Udayavni Special

ಅಪರಿಚಿತರ ನೆರವು


Team Udayavani, Jul 19, 2019, 5:35 AM IST

help

ಈಗಿನ ಕಾಲದಲ್ಲಿ ಯಾರೂ ಒಬ್ಬರಿಗೊಬ್ಬರು ಸಹಾಯ ಮಾಡಲು ಮುಂದಾಗುವುದಿಲ್ಲ. ಕೆಲವೊಮ್ಮೆ ಕುಟುಂಬದವರೇ ನಮಗೆ ಸಹಾಯ ಮಾಡಲು ಹಿಂದುಮುಂದು ನೋಡುತ್ತಾರೆ. ಅಂದ ಹಾಗೆ, ನಾವು ಅಪರಿಚಿತರಿಂದ ಸಹಾಯದ ನಿರೀಕ್ಷೆ ಇಡುವುದು ವ್ಯರ್ಥ. ನಾನು ತಿಳಿದುಕೊಂಡ ಪ್ರಕಾರ ಅಪರಿಚಿತರು ಇನ್ನೊಬ್ಬರಿಗೆ ಸಹಾಯ ಮಾಡಲು ಹಿಂಜರಿಯುತ್ತಾರೆ. ಆದರೆ, ಕೆಲವು ಅಪರಿಚಿತರು ಇನ್ನೊಬ್ಬರಿಗೆ ಪರಿಚಿತರಂತೆಯೇ ಸಹಾಯ ಮಾಡುತ್ತಾರೆ ಎಂದು ನಾನು ತಿಳಿದಿರಲಿಲ್ಲ.

ಆ ಒಂದು ದಿನ ಜೋರಾಗಿ ಮಳೆ ಸುರಿಯುತ್ತಿತ್ತು. ನಾನು ತಡವಾಗಿ ಬಸ್‌ನಿಲ್ದಾಣಕ್ಕೆ ಬಂದ ಕಾರಣ ಬಸ್‌ ಮಿಸ್‌ ಆಗಿತ್ತು. ನನಗೆ ಕಾಲೇಜಿಗೆ ಹೋಗಲು ತಡವಾಗುತ್ತಿತ್ತು. ಇನ್ನೊಂದು ಬಸ್‌ಗೆ ಹದಿನೈದು ನಿಮಿಷ ಕಾಯಬೇಕಿತ್ತು. ಆದರೆ ನನಗೆ ಅಷ್ಟು ನಿಮಿಷ ಕಾಯುವ ತಾಳ್ಮೆ ಇರಲಿಲ್ಲ. ಇವತ್ತು ಕಾಲೇಜಿಗೆ ತಡವಾಗಿ ಹೋಗುತ್ತೇನೇನೋ ಅಂತ ಭಯವಾಗುತ್ತಿತ್ತು. ಅಷ್ಟೊತ್ತಿಗೆ ಅಪರಿಚಿತ ಮಹಿಳೆಯೊಬ್ಬರು ಬಂದು, “ನೀನು ರಿಕ್ಷಾದಲ್ಲಿ ಹೋಗ್ತಿಯಾ. ನಾನು ರಿಕ್ಷಾ ತರಿಸಲೆ?’ ಎಂದು ಕೇಳಿದರು.

ನಾನು ಒಪ್ಪಿಗೆಯನ್ನು ಸೂಚಿಸುವ ಮೊದಲು ನನ್ನ ಬ್ಯಾಗ್‌ನಲ್ಲಿ ಹಣವಿದೆಯೇ ಎಂದು ಪರಿಶೀಲಿಸಿದಾಗ ನನ್ನ ಬ್ಯಾಗ್‌ನಲ್ಲಿ ಒಂದು ರೂಪಾಯಿಯೂ ಇರಲಿಲ್ಲ. ನಾನು ಲಗುಬಗೆಯಿಂದ ಮನೆಯಿಂದ ಹೊರಟಾಗ ಹಣ ತೆಗೆದುಕೊಂಡು ಬರಲು ಮರೆತುಬಿಟ್ಟಿದ್ದೆ. ನನಗೆ ಅಳು ಬಂದುಬಿಟ್ಟಿತು. ಆಗ ಆ ಮಹಿಳೆ ಬಂದು ನನ್ನ ಕೈಯಲ್ಲಿ ನೂರು ರೂಪಾಯಿಯ ನೋಟನ್ನು ಕೈಗಿಟ್ಟು ನನ್ನ ಕಣ್ಣೀರನ್ನು ಒರೆಸಿದರು ಮತ್ತು ರಿಕ್ಷಾವನ್ನು ತರಿಸಿ ನನ್ನನ್ನು ಕಾಲೇಜಿಗೆ ಬಿಡುವಂತೆ ಚಾಲಕನಿಗೆ ತಿಳಿಸಿದರು.

ನಾನು ಅವರ ಪಾಲಿಗೆ ಅಪರಿಚಿತಳಾಗಿದ್ದೆ. ಅವರೂ ನನ್ನ ಪಾಲಿಗೆ ಅಪರಿಚಿತರಾಗಿದ್ದರು. ಆದರೂ ಆ ಅಪರಿಚಿತ ಮಹಿಳೆ ನನ್ನ ಪಾಲಿಗೆ ದೇವರಾಗಿದ್ದರು. ಅವರ ಪ್ರೀತಿ ಪರಿಚಿತದವರಿಗಿಂತಲೂ ಅದ್ಭುತವಾಗಿತ್ತು. ಮರುದಿನದಿಂದ ನಾನು ಅವರಿಗೆ ಆ ಹಣವನ್ನು ಹಿಂತಿರುಗಿಸಲು ಬಸ್‌ನಿಲ್ದಾಣದಲ್ಲಿ ನನ್ನ ಬಸ್‌ ಬರುವ ತನಕ ಕಾಯುತ್ತಿದ್ದೆ. ಆದರೆ, ಅವರು ಸಿಗಲೇ ಇಲ್ಲ. ಆದರೆ, ಅವರ ಪ್ರೀತಿ, ಸಹಾಯ ಮತ್ತು ನೆನಪು ನನ್ನ ಹೃದಯದಲ್ಲಿ ಶಾಶ್ವತವಾಗಿದೆ.

– ಶಿವಾನಿ
ದ್ವಿತೀಯ ಪಿಯುಸಿ ಸರಕಾರಿ ಪದವಿಪೂರ್ವ ಕಾಲೇಜು, ಕಾರ್ಕಳ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲೋಕಲ್‌ ರೈಲುಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಆ್ಯಪ್‌, ಕಲರ್‌ ಕೋಡಿಂಗ್‌:  ಸರಕಾರ ಚಿಂತನೆ

ಲೋಕಲ್‌ ರೈಲುಗಳಲ್ಲಿ ಜನ ದಟ್ಟಣೆ ನಿಯಂತ್ರಣಕ್ಕೆ ಆ್ಯಪ್‌, ಕಲರ್‌ ಕೋಡಿಂಗ್‌:  ಸರಕಾರ ಚಿಂತನೆ

.01

ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಬರ್ಬರ ಹತ್ಯೆ

flg

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 27 ಸಾಧಕರು, 11 ಸಂಸ್ಥೆಗಳಿಗೆ ಪ್ರಶಸ್ತಿಯ ಗರಿ !

ಮುನಿರತ್ನ ಪರ ಕೆಲಸ ಮಾಡಿದರೆ ಮುಂದಿದೆ ಕಷ್ಟ: ಸಿದ್ದರಾಮಯ್ಯ ಎಚ್ಚರಿಕೆ

ಮುನಿರತ್ನ ಪರ ಕೆಲಸ ಮಾಡಿದರೆ ಮುಂದಿದೆ ಕಷ್ಟ: ಸಿದ್ದರಾಮಯ್ಯ ಎಚ್ಚರಿಕೆ

ಚಿಕ್ಕಬಳ್ಳಾಪುರ ನಗರಸಭೆ: ಆನಂದ್‍ರೆಡ್ಡಿ ಅಧ್ಯಕ್ಷ , ವೀಣಾ ರಾಮು ಉಪಾಧ್ಯಕ್ಷರಾಗಿ ಆಯ್ಕೆ

ಚಿಕ್ಕಬಳ್ಳಾಪುರ ನಗರಸಭೆ: ಆನಂದ್‍ರೆಡ್ಡಿ ಅಧ್ಯಕ್ಷ , ವೀಣಾ ರಾಮು ಉಪಾಧ್ಯಕ್ಷರಾಗಿ ಆಯ್ಕೆ

ಈರುಳ್ಳಿ ಬೆಳೆಗಾರರಿಗೆ ಬೆಂಬಲ: ಸಿಎಂ ಉದ್ಧವ್‌

ಈರುಳ್ಳಿ ಬೆಳೆಗಾರರಿಗೆ ಬೆಂಬಲ: ಸಿಎಂ ಉದ್ಧವ್‌

mangalore

ಮಂಗಳೂರು: ಹೋಟೆಲ್ ನಲ್ಲಿ ದಾಂಧಲೆ ನಡೆಸಿದ ದುಷ್ಕರ್ಮಿಗಳು, ಇಬ್ಬರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

ಲೋಕಲ್‌ ರೈಲುಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಆ್ಯಪ್‌, ಕಲರ್‌ ಕೋಡಿಂಗ್‌:  ಸರಕಾರ ಚಿಂತನೆ

ಲೋಕಲ್‌ ರೈಲುಗಳಲ್ಲಿ ಜನ ದಟ್ಟಣೆ ನಿಯಂತ್ರಣಕ್ಕೆ ಆ್ಯಪ್‌, ಕಲರ್‌ ಕೋಡಿಂಗ್‌:  ಸರಕಾರ ಚಿಂತನೆ

.01

ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಬರ್ಬರ ಹತ್ಯೆ

sm-tdy-1

ಮಧುರಾ ಶಿವಾನಂದ್‌ ಸಾಗರ ನಗರಸಭೆ ಅಧ್ಯಕ್ಷೆ

flg

ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 27 ಸಾಧಕರು, 11 ಸಂಸ್ಥೆಗಳಿಗೆ ಪ್ರಶಸ್ತಿಯ ಗರಿ !

ವಿದ್ಯಾರ್ಥಿಗಳಿಗೆ ಕೌಶಲ್ಯಯುಕ್ತ ಶಿಕ್ಷಣ ಅಗತ್ಯ

ವಿದ್ಯಾರ್ಥಿಗಳಿಗೆ ಕೌಶಲ್ಯಯುಕ್ತ ಶಿಕ್ಷಣ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.