ. ಅದು ಹುಟ್ಟಿದ ಮಗುವಿನಿಂದ ಹಿಡಿದು ಕೇವಲ ಒಂದೆರಡು ತಾಸು ಪಕ್ಕದಲ್ಲಿ ಕುಳಿತು ಪ್ರಯಾಣ ಮಾಡುವ ಅಪರಿಚಿತರೊಡನೆಯೂ ಚಿಗುರೊಡೆಯಬಹುದು. ಆದರೆ, ಹುಟ್ಟುವ ಎಲ್ಲರ ಸ್ನೇಹವೂ ಪರಿಶುದ್ಧವಾಗಿರುತ್ತದೆ, ಲೈಫ್ಟೈಮ್‌ ಗ್ಯಾರಂಟಿ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಸ್ನೇಹದಿಂದ ಬದುಕನ್ನು ಕಟ್ಟಿಕೊಂಡವರಿದ್ದಾರೆ. ಅದೇ ಸ್ನೇಹದಿಂದ ಸರ್ವಸ್ವವನ್ನೂ ಕಳೆದುಕೊಂಡವರಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಸ್ನೇಹಿತರ ಆಯ್ಕೆ. ಗೆಳೆತನ ಬೆಸೆಯುವಾಗ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾಗಿರುವುದು ಉತ್ತಮ ನಡತೆ, ಮಾತು, ಸಚ್ಚಾರಿತ್ರ್ಯ, ಒಳ್ಳೆಯ ಮನಸ್ಸು, ವಿಚಾರಶೀಲತೆ, ಸಹಕಾರ ಮನೋಭಾವ.

ಇರಲಿ ಕಾಳಜಿ
ಸ್ನೇಹವೆಂದರೆ ಕೇವಲ ಸಂಬಂಧವಲ್ಲ. ಅದೊಂದು ಭಾವ. ಪರಸ್ಪರ ಒಬ್ಬರಿಗೊಬ್ಬರು ಚಾರಿತ್ರ್ಯ ನಿರ್ಮಾಣ ಮಾಡಿಕೊಳ್ಳುವುದಕ್ಕಿರುವ ಅದ್ಭುತ ವೇದಿಕೆ. ಇಲ್ಲಿ ಕಾಳಜಿ ಬಹುಮುಖ್ಯ. ಈ ಕಾಳಜಿಗೆ ಹೆತ್ತವರು ತೋರುವ ಕಾಳಜಿಗಿಂತಲೂ ಒಂದು ಪಾಲು ಹೆಚ್ಚು ತೂಕವಿರುತ್ತದೆ ಎಂದರೆ ತಪ್ಪೇನಿಲ್ಲ. ನಿಮ್ಮ ಸ್ನೇಹಿತನಿಗೆ ಯಾವುದಾದರೂ ದುಶ್ಚಟಗಳಿವೆಯೇ, ಹಾಗಾದರೆ ಒಬ್ಬ ಒಳ್ಳೆಯ ಸ್ನೇಹಿತನ ಸ್ಥಾನದಲ್ಲಿ ನಿಂತುಕೊಂಡು ಅವನಿಗೆ ತಿಳಿಹೇಳಿ. ಎಷ್ಟೋ ಬಾರಿ ತಮ್ಮ ತಂದೆ-ತಾಯಿ ಮಾತನ್ನೂ ಕೇಳದವರೂ ಸ್ನೇಹಿತರ ಕಾಳಜಿಯ ಮಾತುಗಳಿಗೆ ಕಿವಿಗೊಟ್ಟು ಬದಲಾದವರಿದ್ದಾರೆ. ಆದರೆ, ಒಂದೇ ಸಮನೆ ಒತ್ತಾಯ ಮಾಡಬೇಡಿ, ನಿಂದಿಸಬೇಡಿ. ಅದರಿಂದ ನಿಮ್ಮ ಸ್ನೇಹಕ್ಕೆ ಎಳ್ಳುನೀರು ಬಿಡುವ ಸಾಧ್ಯತೆಗಳೇ ಹೆಚ್ಚು. ಕಾಲಾವಕಾಶ ನೀಡಿ, ಅವರ ಅಭ್ಯಾಸಗಳಿಂದಾಗುವ ಅಪಾಯಗಳ ಬಗೆಗೆ ಮನಮುಟ್ಟುವಂತೆ ಹೇಳಿ ಹಂತ ಹಂತವಾಗಿ ಸರಿದಾರಿಗೆ ತನ್ನಿ.

ಅಸೂಯೆ ಬೇಡ
ಸ್ನೇಹವೆಂದರೆ ಜೊತೆಯಾಗಿ, ಹಿತವಾಗಿ ಜೀಕುವ ಜೋಕಾಲಿಯೇ ವಿನಃ ನಾ ಮೇಲು, ನೀ ಕೀಳು ಎನ್ನುವ ಅಸ್ಪರ್ಶ ಆಚರಣೆಯಲ್ಲ. ಇಲ್ಲಿ ಗೌರವ, ಅಂತಸ್ತು, ಪ್ರತಿಷ್ಠೆ, ಅಧಿಕಾರ ಎಲ್ಲವೂ ನಗಣ್ಯ. ಹೀಗಿರುವಾಗ ಗೆಳೆಯರ ಅಭ್ಯುದಯ ನೋಡಿ ಅಸೂಹೆಪಡುವ ಮನೋಭಾವ ಸಲ್ಲದು. ಹಾಗೆಯೇ ಅಂತಸ್ತಿನ ಅಮಲಿನಿಂದ ಸ್ನೇಹಿತರನ್ನು ಕಡೆಗಣಿಸುವುದೂ ಕೂಡದು. ನಿಜವಾದ ಸ್ನೇಹಿತನೋರ್ವನಿದ್ದರೆ ಬಹುದೊಡ್ಡ ಆಸ್ತಿ ಇದ್ದಂತೆ ಎನ್ನುವುದನ್ನು ಅರಿತು ಒಬ್ಬರಿಗೊಬ್ಬರ ಶ್ರೇಯೋಭಿವೃದ್ಧಿಗೆ ಪ್ರೋತ್ಸಾಹಿಸಿಕೊಂಡು ಮುನ್ನಡೆದರೆ ಮಾತ್ರ ಅದು ಕೊನೆಯವರೆಗೂ ಉಳಿಯಲು ಸಾಧ್ಯ.

ಮಹೇಶ್‌ ಎಂ. ಸಿ.
ಪ್ರಥಮ ಬಿ. ಎಡ್‌.
ಎಸ್‌. ಡಿ. ಎಂ. ಬಿಎಡ್‌ ಕಾಲೇಜು, ಉಜಿರೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚೆಗೆ ಎರಡು ಸುದ್ದಿ ಬಹಳ ಗಮನ ಸೆಳೆಯಿತು. ಒಂದು ಕಂಬಳ ವೀರ ಶ್ರೀನಿವಾಸ ಗೌಡರಿಗೆ ಸಂಬಂಧಿಸಿದ ಸುದ್ದಿ ಮೊದಲನೆಯದು. ಅವರ ಸಾಧನೆಯ ಬಗ್ಗೆ ಗೌರವವಿದೆ. ಆದರೆ,...

  • ನಾನು ಬಿ.ಎ. ಪದವಿ ಓದುತ್ತಿದ್ದಾಗ ಕಾಲೇಜಿನಲ್ಲಿ ನಡೆಯುತ್ತಿದ್ದ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ, ಸ್ನಾತಕೋತ್ತರ ಪದವಿ ಓದಲು "ಸಮಾಜಕಾರ್ಯ'...

  • ಈ ಯೌವನಕ್ಕಿಂತ ಆ ಬಾಲ್ಯವೇ ಸೊಗಸಾಗಿತ್ತು. ನಗುವಿಗೆ ಬಿಡುವಿರದ, ಸಮಯದ ಅರಿವಿಲ್ಲದ, ಚೆಲ್ಲಾಟದ ಆ ಮುಗ್ಧತೆ ಗೆಲುವಾಗಿತ್ತು. "ನಾನು ತೀರಾ ಸುಖಿ' ಎನ್ನುವ ಹೊತ್ತಲ್ಲಿ...

  • ಇಂಗ್ಲಿಷ್‌ ಪದಗಳ ಮೂಲ ಯಾವುದು ಅಂತ ಕೊಂಚ ತಿಳಿದುಕೊಂಡರೆ ಅವುಗಳಿಗೆ ಸಂಬಂಧಿಸಿದ ಪದಗಳನ್ನು ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತದೆ. ವ್ಯಕ್ತಿತ್ವಕ್ಕೆ...

  • ಮುಂಜಾನೆ ಸಮಯ ಏಳು ಗಂಟೆ ಸಿ ಕ್ಯೂ, ಸಿ ಕ್ಯೂ. ಗುಡ್‌ ಮಾರ್ನಿಂಗ್‌ ಕರಾವಳಿ ಮಾರ್ನಿಂಗ್‌ ನೆಟ್‌, ಡಿಸಾಸ್ಟರ್‌ ಮ್ಯಾನೇಜ್ಮೆಂಟ್‌ ನೆಟ್‌, ನೆಟ್‌ ಕಂಟ್ರೋಲರ್‌ VU3VXT...

ಹೊಸ ಸೇರ್ಪಡೆ