ಪ್ರಿಯತಮ ಕರುಣೆಯ ತೋರೆಯ !

Team Udayavani, Jul 14, 2017, 3:25 AM IST

holding-sari.jpg

ಹಸಿರು ಜರತಾರಿ ಸೀರೆ, ರವಿಕೆ, ಹಸಿರು ಗಾಜಿನ ಬಳೆಗಳನ್ನು ಧರಿಸಿ ಪಚ್ಚೆ ಹಾರ, ಕಿವಿಯೋಲೆಯ ಹಾಕಿಕೊಂಡು ಗೆಳತಿ ಗಾನಕೋಗಿಲೆಯ ಬಳಿ ಸಂದೇಶ ಕಳಿಸಿಹಳು, “ಪ್ರಿಯತಮ ಕರುಣೆಯ ತೋರೆಯ…’

ಚೈತ್ರಾಳ ಪಾರ್ಲರಿನಲ್ಲಿ ಸಕಲ ಸೌಂದರ್ಯವರ್ಧಕ ಧಾರಣೆ ನಡೆದಿದೆ. ಹುಬ್ಬು ತೀಡಿದಷ್ಟು ಸಮಾಧಾನವಿಲ್ಲ ಅವಳಿಗೆ. ವಿಶೇಷ ಪಪ್ಪಾಯ, ಅರಸಿನ, ಲೋಳೆಸರ, ಮುಲ್ತಾನಿ ಮಿಟ್ಟಿ ಪ್ಯಾಕ್‌ಗಳನ್ನು ಹಾಕಿ ಮಾಲಿಶ್‌ ಮಾಡಿ ಮುಖವೆಲ್ಲ ಪಳಪಳ ಹೊಳೆಯುತ್ತಿದೆ.ಅವಳಿಗೇನು ಕಡಿಮೆ ಅವಳದೇ ಎಕರೆಗಟ್ಟಲೆ ತೋಟ. ಇನ್ನೂ ಬಿಡದೇ ಎಳನೀರು, ಜೇನು, ಕೆನೆ, ಎಣ್ಣೆಯ ಮಾಲಿಶ್‌ ಮಾಡಿ ಮೈಯೆಲ್ಲ ಚೈತನ್ಯಯುತವಾಯಿತು.ಮೆನಿಕ್ಯೂರ್‌, ಪೆಡಿಕ್ಯೂರ್‌ ಮಾಡಿ ಕೈಕಾಲುಗಳು ಲಕಲಕನೆ ಹೊಳೆಯುತ್ತಿವೆ. ಬೀಟ್‌ರೂಟ್‌, ತಾಜಾ ಚಹಾದ ಎಲೆಗಳು, ಮೆಹೆಂದಿಗಳನ್ನು ಕಲಸಿ ಕೂದಲಿಗೆ ಹಚ್ಚಿ, ಇನ್ನೂ ಆಕೆಯ ಸ್ನಾನಕ್ಕೋ ಹಾಲಿನ ಹೊಳೆಯೇ ಹರಿದಿದೆ.

ಲೋಳೆಸರದ ಶಾಂಪೂವಿನಿಂದ ಕೂದಲನ್ನು ತೊಳೆದು, ಗುಲಾಬಿ ಸಾಬೂನಿನಿಂದ ಮೈತೊಳೆದು, ಬಿಸಿನೀರ ಶಾಖ, ಲೋಬಾನದ ಹೊಗೆಯನ್ನು ನೀಡಿ ಅವಳ ನೆಚ್ಚಿನ ಹಸಿರು ರೇಷ್ಮೆ ಸೀರೆಯ ಉಟ್ಟು, ಬೆಂಡೋಲೆ, ನೆಕ್ಲೇಸು, ಮೂಗುತಿ, ಬಳೆ, ಸೊಂಟಕ್ಕೆ ಡಾಬು, ಕೈಗೆ ವಂಕಿಯನ್ನು ಧರಿಸಿ ಮದುಮಗಳಂತೆ ಕಂಗೊಳಿಸುತ್ತ, ನಿಂತಿಹಳು ಮಹಾರಾಣಿ ಭೂಮಿಕಾದೇವಿ.

ಇಷ್ಟು ದಿನಗಳ ವಿರಹವನ್ನು ತಾಳಲಾರದೇ ಕೋಗಿಲೆಯ ಬಳಿ ಆತನಿಗೆ ಕಳುಹಿಸಿದ ಸಂದೇಶ ಆತನಿಗೆ ತಲುಪಿತೇ ಎನ್ನುವ ಅನುಮಾನ. ಕೋಗಿಲೆಯ ಬಳಿ ಕೇಳಲು, ಕುಹೂ ಕುಹೂ ಎಂದು ಹೂಂಕಾರ ಸೂಚಿಸಿದರೂ, ಆಕೆಗೆ ಸಮಾಧಾನವಿಲ್ಲ. ತನ್ನ ಕೆಲಸ ಕಾರ್ಯದ ನಡುವೆ ನನ್ನ ಸಂದೇಶ ಮರೆತನೇನೋ, ಅವನ ಸ್ವಾಗತಕ್ಕಾಗಿ ತಾನು ನಡೆಸಿದ ತಯಾರಿ ಕಡಿಮೆಯಾಯಿತೇ ಎನ್ನುವ ಅನುಮಾನ ಬೇರೆ.ಅವನ ಸ್ವಾಗತಕ್ಕಾಗಿ ಪನ್ನೀರು ಸಿದ್ಧವಿದೆಯೇ ಎಂದು ಇನ್ನೊಮ್ಮೆ ಖಚಿತಪಡಿಸಿಕೊಂಡಳು. ಅವನಿಗಾಗಿ ಮಾಡಿಟ್ಟ ಅವನಿಷ್ಟದ ಖಾದ್ಯಗಳ ಬೆಂಡೆಹುಳಿ, ಬದನೆ ಎಣ್ಣೆಗಾಯಿ, ಮೆಣಸಿನಕಾಯಿ ಬಜೆ, ಪಲ್ಯಗಳು, ಬೇಳೆಸಾರು, ಪ್ಯಾರಿಶ್‌ ಚಿತ್ರಾನ್ನ , ಗೋಧಿ ಹುಗ್ಗಿಯಂತೂ ಆತನಿಗೆ ಪಂಚಪ್ರಾಣ, ಕೇಸರಿಬಾತು ಅಬ್ಟಾ ಎಷ್ಟು ಘಮಘಮ ಪರಿಮಳ ಸೋಕಿ ಅವನು ಏಳು ಸಮುದ್ರದ ದೂರದಲ್ಲಿದ್ದರೂ ಓಡಿ ಬರುವುದು ಖಚಿತ! ಮತ್ತೂಮ್ಮೆ ಬಿಸಿಯಾಗಿವೆಯೇ ಎಂದು ಖಚಿತ ಪಡಿಸಿಕೊಂಡಳು. 

ಅನ್ನವನ್ನಂತೂ ಬಿಸಿಯಾಗಿಯೇ ಬಡಿಸಬೇಕೆಂದು ಹಾಲಲ್ಲಿ ಬೇಯಿಸಲಿಟ್ಟಿದ್ದಳು.ಅಷ್ಟು ಪ್ರೀತಿಸುವವಳು ಅವನ ಎಲ್ಲ ಸೀಕ್ರೆಟುಗಳನ್ನು ಬಲ್ಲವಳು, ಅವನ ಗೆಳೆಯ ಚಾತಕನನ್ನೇ ಕರೆದಳು. ಚಾತಕನು ಕರೆದರೆ ಅವನು ಎಲ್ಲಿದ್ದರೂ ಓಡಿ ಬರುವನೆಂದು ಅರಿತವಳು. ಚಾತಕನು ಕರೆದನು. ವರುಣನು ಬಂದನು. ಪ್ರಿಯಕರನ ಭವ್ಯ ಸ್ವಾಗತವ ಕಣ್ಣು ತುಂಬಿಕೊಳ್ಳಲು ಜೀವರಾಶಿಗಳೆಲ್ಲ ನೆರೆದು, ಪ್ರೀತಿಯ ವಾಲಗ ಊದಿ ಅವರ ಏಕಾಂತಕ್ಕೆ ಭಂಗಬಂದಿತೆಂದು ತಮ್ಮ ತಮ್ಮ ಗೂಡನ್ನು ಸೇರಿದವು.   

– ಸಾವಿತ್ರಿ ಶ್ಯಾನಭಾಗ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.