ಅಮೃತ ಬಳ್ಳಿಯಂತಾಗಬೇಕು!

Team Udayavani, Dec 6, 2019, 5:00 AM IST

ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು ನನ್ನ ಆಪ್ತರೊಬ್ಬರು ಅಮೃತಬಳ್ಳಿಯ ಕಷಾಯ ಕುಡಿಯಲು ಸಲಹೆಯನ್ನಿತ್ತರು. ಅಷ್ಟು ಪರಿಣಾಮಕಾರಿಯಾದ ಇಂಗ್ಲಿಷ್‌ ಮಾತ್ರೆಗಳಿಂದಾಗದ್ದು, ಈ “ಬರಿಯ ಬಳ್ಳಿ’ಯಿಂದ ಸಾಧ್ಯವೇ ಎಂದು ನಕ್ಕು ಸುಮ್ಮನಾದೆ. ಅಷ್ಟಕ್ಕೂ ನಾವು ಬದುಕುತ್ತಿರುವುದು ಸ್ಪರ್ಧಾತ್ಮಕ ಪ್ರಪಂಚದಲ್ಲಿ. ಇಲ್ಲಿ ಒಂದು ನಿಮಿಷ ಹಳೆಯದ್ದು, ಹಳಸಿದ್ದು ಎನ್ನುವ ಭಾವ. ಹೀಗಿರಲು ತ್ವರಿತ ಉಪಶಮನ ನೀಡುವ ಇಂಗ್ಲಿಷ್‌ ಮದ್ದುಗಳ ಹೊರತು, ತಿಂಗಳು°ಗಟ್ಟಲೇ ಪಥ್ಯ, ಜೊತೆಗೆ ಕಹಿಯಾದ ಈ ಆಯುರ್ವೇದಿಕ್‌ ಔಷಧಿಗಳು ನಮಗೆ ಸೇರುವುದೆಂತು?

ಆದರೆ, ಕಾಕತಾಳೀಯ ಎಂಬಂತೆ ಇದೇ ಸಮಯದಲ್ಲಿ ಲೇಖಕಿ ನೇಮಿಚಂದ್ರರ ಬದುಕು ಬದಲಿಸಬಹುದು ಎಂಬ ಹೊತ್ತಗೆ ನನ್ನ ಕೈ ಸೇರಿತು. ಈ ಪುಸ್ತಕದಲ್ಲಿ ನೇಮಿಚಂದ್ರರವರು ಅಮೃತ ಬಳ್ಳಿಗೆ ಸಾವಿಲ್ಲ ಎಂಬ ತಲೆಬರಹದಡಿ ಅಮೃತಬಳ್ಳಿಯ ಮಹಿಮೆಯ ಹಾಡಿ ಹೊಗಳಿದ್ದರು. ಆಗಲೆ ನನಗೆ ಈ “ಬರಿಯ ಬಳ್ಳಿಯ’ ಕುರಿತು ಅರಿವಾದದ್ದು

ಅಮೃತಬಳ್ಳಿ ವಾತ, ಪಿತ್ತ ಮತ್ತು ಕಫ‌ಹರವಾಗಿದೆ. ಇದರ ಎಲೆ, ಕಾಂಡ, ಬೇರು ಹೀಗೆ ಎಲ್ಲದರಲ್ಲೂ ಔಷಧೀಯ ಗುಣವಿದೆ. ಜ್ವರಕ್ಕೆ ಅಮೃತಬಳ್ಳಿ ರಾಮಬಾಣ. “ಅಮೃತ’ (ಸಾವಿಲ್ಲದ)ಎಂಬ ಹೆಸರಿನ ಈ ಬಳ್ಳಿಯ ಕಷಾಯ “ಜ್ವರನಾಶಿನಿ’ ಎಂದು “ಚರಕ ಸಂಹಿತೆ’ಯಲ್ಲಿ ಉಲ್ಲೇಖವಿದೆ. ಅಮೃತಬಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಪಡೆದಿದೆ. ಈ ಗುಣ ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲೂ ನೆರವಾಗುತ್ತದೆ ಎನ್ನುತ್ತಾರೆ. ಈ ಬಳ್ಳಿಗೆ ಸಾಕ್ಷಾತ್‌ ಧನ್ವಂತರಿಯ ವರವೇ ಏನೋ, ಅಷ್ಟು ಔಷಧೀಯ ಗುಣವನ್ನು ತನ್ನೊಡಲಲ್ಲಿ ಇರಿಸಿದೆ.

ಆದರೆ, ನನಗೆ ಅಮೃತ ಬಳ್ಳಿಯ ಪರಿಚಯವಿರಲಿಲ್ಲ. ಅಮ್ಮನನ್ನು ಕೇಳಲು ಅವರು, “ನೆರೆಮನೆಯವರ ಹಿತ್ತಲಲ್ಲಿ ಕಂಡಿ¨ªೆ’ ಅಂದರು. ಆದರೆ, ನೆರೆಮನೆಯವರು ಮನೆಮುಂದೆ ಪೊದೆಯಂತಾಗುತ್ತದೆ ಎಂದು ಕಡಿದಿದ್ದರು. ನಿರಾಸೆಯಿಂದ ಅವರು ಕಡಿದು ರಾಶಿ ಹಾಕಿದ್ದ ಕಡೆಗೆ ನೋಡಲು ಹೋದೆ. ಅಲ್ಲಿ ಅಚ್ಚರಿ ಕಾದಿತ್ತು. ಕಾರಣ, ಆ ಒಣ ಕಡ್ಡಿಯಲ್ಲೂ ಜೀವಂತಿಕೆ ಹಾಗೇ ಇತ್ತು.

ಅಲ್ಲೇ ಇತ್ತು ನೋಡಿ, “ಪ್ರಕೃತಿಯ ಪಾಠ’. ಕಡಿದೆಸೆದವರು ಬಳ್ಳಿಯ ಅಮೃತೀಯ ಗುಣವರಿಯರು. ಆದರೆ, ತನ್ನನ್ನು ಎಸೆದರು ಎಂದ ಮಾತ್ರಕ್ಕೆ ಅಮೃತಬಳ್ಳಿ ತನ್ನ ಔಷಧೀಯ ಗುಣಗಳನ್ನು ಕಳೆದುಕೊಳ್ಳಲಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿಯನ್ನು ಈ ಸಮಾಜ ಎಲ್ಲೂ ಸಲ್ಲದವನು ಎಂದು ನಿಂದಿಸಿ, ತಿರಸ್ಕರಿಸಿದ ಮಾತ್ರಕ್ಕೆ ಆ ವ್ಯಕ್ತಿ ಕೆಲಸಕ್ಕೆ ಬಾರದವನು ಎಂದರ್ಥವಲ್ಲ. ಆತನಲ್ಲಿ ಎಲ್ಲರನ್ನೂ ಮೀರಿಸುವ ಪ್ರತಿಭೆ ಸುಪ್ತವಾಗಿರಬಹುದು. ಜನ ತನ್ನನ್ನು ದೂರ ತಳ್ಳಿದರೆಂದು ಆತ ತನ್ನತನವನ್ನು ತ್ಯಜಿಸಬಾರದು, ಬದುಕುವ ಛಲ ಬಿಡಬಾರದು. ಈ ಮೂಲಕ ಕಡಿದವರ ಮುಂದೆಯೇ ಹುಲುಸಾಗಿ ಬೆಳೆಯುವ ಸಾಹಸ ಮಾಡುವ ಅಮೃತಬಳ್ಳಿಯಂತಾಗಬೇಕು.

ಹರ್ಷಿತಾ
ದ್ವಿತೀಯ ಬಿಎ (ಪತ್ರಿಕೋದ್ಯಮ), ವಿಶ್ವವಿದ್ಯಾನಿಲಯದ ಕಾಲೇಜು, ಮಂಗಳೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ದಾಳಿ ನಡೆಸಿದ ಗುಂಡುಗಳು ಸ್ಫೋಟಗೊಳ್ಳದೆ ಇನ್ನೂ ಭೂಮಿಯ ಆಳದಲ್ಲಿ ಸೇರಿವೆ. ಆದರೆ, ಇದರ ಬಗ್ಗೆ ಜನರಿಗೆ ಯಾವುದೇ ಮಾಹಿತಿ...

  • ಈ ಜಗತ್ತು ಎಲ್ಲಾ ಜೀವಸಂಕುಲಗಳನ್ನು ಹೊಂದಿದೆ. ಈ ಜೀವಸಂಕುಲದಲ್ಲಿ ಬೇರೆ ಬೇರೆ ರೀತಿಯ ಪ್ರಾಣಿಗಳು ಕಾಣಸಿಗುತ್ತವೆ. ಕೆಲವು ಪ್ರಾಣಿಗಳು ನೋಡಲು ಸುಂದರವಾಗಿರುತ್ತವೆ....

  • ವೀಕೆಂಡ್‌ ಬಂದ್ರೆ ಸಾಕು ಗೆಳೆಯರ ಜೊತೆ ಕ್ರಿಕೆಟ್‌, ಸಿನೆಮಾ, ಬೀಚ್‌... ಹೀಗೆ ಸುತ್ತಾಟ ಇದ್ದದ್ದೇ.ಆದರೆ, ಆವತ್ತು ಯಾಕೋ ಏನೋ ಇಡೀ ಜಗತ್ತಿಗೇ ಸೂರ್ಯೋದಯವಾದರೂ...

  • ಹಾಲಕ್ಕಿ, ಸಿದ್ಧಿ ಮತ್ತು ಕುಡುಬಿ ಸಮುದಾಯದವರನ್ನು ಭೇಟಿಯಾಗುವ ಹಾಗೂ ಕಾಡಿನ ಪರಿಶುದ್ಧ ಸೌಂದರ್ಯವನ್ನು ಸವಿಯುವ ನಿಟ್ಟಿನಲ್ಲಿ ನಡೆದ ಪ್ರವಾಸವು ವಿದ್ಯಾರ್ಥಿಗಳ...

  • ಜಗತ್ತಿಗೆ ಬೆಳಕಾಗಿದ್ದ ಭಾರತವು ದಾಸ್ಯದ ಮದಿರೆಯನ್ನು ಕುಡಿದು ಆತ್ಮವಿಸ್ಮತಿಗೆ ಒಳಗಾಗಿರುವುದನ್ನು ಮನಗಂಡ ಸ್ವಾಮಿ ವಿವೇಕಾನಂದರು ಭಾರತದ ಪುನರುತ್ಥಾನಕ್ಕಾಗಿ...

ಹೊಸ ಸೇರ್ಪಡೆ