ಮತ್ತದೇ ಕಾಲೇಜು ಜೀವನ


Team Udayavani, Oct 26, 2018, 6:00 AM IST

college-life.jpg

ಬಿ.ಕಾಂ ಪದವಿ ಮುಗಿದ ಕೆಲ ಸಮಯದಲ್ಲಿಯೇ ವಿವಾಹವಾದ ಕಾರಣ, ವಿದ್ಯಾಭ್ಯಾಸ ಅರ್ಧದಲ್ಲೇ ಮೊಟಕಾಯಿತು. ಎಂ.ಕಾಂ ಮಾಡುವ ಕನಸು ಅಲ್ಲೇ ಕಮರಿತು ಎಂದು ಅನಿಸಿತ್ತು. ಕೆಲವು ವರ್ಷಗಳ ಬಳಿಕ ಪುನಃ  ಎಂ.ಕಾಮ್‌ ಮಾಡುವ ತುಡಿತ ಮನದಲ್ಲಿ ಮೂಡಿತಾದರೂ ಕಾಲೇಜಿಗೆ ನೇರ ಹೋಗಿ ಕಲಿಯುವ ವ್ಯವಸ್ಥೆ ಇರಲಿಲ್ಲ. ಹಾಗಾಗಿ. ದೂರ ಶಿಕ್ಷಣದ ಮೂಲಕ ಎಂ.ಕಾಂ. ಮಾಡಲಾರಂಭಿಸಿದೆ. ಎರಡು ವರ್ಷಗಳ ಬಳಿಕ ಮಾಸ್ಟರ್‌ ಡಿಗ್ರಿ ಸರ್ಟಿಫಿಕೇಟ್‌ ನನ್ನ ಕೈ ತಲುಪಿತು. ಆಗ ನನ್ನ ಸಂತೋಷ ಹೇಳಬೇಕೆ?

ತಕ್ಷಣ ನನ್ನ ಜೀವನದ ಗುರಿಯಾದ ಉಪನ್ಯಾಸಕ ವೃತ್ತಿ ಆರಂಭಿಸಿದೆ. ಕೆಲ ವರ್ಷಗಳಲ್ಲಿ ನನ್ನ ವೃತ್ತಿ ನನ್ನಿಂದ ಬಿ.ಎಡ್‌ ಡಿಗ್ರಿ ಬಯಸಿತು. ಹಾಗಾಗಿ, ಬಿ.ಎಡ್‌ ಪದವಿಗಾಗಿ ಪುನಃ ಕಾಲೇಜು ಮೆಟ್ಟಿಲು ಹತ್ತುವ ಸಂದರ್ಭ ಒದಗಿ ಬಂದಿತು. ಒಂದು ವೃತ್ತಿ ಆರಿಸಿದ ಬಳಿಕ ಅದರ ಬೇಡಿಕೆಗಳನ್ನು ಈಡೇರಿಸಬೇಕಾಗುತ್ತದೆ. ಸಂತೋಷದ ವಿಷಯ ಎಂದರೆ ನನ್ನಂತೆಯೇ ಉಪನ್ಯಾಸಕ ವೃತ್ತಿಯಲ್ಲಿರುವ ಇನ್ನೂ ಮೂರು ಜನ ಆ ಕಾಲೇಜು ಸೇರಿದ್ದರು.

ಹಲವಾರು ವರ್ಷಗಳ ಬಳಿಕ ನಾನು ಕಾಲೇಜು  ವಿದ್ಯಾರ್ಥಿನಿಯಾಗಿದ್ದೆ. ಅದೂ ಕೂಡ ಅತೀ ಶಿಸ್ತಿನ ಕಾಲೇಜಿನಲ್ಲಿ! ಪಿಯುಸಿ ಕಲಿಯಲು ಕಾಲೇಜಿಗೆ ಸೇರುವಾಗ ಇರದ ಭಯ ಪ್ರಥಮ ದಿನ ನನ್ನಲ್ಲಿ  ಮನೆ ಮಾಡಿತ್ತು. ಇದ್ದಿದ್ದ ಒಂದೇ ಚಿಂತೆ ಎಂದರೆ, ಹೇಗೆ ಒಂಬತ್ತು ಗಂಟೆಯಿಂದ ನಾಲ್ಕು ಗಂಟೆಯವರೆಗೆ ತರಗತಿಯಲ್ಲಿ ಪಾಠ ಕೇಳಲಿ? ಎಂಬುದು. ಗಂಟೆಗಟ್ಟಲೆ ಪಾಠ ಮಾಡಿ ಅನುಭವವಿತ್ತೇ ವಿನಾ ಪಾಠ ಕೇಳುತ್ತ ಕುಳಿತಿದ್ದ ದಿನಗಳು ಮರೆತೇ ಹೋಗಿದ್ದವು. ಈಗ ಆ ದಿನಗಳು ಒಂದೊಂದಾಗಿ ನೆನಪಿನ ಬುತ್ತಿಯಿಂದ ಹೊರಬರಲಾರಂಭಿಸಿದವು. ಮೊದಲ ದಿನವೇ ಪ್ರಾಂಶುಪಾಲರ ನೇರ ಬಿರುಸಾದ ಮಾತು -  You are a student here, not a lecturer. You have come here to learn.You should be a learner; a continuous learner. Even I am a learner… ಹೀಗೆ ಪಾಂಶುಪಾಲರು ಉತ್ತಮವಾದ ಸ್ವಾಗತವನ್ನು ನಮಗೆ ನೀಡಿದರು ! 

ನಾವು ನಾಲ್ಕು ಜನ ತರಗತಿಗೆ ಕಾಲಿಟ್ಟಾಗ ಇಡೀ ತರಗತಿಯೇ ನಮ್ಮನ್ನು ಕಣ್ಣು ಎವೆಯಿಕ್ಕದೆ ನೋಡಲಾರಂಭಿಸಿತು. ಆಗತಾನೆ ಪದವಿ ಮುಗಿಸಿ ಬಂದ ಹುಡುಗಿಯರೇ ಅಲ್ಲಿದ್ದರು. ಇಡೀ ದಿನ ಮಾತು, ನಗು, ಗದ್ದಲ. ಹಿತಮಿತವಾಗಿ ಮಾತನಾಡುತ್ತಿದ್ದ ನನಗೆ “ಸಂತೆಯೊಳಗೊಂದು ಮನೆಯ ಮಾಡಿ ಸದ್ದುಗದ್ದಲಕೆ ಅಂಜಿದೊಡೆ ಎಂತಯ್ಯ?’ ಎಂಬ ಗಾದೆಮಾತು ನೆನಪಿಗೆ ಬಂತು.

21-22 ವಯಸ್ಸಿನ ಯುವತಿಯರೊಂದಿಗೆ ಬೆರೆಯುವುದು ತುಂಬಾ ಕಷ್ಟವೆನಿಸಿದರೂ ಕಾಲಕ್ರಮೇಣ ಎಲ್ಲಾ ಹೊಂದಾಣಿಕೆ ಮಾಡಿಕೊಂಡು ಹೆಜ್ಜೆಗಳನ್ನು ಇರಿಸಲಾರಂಭಿಸಿದೆ. ಬರಬರುತ್ತ ನಾನೂ ಕೂಡ ಅವರ ನಗು, ಮಾತಿನಲ್ಲಿ ಭಾಗಿಯಾಗಲಾರಂಭಿಸಿದೆ. ಎಷ್ಟೋ ಸಲ ನಾನೊಬ್ಬಳು ಉಪನ್ಯಾಸಕಿ ಎಂಬುದನ್ನು ಮರೆತು ಕಳ್ಳ-ಪೊಲೀಸ್‌ ಆಟ, ಚೆಸ್‌ ಆಟ ಆಡಿದ್ದಿದೆ. ಕಾಲೇಜಿಗೆ ಹೋಗುವ ಮಗನಿದ್ದರೂ ನಾನು ಸಣ್ಣ ಮಕ್ಕಳಂತೆ ವರ್ತಿಸತೊಡಗಿದ್ದೆ! ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬಂತೆ ನಾನೂ ತರಗತಿಗೆ ಬಿಡುವಿನ ವೇಳೆಯಲ್ಲಿ ತಿನ್ನಲು ಕುರು ಕುರು ತಿಂಡಿ, ಮಾವಿನಕಾಯಿ ಒಯ್ಯಲಾರಂಭಿಸಿದೆ.

ಇದೀಗ ಅಂತೂ ಇಂತೂ ಮೂರು ಸೆಮಿಸ್ಟರ್‌ ಮುಗಿದು ಕೊನೆಯ ಸೆಮಿಸ್ಟರ್‌ ಒಂದೇ ಬಾಕಿ. ಪ್ರಥಮ ದಿನ ಪ್ರಾಂಶುಪಾಲರ ಮಾತು ಕೇಳಿದಾಗ 400 ದಿನ ಈ ಕಾಲೇಜಿನಲ್ಲಿ ಹೇಗೆ ಕಳೆಯುವುದೆಂದು ಚಿಂತಿಸಿದ್ದೆ. ಇದೀಗ ಇನ್ನು ಒಂದೇ ಸೆಮಿಸ್ಟರ್‌ ಬಾಕಿ ಎನ್ನುವಾಗ ಸಂತೋಷದ ಜೊತೆ ಸ್ವಲ್ಪ ಬೇಸರ ಮೂಡುವುದು ಸುಳ್ಳಲ್ಲ. ಕಾಲೇಜಿನಲ್ಲಿ ಕಳೆದ ಒಂದೂವರೆ ವರ್ಷಗಳ  ಹಲವಾರು  ಸಂಗತಿಗಳು ನೆನಪಿನ ಅಂಗಳದಲ್ಲಿ ಇನ್ನೂ ಹಸಿರಾಗಿವೆ. ಆರಂಭದಲ್ಲಿ ಕಿರಿಕಿರಿ ಉಂಟು ಮಾಡಿದ ತರಗತಿಯ ಗದ್ದಲ  ಈಗ ಪ್ರಿಯವಾಗಲಾರಂಭಿಸಿದೆ. ನನ್ನಿಂದ ಸರಿ ಸುಮಾರು 16 ವರ್ಷ ಕಿರಿಯ ಬೆಂಚ್‌ಮೇಟ್‌ ಈಗ ಆತ್ಮೀಯ ಸ್ನೇಹಿತೆಯಾಗಿದ್ದಾಳೆ. ಅವಳಿಂದ Feel young at heart  ಅಂದರೆ ಏನೆಂಬುದನ್ನು ಕಲಿತೆ. ಹೌದು, ಈಗ ನಾನು 20 ವರ್ಷಗಳ ಅನುಭವ ಇರುವ 16ರ ಯುವತಿ !

– ರಶ್ಮಿ ಭಟ್‌
ಬಿಎಡ್‌ ವಿದ್ಯಾರ್ಥಿನಿ
ಬಿಎಡ್‌ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.