ಹೀರೋ ಹೀರೋ


Team Udayavani, Feb 28, 2020, 5:00 AM IST

ego-4

ಇತ್ತೀಚೆಗೆ ಎರಡು ಸುದ್ದಿ ಬಹಳ ಗಮನ ಸೆಳೆಯಿತು. ಒಂದು ಕಂಬಳ ವೀರ ಶ್ರೀನಿವಾಸ ಗೌಡರಿಗೆ ಸಂಬಂಧಿಸಿದ ಸುದ್ದಿ ಮೊದಲನೆಯದು. ಅವರ ಸಾಧನೆಯ ಬಗ್ಗೆ ಗೌರವವಿದೆ. ಆದರೆ, ಸಾಧನೆಗೆ ಸಂಬಂಧಿಸಿದ ಸುದ್ದಿ ಪ್ರಕಟವಾದಾಗ ಅವರು ವರ್ತಿಸಿದ ರೀತಿಯ ಬಗ್ಗೆ ನನಗೆ ವಿಶೇಷ ಗೌರವ ಮೂಡಿತು. ಅವರಿಗೆ ಉಸೇನ್‌ ಬೋಲ್ಟ್ನ ಸಾಧನೆಯ ಅರಿವು ಇದೆಯೋ ಇಲ್ಲವೋ ಎಂಬುದು ಒತ್ತಟ್ಟಿಗಿರಲಿ. ತಮ್ಮ ಕಾರ್ಯ ಕ್ಷೇತ್ರದಲ್ಲಿ ಹಾಕಬೇಕಾದ ಶ್ರಮವನ್ನು ನಿಸ್ವಾರ್ಥದಿಂದ ಹಾಕಿ ಗೆಲುವನ್ನು ಸಾಧಿಸಿದ್ದಾರೆ. ಅವರ‌ನ್ನು ಜಗದ್ವಿಖ್ಯಾತ ವ್ಯಕ್ತಿಗೆ ಹೋಲಿಸಿದಾಗಲೂ ಅವರು ಮಾತ್ರ ತಮ್ಮ ಮಿತಿಮೀರಿ ಅತ್ಯುತ್ಸಾಹದಿಂದ ವರ್ತಿಸಲಿಲ್ಲ. “ಇದು ತನ್ನ ಕರ್ತವ್ಯ’ ಎನ್ನುವಷ್ಟೆ ನಿರ್ಲಿಪ್ತರಾಗಿದ್ದರು. ಟ್ರಾಕು ಮತ್ತು ಕೆಸರಿನ ವ್ಯತ್ಯಾಸವನ್ನು ತಮ್ಮ ಮಿತಿಯಲ್ಲೇ ಅರಿತುಕೊಂಡರು. ಯಾವ ಹೊಗಳಿಕೆಗೂ ಅವರು ಬಲೂನ್‌ನಂತೆ ಉಬ್ಬಿ ಹೋಗಲಿಲ್ಲ. ಅವರು ತಮ್ಮ ವೃತ್ತಿಗಾಗಿ ಇಟ್ಟುಕೊಂಡ ಫಿಟ್‌ನೆಸ್‌ ಯಾವುದೇ ಕುಸ್ತಿಪಟುವಿನ ಸಾಧನೆಗಿಂತ ಕಡಿಮೆ ಇರಲಿಲ್ಲ. ಇದನ್ನು ಗಮನಿಸಿದ ಮಾಧ್ಯಮದವರು ಸಿಕ್ಸ್‌ಪ್ಯಾಕ್‌ ಅಂತೆಲ್ಲ ಹೊಗಳಿದರು. ತಾನು ಕರಾವಳಿ ಮಣ್ಣಿನ ಕುಚ್ಚಲಕ್ಕಿ ಗಂಜಿ ಮತ್ತು ಸಮುದ್ರದ ಮೀನಿಗೆ ಫಿದಾ ಆಗಿರುವುದನ್ನು ಶ್ರೀನಿವಾಸ್‌ ನಿರ್ವಂಚನೆಯಿಂದ ಹೇಳಿಕೊಂಡರು.

ಮತ್ತೂಬ್ಬ ಯುವಕ ರೋಹಿತ್‌ ಖಾರ್ವಿ. ತುಂಬಾ ಇಷ್ಟವಾಗಿ ಬಿಟ್ಟರು. ಪ್ರತಿನಿತ್ಯದಂತೆ ಹೊಟ್ಟೆಪಾಡಿಗಾಗಿ ದುಡಿಯಲು ಹೊರಟಿದ್ದರು. ಅದ್ಯಾಕೋ ಅವರ ಅದೃಷ್ಟ ಕೆಟ್ಟಿತ್ತು. ಎಲ್ಲರೂ ನೋಡನೋಡುತ್ತಿದ್ದಂತೆ ಮಣ್ಣಿನಲ್ಲಿ ಹುದುಗಿಬಿಟ್ಟರು. ಬರೋಬ್ಬರಿ ಆರು ಗಂಟೆಗಳ ಕಾಲ ಭೂಗರ್ಭದಲ್ಲಿ ಇರಬೇಕಾಯಿತು.

ಅವರ‌ನ್ನು ಮೇಲೆ ತರಲು ಇತರರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅವರು ಬಿದ್ದ ಗುಂಡಿಯನ್ನು ಬಹಳ ಪ್ರಯತ್ನದಿಂದ ಅಗೆದು, ಮೇಲೆ ಬರಲು ಮಾಡಿದ ಸಹಾಯ ಕೊನೆಗೂ ಯಶಸ್ವಿಯಾಯಿತು. ಗುಂಡಿಯಿಂದ ಮೇಲೆದ್ದು ಬರುವಾಗ ಅವರು ಕೈ ಬೀಸಿಕೊಂಡು ಬಂದ ರೀತಿ ನೋಡಿ ಮೈಜುಮ್ಮನ್ನಿಸಿಬಿಟ್ಟಿತ್ತು. ಅವರು ಗಾಬರಿ ಬೀಳದೇ ಬಹಳ ಹನ್ಮುಖಿಯಾಗಿದ್ದರು. ಒಂದಿಷ್ಟು ಕೂಡ ವಿಚಲಿತಗೊಂಡಿರಲಿಲ್ಲ. ಸುತ್ತಮುತ್ತಲಿನವರು ಕೇಳುತ್ತಿದ್ದ ರಾಶಿ ಪ್ರಶ್ನೆಗಳಿಗೆ ಶಾಂತತೆಯಿಂದ ಅವರು ಉತ್ತರಿಸುತ್ತಿದ್ದ ರೀತಿ ಕಂಡರೆ ಅದೇನೋ, ವಿದೇಶ ಪ್ರವಾಸ ಮುಗಿಸಿ ಬಂದಂತ್ತಿತ್ತು.

ಒಬ್ಬ ಗೆಲುವನ್ನು ಸಂಭ್ರಮಿಸಿಕೊಂಡ ರೀತಿ, ಮತ್ತೂಬ್ಬ ಕಷ್ಟವನ್ನು ಸ್ವೀಕರಿಸಿಕೊಂಡ ರೀತಿ ಎರಡೂ ಅದ್ಭುತವಾಗಿತ್ತು. ಇಬ್ಬರೂ ಈ ಸಮಚಿತ್ತವನ್ನು ಬೆಳೆಸಿಕೊಂಡದ್ದದ್ದು ಹೇಗೆ ಎಂಬುದು ಕುತೂಹಲಕಾರಿ. ಅವರಿಬ್ಬರು ಯಾವುದೋ ಪ್ರಖ್ಯಾತ ವಿಶ್ವವಿದ್ಯಾನಿಲಯಗಳ ಪದವೀಧರರಲ್ಲ. ರ್‍ಯಾಂಕ್‌, ಚಿನ್ನದ ಪದಕಗಳ ವಿಜೇತರಲ್ಲ. ವ್ಯಕ್ತಿತ್ವ ವಿಕಸನದ ಶಿಬಿರಗಳಿಗೆ ಹಾಜರಾದವರಲ್ಲ. ಜೀವನವೇ ಅವರಿಗೆ ಪಾಠ ಕಲಿಸಿಬಿಟ್ಟಿತ್ತು. ಡ್ನೂಪ್‌ ಬಳಸಿ, ಫೈಟ್‌ ಸೀನ್‌ ಗಳನ್ನು ಮಾಡುತ್ತ, ತ್ರೀಡಿ ಎಫೆಕ್ಟ್ ಬಳಸಿಕೊಂಡು ತೆರೆಯ ಮೇಲೆ ಮಿಂಚುವ ನಮ್ಮ ಸೂಪರ್‌ ಸ್ಟಾರ್‌ಗಳಿಗಿಂತ ನನ್ನ ಕಣ್ಣಿಗೆ ಇವರೇ ದೊಡ್ಡ ಹೀರೋಗಳಾಗಿಬಿಟ್ಟರು.

ಪಿನಾಕಿನಿ ಪಿ ಶೆಟ್ಟಿ
ಉಪನ್ಯಾಸಕಿ
ಕೆನರಾ ಕಾಲೇಜು ಮಂಗಳೂರು

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.