ಸೋಷಿಯಲ್‌ ಮೀಡಿಯಾದ ಹೊರಗೂ ಒಂದು ಪ್ರಪಂಚವಿದೆ !

Team Udayavani, Jun 7, 2019, 6:00 AM IST

ಇಂದಿನ ಈ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ “ಸೋಷಿಯಲ್‌ ಮೀಡಿಯಾ’ ಖುಷಿ ಗೊತ್ತು. ಪೋಸ್ಟ್‌, ಲೈಕ್‌, ಕಮೆಂಟ್‌, ಹ್ಯಾಶ್‌ಟ್ಯಾಗ್‌, ಸ್ಟೋರೀಸ್‌, ಸ್ಟೇಟಸ್‌, ಡೀಪಿಗಳಲ್ಲಿ ತಮ್ಮ ಖುಷಿ ಹುಡುಕುತ್ತಾರೆಯೇ ಹೊರತು ನಿಜವಾದ ಜೀವನದಲ್ಲಿ ಅವರಿಗೆ ಚಿಂತೆ ಬಿಟ್ಟು ಮತ್ತೇನೂ ಗೊತ್ತಿಲ್ಲ. ಇಂದಿನ ಭಾಷೆಯಲ್ಲಿ ಹೇಳುವುದಾದರೆ “ಸ್ಟ್ರೆಸ್‌ ಫ‌ುಲ್‌ ಲೈಫ್’ ಅವರದ್ದಾಗಿದೆ. ಹಾಗೆ ಹೀಗೆ ಅಂದೊಮ್ಮೆ ಇಂದೊಮ್ಮೆ ಎಂದು ಈ “ಸೋಷಿಯಲ್‌ ಲೈಫ್’ನಿಂದ ಹೊರಬಂದರೆ ನಿಜವಾದ ಲೋಕ ಹೇಗೆ ಕಾಣುತ್ತದೆ ಎನ್ನುವುದೇ ಮರೆತು ಹೋಗಿದೆ. ಕೆಲವು ಬಣ್ಣಗಳು ಕಾಣದೆ ಹೇಗೆ ಕಲರ್‌ ಬ್ಲೈಂಡ್‌ನೆಸ್‌ (Colour blindness) ಆಗುತ್ತದೋ ಹಾಗೆ ಇದೊಂಥರಾ ಲೈಫ್ blindness. ನಿಜವಾದ ಸುಂದರ “ಲೈಫ್’ ಇವರಿಗೆ ಕಾಣದು.

ಈ ಹ್ಯಾಷ್‌ಟ್ಯಾಗ್‌ ಜಗತ್ತಿನಿಂದ ಇವರನ್ನು ಹೊರತಂದರೂ “ಲೈಫ್’ ಎಂದರೆ ಏನೆಂದು ಯಾವುದೇ ಬುಕ್‌ ಅಥವಾ ಯಾವುದೇ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಬದುಕು ಏನು ಎಂದು ಹೇಳಿಕೊಡಲಾಗುವುದಿಲ್ಲ. ಇದು ಯಾವುದೇ ವೆಬ್‌ಸೈಟ್‌, ಪುಸ್ತಕ, ಉಪನಿಷತ್‌ನಲ್ಲಿಯೂ ದೊರೆಯುವುದಿಲ್ಲ. ಮತ್ತೆ ಈ ಲೈಫ್ blindness ಎನುವ ಸಮಸ್ಯೆಯಿಂದ ಮುಕ್ತಿ ಹೇಗೆ?

ಒಬ್ಬ ವ್ಯಕ್ತಿಯು ಮನಸ್ಸು ಬಿಚ್ಚಿ ಈ ಲೋಕವನ್ನು ನೋಡಿದರೆ, ಅವನಿಗೆ ಖಂಡಿತ “ಲೈಫ್’ ಎಂದರೆ ಏನು ಎಂದು ಅರ್ಥವಾಗುತ್ತದೆ. “ಲೈಫ್’ಗೆ “ಡೆಫಿನಿಷನ್‌’ ಅವನು ಹುಡುಕಿಕೊಳ್ಳುತ್ತಾನೆ. ಇನ್ನು ನನ್ನ ಪ್ರಕಾರ ಹೇಳಬೇಕಾದರೆ “ಲೈಫ್’ ಎಂದರೆ ಸಣ್ಣಪುಟ್ಟ ಖುಷಿ. ಫೇಸ್‌ಬುಕ್‌, ಇನ್‌ಸ್ಟಾrಗ್ರಾಮ್‌ಗಳ “ಪೋಸ್ಟ್‌’ ಅಲ್ಲ, ದೂರದಲ್ಲಿ ಇರುವ ಮಿತ್ರನಿಗೆ ಪತ್ರ ಬರೆದು “ಪೋಸ್ಟ್‌’ ಮಾಡುವುದು; ಸುಂದರ ಪ್ರಕೃತಿಯ ಫೋಟೋ ತೆಗೆಯುವುದಲ್ಲ, ಸುಂದರ ಪ್ರಕೃತಿ ದೃಶ್ಯವನ್ನು ಕಣ್ಣಲ್ಲೇ ಸೆರೆಹಿಡಿದು ಮುಗುಳ್ನಗೆ ಬೀರುವುದು; ವಾಟ್ಸಾಪ್‌ನ ಅಲ್ಲಿ ಬರುವ “ಪಿಕ್ಚರ್ಸ್‌’ ಶೇರ್‌ ಮಾಡುವುದಲ್ಲ, ಮೋಡಗಳ ವಿವಿಧ ಆಕೃತಿಗಳಲ್ಲಿ ಚಿತ್ರಗಳನ್ನು ನೋಡುವುದು, ದೊಡ್ಡ ಫೈವ್‌ ಸ್ಟಾರ್‌ ಹೋಟೆಲ್‌ಗ‌ಳಿಗೆ ಹೋಗಿ ಸ್ಟೇಟಸ್‌ ಹಾಕುವುದಲ್ಲ, ಬದಲಾಗಿ ಅಮ್ಮ ಮಾಡಿಟ್ಟ ತಿಂಡಿಯನ್ನು ಕದ್ದು ತಿನ್ನುವುದು; “ಟ್ರೆಕ್ಕರ್‌’ ಎನ್ನುವ ಹ್ಯಾಷ್‌ಟ್ಯಾಗ್‌ ಹಾಕಿಕೊಳ್ಳುವುದಲ್ಲ , ಸಣ್ಣದೊಂದು ಬೆಟ್ಟವನ್ನು ಗೆಳೆಯರೊಂದಿಗೆ ಎದ್ದು ಬಿದ್ದು ಹತ್ತುವುದು; “ಲೇಟ್‌ ನೈಟ್‌ ವೈಬ್ಸ…’ ಎಂದು ಸ್ಟೇಟಸ್‌ ಹಾಕುವುದಲ್ಲ, ಬೆಳ್ಳಿಗೆ ಬೇಗ ಎದ್ದು ಉದಯಿಸುವ ಸೂರ್ಯನನ್ನು ನೋಡುವುದು, “ವಾಂಡರ್‌ ಲಸ್ಟ್‌’ ಎನ್ನುವ ಹ್ಯಾಷ್‌ಟ್ಯಾಗ್‌ನ ಬದಲು ಮಾಡುವ ಪುಟ್ಟ ಜರ್ನಿ ಅಲ್ಲಿ ಕೂಡ ಸಿಗುವ ಕಾಡನ್ನು ಇಣುಕಿ ನೋಡುವುದು; “ಇನ್‌ಸ್ಪಿರೇಶನಲ್‌ ಕೋಟ್ಸ್‌’ ಬರೆದು ಸ್ಟೇಟಸ್‌ ಹಾಕುವ ಬದಲು, ಚಿಂತೆಯಲ್ಲಿ ಇರುವ ಸ್ನೇಹಿತನ ಬೆನ್ನು ತಟ್ಟಿ ಅವನನ್ನು ನಮ್ಮ ಮಾತುಗಳಲ್ಲಿ ಹುರಿತುಂಬಿಸುವುದೇ ಜೀವನ.

ಸೋಷಿಯಲ್‌ ಮೀಡಿಯಾದ ಹೊರಗೂ ಒಂದು ಪ್ರಪಂಚವಿದೆ. ಆ ಪ್ರಪಂಚದಲ್ಲಿ ಅಸಂಖ್ಯಾತ ಖುಷಿ- ಆನಂದವಿದೆ. ನೋಡುವ ಕಣ್ಣುಗಳು, ಅರ್ಥೈಸುವ ಮನಸ್ಸಿದ್ದರೆ ಸಾಕು, ಎಲ್ಲವೂ ಅದ್ಭುತವಾಗಿ ಕಾಣುತ್ತದೆ. “ಲೈಫ್ ಈಸ್‌ ಬ್ಯೂಟಿಫ‌ುಲ…’.

ಅಮೃತಾ ಎಂ.
ದ್ವಿತೀಯ ಬಿ. ಎ. , ಎಸ್‌ಡಿಎಮ್‌ ಕಾಲೇಜ್‌, ಉಜಿರೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಗುಂಬೆ' ಇದುವೇ ಪಶ್ಚಿಮಘಟ್ಟದ ಸೌಂದರ್ಯದ "ಗೊಂಬೆ'. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂದು ಅಹಂಕಾರದಿಂದ ಬೀಗು ತ್ತಿರುವ ಮನುಷ್ಯನೆಡೆಗೆ ಕಿರುನಗೆ ಬೀರಿ, ಮರೆಮಾಚುವ...

  • ನಾನೀಗ ಬರೆಯಲು ಹೊರಟಿರುವುದು ಮಂಗಳೂರಿನ 150 ವರ್ಷಗಳ ಇತಿಹಾಸವಿರುವ ವಿಶ್ವವಿದ್ಯಾನಿಲಯ ಕಾಲೇಜು ಕಟ್ಟಡದ ಒಂದು ಮೆಟ್ಟಿಲಿನ ಕುರಿತಾಗಿ. ನೋಡಲು ಇದೊಂದು ಬರೀ ಮೆಟ್ಟಿಲಷ್ಟೆ....

  • ನಾನು ಕಾಲೇಜಿಗೆ ಹೋಗುತ್ತಿದ್ದ ಸಮಯ. ಹದಿಹರೆಯದ ಮನ ಗಳಿಗೆ ಮುದ ನೀಡುವ ದಿನಗಳವು. ವಯೋಸಹಜ ಭಾವನೆಗಳು, ಆಸೆ-ಆಕಾಂಕ್ಷೆಗಳು ಮತ್ತೂ ಕೆಲವರಿಗೆ ಮಹಾತ್ವಾಕಾಂಕ್ಷೆಗಳು...

  • ಯುವಜನರಲ್ಲಿ ಸಹಜವಾಗಿಯೇ ಪ್ರೀತಿ-ಪ್ರೇಮದಂಥ ವಿಚಾರಗಳು ಸುಳಿದಾಡುತ್ತಿರುತ್ತವೆ. ಹಾಗೆಯೇ ಬೇರೆ ಬೇರೆ ವಿಷಯಗಳೂ ಸಂಚಲನಗೊಳ್ಳುತ್ತ ಇರುತ್ತದೆ. ನೋಡಿದ್ದೆಲ್ಲವೂ...

  • ಮೊನ್ನೆ ಮೊನ್ನೆ ತಾನೆ ದ್ವಿತೀಯ ಪಿಯುಸಿ ಫ‌ಲಿತಾಂಶ ಪ್ರಕಟವಾಯಿತು. ಅದರಲ್ಲಿ ಕೆಲವರಿಗೆ ಸಿಹಿ ಸಿಕ್ಕರೆ ಕೆಲವರಿಗೆ ಕಹಿ. ಫ‌ಲಿತಾಂಶ ಎನ್ನುವುದು ಕೇವಲ ನಮ್ಮ ಜ್ಞಾನಶಕ್ತಿಯನ್ನು...

ಹೊಸ ಸೇರ್ಪಡೆ