ಅಮ್ಮನ ಬೈಗುಳ

Team Udayavani, Jul 19, 2019, 5:54 AM IST

ಮಳೆ ಅಂದರೆ ನೆನಪಾಗುವುದು ನಮ್ಮ ಆಟಗಳು. ಮಳೆ ಅಂದರೆ ನೆನಪಾಗುವುದು ಅಮ್ಮನ ಬೈಗುಳ. ಮಳೆ ಅಂದರೆ ನೆನಪಾಗುವುದು ಸಂತ ಸ. ಮಳೆ ಅಂದರೆ ನೆನಪಾಗುವುದು ಒದ್ದೆ ಬಟ್ಟೆ.

ಹಾ! ಅಂದ ಹಾಗೆ ಮಳೆ ಅಂದರೆ ಅಮ್ಮನ ಬೈಗುಳ ಅಂದೆ. ನಾವೆಲ್ಲ ಚಿಕ್ಕವರಿದ್ದಾಗ ಮಳೆ ಬಂದ ತಕ್ಷಣ ಹೊರಗೆ ಓಡಿ ಹೋಗಿ ಮಳೆಯಲ್ಲಿ ನೆನೆಯುತ್ತಿದ್ದೆವು. ಇದನ್ನು ಕಂಡ ಅಮ್ಮ ಎಲ್ಲಿ ಜ್ವರ ಬರುತ್ತದೆಯೋ ಎಂಬ ಕಾಳಜಿಯಿಂದ ಬೈಯುತ್ತಿದ್ದರು. ಈಗ ಅದನ್ನು ನೆನಪು ಮಾಡಿದರೆ ನಗು ಬರುತ್ತದೆ. ಹೀಗೆ ಮಳೆಯ ಜೊತೆ ಹಲವು ನೆನಪುಗಳಿವೆ. ಆದರೆ ಅಂದಿನ ಮಳೆಗೂ ಇಂದಿನ ಮಳೆಗೂ ಬಹಳ ವ್ಯತ್ಯಾಸವಿದೆ. ಅಂದಿನ ಮಳೆ ಬಹಳ ಜೋರು. ಅಂದಿನ ಮಳೆಯಲ್ಲಿ ನಾವೆಲ್ಲ ಪೇಪರಿನ ದೋಣಿ ಮಾಡಿಬಿಟ್ಟರೆ ಅದು ಎಲ್ಲಿ ಮುಟ್ಟುತ್ತಿತ್ತೋ ಗೊತ್ತಿಲ್ಲ. ಮಳೆ ಬರುವಾಗ ಅದರ ಸಂಗಾತಿಯಾದ ಗಾಳಿಯನ್ನು ಕರೆದುಕೊಂಡು ಬರುತ್ತಿತ್ತು. ಈ ಮಳೆಯ ಜೊತೆಗೆ ಗಾಳಿಯೂ ಸೇರಿ ನಮ್ಮನ್ನು ಭಯಪಡಿಸುತ್ತಿತ್ತು. ಶಾಲೆಗೆ ಹೋಗುವಾಗ ಆ ಗಾಳಿಮಳೆಗೆ ಕೊಡೆ ಎಲ್ಲಿ ಟಿವಿಯ ಅಂಟೆನಾ ಆಗುತ್ತದೆಯೆಂದು ಸದಾ ಭಯವಾಗುತ್ತಿತ್ತು. ಆ ಕೊಡೆ ಉಲ್ಟಾ ಆಗಿ ಎಲ್ಲಿ ಎಲ್ಲರೂ ನೋಡಿ ನಗುತ್ತಾರೆಂಬ ಭಯ.
ಈಗ ಮತ್ತೆ ಮಳೆ ಬರುತ್ತಿದೆ. ಆದರೆ ಹಿಂದಿನ ಮಳೆಯಷ್ಟು ಜೋರಾಗಿ ಅಲ್ಲ. ಆದರೂ ಮಳೆಯೊಂದಿಗಿನ ನಮ್ಮ ತುಂಟಾಟದ ನೆನಪುಗಳೂ ಬಿಚ್ಚಿಕೊಳ್ಳುತ್ತಿವೆ.

– ಚೈತ್ರಾ
ದ್ವಿತೀಯ ಬಿ.ಕಾಂ. ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮುಂಜಾನೆ ಸಮಯ ಏಳು ಗಂಟೆ ಸಿ ಕ್ಯೂ, ಸಿ ಕ್ಯೂ. ಗುಡ್‌ ಮಾರ್ನಿಂಗ್‌ ಕರಾವಳಿ ಮಾರ್ನಿಂಗ್‌ ನೆಟ್‌, ಡಿಸಾಸ್ಟರ್‌ ಮ್ಯಾನೇಜ್ಮೆಂಟ್‌ ನೆಟ್‌, ನೆಟ್‌ ಕಂಟ್ರೋಲರ್‌ VU3VXT...

  • ಲೈಟ್‌ ಆಗಿ ಮಳೆಗಾಲ ಶುರುವಾಗುವಾಗ ಮನಸ್ಸಲ್ಲೆಲ್ಲ ಏನೋ ಒಂಥರಾ ಖುಷಿ. ಫ‌ಸ್ಟ್‌ ಡೇ ಕಾಲೇಜಿಗೆ ಕಾಲು ಇಡುತ್ತೇವೆ. ಫ‌ಸ್ಟ್‌ಡೇ ತರಗತಿಗೆ ಹಾಜರಾಗುತ್ತೇವೆ. ನಮ್ಮ...

  • ಪ್ರಥಮ ಎಂಸಿಜೆಯ ಮೊದಲ ಸೆಮಿಸ್ಟರ್‌ ಪರೀಕ್ಷೆ ಮುಗಿಸಿ, ಕಾಲೇಜಿನ ಲೈಬ್ರೆರಿಯಿಂದ ಕಾದಂಬರಿ ಪುಸ್ತಕಗಳನ್ನ ಹೊತ್ತು ಮನೆ ಸೇರಿದ್ದೆ. ಇನ್ನು ಈ ಪುಸ್ತಕ ಓದಿ ಮುಗಿಯುವವರೆಗೂ...

  • ಓದು ಮುಗಿದ ಮೇಲೆ ಹಳ್ಳಿಗಳಲ್ಲಿ ಹೆತ್ತವರನ್ನು ಬಿಟ್ಟು ಊರು ತೊರೆದ ಯುವ ಜನಾಂಗ. ಇದರಿಂದ ಬದುಕಿನ ಕೊನೆ ದಿನಗಳಲ್ಲಿ ವಯಸ್ಸಾದ ಹೆತ್ತವರು ಎದುರಿಸುತ್ತಿರುವ...

  • ಪ್ರೇಮವೆಂದರೆ ದಿನವೂ ಸಂಭ್ರಮ. "ಅಚ್ಚಾಗಿದೆ ಎದೆಯಲಿ ನಿನ್ನದೇ ಹಸಿಬಿಸಿ ಸಂದೇಶ' ಎನ್ನುತ್ತ ಪಿಸುಗುಡುವ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್‌ ಡೇ ಒಂದು ನೆಪ. ಮನುಷ್ಯನ...

ಹೊಸ ಸೇರ್ಪಡೆ