Udayavni Special

ಅಡುಗೆ ಮನೆಯಲ್ಲೊಂದು ದಿನ


Team Udayavani, Feb 21, 2020, 4:53 AM IST

chitra-2

ಪ್ರಥಮ ಎಂಸಿಜೆಯ ಮೊದಲ ಸೆಮಿಸ್ಟರ್‌ ಪರೀಕ್ಷೆ ಮುಗಿಸಿ, ಕಾಲೇಜಿನ ಲೈಬ್ರೆರಿಯಿಂದ ಕಾದಂಬರಿ ಪುಸ್ತಕಗಳನ್ನ ಹೊತ್ತು ಮನೆ ಸೇರಿದ್ದೆ. ಇನ್ನು ಈ ಪುಸ್ತಕ ಓದಿ ಮುಗಿಯುವವರೆಗೂ ಏಳುವುದಿಲ್ಲ ಎಂದು ಶಪಥ ಹಾಕಿ ಹಾಸಿಗೆಯಲ್ಲಿ ಉರುಳಿಕೊಂಡಿದ್ದೆ. ಅಷ್ಟರೊಳಗೆ ಅಮ್ಮ ಅಡುಗೆ ಮನೆಯಿಂದ ಕೂಗು ಹಾಕಿದಳು. “ದೇವರೇ’ ಎಂದುಕೊಂಡು ಅತ್ತ ಕಡೆ ಹೋದೆ. ಅಮ್ಮ ನನಗೆ ಕೆಲಸ ನೀಡಲು ಪಟ್ಟಿಯನ್ನೇ ಸಿದ್ದಪಡಿಸಿಕೊಂಡವಳಂತೆ ಒಂದೊಂದೇ ಕೆಲಸ ಹೇಳಲು ಶುರುಮಾಡಿದಳು. ತೆಂಗಿನಕಾಯಿ ತುರಿ, ಗುಡಿಸು, ನೆಲ ಒರೆಸು- ಹೀಗೆ ಸಣ್ಣಪುಟ್ಟ ಕೆಲಸಗಳು.

ಅಬ್ಟಾ! ಎಂದುಕೊಳ್ಳುತ್ತಾ ಒಂದು ಐದು ನಿಮಿಷ ಮೊಬೈಲ್‌ ಕೈಯಲ್ಲಿ ಹಿಡಿದಿದ್ದೇ ತಡ ಅಮ್ಮನ ಬೈಗುಳ ಶುರು. “ಇಡೀ ದಿನ ಮೊಬೈಲ್‌ನಲ್ಲೇ ನೋಡಿಕೊಂಡು ಇದ್ದರೆ ನಿನ್ನ ಕಣ್ಣು ಏನಾಗಬೇಕು’ ಅಂತ ಶುರು ಮಾಡುತ್ತಾಳೆ. ಆಗ ಮತ್ತೆ ಎದ್ದು ಏನಾದರು ಕೆಲಸ ಮಾಡಲು ಹೊರಡುತ್ತೇನೆ.

ಏನೇ ಕೆಲಸ ಮಾಡಲು ಹೇಳಿದರೂ ಅಮ್ಮ ಅಡುಗೆ ಮಾಡಲು ಹಾಗೂ ಇಸ್ತ್ರಿ ಹಾಕಲು ಮಾತ್ರ ನನ್ನ ಬಳಿ ಹೇಳಲಾರಳು ಎಂಬ ನಂಬಿಕೆ ನನಗಿತ್ತು. ಯಾಕೆಂದರೆ, ಇಸ್ತ್ರಿ ಹಾಕುತ್ತ ಅಪ್ಪನ ಪ್ಯಾಂಟ್‌ ಸುಟ್ಟು ಹಾಕಿ, ಚೆನ್ನಾಗಿ ಬೈಸಿಕೊಂಡಿದ್ದೆ. ಕೆಲವೇ ದಿನಗಳಲ್ಲಿ ನನ್ನ ಅಡುಗೆ ಕೆಲಸ ಪ್ರಾರಂಭವಾಯಿತು. ಮುಂದಿನ “ಮಾಸ್ಟರ್‌ ಶೆಫ್’ ನಾನೇ ಎಂಬ ಭಾವನೆಯೊಂದಿಗೆ ಅಡುಗೆ ತಯಾರಿಸಿಬಿಟ್ಟೆ. ಮಾಡಿದ ಸಾಂಬಾರ್‌ ಮನುಷ್ಯರು ತಿನ್ನುವಷ್ಟರ ಮಟ್ಟಕ್ಕೆ ಚೆನ್ನಾಗಿದೆ ಎಂದು ಅಪ್ಪ ನಗೆಯಾಡುತ್ತ ಹೇಳಿದರು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಅಮ್ಮ ಒಂದೂ ಹೊಗಳಿಕೆಯ ಮಾತು ಹೇಳಲಿಲ್ಲ.

ಅಡುಗೆ ಕಲಿಯುವಾಗ ಮನಸ್ಸು ತುಂಬಾ ಏಕಾಗ್ರತೆಯಿಂದ ಇರಬೇಕಾಗುತ್ತದೆ. ಏಕಕಾಲಕ್ಕೆ ಹತ್ತು ಕೆಲಸ ಮಾಡುವ “ಮ್ಯಾನೇಜ್‌ಮೆಂಟ್‌ ಸ್ಕಿಲ್‌’ ಗೊತ್ತಿರಬೇಕು. ಗ್ಯಾಸ್‌ನ ಆ ಒಲೆಯಲ್ಲಿ ನೀರಿಟ್ಟು, ಈ ಒಲೆಯಲ್ಲಿ ಕುಕ್ಕರ್‌ ಇಟ್ಟು, ಎರಡನ್ನೂ ನಿಭಾಯಿಸಿಕೊಂಡು ಹೋಗಬೇಕು. ಅಬ್ಬಬ್ಟಾ!

ಆಶಿಕಾ ಸಾಲೆತ್ತೂರು
ಎಂಸಿಜೆ, ದ್ವಿತೀಯ ವರ್ಷ ವಿವೇಕಾನಂದ ಕಾಲೇಜು, ಪುತ್ತೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಮೆರಿಕ ಕೋವಿಡ್-19 ಸಮರ: ಮಾವನಿಗೆ ಅಳಿಯನ ಸಾಥ್‌

ಅಮೆರಿಕ ಕೋವಿಡ್-19 ಸಮರ: ಮಾವನಿಗೆ ಅಳಿಯನ ಸಾಥ್‌

1720 To 2020! ಪ್ರತಿ 100 ವರ್ಷಕ್ಕೊಮ್ಮೆ ಮನುಷ್ಯ ಜನಾಂಗಕ್ಕೆ ಭೀತಿ ಹುಟ್ಟಿಸೋ ಮಹಾಮಾರಿ

1720 To 2020! ಪ್ರತಿ 100 ವರ್ಷಕ್ಕೊಮ್ಮೆ ಮನುಷ್ಯ ಜನಾಂಗಕ್ಕೆ ಭೀತಿ ಹುಟ್ಟಿಸೋ ಮಹಾಮಾರಿ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಕೋವಿಡ್ ಕಳವಳ: ಜಾಂಪಾ, ಡಿ ಶಾರ್ಟ್ ಸೇರಿ ಎಂಟು ಆಸೀಸ್ ಕ್ರಿಕೆಟಿಗರ ಮದುವೆ ಮುಂದೂಡಿಕೆ

ಸ್ವತಃ ಮಾಸ್ಕ್ ಧರಿಸದೆ ಜನರಿಗೆ ಮಾಸ್ಕ್ ವಿತರಿಸಿದ ಸಚಿವ ಶ್ರೀರಾಮುಲು

ಸ್ವತಃ ಮಾಸ್ಕ್ ಧರಿಸದೆ ಜನರಿಗೆ ಮಾಸ್ಕ್ ವಿತರಿಸಿದ ಸಚಿವ ಶ್ರೀರಾಮುಲು

ಸ್ಮಾರ್ಟ್‌ಫೋನ್‌ ಭವಿಷ್ಯ ಸ್ಮಾರ್ಟಾಗಿಲ್ಲ

ಸ್ಮಾರ್ಟ್‌ಫೋನ್‌ ಭವಿಷ್ಯ ಸ್ಮಾರ್ಟಾಗಿಲ್ಲ; 2 ಬಿ. ಡಾಲರ್‌ ನಷ್ಟದ ಭಯ

ಕೋವಿಡ್ ಆತಂಕದ ನಡುವೆ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 9 ಉಗ್ರರ ಹತ್ಯೆಗೈದ ಸೇನಾಪಡೆ

ಕೋವಿಡ್ ಆತಂಕದ ನಡುವೆ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 9 ಉಗ್ರರ ಹತ್ಯೆಗೈದ ಸೇನಾಪಡೆ

‘ಸೋಂಕು ಬಂದಿದೆ’ ಎಂದು‌ ಆಸ್ಪತ್ರೆಯಲ್ಲಿ ನಗುತ್ತ ಡ್ಯಾನ್ಸ್ ಮಾಡಿದ‌ ತಬ್ಲಿಘಿ ಶಂಕಿತ ವ್ಯಕ್ತಿ

‘ಸೋಂಕು ಬಂದಿದೆ’ ಎಂದು‌ ಆಸ್ಪತ್ರೆಯಲ್ಲಿ ನಗುತ್ತ ಡ್ಯಾನ್ಸ್ ಮಾಡಿದ‌ ತಬ್ಲಿಘಿ ಶಂಕಿತ ವ್ಯಕ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕಾಯಕ ನಿಷ್ಠೆ ಮೆರೆಯುತ್ತಿರುವ ವೈದ್ಯರು, ದಾದಿಯರು

ಕಾಯಕ ನಿಷ್ಠೆ ಮೆರೆಯುತ್ತಿರುವ ವೈದ್ಯರು, ದಾದಿಯರು

ಕಾಲುಜಾರಿ ಕಾಲುವೆಗೆ ಬಿದ್ದು ಮಹಿಳೆ ಸಾವು

ಕಾಲುಜಾರಿ ಕಾಲುವೆಗೆ ಬಿದ್ದು ಮಹಿಳೆ ಸಾವು

ಮಾಸ್ಕ್ ವಿತರಣೆಗೆ ಚಾಲನೆ

ಮಾಸ್ಕ್ ವಿತರಣೆಗೆ ಚಾಲನೆ

ಕೋವಿಡ್ 19 ವೈರಸ್ ಸೋಂಕಿತರ ಸಾವಿನ ಪ್ರಮಾಣ: ಜಾಗತಿಕ ದಾಖಲೆ ಬರೆದ ಅಮೆರಿಕ

ಕೋವಿಡ್ 19 ವೈರಸ್ ಸೋಂಕಿತರ ಸಾವಿನ ಪ್ರಮಾಣ: ಜಾಗತಿಕ ದಾಖಲೆ ಬರೆದ ಅಮೆರಿಕ

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ

ಗ್ರಾಮಸ್ಥರು ಸಹಕರಿಸಿ: ಖಾದರ್‌ ಮನವಿ