ಅಂದಿನ ಮಲೆನಾಡು, ಇಂದಿನ ಮಳೆ ಇಲ್ಲದ ಕಾಡು!

Team Udayavani, Jan 5, 2018, 12:09 PM IST

ಆಗ ಮುಂಜಾನೆಯ ಮುಂಜಾವು. ಏಳು ಬೆಳಗಾಯಿತು, ನಿನ್ನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡು, ನಿನ್ನನ್ನು ನೀನು ತೊಡಗಿಸಿಕೋ’ ಎಂದು ಎಬ್ಬಿಸಿ ಹುರಿದುಂಬಿಸಲು ಅಲರಾಮ್‌ಗಳು ಬೇಕಾಗಿರಲಿಲ್ಲ. ಮಲೆನಾಡಿನ ತೊಟ್ಟಿಲಲ್ಲಿ ಆಡಿ ಬೆಳೆದ ನನಗೆ ಇದೇನು ಹೊಸತಲ್ಲ. ಹಕ್ಕಿಗಳ ಇಂಚರ “ಚಿಂವ್‌ ಚಿಂವ್‌’ ಎಂದು ಮನಸ್ಸನ್ನು ಮೊದಲೇ ಎಚ್ಚರಿಸುತ್ತಿದ್ದವು. ಆಗ ತನ್ನಷ್ಟಕ್ಕೆ ತಾನೇ ಏಳುತ್ತಿದ್ದೆ. ಹಸಿರ ಸುಂದರ ಪ್ರಕೃತಿಯ ಮಧ್ಯೆ ಬೆಳಗ್ಗಿನ ಕಾಫಿಯನ್ನು ಸವಿಯುತ್ತಿದ್ದರೆ ಅದೊಂದು ಸ್ವರ್ಗ! ನಮ್ಮ ತೀರ್ಥಹಳ್ಳಿಯ ಹೆಮ್ಮೆಯ ರಾಷ್ಟ್ರಕವಿ ಕುವೆಂಪುರವರ “ಮಲೆಗಳಲ್ಲಿ ಮದುಮಗಳು’ ಎಂಬ ಅದ್ಭುತ ಕೃತಿಯನ್ನು ಓದಿದರೆ ನಿಮಗೆ ಖಂಡಿತ ಸ್ವರ್ಗವೆಂದರೆ ಮಲೆನಾಡಪ್ಪ ಎನ್ನುವ ಭಾವ, ಕಲ್ಪನೆ ಮೂಡದೆ ಇರಲಾರದು. ಎಲ್ಲೆಲ್ಲೂ ಹಚ್ಚಹಸಿರ ಹೊದಿಕೆಯನ್ನು ಹೊದ್ದಿರುವ ಪ್ರಕೃತಿಯನ್ನು ಕಂಡಾಗ ಎಂಥವರಿಗಾದರೂ ಮನದಲ್ಲೊಂದು ನವಚೈತನ್ಯ ಮೊಳೆಯುತ್ತದೆ.

ನನ್ನ ಬಾಲ್ಯದ ಪ್ರಕೃತಿಗೂ ಇಂದಿನ ಪ್ರಕೃತಿಗೂ ಅದೆಷ್ಟು ವ್ಯತ್ಯಾಸ! ಬಾಲ್ಯದಲ್ಲಿರುವಾಗ ಮಳೆಗಾಲದಲ್ಲಿ ಕಾಲಕ್ಕೆ ತಕ್ಕ ಮಳೆ, ಚಳಿಗಾಲದಲ್ಲಿ ಚಳಿ, ಬೇಸಿಗೆಯಲ್ಲಿ ಬಿಸಿಲು, ಪ್ರಕೃತಿಯೂ ಕೂಡ ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತಿದ್ದಳು. ಶಾಲೆಗೆ ಹೋಗುತ್ತಿದ್ದಾಗ ನನಗೆ ಬಗೆಬಗೆಯ ಬಣ್ಣ ಬಣ್ಣದ ಚಿಟ್ಟೆಗಳು ಕಾಣಸಿಗುತ್ತಿದ್ದವು. ಮಕ್ಕಳಾದ ನಮಗೆ ಅವುಗಳನ್ನು ನೋಡಿ ಅವುಗಳಂತೆ ಹಾರಾಡಬೇಕು ಎನ್ನುವಷ್ಟು ಖುಷಿಯಾಗುತ್ತಿತ್ತು. ಅಲ್ಲಲ್ಲಿ ಹರಿಯುತ್ತಿದ್ದ ಪುಟ್ಟ ಪುಟ್ಟ ತೊರೆಗಳಲ್ಲಿ ಆಡುವುದೆಂದರೆ ಮಜವೋ ಮಜಾ! ನಮ್ಮ ಶಾಲೆಯ ಸುತ್ತ ಹಣ್ಣಿನ ಮರಗಳಿದ್ದವು. ಶಿಕ್ಷಕರೂ ನಮ್ಮೊಂದಿಗೆ ಮಕ್ಕಳಾಗಿ ಹಣ್ಣನ್ನು ಕಿತ್ತು ತಿನ್ನುತ್ತಿದ್ದರು. ಅಲ್ಲಿರುತ್ತಿದ್ದ ನಲಿವೇ ಪಾಠವಾಗಿತ್ತು ನಮಗೆ.

ಈಗ ಮಲೆನಾಡಿಗೇ ಕುತ್ತು ಬಂದಿದೆ. ಪ್ರಕೃತಿ ಮುನಿಸಿಕೊಂಡಿದ್ದಾಳೆ. ಕಾಲ ಕಾಲಕ್ಕೆ ಮಳೆಯೂ ಇಲ್ಲ ಬೆಳೆಯೂ ಇಲ್ಲ. ಯಾರಿಗೂ ಬೆಳಿಗ್ಗೆ ಏಳುವ ಉತ್ಸಾಹವೇ ಇಲ್ಲ. ಎಲ್ಲೋ ಒಂದೆರಡು ಮರಗಳು ನಮಗೆ ಉಸಿರು ನೀಡುತ್ತಿವೆ. ಹಕ್ಕಿಗಳ ಚಿಲಿಪಿಲಿ ಕೇಳಲು, ಹಕ್ಕಿಗಳೇ ಎಲ್ಲೋ ಅಡಗಿ ಮರೆಯಾಗಿವೆ. ಬದುಕಲ್ಲಿ ರಂಗು ಬೀರುವ ರಂಗು ರಂಗಿನ ಚಿಟ್ಟೆಗಳೆಲ್ಲೋ ದೂರ ಹಾರಿಹೋಗಿವೆ.

ಹೀಗಿರುವಾಗ ಮಲೆನಾಡ ಪ್ರಕೃತಿ ಎಲ್ಲಿ? ಹೇಗೆ? ಸೌಂದರ್ಯವಂತೆಯಾಗುತ್ತಾಳೆ! ಅವಳ ಪ್ರೇಮಿಗಳಾದ ನಾವೇಕೆ ಸುಮ್ಮನೆ ಕೂರಬೇಕು? ಅವಳ ಸೌಂದರ್ಯ, ಚೆಲುವನ್ನು ಮರುಕಳಿಸುವ ಹೊಣೆ ನಮ್ಮ ಮೇಲಿದೆ. ಆಕೆಯನ್ನು ರಕ್ಷಿಸುವುದಾದರೆ ಮಾತ್ರ ನಿಜವಾದ “ಪ್ರಕೃತಿ ಪ್ರೇಮಿ ನಾನು’ ಎಂದು ಹೆಮ್ಮೆಯಿಂದ ಎದೆತಟ್ಟಿ ಹೇಳ್ಳೋಣ.

ಸ್ವಾತಿ ಎಸ್‌.ಎಸ್‌.
ಪ್ರಥಮ ಬಿ.ಎಸ್ಸಿ., ಎಸ್‌.ಡಿ.ಎಂ. ಕಾಲೇಜು, ಉಜಿರೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪ್ರೇಮವೆಂದರೆ ದಿನವೂ ಸಂಭ್ರಮ. "ಅಚ್ಚಾಗಿದೆ ಎದೆಯಲಿ ನಿನ್ನದೇ ಹಸಿಬಿಸಿ ಸಂದೇಶ' ಎನ್ನುತ್ತ ಪಿಸುಗುಡುವ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್‌ ಡೇ ಒಂದು ನೆಪ. ಮನುಷ್ಯನ...

  • ಹೂವು ಅರಳುವ ಕ್ಷಣವನ್ನು ಪತ್ತೆ ಹಚ್ಚಿಯೇ ತೀರುತ್ತೇನೆ ಎಂದುಕೊಂಡು, ಕುತೂಹಲಿಯೊಬ್ಬ ರಾತ್ರಿಯಿಡೀ ಎಚ್ಚರವಿದ್ದನಂತೆ. ಆದರೆ, ಹೂವಾದರೂ ಸ್ವಿಚ್‌ ಅದುಮಿದಾಗ...

  • ಅಂಗೈಗೆ ಮೊಬೈಲ್‌ ಎಂಬ ಸಂಗಾತಿ ಬಂದ ಬಳಿಕ, ಪ್ರೀತಿ ಪ್ರೇಮ ಪ್ರಣಯದ ವರಸೆಯೇ ಬದಲಾಗಿದೆಯೆ? ಅದರಲ್ಲೇನು ವಿಶೇಷ ಎಂದು ಪ್ರಶ್ನಿಸುತ್ತಾರೆ, ಹೊಸತಲೆಮಾರಿನ ಪ್ರೇಮಿಗಳು....

  • ಖಾಲಿ ಜೀವನದಲ್ಲಿ ಕವಿತೆಗಳು ಬೇಗನೇ ಹುಟ್ಟಿಕೊಳ್ಳುತ್ತವೆ ಎನ್ನುವ ಮಾತುಂಟು. ಇದನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಒಂದು ಇನ್ನೂ ಹಸಿಯಾದ ತಿಳಿ...

  • ಮಗುವೊಂದು ಓಡಾಡುತ್ತಿದ್ದರೆ ಮನೆಯಲ್ಲಿ ಸಂತಸದ ಹೊನಲೇ ಹರಿಯುತ್ತಿರುತ್ತದೆ. ಇನ್ನು ಅವಳಿ ಮಕ್ಕಳು ಹುಟ್ಟಿದರೆ ಪ್ರತಿದಿನವೂ ಹಬ್ಬದಂತೆ. ಇಬ್ಬರು ಮಕ್ಕಳನ್ನು...

ಹೊಸ ಸೇರ್ಪಡೆ