ಭೂತ ಮತ್ತು ವರ್ತಮಾನ’


Team Udayavani, Mar 3, 2017, 3:45 AM IST

Encounter-Ghost-as-Customer.jpg

ಭೂತ ಅಂದ್ರೆ ಯಾರಿಗೆ ಭಯ ಇಲ್ಲ ಹೇಳಿ? ಅದ್ರಲ್ಲೂ ಮಕ್ಕಳಿಗೆ ಭೂತ ಅಂದ್ರೆ ಸ್ವಲ್ಪ ಜಾಸ್ತಿನೇ ಭಯ. ಈ ಮಕ್ಕಳಲ್ಲಿ ಭೂತದ ಭಯ ಹುಟ್ಟೋಕೆ ಮುಖ್ಯ ಕಾರಣ ಅಮ್ಮಂದ್ರು. ಮಕ್ಕಳು ಚಿಕ್ಕವರಿರ್ಬೇಕಾದ್ರೆ ಊಟ ಮಾಡೆ ಹಠ ಹಿಡಿದ್ರೆ, ಹೇಳಿದ್ದನ್ನು ಕೇಳದೆ ಇದ್ರೆ ಭೂತ ಬರುತ್ತೆ, ಮೋಹಿನಿ ಬರ್ತಾಳೆ ಅಂತೆಲ್ಲ ಭಯ ಹುಟ್ಟಿಸಿ ಮಕ್ಕಳನ್ನು ಕಂಟ್ರೋಲ್‌ನಲ್ಲಿ ಇಟ್ಕೊತಾರೆ. ಈ ಭೂತ ಭಯಂಕರವಾಗಿರುತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ಅದು ಹುಟ್ಟಿಸೋ ಭಯ ಮಾತ್ರ ಭಯಂಕರವಾಗಿರುತ್ತೆ.

ನಾನು ಚಿಕ್ಕವಳಾಗಿದ್ದಾಗ ನನ್ನ ಅಮ್ಮ ಕೂಡ ದೆವ್ವ , ಭೂತದ ಹೆಸರನ್ನು ಹೇಳಿ ನನ್ನ ಕಂಟ್ರೋಲ್‌ ಮಾಡ್ತಿದ್ರು. ಅಷ್ಟೇ ಅಲ್ಲದೆ ಮೈನ್‌ ರೋಡ್‌ನಿಂದ ನಮ್ಮ ಮನೆ ಕಡೆ ಬರೋ ರಸ್ತೆ ಮಧ್ಯದಲ್ಲಿ ಒಂದು ಪಾಳುಬಿದ್ದ ಮನೆಯಿತ್ತು. ಆ ಮನೇಲಿ ಯಾರೋ ಸತ್ತು ಭೂತ ಆಗಿ ಬಂದು ಆ ಮನೇಲಿ ಇರೋರಿಗೆಲ್ಲ ಕಾಟ ಕೊಟ್ಟ ಪರಿಣಾಮ ಅವರೆಲ್ಲಾ ಮನೆ ಖಾಲಿ ಮಾಡಿ ಹೋದ ಕಥೆನಾ ಹೇಳ್ತಿದ್ರು. ನನ್ನಮ್ಮ ಅಷ್ಟೇ ಅಲ್ಲ ನಮ್ಮ ಏರಿಯಾದಲ್ಲಿರೋ ನನ್ನ ಫ್ರೆಂಡ್ಸ್‌ ಅಮ್ಮಂದ್ರೂ ಸಹ ಇದೇ ಕಥೆ ಹೇಳಿ ಅವರನ್ನು ಕಂಟ್ರೋಲ್‌ನಲ್ಲಿ ಇಟ್ಕೊಂಡಿದ್ರು. ದೊಡ್ಡವರಿಗೆಲ್ಲ ಅದೊಂದು ಪಾಳುಬಿದ್ದ ಮನೆ ಆಗಿದ್ರೆ ನಮಗೆಲ್ಲ ಅದು ಭೂತದ ಮನೆ ಆಗಿತ್ತು. ಆ ಮನೆ ಬಗ್ಗೆ ನಮಗಿದ್ದ ಭಯ ಎಷ್ಟು ಆಳವಾಗಿತ್ತು ಅಂದ್ರೆ ನಾವು ಬೆಳೆದಂತೆ ಅದು ಕೂಡ ನಮ್ಮ ಜೊತೆನೇ ಬೆಳೆದಿತ್ತು.

ನಾವು ಪ್ರೈಮರಿಯಲ್ಲಿದ್ದಾಗ ಶಾಲೆಗೆ ಹೋಗೋದು ಬರೋದು ಪಕ್ಕದ ಮನೆ ಅಕ್ಕನ ಜೊತೆನೇ. ಅವಳು ಜೊತೆಗಿದ್ರೆ ನಮಗೆ ಒಂಥರಾ ಧೈರ್ಯ. ಅವಳು ಪ್ರೈಮರಿ ಸ್ಕೂಲ್‌ ಮುಗಿಸಿ ಹೈಸ್ಕೂಲ್‌ಗೆ ಸೇರಾಗ ನಾನು ನನ್ನ ಮೂವರು ಫ್ರೆಂಡ್ಸ್‌ ಮಾತ್ರ ಉಳಿದ್ವಿ. ದಿನಾ ಆ ಮನೆ ಮುಂದೆ ಬರಬೇಕಾದ್ರೆ ನಮಗೆಲ್ಲ ಭಯ ಆಗ್ತಿದ್ರೂ ಒಬ್ರಿಗೊಬ್ರು ತೋರಿಸ್ಕೋಳ್ತಿರ್ಲಿಲ್ಲ. ಆ ಭೂತದ ಮನೆ ಶಾಲೆಗೆ ಹೋಗುವಾಗ ಬರುವಾಗ ಹೆದರಿಸೋದಲ್ಲದೇ ಕನಸಲೆಲ್ಲಾ ಬಂದು ಹೆದರಿಸ್ತಿತ್ತು. ನಮ್ಮ ಗ್ರೂಪ್‌ನಲ್ಲಿ ನನಗೆ ಸ್ವಲ್ಪ ಧೈರ್ಯ ಜಾಸ್ತಿ. ಇದು ನನ್ನ ಅಭಿಪ್ರಾಯ ಮಾತ್ರ ಅಲ್ಲ, ನನ್ನ ಫ್ರೆಂಡ್ಸ್‌ ಅಭಿಪ್ರಾಯ ಕೂಡ. ನನ್ನ ಒಬ್ಬಳು ಫ್ರೆಂಡ್‌ಗೆ ನಮ್ಮೆಲ್ಲರಿಗಿಂತ ಸ್ವಲ್ಪ ಜಾಸ್ತೀನೇ ಭಯ. ಆ ಮನೆ ಮುಂದೆ ಬರೋವಾಗ ಸ್ವಲ್ಪ ಸದ್ದಾದ್ರೂ ಸಾಕು, ಜೋರಾಗಿ ಕೂಗ್ತಿದು. ಆಗ ನಾವೆಲ್ಲ ಹೆದರಿ ಎದೊಬಿದೊ ಅಂತ ಓಡ್ತಿದ್ವಿ. ನಾನಂತು ಎಲ್ಲರಿಗಿಂತ ಮುಂದೆ ಓಡ್ತಿದ್ದೆ. ನಗ್ಬೇಡಿ ನಿಜವಾಗ್ಲೂ ನಮ್ಮ ಗ್ರೂಪ್‌ನಲ್ಲಿ ನಾನೇ ಧೈರ್ಯವಂತೆ. ಏನೋ ಸ್ವಲ್ಪ ಸ್ಪೀಡಾಗಿ ಓಡ್ತೀನಪ್ಪ ಅಷ್ಟೆ.

ಮುಂದೆ ನಾವು ಪ್ರೈಮರಿ ಮುಗಿಸಿ ಹೈಸ್ಕೂಲ್‌ ಸೇರೊಡ್ವಿ. ಒಂದಿನ ಉಡುಪಿಯಲ್ಲಿ ನಡೀತಿದ್ದ ಒಂದು ಪ್ರೋಗ್ರಾಮ್‌ಗೆ ಒಂದು ಕ್ಲಾಸ್‌ನಿಂದ ಮೂವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗ್ತಿದ್ರು. ನಮ್ಮ ಕ್ಲಾಸ್‌ನ ಮೂವರಲ್ಲಿ ನಾನೂ ಒಬ್ಬಳಾಗಿದ್ದೆ. ನಾವೆಲ್ಲ ತುಂಬಾ ಖುಷಿಯಿಂದಲೇ ಉಡುಪಿಗೆ ಹೊರಟ್ಟಿದ್ದೆವು. ಪ್ರೋಗ್ರಾಮ್‌ ಮುಗಿಯೋವರೆಗೂ ಸಖತ್‌ ಆಗಿ ಎಂಜಾಯ್‌ ಮಾಡಿದ್ವಿ. ಪ್ರೋಗ್ರಾಮ್‌ ಮುಗಿಸಿ ಕುಂದಾಪುರ ತಲುಪಿದಾಗ ಗಂಟೆ 6.15. ಆಗ್ಲೆà ಕತ್ಲಾಗೋಕೆ ಶುರುವಾಗಿತ್ತು. ಇನ್ನು ಮನೆ ತಲುಪೋವಷ್ಟರಲ್ಲಿ ಗಂಟೆ ಏಳಾಗಿ ಪೂರ್ತಿ ಕತ್ಲಾಗಿರುತ್ತೆ. ಆ ಭೂತದ ಮನೆ ಮುಂದೆ ಒಬ್ಬಳೇ ಹೇಗೆ ಹೋಗ್ಲಿ ಅಂತ ಟೆನ್‌ಷನ್‌ ಶುರು ಆಯ್ತು. ಏನ್ಮಾಡ್ಲಿ ಅಂತ ಯೋಚಿಸೋಕೆ ಶುರು ಮಾಡೆ. ಬಸ್‌ ಇಳಿದ ತಕ್ಷಣ ಓಡೋಕೆ ಶುರು ಮಾಡ್ಲ? ಹೇಗಿದ್ರೂ ನಾನು ಚೆನ್ನಾಗಿ ಓಡ್ತಿನಲ್ಲಾ. ಬೇಗ ಮನೆ ಸೇರೊಬಹುದು ಅಂದೊ. ಅಕಸ್ಮಾತ್‌ ಭೂತ ನಾನು ಓಡ್ತಿರೋದನ್ನ ನೋಡಿ ಬಂದು ನನ್ನ ಹಿಡ್ಕೊಂಡ್ರೆ ಏನ್‌ ಮಾಡ್ಲಿ ಅಂತ ಮತ್ತೆ ಭಯ ಶುರುವಾಯ್ತು. ಕೊನೆಗೆ ಒಂದ್‌ ಪ್ಲಾನ್‌ ಹೊಳೀತು. ಅದೇನಂದ್ರೆ, ಬಸ್‌ಸ್ಟಾಂಡ್‌ ಹತ್ತಿರ ಇದ್ದ ಅಂಗಡೀಲಿ ಇರೋ ಕಾಯಿನ್‌ ಬೂತ್‌ನಿಂದ ಮನೆಗೆ ಫೋನ್‌ ಮಾಡಿ ಅಮ್ಮನ್ನ ಬರೋಕೆ ಹೇಳ್ಳೋಣ ಅದೇ ಒಳ್ಳೆ ಐಡಿಯಾ ಅನ್ನಿಸ್ತು.

ಬಸ್‌ ಇಳಿದ ನಾನು ಫೋನ್‌ ಮಾಡೋಕೆ ಹೋದ್ರೆ ನನ್ನ ಗ್ರಹಚಾರಕ್ಕೆ ಅಂಗಡಿ ಬಾಗಿಲು ಹಾಕಿತ್ತು. ಏನ್ಮಾಡ್ಲಿ ಅಂತ ಗೊತ್ತಾಗ್ಲಿಲ್ಲ. ಕೊನೆಗೆ ಓಡೋದೆ ಸರಿ ಅನ್ನಿಸ್ತು. ಎಷ್ಟು ವೇಗವಾಗಿ ಆಗುತ್ತೋ ಅಷ್ಟು ವೇಗವಾಗಿ ಓಡಿ ಮನೆ ತಲುಪೋಣ ಅಂದೊಡು ಇನ್ನೇನು “ಗೆಟ್‌ ಸೆಟ್‌ ಗೋ’ ಅಂತ ಓಡ್ಬೇಕು ಅಷ್ಟರಲ್ಲಿ ಯಾರೋ ನನ್ನ ಕರೆದ ಹಾಗೆ ಆಯ್ತು. ಯಾರು ಅಂತ ನೋಡಿದ್ರೆ ನನ್ನ ಫ್ರೆಂಡ್‌ನ‌ ತಂದೆ. ಹೋದ ಜೀವ ಬಂದಂಗಾಯ್ತು. ಅವರ ಜೊತೆ ಮಾತಾಡ್ತಾ ಮನೆ ಸೇರಿದೆ.

ಅವತ್ತು ನನ್ನ ಫ್ರೆಂಡ್‌ನ‌ ಅಪ್ಪ ಬರ್ಲಿಲ್ಲ ಅಂದ್ರೆ ಏನಾಗ್ತಿತ್ತು ಅಂತ ಇವಾಗ್ಲೂ ಯೋಚಿಸ್ತಾ ಇರಿ¤àನಿ. ಆ ಮನೇಲಿ ನಿಜವಾಗ್ಲೂ ಭೂತ ಇದೆಯೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಆ ಮನೇಲಿ ಭೂತ ಇದ್ದಿದ್ರೆ ಯಾರಿಗಾದ್ರೂ ತೊಂದರೆ ಕೊಡ್ಬೇಕಿತ್ತು, ಇಲ್ಲಾ ಯಾರಿಗಾದ್ರೂ ಕಾಣಿಸ್ಕೋಬೇಕಾಗಿತ್ತು. ಆದ್ರೆ ಇವೆರಡೂ ನಡೆದಿಲ್ಲ. ಈಗ ನನ್ನಲ್ಲಿ ಅಷ್ಟೊಂದು ಭಯ ಇಲ್ಲ. ಹಾಗಂತ ಅಲ್ಲಿ ಭೂತ ಇದಿಯೋ ಇಲ್ವೋ ಅಂತ ಇನ್ವೆಸ್ಟಿಗೇಶನ್‌ ಮಾಡೋವಷ್ಟು ಧೈರ್ಯಾನೂ ಇಲ್ಲ.

– ಸುಶ್ಮಿತಾ ನೇರಳಕಟ್ಟೆ
ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು
ಕುಂದಾಪುರ

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.