ಇಷ್ಟವಾದ ಹಾಡು

Team Udayavani, Sep 13, 2019, 5:00 AM IST

ಹಾಡುಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಎಲ್ಲರೂ ಒಂದಲ್ಲ ಒಂದು ತರಹದ ಹಾಡು ಇಷ್ಟಪಡುತ್ತಾರೆ. ನೊಂದಿರುವ ಮನಸ್ಸನ್ನು ಸಮಾಧಾನಪಡಿಸುವ ಶಕ್ತಿ ಒಂದು ಹಾಡಿಗಿದೆ. ಬೇಸರದಲ್ಲಿದ್ದರೆ, ನಮ್ಮ ನೆಚ್ಚಿನ ಹಾಡನ್ನು ಕೇಳಿದರೆ ಕ್ಷಣಿಕ ಸಮಾಧಾನವಾಗುವುದು ಖಚಿತ. ಅಂತಹ ತಾಕತ್ತು ಹಾಡುಗಳಿಗಿದೆ.

ಇದು ಸುಮಾರು ಮೂರು ವರ್ಷಗಳ ಹಿಂದಿನ ಮಾತು. ಆಗ ನನಗೆ ಹಾಡುಗಳ ಬಗ್ಗೆ ಆಸಕ್ತಿ ಇರಲಿಲ್ಲ. ಹಾಡು ಕೇಳುವ ಹವ್ಯಾಸ ಸ್ವಲ್ಪ ಮಟ್ಟಿಗೆ ಹೊಂದಿದ್ದೆ, ಅಷ್ಟೆ. ಆ ಸಮಯದಲ್ಲಿ ಮುಂಗಾರು ಮಳೆ 2 ಚಿತ್ರದ ಹಾಡುಗಳು ಬಿಡುಗಡೆಯಾಗಿ ಜಾಲತಾಣಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಲು ಆರಂಭಿಸಿದ್ದುವು. ಜಯಂತ್‌ ಕಾಯ್ಕಿಣಿಯವರ ಸಾಹಿತ್ಯವು ದೊಡ್ಡಮಟ್ಟಿನ ಮಾಯಾಜಾಲವನ್ನೇ ಸೃಷ್ಟಿಸಿತ್ತು. ಅರ್ಜುನ್‌ ಜನ್ಯ ನೀಡಿದ್ದ ಸಂಗೀತವು ಕಿವಿಗೆ ಹಿತವನ್ನುಂಟುಮಾಡಿತ್ತು. ಮೆಲೋಡಿ ಹಾಡುಗಳೆಂದರೆ ನನ್ನ ನೆಚ್ಚಿನ ಸೋನುನಿಗಮ್‌ ಹಾಡಿದರಷ್ಟೇ ಸೂಕ್ತ ಎಂದುಕೊಂಡಿದ್ದ ನನಗೆ ಅರ್ಮಾನ್‌ ಮಲ್ಲಿಕ್‌ರವರ ಧ್ವನಿಯು ಕಿವಿಗೆ ಇಂಪಾಗಿ ಕೇಳಿಸಿತ್ತು. ಜಯಂತ್‌ ಕಾಯ್ಕಿಣಿಯವರ ಸಾಹಿತ್ಯದ ಬಗ್ಗೆ ಮೊದಲಿನಿಂದಲೂ ಸ್ವಲ್ಪ ಮಟ್ಟಿನ ಒಲವು ಹೊಂದಿದ್ದ ನನಗೆ ಈ ಹಾಡಿನಿಂದ ಅದು ಇನ್ನಷ್ಟು ಹೆಚ್ಚಾಯಿತು. ಆ ಚಿತ್ರದ ಎಲ್ಲಾ ಹಾಡುಗಳು ಇಷ್ಟವಾಗಿದ್ದವಾದರೂ “ಸರಿಯಾಗಿ’ ಹಾಡು ಮಾತ್ರ ನನ್ನಲ್ಲಿ ಗುಂಗು ಹಿಡಿಸಿತ್ತು. ಆ ಹಾಡಿನ ಕೆಲವು ಸಾಲುಗಳು ಹಾಡಿನ ಕುರಿತಂತೆ‌ ಆಸಕ್ತಿ ಹೆಚ್ಚಲು ಕಾರಣವಾಯಿತು. ಆ ಹಾಡು ನನ್ನಲ್ಲಿ ಚಿತ್ರಗೀತೆಗಳ ಬಗ್ಗೆ ಆಸಕ್ತಿಯನ್ನು ಕೆರಳಿಸಿತ್ತು ಎಂದೇ ಹೇಳಬಹುದು. ನಂತರ ಹಲವು ಹಾಡುಗಳು ಇಷ್ಟವಾಗಿದ್ದವಾದರೂ “ಸರಿಯಾಗಿ’ ಯಷ್ಟು ರುಚಿಸಲಿಲ್ಲ. ಕನ್ನಡ ಚಿತ್ರರಂಗ ದಲ್ಲಿ ಇನ್ನಷ್ಟು ಅಂತಹ ಹಾಡುಗಳು ಬಂದರೆ ಉತ್ತಮ.

ಅಕ್ಷಯಕೃಷ್ಣ ಪಿ.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಮಂಗಳಗಂಗೋತ್ರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮುಂಜಾನೆ ಸಮಯ ಏಳು ಗಂಟೆ ಸಿ ಕ್ಯೂ, ಸಿ ಕ್ಯೂ. ಗುಡ್‌ ಮಾರ್ನಿಂಗ್‌ ಕರಾವಳಿ ಮಾರ್ನಿಂಗ್‌ ನೆಟ್‌, ಡಿಸಾಸ್ಟರ್‌ ಮ್ಯಾನೇಜ್ಮೆಂಟ್‌ ನೆಟ್‌, ನೆಟ್‌ ಕಂಟ್ರೋಲರ್‌ VU3VXT...

  • ಲೈಟ್‌ ಆಗಿ ಮಳೆಗಾಲ ಶುರುವಾಗುವಾಗ ಮನಸ್ಸಲ್ಲೆಲ್ಲ ಏನೋ ಒಂಥರಾ ಖುಷಿ. ಫ‌ಸ್ಟ್‌ ಡೇ ಕಾಲೇಜಿಗೆ ಕಾಲು ಇಡುತ್ತೇವೆ. ಫ‌ಸ್ಟ್‌ಡೇ ತರಗತಿಗೆ ಹಾಜರಾಗುತ್ತೇವೆ. ನಮ್ಮ...

  • ಪ್ರಥಮ ಎಂಸಿಜೆಯ ಮೊದಲ ಸೆಮಿಸ್ಟರ್‌ ಪರೀಕ್ಷೆ ಮುಗಿಸಿ, ಕಾಲೇಜಿನ ಲೈಬ್ರೆರಿಯಿಂದ ಕಾದಂಬರಿ ಪುಸ್ತಕಗಳನ್ನ ಹೊತ್ತು ಮನೆ ಸೇರಿದ್ದೆ. ಇನ್ನು ಈ ಪುಸ್ತಕ ಓದಿ ಮುಗಿಯುವವರೆಗೂ...

  • ಓದು ಮುಗಿದ ಮೇಲೆ ಹಳ್ಳಿಗಳಲ್ಲಿ ಹೆತ್ತವರನ್ನು ಬಿಟ್ಟು ಊರು ತೊರೆದ ಯುವ ಜನಾಂಗ. ಇದರಿಂದ ಬದುಕಿನ ಕೊನೆ ದಿನಗಳಲ್ಲಿ ವಯಸ್ಸಾದ ಹೆತ್ತವರು ಎದುರಿಸುತ್ತಿರುವ...

  • ಪ್ರೇಮವೆಂದರೆ ದಿನವೂ ಸಂಭ್ರಮ. "ಅಚ್ಚಾಗಿದೆ ಎದೆಯಲಿ ನಿನ್ನದೇ ಹಸಿಬಿಸಿ ಸಂದೇಶ' ಎನ್ನುತ್ತ ಪಿಸುಗುಡುವ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್‌ ಡೇ ಒಂದು ನೆಪ. ಮನುಷ್ಯನ...

ಹೊಸ ಸೇರ್ಪಡೆ