ಬಸ್‌ ಎಂಬ ಬದುಕು

Team Udayavani, Oct 25, 2019, 4:09 AM IST

ಸಾಂದರ್ಭಿಕ ಚಿತ್ರ

ಆರು ಚಕ್ರದ’ ವಾಹನಕ್ಕೆ ಒಂದು ಉದಾಹರಣೆ ಬಸ್ಸು ಎನ್ನುವುದನ್ನು ನಮ್ಮ ಪ್ರಾಥಮಿಕ ಹಂತದಲ್ಲಿ ಕಲಿತಂಥ ವಿಷಯ. ಈ ಬಸ್ಸು ಕೇವಲ ಆರು ಚಕ್ರದ ಉದಾಹರಣೆಗೆ ಸೀಮಿತವಾಗಿರದೆ ನೂರಾರು ನೆನಪುಗಳ ಸಾರಥಿಯೂ ಹೌದು.

ನನಗೆ ಬಸ್ಸಿನ ಪ್ರಯಾಣದ ಮಜಾ ಆರಂಭವಾದುದು ಮೂರು ವರ್ಷದ ಪದವಿಗಾಗಿ ಮಂಗಳೂರಿಗೆ ಸೇರಿದ ನಂತರ. ಅದಕ್ಕಿಂತ ಮೊದಲು ಶಾಲೆಯು ಕಾಲು ಗಂಟೆಯ ದಾರಿಯಾದುದರಿಂದ ನಡೆದುಕೊಂಡು ಹೋಗುವುದು ಅಭ್ಯಾಸ. ಈಗಲೂ ನಡಿಗೆಯೆಂದರೆ ಬಹಳ ಪ್ರೀತಿ.

ನಮ್ಮ ಊರಿಗೆ ಸರಕಾರಿ ಬಸ್ಸಿನ ಲಭ್ಯತೆ ಇಲ್ಲ. ಆದ್ದರಿಂದ, ನಮ್ಮ ಊರಿಗೆ ಖಾಸಗಿ ಬಸ್ಸುಗಳೇ ರಾಜರಾಣಿ. ಖಾಸಗಿ ಬಸ್ಸುಗಳ ವಿವಿಧ ಬಣ್ಣಗಳು ನಮಗೆ ಕಾಮನಬಿಲ್ಲಿನ ಮಜಾ ನೀಡುತ್ತವೆ. ಬಾಹ್ಯ ಲಕ್ಷಣಗಳ ನಂತರ ಹಾಗೆಯೇ ಗೃಹ ಪ್ರದೇಶದ ನಂತರ ಆಂತರಿಕ ಲಕ್ಷಣ ಬಹಳ ಮುಖ್ಯ.

ಡ್ರೈವರ್‌ ಬಸ್ಸಿನ ಅಂಬಿಗನಿದ್ದಂತೆ. ನಾವೆಲ್ಲರೂ ಈ ಹಡಗಿನಲ್ಲಿ ಪ್ರಯಾಣಿಕರು. ಆಸನವು ಅತೀ ಮುಖ್ಯವಾದ ಪಾತ್ರ ವಹಿಸುತ್ತದೆ. ಕಿಟಕಿ ಬದಿಯ ಸೀಟು ಎಲ್ಲರಿಗೂ ಊಟದಲ್ಲಿ ಪಾಯಸವಿದ್ದಂತೆ. ಕಿಟಕಿ ಬದಿಯ ಸೀಟು ಸಿಕ್ಕರೆ ಸ್ವರ್ಗಕ್ಕೆ ಮೂರೇ ಮೆಟ್ಟಿಲು. ಯಾರನ್ನೂ ಕೂಡ ಕೇರ್‌ ಮಾಡದೆ ನಮ್ಮದೇ ಲೋಕ. ಕಿವಿಗೊಂದು ಇಯರ್‌ಫೋನ್‌ ಇಟ್ಟರೆ ಆಹಾ! ಕೆಲವರಿಗೆ ತಮ್ಮ ಸ್ಟಾಫ್ನ ಅರಿವು ಇರುವುದಿಲ್ಲ. ನನ್ನಂಥ ಕುಂಭಕರ್ಣ ವಂಶಸ್ಥರಿಗೆ ಪರಮಾನಂದ ಈ ಕಿಟಕಿ ಬದಿಯ ಸೀಟು. ನಂತರದಲ್ಲಿ ಬಸ್ಸಿನ ಮಧ್ಯಪ್ರದೇಶದ ಸೀಟು ಹಾಗೂ ಕೊನೆಗೆ ಇರುವ ಸೀಟಿನಲ್ಲಿ ಆಸೀನರಾಗಲು ಯಾವುದೇ ನಿಯಮವಿಲ್ಲ. ಅದು ಒಂದು ರೀತಿಯಾಗಿ “ಸಜ್ಜಿಗೆ-ಅವಲಕ್ಕಿ’ ಎನ್ನಬಹುದು. ಯಾರು ಬೇಕಾದರೂ ಕೂರಬಹುದು.

ಇನ್ನು ಕುಳಿತುಕೊಂಡವರು ಎಲ್ಲರೂ ಒಂದೇ ರೀತಿಯ ಮನಸ್ಥಿತಿಯಲ್ಲಿ ಇರುವುದಿಲ್ಲ. ಕೆಲವೊಮ್ಮೆ ಶಾಲಾ ಮಕ್ಕಳ ಬ್ಯಾಗುಗಳ ರಾಶಿ ಕುಳಿತವರ ಮೇಲೆ ಬಿದ್ದು ಕೊಂಡಿರುತ್ತದೆ. ಕೆಲವರು ಬ್ಯಾಗುಗಳನ್ನು ಹಿಡಿಯಲು ಕೂಡ ಹಿಂದೇಟು ಹಾಕಿ ಮುಖ ತಿರುಗಿಸಿಕೊಳ್ಳುತ್ತಾರೆ.

ನಂತರದಲ್ಲಿ ನನಗಿಷ್ಟವಾದ ಡ್ರೈವರ್‌ನ ವಿರುದ್ಧದಲ್ಲಿರುವ ಉದ್ದ ಸೀಟು. ಅದು ಸಿನಿಮಾ ಟಾಕೀಸ್‌ನಲ್ಲಿ ಸಿನಿಮಾ ನೀಡಿದ ಅನುಭವ ನೀಡುತ್ತದೆ. ಅದರಲ್ಲಿ ಎಲ್ಲವೂ ಸ್ಪಷ್ಟ. ಕಿಟಕಿಯ ಬದಿಯ ಸೀಟಿನಂತೆ ಒಂದೇ ಬದಿಯ ಚಿತ್ರಣ ಮಾತ್ರ ಕಾಣುವುದಿಲ್ಲ. ರಸ್ತೆಯಲ್ಲಿನ ಎಲ್ಲ ಆಗುಹೋಗುಗಳು ಕಾಣಿಸುತ್ತವೆ.

ಸೀಟು ಸಿಗದೆ ಬಾವಲಿಗಳಂತೆ ನೇತಾಡುವವರ ಗೋಳು ಕೇಳುವವರಿಲ್ಲ. ರಶ್‌ ಇಲ್ಲದಿದ್ದರೆ, ಸ್ವಲ್ಪ ಸಮಯದ ಪ್ರಯಾಣವಾದರೆ ಪರವಾಗಿಲ್ಲ. ಅದರ ವಿರುದ್ಧ ಸ್ಥಿತಿಯಾದರೆ ಕೈನೋವು, ಸೊಂಟನೋವು ಗ್ಯಾರಂಟಿ.

ನಮ್ಮ “ಅಂಬಿಗ’ ಅಂದರೆ ಡ್ರೈವರ್‌. ಕೆಲವರಂತೂ ಬಸ್ಸನ್ನು ರಾಕೆಟ್‌ನಂತೆ ರಭಸದಲ್ಲಿ ಚಲಾಯಿಸುವವರೂ ಇದ್ದಾರೆ. ಡ್ರೈವರ್‌ನ ಸಾಧನೆ, ಶಿಸ್ತು ಮೆಚ್ಚಬೇಕಾದುದು. ಏಕೆಂದರೆ, ವಾಹನ ಚಲಾಯಿಸುವ ಕೌಶಲಕ್ಕೊಂದು ಸಲಾಮು. ನೋಡಲು ಸಪೂರ ಇದ್ದರೂ ಕೂಡ ಕೆಲವು ಡ್ರೈವರ್‌ಗಳ ವಾಹನ ಸವಾರಿ. ಹಾಗೆಯೇ ಕೆಲವು ಕಡೆ ಬ್ರೇಕ್‌ ಹಾಕಿದಾಗ ದೇಹದ ಎಲುಬುಗಳಿಗೆ ಒಳ್ಳೆಯ ವ್ಯಾಯಾಮ.

ನಂತರದಲ್ಲಿ ಬರುವವರು ನಿರ್ವಾಹಕ. ನಿರ್ವಾಹಕ ರಾಜಸಭೆಯ ವಿದೂಷಕನಂತೆ. ಎಲ್ಲರನ್ನೂ ಕೆಲವೊಮ್ಮೆ ಸಿಟ್ಟಿಗೇರಿಸುತ್ತ ಎಲ್ಲರೊಂದಿಗೆ ನಗುತ್ತ, ತಮಾಷೆ ಮಾಡುತ್ತ ಕಾಲ ಕಳೆಯುತ್ತಾನೆ. ಕುರಿಯ ಮಂದೆಯಲ್ಲಿ ಕುರಿಗಳನ್ನು ತುಂಬಿಸಿದಂತೆ ಲೆಕ್ಕವಿಲ್ಲದಷ್ಟು ಜನರನ್ನು ಬಸ್ಸಿನೊಳಗೆ ತುರುಕುವವರು ಕಂಡಕ್ಟರ್‌. “ಪಿರ ಪೋಲೆ ಎದುರು ಬಲೆ’ ಎಂದು ಕಿರಿಕಿರಿ ಮಾಡುವವರು ಕೂಡ ಇವರೇ.

ದಿನಾಲೂ ಒಂದೇ ಬಸ್ಸಿನಲ್ಲಿ ಪ್ರಯಾಣ ಮಾಡಿದರೆ ಪರಿಚಯದ ಗುಂಪು ಆರಂಭವಾಗುತ್ತದೆ. ಗುಂಪಿನ ಮಾತುಕತೆ, ನಗು ಎಲ್ಲವೂ ಮಜಾವೋ ಮಜಾ. ಅದೆಷ್ಟು ಊರಿನ ವಿಷಯ, ನೆರೆಮನೆಯ ವಿಷಯ ಎಲ್ಲಾ ಸುದ್ದಿಗಳೂ ಸಿಗುವುದೇ ಬಸ್ಸಿನಲ್ಲಿ. ಒಟ್ಟಾರೆ “ಪಟ್ಟಾಂಗದ ಕಟ್ಟೆ’ ಎಂದರೆ ತಪ್ಪಾಗಲಾರದು.

ಯಶಸ್ವಿ
ದ್ವಿತೀಯ ಬಿಎಡ್‌, ಸರಕಾರಿ ಶಿಕ್ಷಣ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅಮ್ಮಾ. ಏನದು ಅಲ್ಲಿ ಶಬ್ದ? ಆತ ಸಿಟ್ಟಿನ ಧ್ವನಿಯಲ್ಲಿ ಕೇಳಿದ. ‘’ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ’’. ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ...

  • ಪುಟಾಣಿ ಮಕ್ಕಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನ ಹಾಕಿಕೊಂಡು ಶಾಲೆಗೆ ಹೋಗುವುದೆಂದರೆ ತುಂಬಾ ಇಷ್ಟ. ಅದರಲ್ಲೂ ಚಂದದ ಬಟ್ಟೆ ಹಾಕಿಕೊಂಡು ಎಲ್ಲರಿಗೂ ಕಾಣಿಸುವಂತೆ...

  • ಇನ್ನೇನು ಸೆಮೆಸ್ಟರ್‌ ಪರೀಕ್ಷೆಗಳು ಮುಗಿದು ರಜೆ ಸಿಗುವ ಸಮಯ. ಒಮ್ಮೆ ಈ ಎಕ್ಸಾಮ್‌ ಕಾಟ ಮುಗಿದರೆ ಸಾಕು ಎಂದು ಮನಸ್ಸಲ್ಲೇ ಮಂಡಿಗೆ ಮೆಲ್ಲುವ ವಿದಾರ್ಥಿಗಳೇ ಬಹುಪಾಲು....

  • ಸುಮಾರು 6-7 ವರ್ಷದ ಮೊದಲು ನನ್ನ ಮನೆಯ ಹತ್ತಿರ ಒಂದು ಬಯಲಾಟ ಆಗಿತ್ತು. ನಾನು ಬಯಲಾಟಕ್ಕೆ ಹೋಗಿ ಇಡೀ ರಾತ್ರಿ ಅಲ್ಲಿ ರಂಗಸ್ಥಳದಲ್ಲಿ ಬರುವಂಥ ಎಲ್ಲ ವೇಷಗಳನ್ನು ನೋಡಿ...

  • ಜೀವನದಲ್ಲಿ ಕೆಲವೊಮ್ಮೆ ರೋಚಕ ಅನುಭವಗಳು ಮುಂದಿನ ಹೆಜ್ಜೆಗೆ ದಾರಿದೀಪವಾಗುತ್ತದೆ ಎಂಬ ಮಾತುಗಳನ್ನು ಕೇಳಿದ್ದೆ. ಆದರೆ, ಅಂತಹ ಅನುಭವ ನಮಗೂ ಒಮ್ಮೊಮ್ಮೆ ಮೈನವಿರೇಳುವಂತೆ...

ಹೊಸ ಸೇರ್ಪಡೆ